ಅಪ್ಪು ನಮ್ಮೆಲ್ಲರಿಂದ ದೂರವಾಗಿರಬಹುದು ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಜರಾಮರ

ಅಪ್ಪು ನಮ್ಮೆಲ್ಲರಿಂದ ದೂರವಾಗಿರಬಹುದು ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಜರಾಮರ, #appu#puneeth#gs-prasannakumar#chinnegowda#bettadahalliswamiji-bevarahani

ಅಪ್ಪು ನಮ್ಮೆಲ್ಲರಿಂದ ದೂರವಾಗಿರಬಹುದು ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಜರಾಮರ
ಅಪ್ಪು ನಮ್ಮೆಲ್ಲರಿಂದ ದೂರವಾಗಿರಬಹುದು ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಜರಾಮರ
ಗುಬ್ಬಿ : ಅಪ್ಪು ನಮ್ಮೆಲ್ಲರಿಂದ ದೂರವಾಗಿರಬಹುದು ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಜರಾಮರಾಗಿದ್ದಾರೆ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಜ್ ತಿಳಿಸಿದರು. 
   ತಾಲ್ಲೂಕಿನ ಹೇರೂರಿನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ತರಂಗಿಣಿ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಆಯೋಜಿಸಿದ್ದ ಅಪ್ಪು ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದ ಬುದ್ಧಿಶಕ್ತಿ ಅಭಿನಯವನ್ನು ರೂಢಿಸಿಕೊಂಡಿದ್ದ ಅವರು ಸಾಮಾಜಿಕ ಸೇವೆಯಲ್ಲಿ ತೆರೆಮರೆಯಲ್ಲಿಯೇ ಕೆಲಸ ಮಾಡಿದ್ದ ಅಪ್ಪು ನಮ್ಮಿಂದ ದೂರವಾಗಿದ್ದಾರೆ ಎಂಬುದನ್ನ ಊಹಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಆದರೆ ಅವರು ಮಾಡಿರುವಂತಹ ಸಾಮಾಜಿಕ ಸೇವೆ ಇಡೀ ಪ್ರಪಂಚವೇ ಒಪ್ಪುವಂತದ್ದು ಎಂದ ಅವರು   ಇನ್ನೂ ಗುಬ್ಬಿ ಎಂದಾಗ ಕನ್ನಡ ಚಲನಚಿತ್ರದ ಪ್ರತಿಯೊಬ್ಬ ನಾಯಕರಿಗೂ ದಾರಿದೀಪ ಗುಬ್ಬಿ ವೀರಣ್ಣನವರು ಹುಟ್ಟಿದ  ಊರಿನಲ್ಲಿ ನೂರಾರು ಪ್ರತಿಭೆಗಳಿದ್ದು ಅವುಗಳನ್ನು ಗುರುತಿಸಿ ಅವರಿಗೆ ವೇದಿಕೆ ನೀಡುತ್ತಿರುವ ತರಂಗಿಣಿ ಸ್ಕೂಲ್ ಆಫ್ ಡ್ಯಾನ್ಸ್ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಪಡೆಯಲಿ ಎಂದು ಹಾರೈಸಿದರು.

