ಡಿಸಿಸಿ ಬ್ಯಾಂಕ್ ರೈತ ಸ್ನೇಹಿಯಾಗಿದೆ ಕ್ರಿಭ್ಕೋ ನಿರ್ದೇಶಕ ಆರ್. ರಾಜೇಂದ್ರ

ಡಿಸಿಸಿ ಬ್ಯಾಂಕ್ ರೈತ ಸ್ನೇಹಿಯಾಗಿದೆ ಕ್ರಿಭ್ಕೋ ನಿರ್ದೇಶಕ ಆರ್. ರಾಜೇಂದ್ರ


ಡಿಸಿಸಿ ಬ್ಯಾಂಕ್ ರೈತ ಸ್ನೇಹಿಯಾಗಿದೆ
ಕ್ರಿಭ್ಕೋ ನಿರ್ದೇಶಕ ಆರ್. ರಾಜೇಂದ್ರ


ಮಧುಗಿರಿ: ಡಿಸಿಸಿ ಬ್ಯಾಂಕ್ ರೈತ ಸ್ನೇಹಿ ಬ್ಯಾಂಕ್ ಎಂದು ರಾಷ್ಟಿçÃಯ ಕ್ರಿಭ್ಕೊ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್. ರಾಜೇಂದ್ರ ತಿಳಿಸಿದ್ದಾರೆ.
ತಾಲ್ಲೂಕಿನ ಗರಣಿ ವಿಎಸ್‌ಎಸ್‌ಎನ್‌ನ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿ, ಹಾಲಿ ಇರುವ ಕಟ್ಟಡ ತೀವ್ರ ಹಳೆಯದಾಗಿದ್ದು, ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಅಂದಾಜು 25 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ವಿಎಸ್‌ಎಸ್‌ಎನ್‌ಗಳು ಸಾವಿರಾರು ರೈತರಿಗೆ ಜೀವನಾಡಿಗಳಾಗಿವೆ ಎಂದ ಅವರು, ರೈತರು ಸ್ವಾವಲಂಬಿಗಳಾಗಿ ಬದುಕುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಆಶ್ರಯದಂತೆ ಪ್ರತಿಯೊಬ್ಬ ರೈತರಿಗೆ ಕನಿಷ್ಟ 25 ರಿಂದ 50 ಸಾವಿರ ರೂ.ಗಳವರೆವಿಗೂ ಸಾಲಸೌಲಭ್ಯ ನೀಡಲಾಗುತ್ತಿದೆ. ಗರಣಿ ವಿಎಸ್‌ಎಸ್‌ಎನ್ ವತಿಯಿಂದ ಇದುವರೆವಿಗೂ 4 ಕೋಟಿ ರೂ.ಗಳ ಸಾಲ ಸೌಲಭ್ಯ ನೀಡಲಾಗಿದೆ. ರೈತರು ಇದರ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಾಮಾಜಿಕವಾಗಿ ಮುಂದೆ ಬರವೇಕೆಂದು.
ರಾಜ್ಯದಲ್ಲಿ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ಪಡೆದ ರೈತರು ಮರಣಹೊಂದಿದರೆ 1 ಲಕ್ಷದವರೆವಿಗೂ ಆ ರೈತರ ಸಾಲ ಮನ್ನಾ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನೂತನ ಕಟ್ಟಡಕ್ಕೆ ಸಹಕಾರ ಮಾರುಕಟ್ಟೆ ಮಹಾಮಂಡಲ ಕ್ರಿಬ್ಕೋ ಸಂಸ್ಥೆ ಹಾಗೂ ಲೋಕಸಭಾ ಸದಸ್ಯರ ಅನುದಾನ ಬಳಸಿಕೊಳ್ಳುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜಗೋಪಾಲ್, ಡಿಸಿಸಿ ವ್ಯವಸ್ಥಾಪಕರಾದ ರಾಮಕೃಷ್ಣಯ್ಯ, ಗ್ರಾ.ಪಂ. ಸದಸ್ಯರುಗಳಾದ ನರಸಿಂಹಮೂರ್ತಿ, ರಮೇಶ್, ಶಂಕರ್ ಯಾದವ್, ಶಿಲ್ಪರಾಜು, ವಿಎಸ್‌ಎಸ್‌ಎನ್ ಅಧ್ಯಕ್ಷರುಗಳಾದ ರಾಮಾಂಜಿ, ಉಪಾಧ್ಯಕ್ಷರಾದ ಮಲ್ಲೇಗೌಡ, ಮುಖಂಡರುಗಳಾದ ಬಸವರಾಜು, ಹನುಮಂತರಾಯಪ್ಪ, ಮೃತ್ಯುಂಜಯಪ್ಪ, ಚಿಕ್ಕಣ್ಣ, ಅಂಜಿನಪ್ಪ, ವಿಎಸ್‌ಎಸ್‌ಎನ್ ಸಿ.ಇ.ಒ. ಅಂಜನಪ್ಪ, ವಿಎಸ್‌ಎಸ್‌ಎನ್ ನಿರ್ದೇಶಕರುಗಳು ಹಾಜರಿದ್ದರು.