“ಸವ್ಯಸಾಚಿ” ಗೌರವ ಗ್ರಂಥ ಬಿಡುಗಡೆ: ಡಾ.ಜಿ.ಪರಮೇಶ್ವರ ದಂಪತಿಗೆ  ಅಹ್ವಾನ

“ಸವ್ಯಸಾಚಿ” ಗೌರವ ಗ್ರಂಥ ಬಿಡುಗಡೆ: ಡಾ.ಜಿ.ಪರಮೇಶ್ವರ ದಂಪತಿಗೆ  ಅಹ್ವಾನ

“ಸವ್ಯಸಾಚಿ” ಗೌರವ ಗ್ರಂಥ ಬಿಡುಗಡೆ:  ಡಾ.ಜಿ.ಪರಮೇಶ್ವರ ದಂಪತಿಗೆ  ಅಹ್ವಾನ

“ಸವ್ಯಸಾಚಿ” ಗೌರವ ಗ್ರಂಥ ಬಿಡುಗಡೆ:

ಡಾ.ಜಿ.ಪರಮೇಶ್ವರ ದಂಪತಿಗೆ  ಅಹ್ವಾನ

ತುಮಕೂರು: ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟದ ಸದಸ್ಯರು ಮತ್ತು ಪದಾಧಿಕಾರಿಗಳು ಶುಕ್ರವಾರ ಸಿದ್ಧಾರ್ಥ ನಗರದಲ್ಲಿನ ಡಾ.ಜಿ.ಪರಮೇಶ್ವರ ಅವರ ನಿವಾಸಕ್ಕೆ ತೆರಳಿ “ಸವ್ಯಸಾಚಿ” ಗೌರವ ಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭಕ್ಕೆ ಅಹ್ವಾನ ಪತ್ರಿಕೆ ನೀಡುವ ಮೂಲಕ ಅಧಿಕೃತವಾಗಿ ಬರ ಮಾಡಿ ಕೊಳ್ಳಲಾಯಿತು.


ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟದ ಅಧ್ಯಕ್ಷರಾದ ಡಾ.ಎಂ.ಜೆಡ್.ಕುರಿಯನ್ ಅವರನ್ನೊಳಗೊಂಡ ನಿಯೋಗಅವರ ನಿವಾಸದಲ್ಲಿ ಡಾ.ಜಿ.ಪರಮೇಶ್ವರ ಮತ್ತು ಕನ್ನಿಕಾಪರಮೇಶ್ವರ ಅವರಿಗೆ ಫಲತಾಂಬೂಲ ಮತ್ತು ಸಮಾರಂಭದ ಅಹ್ವಾನ ಪತ್ರಿಕೆ ನೀಡುವ ಮೂಲಕ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿತು.  


ಗೌರವಗ್ರAಥ ಬಿಡುಗಡೆ ಮತ್ತು ಅಭಿನಂದನಾ ಸಮಿತಿ ಉಪಾಧ್ಯಕ್ಷರಾದ ಡಾ.ಪ್ರಭಾಕರ್, ಡಾ.ಗುರುಶಂಕರ್ , ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ, ಡಾ.ಅಶೋಕ್ ಮೆಹ್ತಾ, ರಮೇಶ್ ಅವರು ನಿಯೋಗದಲ್ಲಿದ್ದರು.


ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟ, ಸಿದ್ಧಾರ್ಥ ನಗರ, ತುಮಕೂರು ವತಿಯಿಂದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಮಾಜಿ ಉಪಮುಖ್ಯಮಂತ್ರಿ ಮತ್ತು ಕೊರಟಗೆರೆ ವಿಧಾನಸಭಾಕ್ಷೇತ್ರದ ಶಾಸಕರು ಡಾ.ಜಿ.ಪರಮೇಶ್ವರ ಅವರ ಕುರಿತ ಪ್ರೊ.ಮಾದೇವ್ ಭರಣಿ ಸಂಪಾದಿತ “ಸವ್ಯಸಾಚಿ” ಗೌರವಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭವನ್ನು ದಿನಾಂಕ 10ನೇ ಏಪ್ರಿಲ್, 2022 ಭಾನುವಾರದಂದು ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣ, ಅಗಳಕೋಟೆ, ತುಮಕೂರಿನಲ್ಲಿ ಬೆಳಿಗ್ಗೆ 10.30ಕ್ಕೆ ಆಯೋಜಿಸಿದೆ.