‘ಸ್ನೇಹ ಸಂಗಮ ಸೌಹಾರ್ದ ಸಹಕಾರ ಸಂಘ’ದ   ಹೊಸ ಕಟ್ಟಡ, ಕನ್ವೆನ್ಷನ್ ಹಾಲ್ ಲೋಕಾರ್ಪಣೆ


‘ಸ್ನೇಹ ಸಂಗಮ ಸೌಹಾರ್ದ ಸಹಕಾರ ಸಂಘ’ದ  

ಹೊಸ ಕಟ್ಟಡ, ಕನ್ವೆನ್ಷನ್ ಹಾಲ್ ಲೋಕಾರ್ಪಣೆ

ತುಮಕೂರು: ಕೇವಲ ಹನ್ನೊಂದು ವರ್ಷಗಳ ಹಿಂದಷ್ಟೇ ಸಮಾನ ಮನಸ್ಕ ಗೆಳೆಯರು ಬಾವಿ ಕಟ್ಟೆ ಮಂಜಣ್ಣ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಿದ ‘ಸ್ನೇಹ ಸಂಗಮ ಸೌಹಾರ್ದ ಸಹಕಾರ ಸಂಘವು   ನಗರದ ಶಿರಾ ರಸ್ತೆಯಲ್ಲಿ ಬಾವಿಕಟ್ಟೆ ಆರ್ಕೇಡ್ ಹಿಂಭಾಗ ನೂತನವಾಗಿ ಸುಮಾರು ರೂ.11 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ À ಅತ್ಯಾಧುನಿಕ ಹೊಸ ಆಡಳಿತ ಕಚೇರಿ ಕಟ್ಟಡ ಹಾಗೂ ‘ಸ್ನೇಹ ಸಂಗಮ ಕನ್ವೆನ್ಷನ್ ಹಾಲ್’ಗಳು ಶುಕ್ರವಾರ ಲೋಕಾರ್ಪಣೆಗೊಂಡವು.


ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಿದ್ಧಗಂಗಾ ಮಠಾಧೀಶ ಶ್ರೀ ಸಿದ್ಧಲಿಂಗ ಮಹಾ ಸ್ವಾಮಿಯವರು, ಚಿಕ್ಕಪೇಟೆಯ ಹಿರೇಮಠದ ಅಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಯವರು, ನೊಣವಿನಕೆರೆ ಶ್ರೀಕ್ಷೇತ್ರದ ಶ್ರೀ ಕರಿಬಸವ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ, ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹಾಗೂ ಸಂಸದ ಜಿ.ಎಸ್. ಬಸವರಾಜ್ ನೂತನ ಕಟ್ಟಡವನ್ನು ಹಾಗೂ ಆಡಳಿತ ಕಚೇರಿಯ  ಕೊಠಡಿಗಳನ್ನು ಉದ್ಘಾಟಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಮಾತನಾಡಿ, ರಾಜ್ಯದಲ್ಲಿ ಸೌಹಾರ್ದ ಸಹಕಾರ ಸಂಘಗಳನ್ನು ಆರಂಭಿಸಿದಾಗ ನಾವೆಲ್ಲ  ಶಾಸಕರಾಗಿದ್ದೆವು. ಸರಕಾರದ ಹಿಡಿತ ಇಲ್ಲದೇ ಈ ಸಂಘಗಳನ್ನು ಮಾಡೋದು ಸರೀನಾ ಅಂತ ನಮಗೆಲ್ಲ ಅನುಮಾನ ಇತ್ತು. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತ ಬೆಳೆದಿರುವ ‘ಸ್ನೇಹ ಸಂಗಮ’ ಈ ಅನುಮಾನವನ್ನು ದೂರ ಮಾಡಿದೆ ಎಂದರು.


 ಸ್ನೇಹ ಸಂಗಮ ಸೌಹಾರ್ದ ಸಹಕಾರ ಸಂಘ ಬಹಳ ಉತ್ತಮವಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲೇ ಅತ್ಯಂತ ಉನ್ನತ ಮಟ್ಟಕ್ಕೆ ಈ ಸೌಹಾರ್ದ ಸಹಕಾರಿ ಸಂಸ್ಥೆ ಬೆಳೆದಿರುವುದು ಸಂತಸಕರ ಎಂದರು. 

