ವಿವಿಧ ಘಟಕಗಳು ಸಕ್ರಿಯವಾಗಿ ಪಕ್ಷ ಸಂಘಟಿಸಬೇಕು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಕರೆ

congress meeting

ವಿವಿಧ ಘಟಕಗಳು ಸಕ್ರಿಯವಾಗಿ ಪಕ್ಷ ಸಂಘಟಿಸಬೇಕು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಕರೆ

ವಿವಿಧ ಘಟಕಗಳು ಸಕ್ರಿಯವಾಗಿ ಪಕ್ಷ ಸಂಘಟಿಸಬೇಕು
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಕರೆ


ತುಮಕೂರು: ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕವೂ ಸೇರಿದಂತೆ ಮುಂಚೂಣಿ ಘಟಕಗಳೆಲ್ಲವೂ ಅತಿ ಹೆಚ್ಚು ಸಕ್ರಿಯವಾಗುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಮಿಕ ಘಟಕದ ವತಿಯಿಂದ ಆಯೋಜಿಸಿದ್ದ ಮಾಸಿಕ ಕಾರ್ಯಕಾರಣಿ ಸಭೆ ಹಾಗೂ ವಿವಿಧ ಹುದ್ದೆಗಳಿಗೆ ನೇಮಕಗೊಂಡವರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡುತಿದ್ದ ಅವರು, ಎನ್‌ಎಸ್ ಯುಐ, ಕಾರ್ಮಿಕ ಘಟಕ, ವಕೀಲರು, ವೈದ್ಯಕೀಯ ಘಟಕ, ಕಿಸಾನ್ ವಿಭಾಗ ಇವುಗಳೆಲ್ಲವೂ ಒಗ್ಗೂಡಿದರೆ ಪಕ್ಷಕ್ಕೆ ಅತಿ ಹೆಚ್ಚಿನ ಬಲ ಬರಲಿದೆ ಎಂದರು.
ಕಾರ್ಮಿಕರು, ರೈತರು ಇಲ್ಲದ ದೇಶವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಕಳೆದ ಏಳು ವರ್ಷಗಳಲ್ಲಿ ಭಾರತದಲ್ಲಿ ಹಲವಾರು ಕಾರ್ಮಿಕ ಪರ ಕಾಯ್ದೆಗಳನ್ನು ರದ್ದುಗೊಳಿಸಿ, ಉದ್ದಿಮೆದಾರರ ಪರವಾಗಿರುವ ೪ ಕಾರ್ಮಿಕ ಸಂಹಿತೆಗಳನ್ನು ರೂಪಿಸಿದ ಪರಿಣಾಮ ಲಕ್ಷಾಂತರ ಕಾರ್ಮಿಕರು ತಮ್ಮ ಉದ್ಯೋಗ ಭದ್ರತೆಯನ್ನೇ ಕಳೆದುಕೊಂಡಿದ್ದಾರೆ. ಇದರ ಜೊತೆಗೆ, ಕೊರೋನ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇವರ ನೆರವಿಗೆ ಬರುವ ಕನಿಷ್ಟ ಸೌಜನ್ಯವನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರ ತೋರಿಸಲಿಲ್ಲ ಎಂದರು. ಇಂತಹ ಘಟನೆಗಳ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗ ಹೋರಾಟ ನಡೆಸಬೇಕಾಗಿದೆ ಎಂದು ಆರ್. ರಾಮಕೃಷ್ಣಪ್ಪ ನುಡಿದರು.
ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮಾರ್ಗದರ್ಶನದಲ್ಲಿ ಕಾರ್ಮಿಕ ಘಟಕ ಮೊದಲು ತಮ್ಮ ಸುತ್ತಮುತ್ತಲಿರುವ ಕಾರ್ಮಿಕರಿಗೆ, ಕಾರ್ಮಿಕ ಇಲಾಖೆಗೆ ನೊಂದಣಿ ಮಾಡಿಸಿ, ಗುರುತಿನ ಚೀಟಿ ಹೊಂದುವAತೆ ಪ್ರೇರೇಪಿಸಬೇಕು. ಇದರಿಂದ ಎಲ್ಲಾ ರೀತಿಯ ನಿರ್ಮಾಣ ಕಾರ್ಮಿಕರಿಗೂ ಹೆಚ್ಚಿನ ಅನುಕೂಲವಾಗಲಿದೆ. ಮುಂದಿನ ಒಂದು ತಿಂಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬೂತ್ ಮತ್ತು ವಾರ್ಡು ಕಮಿಟಿಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಿಸಿ, ಅವರಿಗೆ ಕೆಲಸ ಹಂಚಬೇಕೆAದು ಕಾರ್ಮಿಕ ವಿಭಾಗದ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಡಾ. ಆನಂದ್ ಮಾತನಾಡಿ, ಬಿಜೆಪಿ ಪಕ್ಷ ಕಳೆದ ೭ ವರ್ಷಗಳಿಂದ ನಿರಂತರವಾಗಿ ಬಡವರ, ಕಾರ್ಮಿಕರ ಜೇಬಿಗೆ ಕತ್ತರಿ ಹಾಕುತ್ತಾ ಬಂದಿದೆ. ಅಡುಗೆ ಅನಿಲ, ಇಂಧನ ಬೆಲೆಗಳ ಹೆಚ್ಚಳದಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗುವುದು ಕಾರ್ಮಿಕ ವಲಯ. ಆದರೆ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ ಕೇಂದ್ರ ಸರ್ಕಾರ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ, ದೇಶವನ್ನು ಲೂಟಿ ಮಾಡುತ್ತಿದೆ. ಇದನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಮಿಕ ಘಟಕದ ಪದಾಧಿಕಾರಿಗಳು ಮಾಡಬೇಕೆಂದು ಸಲಹೆ ನೀಡಿದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹಾಗೂ ತುಮಕೂರು ಉಸ್ತುವಾರಿ ಸೈಯದ್ ದಾದಾಪೀರ್ ಮಾತನಾಡಿ, ಕೋರೋನ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ, ಮಾಸ್ಕ್ ಸಾನಿಟೈಜರ್ ವಿತರಣೆ ಹಾಗೂ ಹೆಲ್ಪ್ಲೈನ್ ಮೂಲಕ ಸೋಂಕಿಗೆ ತುತ್ತಾದವರಿಗೆ ಬೆಡ್ ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಬ್ದುಲ್ ರಹೀಂ, ಪ್ರಧಾನ ಕಾರ್ಯದರ್ಶಿ ಎಸ್.ಎಂ. ನಿಂಗರಾಜು, ಆದೀಲ್ ಪಾಷ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ ತುಮಕೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ವಾರ್ಡು ಮತ್ತು ಬೂತ್‌ಗಳಿಗೆ ಕಾರ್ಮಿಕ ಘಟಕದ ವತಿಯಿಂದ ನೇಮಕಗೊಂಡಿದ್ದ ಮುಖಂಡರಿಗೆ ಜಿಲ್ಲಾಧ್ಯಕ್ಷರು ಮತ್ತು ಕಾರ್ಮಿಕ ವಿಭಾಗದ ಮುಖಂಡರು ನೇಮಕಾತಿ ಪತ್ರ ವಿತರಿಸಿದರು.