ನಾನು ಮಧುಗಿರಿ ಶಾಸಕನಾಗಿ ಆಯ್ಕೆಯಾಗಿದ್ದರೆ ಎತ್ತಿನ ಹೊಳೆ ನೀರು ಹರಿದಿರುತ್ತಿತ್ತು: ಕೆಎನ್‍ಆರ್
knr news
ನಾನು ಮಧುಗಿರಿ ಶಾಸಕನಾಗಿ ಆಯ್ಕೆಯಾಗಿದ್ದರೆ
ಎತ್ತಿನ ಹೊಳೆ ನೀರು ಹರಿದಿರುತ್ತಿತ್ತು: ಕೆಎನ್‍ಆರ್
ಮಧುಗಿರಿ: ನಾನು ಶಾಸಕನಾಗಿ ಅಯ್ಕೆಅಗಿದ್ದರೆ ಇಷ್ಟು ಹೊತ್ತಿಗೆ ಎತ್ತಿನಹೊಳೆ ಮೂಲಕ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುತಿದ್ದೆ.ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕ್ಷೇತ್ರದ ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಮಿಡಗೇಶಿ ಹೋಬಳಿಯ ನೇರಳೆಕೆರೆ ಗ್ರಾಮದಲ್ಲಿ ತಾಲ್ಲೂಕು ಮಾತಂಗ ಸಮುದಾಯದ ವತಿಯಿಂದ ಆಯೋಜಿಸಿದ್ದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಪೂಜೆ ಹಾಗೂ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ , 153ನೇ ಗಾಂಧಿ ಜಯಂತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿಗಳಗಿದ್ದ ಜಗದೀಶ್ ಶೆಟ್ಟರ್ ರವರು 25 ಸಾವಿರ ರೂಗಳನ್ನು ಸಿದ್ದರಾಮಯ್ಯವರ ಅವಧಿಯಲ್ಲಿ ಕನಿಷ್ಠ 50ಸಾವಿರ ರೂಪಾಯಿಗಳು ಸೇರಿದಂತೆ ನಮ್ಮ ತಾಲ್ಲೂಕಿನಲ್ಲಿ ಒಟ್ಟು 174 ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೆ ಚುನಾವಣೆ ಬಂತೂ ಎಂದರೆ ಸಾಕು ಜನರು 500, 1000 ಸಾವಿರ ಸೀರೆ ಹರಿಶಿಣ ಕುಂಕುಮ ಕೊಟ್ಟವರ ಹಿಂದೆ ಹೋದರು ಎಂದು ಜನರೇ ಮಾತನಾಡಿಕೊಳ್ಳುತ್ತಾರೆ ಎಂದರು ಕೆಎನ್‍ಆರ್.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಹಣಿ ಹೊಂದಿರುವ ಎಲ್ಲಾ ಆರ್ಹ ರೈತರಿಗೂ ಜಿಲ್ಲಾ ಡಿಸಿಸಿ ಬ್ಯಾಂಕ್ ನಿಂದ ಕನಿಷ್ಟ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಜಣ್ಣ ತಿಳಿಸಿದರು.
ನನ್ನ ಅವಧಿಯಲ್ಲಿ ರೇಷನ್ ಕಾರ್ಡ್ , ವಿಧವಾ ವೇತನ, ಮಾಶಾಸನ ಸೇರಿಂದಂತೆ ವಿದ್ಯಾರ್ಥಿ ವೇತನವು ಸರಿಯಾದ ಸಮಯಕ್ಕೆ ಪಾವತಿಯಾಗುತ್ತಿತ್ತು ಹಾಗೂ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಅಧಿಕಾರಿಗಳೇ ಮಾಡಿ ತಂದು ಕೊಡುತ್ತಿದ್ದರು. ಆದರೆ ಇಂದೂ ಸಕಾಲಕ್ಕೆ ಸೌಲಭ್ಯಗಳು ದೊರೆಯುತ್ತಿಲ್ಲ ಜನರು ಎರಡು ಮೂರು ದಿನಗಳ ಕಾಲ ಸರ್ಕಾರಿ ಕಚೇರಿಗಳ ಬಳಿ ಅಲೆದಾಡ ಬೇಕಾದಂತಹ ವಾತಾವರಣ ತಾಲ್ಲೂಕಿನಲಿದೆ ಎಂದರು.
