ಸೈನಿಕರೇ ಯುವಕರಿಗೆ ಆದರ್ಶಪ್ರಾಯವಾಗಬೇಕು ಹಿರೇಮಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ

swamiji

ಸೈನಿಕರೇ ಯುವಕರಿಗೆ ಆದರ್ಶಪ್ರಾಯವಾಗಬೇಕು  ಹಿರೇಮಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ

ಸೈನಿಕರೇ ಯುವಕರಿಗೆ ಆದರ್ಶಪ್ರಾಯವಾಗಬೇಕು


ಹಿರೇಮಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ


ತುಮಕೂರು: ನಮ್ಮ ದೇಶದ ಸೈನಿಕರೇ ಯುವ ಪೀಳಿಗೆಗೆ ಆದರ್ಶಪ್ರಾಯ ವ್ಯಕ್ತಿಗಳಾಗಬೇಕು ಎಂದು ಹಿರೇಮಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರ ವಿಭಾಗ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್, ತುಮಕೂರು ನಗರದ ಸಹಯೋಗದಲ್ಲಿ ನೆಲಮಂಗಲ ತಾಲೂಕಿನ  ಹಳೇ ನಿಜಗಲ್ ಶ್ರೀ ಉದ್ಧಾನ  ವೀರಭದ್ರೇಶ್ವರ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರೇಮಠದ 'ತಪೋವನ'ದಲ್ಲಿ ಕಳೆದ ಶನಿವಾರ  ಆಯೋಜಿಸಲಾಗಿದ್ದ ಮೌಲ್ಯಾಧಾರಿತ ಪುಸ್ತಕಗಳ ಅಧ್ಯಯನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಅಧ್ಯಯನಕ್ಕೆ ಬ್ರಿಗೇಡಿಯರ್ ಜಾನ್ ಪರಶುರಾಮ ದಳವಿಯವರು ಆಂಗ್ಲ ಭಾಷೆಯಲ್ಲಿ ಬರೆದಿರುವ, ಕನ್ನಡಕ್ಕೆ ರವಿ ಬೆಳಗೆರೆಯವರು ಅನುವಾದಿಸಿರುವ ``ಹಿಮಾಲಯನ್ ಬ್ಲಂಡರ್’’ ಅನ್ನು ವಿಚಾರ ಮಾಡಿ ವಿಮರ್ಶಿಸಲು ಆಯ್ದುಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ-ಚೀನಾ ೧೯೬೨, ಭಾರತ-ಪಾಕಿಸ್ತಾನ ೧೯೬೫, ಭಾರತ ಪಾಕಿಸ್ತಾನ ೧೯೭೧ ಯುದ್ಧದಲ್ಲಿ ಭಾಗಿಯಾದ ಜೇಷ್ಠ ಹಾಗೂ ಶ್ರೇಷ್ಠ ವೀರಯೋಧ ಲ್ಯಾನ್ಸ್ ನಾಯಕ್ ವಿರೂಪಾಕ್ಷಪ್ಪ ವಿಭೂತಿಮಠ ಅವರು ತಮ್ಮ ಹೃದಯವಿದ್ರಾವಕ ಅನುಭವಗಳನ್ನು ಎಳೆಎಳೆಯಾಗಿ ಹಂಚಿಕೊAಡರು.
ಯುದ್ಧದ ಭೀಕರತೆ, ಬಂಧನಗಳು, ಕ್ರೂರ ಸನ್ನಿವೇಶಗಳು ಹಾಗೂ ನಮ್ಮ ವೀರಯೋಧರು ಸಾವಿಗೂ ಅಂಜದೆ ದೇಶಕ್ಕಾಗಿ ಹೋರಾಡುವ ಸಂಗತಿಗಳು ನೆರದಿದ್ದವರ ಮನಕಲುಕವಂತೆ ವಿವರಿಸಿದರು.
ಸೇನೆಯ ಉಪಕಾರ ಸ್ಮರಣೆಗಾಗಿ ವೀರಯೋಧರ ಹಾಗೂ ಶ್ರೀಗಳ ಅಮೃತಹಸ್ತದಿಂದ ಸಸಿ ನೆಡಿಸಲಾಯಿತು. ಪುಸ್ತಕದಲ್ಲಿರುವ ಕಟುಸತ್ಯಗಳಾದ ಸರಕಾರದ ನಿರ್ಲಕ್ಷ್ಯ ಧೋರಣೆ ಹಾಗೂ ಭಾರತೀಯ ಸೇನೆ ಅನುಭವಿಸಿದ ಕ್ಲಿಷ್ಟಕರ ಪರಿಸ್ಥಿತಿಗಳನ್ನು ವಿಮರ್ಶಿಸಲಾಯಿತು.
ಯೋಧರ ಪುತ್ರಿಯಾದ ಶ್ರೀಮತಿ ವಿಜಯ ಪೂಜಾರ ಉಪಸ್ಥಿತರಿದ್ದರು. ಪುಸ್ತಕ ಓದುಗರಾದ ಮಂಜೇಶ್, ರಜತ್, ಪಾಂಡುರಂಗ, ವಿನೀತ್ ಕುಮಾರ್ ಪುಸ್ತಕವನ್ನು ವಿಮರ್ಶಿಸಿದರು, ವಿಜಯಲಕ್ಷ್ಮಿ ಬಿ.ವಿ. ನಿರೂಪಿಸಿದರು, ಪ್ರದೀಪ್ ಸ್ವಾಗತಿಸಿದರು, ಮಂಜುನಾಥ್ ವಂದಿಸಿದರು.