‘ಹಿಂದೂ-ಮುಸ್ಲಿA ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವ ಸಂಘಟನೆಗಳು’ ಬಿಜೆಪಿ ದ್ವೇಷ ಪ್ರಚಾರ- ಕೆಎನ್‌ಆರ್ ಖಂಡನೆ
‘ಹಿಂದೂ-ಮುಸ್ಲಿA ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವ ಸಂಘಟನೆಗಳು’
ಬಿಜೆಪಿ ದ್ವೇಷ ಪ್ರಚಾರ- ಕೆಎನ್‌ಆರ್ ಖಂಡನೆ
ತುಮಕೂರು: ತೀವ್ರತರ ಬೆಲೆ ಏರಿಕೆಯಂಥ ಗಂಭೀರ ವಿಷಯವನ್ನು ಮರೆಮಾಚಲೆಂದೇ ಹಿಜಾಬ್, ಹಲಾಲ್, ಮುಸ್ಲಿಂ ದ್ವೇಷದಂಥ ಭಾವನಾತ್ಮಕ ವಿಚಾರಗಳನ್ನು ಹರಿಯಬಿಟ್ಟು ಸಾಮಾನ್ಯ ಸಾಮರಸ್ಯದ ಜನಜೀವನಕ್ಕೆ ಕುತ್ತು ತರುತ್ತಿರುವ ಬಿಜೆಪಿ ಸಂಬAಧಿತ ಸಂಘ ಸಂಸ್ಥೆಗಳ ದ್ವೇಷ ಪ್ರಚಾರವನ್ನು ಮಧುಗಿರಿ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಖಂಡಿಸಿದ್ದಾರೆ.
ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ ಎಂದು ಆಪಾದಿಸಿದ ರಾಜಣ್ಣನವರು ಇಡಿ, ಐಟಿ, ಸಿಬಿಐನಂಥ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪತ್ರಕರ್ತರ ಸಹಿತ ಎಲ್ಲರ ಮೇಲೂ ಪ್ರಹಾರ ಮಾಡಲಾಗುತ್ತಿದೆ ಎಂದು ಅತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ಮುಸ್ಲಿಮರ ನಡುವೆ ಇರುವ ಸಾಮರಸ್ಯ ಹಾಗೂ ಶಾಂತಿಯುತ ಬಾಳುವೆಯನ್ನು ನಾಶ ಮಾಡುತ್ತ ಓಟು ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ ಎಂದು ದೂರಿದರು.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಕುರಿತು ಮಾನ್ಯ ನ್ಯಾಯಾಲಯ ನೀಡಿರುವ ತೀರ್ಪನ್ನು ಒಪ್ಪಿ ಗೌರವಿಸುತ್ತೇನೆ. ಆದರೆ ಮುಸ್ಲಿಂ ಹೆಣ್ಣುಮಕ್ಕಳು ತೊಡುವ ಹಿಜಾಬ್ ವಿಚಾರವನ್ನು ಪರೀಕ್ಷೆಗೆ ತಿಂಗಳಿರುವಾಗ ವಿವಾದವನ್ನಾಗಿ ಸೃಷ್ಟಿಸುವ ಅಗತ್ಯವಿರಲಿಲ್ಲ ಎಂದ ಕೆಎನ್‌ಆರ್ ಕಾಲೇಜುಗಳು ತರಗತಿಗಳಿಗೆ ಪ್ರವೇಶ ನೀಡುವಾಗಲೇ ಅವರವರ ಕಾಲೇಜಿನ ಡ್ರೆಸ್ ಕೋಡ್ ಅನ್ನು ತಿಳಿಸಿದ್ದರೆ, ವಿದ್ಯಾರ್ಥಿಗಳು ಅವರವರಿಗೆ ಹೊಂದಾಣಿಕೆಯಾಗುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡಿರುತ್ತಿದ್ದರು, ಆಗ ಹಿಜಾಬ್ ಸಮಸ್ಯೆಯೇ ಆಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಮಾಂಸವನ್ನು ಕತ್ತರಿಸುವ ವಿಧಾನ ಕುರಿತಂತೆ ಹಲಾಲ್ ಹಾಗೂ ಜಟ್‌ಕಾ ಕುರಿತ ವಿವಾದವೂ ಅವಶ್ಯಕತೆ ಇರಲಿಲ್ಲ, ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಜೀವನ ವಿಧಾನವನ್ನು ಇದ್ದಕ್ಕಿದ್ದಂತೆ ವಿರೋಧಿಸಿ ಗೊಂದಲ ಸೃಷ್ಟಿಸಲಾಗುತ್ತಿದೆ. ಜನರು ಅವರ ಆಯ್ಕೆಯ ಆಹಾರವನ್ನು ಸೇವಿಸಲು ಯಾರೂ ಅಡ್ಡಿಬರಬಾರದು, ಭಾರತದಿಂದ ಮುಸ್ಲಿಂ ರಾಷ್ಟçಗಳಿಗೆ ಗೋಮಾಂಸವನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದು, ಆ ಎಲ್ಲ ಮಾಂಸವೂ ಹಲಾಲ್ ವಿಧಾನದಲ್ಲಿ ಕತ್ತರಿಸಿದ್ದೇ ಆಗಿರುತ್ತದೆ, ಹಲಾಲ್ ಅಲ್ಲದ ಮಾಂಸವನ್ನು ರಫ್ತು ಮಾಡಲು ಸಾಧ್ಯವೇ ಇಲ್ಲ, ಒಂದೇ ದೇಶದಲ್ಲಿ ಸ್ಥಳೀಯರಿಗೆ ಒಂದು ವಿದೇಶಿಯರಿಗೆ ಇನ್ನೊಂದು ನೀತಿಯನ್ನು ಹೇರುವುದು ಸರಿಯಲ್ಲ ಎಂದರು ರಾಜಣ್ಣನವರು.
ದೇವಾಲಯಗಳ ಸಮೀಪ ಮುಸ್ಲಿಮರು ವ್ಯಾಪಾರ ಮಾಡಬಾರದು, ಮಾವಿನ ಹಣ್ಣನ್ನು ಮುಸ್ಲಿಮ್ ವ್ಯಾಪಾರಿಗಳಿಗೆ ಮಾರಾಟ ಮಾಡಬಾರದು, ರೇಷ್ಮೆ ಗೂಡುಗಳನ್ನು ಮುಸ್ಲಿಮ್ ನೂಲು ಬಿಚ್ಚಾಣಿಕೆದಾರರಿಗೆ ಮಾರಾಟ ಮಾಡಬಾರದು ಎಂದು ಷರತ್ತು ಹಾಕಿದರೆ ಹೇಗೆ, ಇದೆಲ್ಲ ನಮ್ಮ ರೈತರನ್ನು ಬೀದಿಪಾಲು ಮಾಡುವ ಹುನ್ನಾರ ಎಂದು ಆತಂಕ ವ್ಯಕ್ತಪಡಿಸಿದರು.
ಕಾಶ್ಮೀರಿ ಫೈಲ್ಸ್ ಸಿನಿಮಾಗೆ 100% ತೆರಿಗೆ ವಿನಾಯಿತಿ ನೀಡಿದ ಬಿಜೆಪಿ ಸರ್ಕಾರಗಳು ಅಂಬೇಡ್ಕರ್ ಜೀವನ ಆಧರಿಸಿದ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಲಿಲ್ಲವೇಕೆ ಎಂದು ಪ್ರಶ್ನಿಸಿದರು. ಜೀವನಾವಶ್ಯಕ ಪದಾರ್ಥಗಳ ತೀವ್ರ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷಗಳೂ ಗಂಭೀರವಾಗಿ ಹೋರಾಟ ಮಾಡಲು ಆಗುತ್ತಿಲ್ಲ ಎಂದ ಅವರು, ಇಷ್ಟರಲ್ಲೇ ಬೃಹತ್ ಕರ‍್ಯಕ್ರಮವೊಂದನ್ನು ರೂಪಿಸಲಾಗುವುದು ಎಂದರು.