ಮುಂದಿನ ವಿದಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಅಯ್ಕೆ ಅಗಿಕಾಂಗ್ರೆಸ್ ಸರ್ಕಾರ ಅಧಿಕಾರಕ್ಕಬಂದ ತಕ್ಷಣ ರೈತರ ಸಾಲ ಮನ್ನಾ ಮಾಡಲಾಗುವುದು.
ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಮಾತಂಗಿ ಸಮುದಾಯದ ಕೊಂಕಲ್ ಮಠದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೊಂಕಲ್ ಮಠದ ಶ್ರೀ ಓಂಕಾರನಾಥ ಸ್ವಾಮೀಜಿ ಮಾತನಾಡಿ. ಮಾದಿಗ ಜನಾಂಗ ಆದಿ ಜನಾಂಗವಾಗಿದ್ದರೂ ಅತಿ ಹಿಂದುಳಿದ ಜನಾಂಗ ವಾಗಿದೆ. ನಾಯಕರ ಕೊರತೆಯಿಂದ ನಮ್ಮ ಸಮುದಾಯ ಅಭಿವೃದ್ಧಿ ಕಂಡಿಲ್ಲ. ರಾಜಕೀಯವಾಗಿ ಆರ್ಥಿಕ ವಾಗಿ ಸಮುದಾಯದವರು ಅಭಿವೃದ್ಧಿ ಕಾಣಬೇಕಾಗಿದೆ. ತಾಲ್ಲೂಕಿನಲ್ಲಿರುವ ಕೊಂಕಲ್ ಮಠವನ್ನು ಅಭಿವೃದ್ದಿ ಪಡಿಸಬೇಕಾಗಿದೆ. ರಾಜಣ್ಣನವರು ಶಾಸಕರಾಗಿದ್ದಾಗ ನಮ್ಮ ಸಮುದಾಯಕ್ಕೆ ಅಗತ್ಯ ಸೌಲಭ್ಯಗಳನ್ನು ಗೌರವ ಸ್ಥಾನ ಮಾನಗಳನ್ನು ನೀಡುವ ಮೂಲಕ ಮಂಚೂಣಿ ನಾಯಕ ಎನಿಸಿಕೊಂಡಿದ್ದಾರೆ ಇವರ ಅವಧಿಯಲ್ಲಿ ತಾಲ್ಲೂಕು ಸಮಗ್ರ ಅಭಿವೃದ್ಧಿ ಕಂಡಿದೆ ಎಂದರು.
ಹಾಜರಿದ್ದ ಪ್ರಮುಖರು
ಜಿಪಂ ಮಾಜಿ ಸದಸ್ಯ ಜಿ.ಜೆ.ರಾಜಣ್ಣ, ನೇರಳೆಕೆರೆ ಗ್ರಾಪಂ ಅಧ್ಯಕ್ಷೆ ನಾಗಲಕ್ಷಮ್ಮ, ನಿವೃತ್ತ ಅಪಾರ ಕಾರ್ಯದರ್ಶಿ ಗೋಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ರಾಜಗೋಪಾಲ್, ಮಲ್ಲಿಕಾರ್ಜುನಯ್ಯ, ಎಂ.ಕೆ. ನಂಜುಂಡರಾಜು, ಗಂಗಣ್ಣ , ಮಾಜಿ ತಾಪಂ ಸದಸ್ಯ ರಾಮಣ್ಣ, ಜೆಡಿ ವೆಂಕಟೇಶ್, ಸಿದ್ದಾಪುರ ರಂಗಾಶ್ಯಾಮಣ್ಣ, ದೊಡ್ಡೇರಿ ಕಣಿಮಯ್ಯ, ವಕೀಲ ನಾಗರಾಜು, ಪಿ.ಸಿ.ಕೃಷ್ಣರೆಡ್ಡಿ, ನರಸಿಂಹಯ್ಯ, ಸಿದ್ದಗಂಗಪ್ಪ, ಹೆಂಜಾರಪ್ಪ, ಸಿದ್ದಪ್ಪ, ಕೆಂಚಣ್ಣ, ಸೀತರಾಂ, ಗ್ರಾಪಂ ಸದಸ್ಯರಾದ ರಾಜಶೇಖರ್, ಸಿದ್ದಪ್ಪ, ದಾಕ್ಷಾಯಣಮ್ಮ, ಪರಿಮಳ