ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸ್ತೇನೆ: ಅಮ್ಮನಘಟ್ಟ ಪ್ರಕರಣಕ್ಕೆ ಮಾಜಿ ಸಚಿವ ವಾಸಣ್ಣ ಭರವಸೆ

ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸ್ತೇನೆ: ಅಮ್ಮನಘಟ್ಟ ಪ್ರಕರಣಕ್ಕೆ ಮಾಜಿ ಸಚಿವ ವಾಸಣ್ಣ ಭರವಸೆ

ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸ್ತೇನೆ: ಅಮ್ಮನಘಟ್ಟ ಪ್ರಕರಣಕ್ಕೆ ಮಾಜಿ ಸಚಿವ ವಾಸಣ್ಣ ಭರವಸೆ


ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸ್ತೇನೆ:
ಅಮ್ಮನಘಟ್ಟ ಪ್ರಕರಣಕ್ಕೆ ಮಾಜಿ ಸಚಿವ ವಾಸಣ್ಣ ಭರವಸೆ


ಗುಬ್ಬಿ: ತಾಲ್ಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ರೈತ ಕುಟುಂಬದ ಅಡಿಕೆ, ತೆಂಗು ಬೆಳೆಗಳನ್ನು ಅರಣ್ಯ ಇಲಾಖೆ ಕಡಿದಿರುವ  ಘಟನೆ ಬಗ್ಗೆ ವಿವಾದವಿದೆ. ಕೂಡಲೇ ಅದಕ್ಕೆ ಸಂಬAಧಪಟ್ಟAತಹ ಮೇಲ್ಮಟ್ಟದ ಅಧಿಕಾರಿಗಳ ಜತೆ ಮಾತನಾಡಿ ಗುಬ್ಬಿಯ ವಲಯ ಅರಣ್ಯಾಧಿಕಾರಿಯನ್ನು ಅಮಾನತು, ವರ್ಗಾವಣೆ ಯಾವುದಾದರೂ ಒಂದನ್ನು ಮಾಡಲು ಸರಕಾರಕ್ಕೆ  ಒತ್ತಾಯಿಸುತ್ತೇನೆ ಎಂದು ಮಾಜಿ ಸಚಿವ, ಹಾಲಿ ಶಾಸಕರಾದ ವಾಸಣ್ಣ ತಿಳಿಸಿದರು.


ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರುಗಳ ಜತೆ ಮಾತನಾಡಿದ ಅವರು, ಈಗಾಗಲೇ ಹಲವು ಬಾರಿ ಈ ಅಧಿಕಾರಿಗೆ ಮಾಹಿತಿ ತಿಳಿಸಿದರೂ ಕೂಡ ರೈತರ ಜೊತೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳದೆ ಇರುವುದು ಬೇಸರ ತರಿಸಿದೆ. ರೈತರಿಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಿ ಮನವೊಲಿಸಿ ಕೆಲಸ ಮಾಡಬೇಕಾದ ಅಧಿಕಾರಿ ರೈತರ ಮುಂದೆ ದುಂಡಾವರ್ತನೆ ತೋರಿರುವುದು ಸರಿಯಲ್ಲ. ಹಾಗಾಗಿ ಈ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮಾತನಾಡುತ್ತೇನೆ ಎಂದು ತಿಳಿಸಿದರು.


ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಕಷ್ಟಪಟ್ಟು ಬೆಳೆದಿರುವಂತಹ ಅಡಿಕೆ, ತೆಂಗು ಬೆಳೆಗಳನ್ನು ಯಾವುದೇ ಮಾನವೀಯತೆಯಿಲ್ಲದೆ ಕಡಿದು ಹಾಕಿರುವುದು ತಪು.್ಪ ಇವರೇ ಕಳೆದ 3 ತಿಂಗಳ ಹಿಂದೆ ಗಡಿಯನ್ನು ಗುರುತಿಸಿ ಮತ್ತೆ ಈಗ ಮುಂದಕ್ಕೆ ಹೋಗಿ ರೈತರ ಬೆಳೆಗಳನ್ನು ಹಾಳು ಮಾಡಿರುವುದು ಇವರ ದುರಹಂಕಾರದ ಪರಮಾವಧಿ ಆಗಿದೆ. ಹಾಗಾಗಿ ಕೂಡಲೇ ಈ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಲ್ಲದೇ ಹೋದರೆ ನಮ್ಮ ಹೋರಾಟವನ್ನು ರಾಜ್ಯ ಮಟ್ಟದವರೆಗೆ ಕೂಡ ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದರು.


ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, ಕಷ್ಟಪಟ್ಟು ಬೆಳೆದಿರುವಂತಹ ಬೆಳೆಗಳನ್ನು ಈ ರೀತಿ ಕಡಿದು ಹಾಕಿರುವುದು ರೈತರ ಬದುಕನ್ನೇ ಹಾಳು ಮಾಡಿದ್ದಾರೆ. ಕೂಡಲೇ ತೋಟಗಳನ್ನು ಉಳಿಸಬೇಕು. ರೈತರ ಹಿತ ಕಾಪಾಡಬೇಕು  ಎಂದು ತಿಳಿಸಿದರು. 


ಡಿಎಫ್‌ಓ ರಮೇಶ್ ಮಾತನಾಡಿ, ಶೀಘ್ರದಲ್ಲಿಯೇ ಮರಗಳನ್ನು ಕಡಿದು ಹಾಕಿರುವಂತಹ ಅಮ್ಮನಘಟ್ಟ ಗ್ರಾಮಕ್ಕೆ ತೆರಳಿ ಪರಿಶೀಲನೆ ಮಾಡಿ ಅಧಿಕಾರಿಯದ್ದು ತಪ್ಪಾಗಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲು ಮೇಲಾಧಿಕಾರಿಗಳಿಗೆ ವರದಿ ಅನುಸರಿಸುತ್ತೇನೆ ಎಂದು ತಿಳಿಸಿದರು.


ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್, ಜೆಡಿಎಸ್ ಮುಖಂಡ ನಾಗರಾಜು, ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ, ಮುಖಂಡರಾದ ವೆಂಕಟೇಶ್, ಶಶಿಧರ್, ರಘು ಸೇರಿದಂತೆ ತಾಲ್ಲೂಕಿನ ಎಲ್ಲಾ ಸದಸ್ಯರು ಹಾಜರಿದ್ದರು.