ಸಹಕಾರ ಮಹಾ ಮಂಡಳದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಲ್ಲಳ್ಳಿ ದೇವರಾಜು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುಲಿಕುಂಟೆ ಶಶಿಧರ್ ಜೊತೆಯಲ್ಲಿದ್ದರು.
ಸದ್ಯದಲ್ಲೇ ವಿಚಾರ ಸಂಕಿರಣ
ನಿರ್ದಿಷ್ಟವಾಗಿ ಯುವಶಕ್ತಿಯನ್ನು ದಿಕ್ಕುತಪ್ಪಿಸುತ್ತಿರುವ ಪ್ರಸಕ್ತ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳ ಬಗ್ಗೆ ಹೆಸರಾಂತ ವಿಚಾರವಾದಿಗಳಾದ ದೇವನೂರ ಮಹಾದೇವ, ಪ್ರೊ.ರವಿವರ್ಮಕುಮಾರ್, ನಾಡೋಜ ಬರಗೂರು ರಾಮಚಂದ್ರಪ್ಪ ಮೊದಲಾದವರನ್ನು ತುಮಕೂರಿಗೆ ಕರೆಸಿ ವಿಚಾರ ಸಂಕಿರಣವೊAದನ್ನು ಏರ್ಪಡಿಸುವ ಉದ್ದೇಶವಿದೆ ಎಂದರು.
‘ಟಿಪ್ಪು ವಿರೋಧಿಸಲು ಕಾರಣಗಳೇ ಇಲ್ಲ’
ಬ್ರಿಟಿಷರ ವಿರುದ್ಧ ನಾಲ್ಕು ಯುದ್ದಗಳನ್ನು ಮಾಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಮೂರನೇ ಮೈಸೂರು ಯುದ್ದದ ಖರ್ಚು ಭರಿಸಲು ಕಾಲಾವಧಿ ಕೋರಿ ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆ ಇರಿಸಿದ ಮಹಾನ್ ದೇಶ ಭಕ್ತ. ಈತನನ್ನು ವಿರೋಧಿಸಲು ಕಾರಣಗಳೇ ಇಲ್ಲ. ಮೈಸೂರು ಪ್ರಾಂತ್ಯಕ್ಕೆ ರೇಷ್ಮೆ ಬೆಳೆಯನ್ನು ಪರಿಚಯಿಸಿದ್ದೇ ಟಿಪ್ಪು, ಮೊದಲ ಹಿಪ್ಪುನೇರಳೆ ಕಡ್ಡಿಗಳನ್ನು ಸುಲ್ತಾನ್ ಕಡ್ಡಿ ಎಂದೇ ಕರೆಯಲಾಗುತ್ತಿತ್ತು.
ಬೆಂಗಳೂರಿನ ತನ್ನ ಅರಮನೆಯ ಆವರಣದಲ್ಲೇ ವೆಂಕಟೇಶ್ವರ ದೇವಾಲಯ ಹಾಗೂ ಶ್ರೀರಂಗಪಟ್ಟಣದಲ್ಲಿ ರಂಗನಾಥನ ದೇವಾಲಯ ನಿರ್ಮಿಸಿದ ಟಿಪ್ಪು ತನ್ನ ವಿರುದ್ಧ ಪಿತೂರಿ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಿದ್ದುದು ಅಂದಿನ ಆಡಳಿತ ವಿಧಾನದಲ್ಲಿ ಸಾಮಾನ್ಯ ಕ್ರಮವಾಗಿತ್ತು. ಶೃಂಗೇರಿ ಮಠದ ಮೇಲೆ ಮಹಾರಾಷ್ಟçದ ಪೇಶ್ವೆಗಳು ದಾಳಿ ಮಾಡಿದಾಗ ಸೇನೆ ಕಳಿಸಿ ರಕ್ಷಿಸಿದ್ದು ಟಿಪ್ಪು ಎಂಬುದು ನೆನಪಿನಲ್ಲಿರಲಿ.
ಕೆ.ಎನ್.ರಾಜಣ್ಣ
ಮಾಜಿ ಶಾಸಕರು