ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಪಣ: ಶಾಸಕ ಗೌರಿಶಂಕರ್

ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಪಣ: ಶಾಸಕ ಗೌರಿಶಂಕರ್


ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಪಣ: ಶಾಸಕ ಗೌರಿಶಂಕರ್


ತುಮಕೂರು: ಇಲ್ಲಿಗೆ ಸಮೀಪದ ದೇವರಾಯನದುರ್ಗ ಬೆಟ್ಟ ಸಮಗ್ರ ಅಭಿವೃದ್ಧಿಗೆ ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಶಂಕುಸ್ಥಾಪನೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕಾಮಗಾರಿಗಳ ಭಾಗವಾಗಿ ಸಿ.ಸಿ ರಸ್ತೆ, ಡಾಂಬರೀಕರಣ, ಸಿ.ಸಿ ಚರಂಡಿ ಕಾಮಗಾರಿಯನ್ನು 18 ಕೋಟಿ ರೂಪಾಯಿ ವೆಚ್ಚದಲ್ಲಿ ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು ಸಾರ್ವಜನಿಕರಿಗೆ ಹಾಗೂ ಭಕ್ತಾಧಿಗಳಿಗೆ ಅನುಕೂಲವಾಗಲಿದೆ ಎಂದರು.


ಇದರೊAದಿಗೆ ದೇವರಾಯನದುರ್ಗ ಬೆಟ್ಟದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಪ್ರವಾಸಿ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಸಹ ಗೌರಿಶಂಕರ್ ನೆರೆವೇರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸುವುದೇ ನನ್ನ ಮುಖ್ಯ ಗುರಿಯಾಗಿದ್ದು, ಇದರ ಜೊತೆಗೆ ಕ್ಷೇತ್ರದ ನೀರಾವರಿ ಅಭಿವೃದ್ಧಿಗೂ ಆದ್ಯತೆ ನೀಡುವುದಾಗಿ ತಿಳಿಸಿದರು.


ಜಿಲ್ಲೆಯ ಎಲ್ಲ ಕಡೆಗಳಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು, ಕ್ಷೇತ್ರ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗಿದೆ. ಇದರಿಂದ ಇಪ್ಪತ್ತು ವರ್ಷಗಳ ಬಳಿಕ ಕೆಸರುಮಡು ಗ್ರಾಮದ ಜೋಗಿಕಟ್ಟೆ ಕೆರೆ, ದುರ್ಗದಹಳ್ಳಿ ಕೆರೆಗಳು ಹಾಗೂ ಕೋಳಿಹಳ್ಳಿ ಕೆರೆಗಳು ತುಂಬಿ ಕೋಡಿ ಹರಿದಿವೆ. ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚನ್ನಿಗಪ್ಪನಪಾಳ್ಯ ಗ್ರಾಮದ ಕೆರೆಗೆ ಕಾಲುವೆ ಮೂಲಕ ಹೇಮಾವತಿ ನೀರನ್ನು ಹರಿಸಿದ ಪರಿಣಾಮ ಕೋಡಿ ಬಿದ್ದಿದೆ. ಈ ನಾಲ್ಕು ಕೆರೆಗಳಿಗೂ ಗಂಗಾ ಪೂಜೆ ನೆರವೇರಿಸಿ ಕೆರೆಗೆ ಬಾಗಿನ ಅರ್ಪಿಸಿದರು.


ಕೆರೆಗಳಿಗೆ ಗಂಗಾಪೂಜೆ ನೆರವೇರಿಸಿದ ನಂತರ ಮಾತನಾಡಿದ ಶಾಸಕ ಗೌರಿಶಂಕರ್, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೃಷಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರೈತರಿಗೆ ಅಗತ್ಯವಾಗಿ ಬೇಕಾದ ನೀರಿನ ಸೌಕರ್ಯ ಕಲ್ಪಿಸಲು ಮುಂದಾಗಿದ್ದು, ವೃಷಭಾವತಿ ನದಿ ನೀರನ್ನು ಗ್ರಾಮಾಂತರಕ್ಕೆ ತಂದು ಗ್ರಾಮಾಂತರ ಕ್ಷೇತ್ರದ ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.


ಹಾಲುಗೊಂಡನಹಳ್ಳಿ ಹಾಗೂ ಬೆಟ್ಟಶೀತಕಲ್ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಮಾಡಿ ಎರಡು ಗ್ರಾಮಗಳಲ್ಲಿ ಸುಮಾರು 600 ವಾಟರ್ ಕ್ಯಾನ್ ಹಾಗೂ 600 ಸೀರೆಗಳನ್ನು ವಿತರಿಸಿದರು. ಆಲದಮರಪಾಳ್ಯ, ವಿಟ್ಟರಾವುತ್ತನಹಳ್ಳಿ, ಜನತಾಕಾಲೋನಿ, ಬೇವಿನಳ್ಳಿಪಾಳ್ಯ ಮತ್ತು ಊರ್ಡಿಗೆರೆ ಟೆಂಟ್‌ಗಳಲ್ಲಿ ಸಿಸಿ ರಸ್ತೆ, ಸಿಸಿ ಚರಂಡಿ, ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಿದರು. ಗಂಗಾಪೂಜೆ ಅಂಗವಾಗಿ ಸುಮಾರು 4000ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ, ಅರಿಶಿಣ-ಕುಂಕುಮ, ಬಳೆ ನೀಡುವ ಮೂಲಕ ಶಾಸಕರು ಬಾಗಿನ ನೀಡಿದರು.


ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತ್ ಕುಮಾರ್, ಗೂಳೂರು ಜಿಪಂ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಶ, ವಿಷ್ಣುವರ್ಧನ್, ತನ್ವೀರ್, ವಿಜಯ್ ಕುಮಾರ್, ಸುವರ್ಣಗಿರಿ ಕುಮಾರ್, ಪಿ.ಎಲ್.ಆರ್. ರಮೇಶ್ ಸೇರಿದಂತೆ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.