ಬ್ಯಾಂಕ್ ನೂತನ ಕಟ್ಟಡವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಹಕಾರಿ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಅರ್ಹರಿಗೆ ಸಾಲ ಕೊಡಲು ಮುಂದಾಗಬೇಕು. ಹಾಗೆಯೇ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರು ತೀರಿಸುವ ಶಕ್ತಿಯನ್ನು ಹೊಂದಿರಬೇಕು. ಗ್ರಾಹಕರು ಮನೆ ಕಟ್ಟಲು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡುತ್ತಾರೆ. ಈ ಎಲ್ಲ ಸೌಲಭ್ಯಗಳನ್ನು ಸಹಕಾರಿ ಬ್ಯಾಂಕ್‌ಗಳು ಹೊಂದಿರಬೇಕು. ಈ ನಿಟ್ಟಿನಲ್ಲಿ ಸ್ನೇಹ ಸಂಗಮ ಸಹಕಾರಿ ಬ್ಯಾಂಕ್ ಕಾರ್ಯೋನ್ಮುಖವಾಗಿರುವುದು ಸಂತೋಷಕರ ಸಂಗತಿ,


ಸ್ನೇಹ ಸಂಗಮ ಸಹಕಾರಿ ಸಂಸ್ಥೆ ಇನ್ನು ಹೆಚ್ಚು ಹೆಚ್ಚು ಶಾಖೆಗಳನ್ನು ಹೊಂದಿ, ಇನ್ನು ಉತ್ತಮ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸಿದರು. 


ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸದಾ ನಗುಮುಖ ಹೊಂದಿರಬೇಕು. ಬ್ಯಾಂಕ್‌ಗಳಿಗೆ ಬರುವ ಗ್ರಾಹಕರಿಗೆ ಸೇವಾ ಮನೋಭಾವದಿಂದ ಕೆಲಸ ಕಾರ್ಯ ಮಾಡಿಕೊಡಬೇಕು ಎಂದು ಸ್ವಾಮೀಜಿ ಹೇಳಿದರು.


ಸಹಕಾರಿಯ ನಗದು ಕೊಠಡಿ ಉದ್ಘಾಟಿಸಿದ ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಸಹಕಾರಿ ಸಂಸ್ಥೆ ಗ್ರೋ ಗೇನ್ ಗ್ಲೋ ಎಂಬ 3ಜಿ ಕಲ್ಚರನ್ನು ಅಳವಡಿಸಿಕೊಂಡು ಬೆಳೆದಿದೆ. ನಿರೀಕ್ಷೆಗೂ ಮೀರಿ ಬ್ಯಾಂಕ್ ಆಡಳಿತ ಕಚೇರಿ ಸುಸಜ್ಜಿತವಾಗಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ. ಬ್ಯಾಂಕ್ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ತಪಸ್ಸಿನೋಪಾದಿಯಲ್ಲಿ ಕೆಲಸ ಮಾಡಿದ್ದರ ಫಲ ಇಂದು ಸುಸಜ್ಜಿತ ಬ್ಯಾಂಕ್ ಆಡಳಿತ ಕಚೇರಿ ನಿರ್ಮಾಣವಾಗಿದೆ ಎಂದರು.


ಈ ಹಿಂದೆ ಸಾಹುಕಾರ ದೇವೋಭವ ಎಂಬ ಕಾಲವಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಸಹಕಾರ ದೇವೋಭವ ಎಂಬAತಾಗಿದೆ. ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ವರ್ಗದ ಜನರ ಆರ್ಥಿಕ ಏಳ್ಗೆಗೆ ಸಹಕಾರಿ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದರು. 


ಸ್ನೇಹ ಸಂಗಮ ಸೌಹಾರ್ದ ಕ್ಷೇತ್ರಕ್ಕೆ ಹೊಸ ಹೆಸರು ತಂದು ಕೊಡಲಿ, ಉತ್ತಮ ಪ್ರಗತಿ ಸಾಧಿಸಲಿ ಎಂದು ಶ್ರೀಗಳು ಆಶಿಸಿದರು. 


ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ನೊಣವಿನಕೆರೆಯ ಶ್ರೀ ಕರಿಬಸವ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಗಣಪತಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ನಿರ್ದೇಶಕರ ಕೊಠಡಿಯನ್ನು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. 

ಸ್ನೇಹ ಸಂಗಮ ಸಹಕಾರಿ ಸಂಸ್ಥೆ ನಿರ್ಮಿಸಿರುವ ನೂತನ ಆಡಳಿತ ಮಂಡಳಿ ಕಚೇರಿ ಸುಸಜ್ಜಿತ ಅತ್ಯಾಧುನಿಕ ಸೌಲಭ್ಯವುಳ್ಳ ಲಾಕರ್ ಸೌಲಭ್ಯ, ಅತ್ಯುತ್ತಮವಾದ ಮೀಟಿಂಗ್ ಸಭಾಂಗಣ, ನಗದು ಕೊಠಡಿಯನ್ನು ಹೊಂದಿದೆ. 