 ನಿರ್ಮಾಪಕ ಚೆನ್ನೆಗೌಡರು  ಮಾತನಾಡಿ ನಮ್ಮ ಕುಟುಂಬದ ಕುಡಿಯೊಂದು ನಮ್ಮನ್ನು ಅಗಲಿ ಇರುವಂತದ್ದು ಬಹಳ ನೋವಿನ ಸಂಗತಿ, ನಾವು ನೋವು ಪಡುವುದರಲ್ಲಿ  ಅರ್ಥವಿದೆ ಆದರೆ ಇಡೀ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ಅಪ್ಪು ನಿಧನ ರಾದ ಸಮಯದಲ್ಲಿ  ಕಣ್ಣಿನಲ್ಲಿ ನೀರು ಹಾಕಿರುವುದನ್ನು ನೋಡಿದಾಗ ಅಪ್ಪು ಸಾಧನೆ ಬಹಳ ದೊಡ್ಡದು ಚಲನಚಿತ್ರದಲ್ಲಿ ಎಲ್ಲರೂ ನಟಿಸಬಹುದು ಆದರೆ ಅಪ್ಪು ಅವರ ಸಾಮಾಜಿಕ ಸೇವೆ ಶೈಕ್ಷಣಿಕ ಸೇವೆ ಹಾಗೂ ಅವರ ಮರಣದ ನಂತರವೂ ಸಾವಿರಾರು ಜನ ಅಪ್ಪು ಹೆಸರಿನಲ್ಲಿ ನುಡಿನಮನ ನೇತ್ರದಾನ ಶಿಬಿರಗಳನ್ನು ಮಾಡುತ್ತಿರುವುದು ನೋಡಿದಾಗ ಶಾಶ್ವತವಾಗಿ ನಮ್ಮೊಳಗೆ ಅಪ್ಪು ಇದ್ದಾರೆ ಎಂದು ಭಾವಿಸ ಬೇಕಾಗಿದೆ.
  ಇನ್ನು ಗ್ರಾಮಾಂತರ ಭಾಗದಲ್ಲಿ ಮಕ್ಕಳಿಗೆ ಬೇಕಾಗಿರುವಂತ ಸೌಲಭ್ಯ ಸಿಗುವುದು ಬಹಳ ಕಷ್ಟ ಆದರೆ ಗುಬ್ಬಿಯ ತರಂಗಿಣಿ ಸ್ಕೂಲ್ ಆಫ್ ಡ್ಯಾನ್ಸ್ ಕಳೆದ 4ವರ್ಷದಿಂದಲೂ ಹಲವು ಪ್ರತಿಭೆಗಳನ್ನು ಹೊರತಂದು ಗುರುತಿಸಿ ಅವರನ್ನು ಸಿದ್ಧತೆ ಮಾಡುತ್ತಿರುವುದು ನೋಡಿದಾಗ ಬಹಳ ಸಂತೋಷವಾಗುತ್ತದೆ ಎಂದು ತಿಳಿಸಿದರು.
    ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ ಮಾತನಾಡಿ ಗುಬ್ಬಿ ಧಾರ್ಮಿಕವಾಗಿ ಸಾಹಿತ್ಯ, ಸಂಗೀತ, ರಂಗಭೂಮಿ, ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ತಾಲ್ಲೂಕು ಎಂದೇ ಗುರುತಿಸಿಕೊಂಡಿದೆ ಇಲ್ಲಿ ಸಾವಿರಾರು ಕಲಾವಿದರಿದ್ದು ಅವರನ್ನು  ಪರಿಪೂರ್ಣವಾಗಿ ಬೆಳೆಸುವಂತಹ ಜವಾಬ್ದಾರಿ ಎಲ್ಲರ ಮೇಲಿದೆ  ಪುಟ್ಟ ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಅನಾವರಣಗೊಳಿಸಲು ತರಂಗಿಣಿ ಸ್ಕೂಲ್ ತರಗತಿ ಆರಂಭಿಸಿ ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಅಭಿನಂದನಾರ್ಹ ಎಂದ ಅವರು ಕೇವಲ 6  ತಿಂಗಳು ಮಗುವಾಗಿದ್ದಾಗಲೇ ಅಭಿನಯದ ಮೂಲಕ ಮನ ಸೆಳೆದಿದ್ದ ಪುನೀತ್ ರಾಜ್ ಕುಮಾರ್ ಸಾಮಾಜಿಕ ಸೇವೆಯಲ್ಲಿ ಅವರು ಮಾಡಿರುವ ಸೇವೆ ಅನನ್ಯವಾಗಿದೆ ಅವರ ಆದರ್ಶಗಳು ಇಂದಿನ ಯುವಜನರು ಕಲಿಯಬೇಕಾಗಿದೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದ ಅವರ ಕೆಲಸ ಭಗವಂತ ಮೆಚ್ಚುವಂತದ್ದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ,ಉಪಾಧ್ಯಕ್ಷೆ ಮಹಾಲಕ್ಷ್ಮಿ ಲೋಕೇಶ್ ಬಾಬು, ಸದಸ್ಯರಾದ ಶಿವಕುಮಾರ್, ಮಹಮ್ಮದ್ ಸಾದಿಕ್, ಮುಖಂಡರಾದ ಜಿ ಎನ್ ಬೆಟ್ಟಸ್ವಾಮಿ, ಕಾಂಗ್ರೆಸ್‌ ಮುಖಂಡ ಹಾಗೂ ವಕೀಲರಾದ ಜಿ.ಎಸ್.ಪ್ರಸನ್ನಕುಮಾರ್, ಹಿತೇಶ್,ಲೋಕೇಶ್ ಬಾಬು, ಮಿಮಿಕ್ರಿ ಕಲಾವಿದ ತುರುವೇಕೆರೆ ಸಾಗರ್, ತರಂಗಿಣಿ ಸ್ಕೂಲ್ ಆಫ್ ಡಾನ್ಸ್ ನ ವ್ಯವಸ್ಥಾಪಕಿ ರೇಖಾ ನಟರಾಜ್,ಪ್ರಸಾದ್ ಸೇರಿದಂತೆ ಇನ್ನಿತರರು ಹಾಜರಿದ್ದರು.