ಸಂಸದ ಜಿ.ಎಸ್. ಬಸವರಾಜು, ಶಾಸಕ ಜಿ.ಬಿ. ಜ್ಯೋತಿಗಣೇಶ್, ರಾಜ್ಯ ಸೌಹಾರ್ದ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಹಾಗೂ ಪಾವಗಡ ಸಹಕಾರ ಸೌಹಾರ್ದ ಸಂಘದ ಅಧ್ಯಕ್ಷ ಬಿ.ಹೆಚ್.ಕೃಷ್ಣಾ ರೆಡ್ಡಿ ಮಾತನಾಡಿದರು.


ಟಿಎಂಸಿಸಿ ಹಾಗೂ ಶಾರದಾ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎನ್.ಎಸ್. ಜಯಕುಮಾರ್, ಮೇಯರ್ ಬಿ.ಜಿ. ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಹೆಬ್ಬಾಕ, ಬ್ಯಾಂಕ್ ನಿರ್ದೇಶಕರುಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಬ್ಯಾಂಕ್ ಆವರಣದಲ್ಲಿ ಸಹಕಾರಿ ಧ್ವಜಾರೋಹಣ ಮಾಡಲಾಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಬಿ.ಎಸ್. ಮಂಜುನಾಥ್(ಬಾವಿ ಕಟ್ಟೆ ಮಂಜಣ್ಣ) ವಹಿಸಿ,ಬ್ಯಾಂಕಿನ ಬೆಳವಣಿಗೆ ಕುರಿತ ವರದಿ ಮಂಡಿಸಿದರು. ಬ್ಯಾಂಕ್ ಉಪಾಧ್ಯಕ್ಷ ಹೆಚ್.ಆರ್. ನಾಗೇಶ್ ಸ್ವಾಗತಿಸಿದರು.

‘ಬಡ್ಡಿ ರಹಿತ ಸಾಲ ಬ್ಯಾಂಕಿಂಗ್ ಜಾಲ 
ಸ್ಥಾಪಿಸಿದ್ದ ಒಸಮಾ ಬಿನ್ ಲಾಡೆನ್!


ಒಸಾಮಾ ಬಿನ್ ಲಾಡೆನ್‌ನ ಎಲ್ಲ ವಿಷಯದಲ್ಲಿ ನಾವು ಬಯ್ಯುಕೋತ್ತಿದ್ವಿ, ಆದರೆ ಆತ ಇಸ್ಲಾಂ ಆಧಾರದ ಮೇಲೆ ಬಡ್ಡಿ ರಹಿತ ಸಾಲ ನೀಡುವ ಬ್ಯಾಂಕಿAಗ್ ಜಾಲ ಸ್ಥಾಪಿಸಿದ್ದಕ್ಕಾಗಿ ಇಡೀ ವಿಶ್ವ ಆತನ ಮೆಚ್ಚಿಕೊಂಡಿತ್ತು. ಹಾಗೇ ನಮ್ಮಲ್ಲೂ ಸಹಕಾರಿ ಸಂಘಗಳು ಹಾಗೂ ಸಹಕಾರಿ  ಬ್ಯಾಂಕ್‌ಗಳು ಉಳ್ಳವರಿಗೇ ಸಾಲ ನೀಡುವ ಬದಲು “ ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು” ಎಂಬ ಮಾತನ್ನು ಅನುಷ್ಟಾನಕ್ಕೆ ತರಬೇಕು”
-ಜೆ.ಸಿ.ಮಾಧುಸ್ವಾಮಿ
ಕಾನೂನು, ಸಂಸದೀಯ ವ್ಯವಹಾರಗಳು, 
ಸಣ್ಣ ನೀರಾವರಿ ಖಾತೆ ಹಾಗೂ 
ಜಿಲ್ಲಾ ಉಸ್ತುವಾರಿ ಸಚಿವರು


‘ಸ್ನೇಹ ಸಂಗಮ ಸೌಹಾರ್ದ ಸಹಕಾರ ಸಂಘವು   ನಗರದ ಶಿರಾ ರಸ್ತೆಯಲ್ಲಿ ಬಾವಿಕಟ್ಟೆ ಆರ್ಕೇಡ್ ಹಿಂಭಾಗ ನೂತನವಾಗಿ ಸುಮಾರು ರೂ.11 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವÀ ಅತ್ಯಾಧುನಿಕ ಹೊಸ ಆಡಳಿತ ಕಚೇರಿ ಕಟ್ಟಡ ಹಾಗೂ ‘ಸ್ನೇಹ ಸಂಗಮ ಕನ್ವೆನ್ಷನ್ ಹಾಲ್’ ಉದ್ಘಾಟನಾ ಸಮಾರಂಭದ ದೃಶ್ಯಾವಳಿ