ಅಪ್ಪ-ಮಗಳ ಕತೆ-ಕಾವ್ಯಗಳ ಜುಗಲ್‌ಬಂದಿ 

gangadhar-makalli-smitha-makalli-book release

ಅಪ್ಪ-ಮಗಳ ಕತೆ-ಕಾವ್ಯಗಳ ಜುಗಲ್‌ಬಂದಿ 

ಅಪ್ಪ-ಮಗಳ ಕತೆ-ಕಾವ್ಯಗಳ ಜುಗಲ್‌ಬಂದಿ 


ನಮ್ಮ ನಡುವಿನ ಮಹತ್ವದ ಕತೆಗಾರ, ಮೇಷ್ಟುç ಎಸ್.ಗಂಗಾಧರಯ್ಯನವರ ಇತ್ತೀಚಿನ ಕತೆಗಳ ಸಂಕಲನ – ‘ಮಣ್ಣಿನ ಮುಚ್ಚಳ’ ಹಾಗೂ ಅವರ ಮಗಳು ಇಂಗ್ಲಿಷ್ ಮೇಡಂ ಸ್ಮಿತಾ ಮಾಕಳ್ಳಿಯವರ  ಕಾವ್ಯ ಸಂಕಲನ ‘ ಒಂದು ಅಂಕ ಮುಗಿದು’ ಕೃತಿಗಳು ಈ ಭಾನುವಾರ ಬೆಳಗ್ಗೆ 11 ಗಂಟೆಗೆ ತಿಪಟೂರಿನಲ್ಲಿ ಕಲ್ಪತರು ಪದವಿಪರ‍್ವ ಕಾಲೇಜಿನ ಮಗ್ಗುಲಲ್ಲಿರುವ ಕಲ್ಪತರು ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ.


ಹೆಸರಾಂತ ಲೇಖಕರಾದ ರಹಮತ್ ತರೀಕೆರೆ, ನಟರಾಜ ಬೂದಾಳು, ಸುಬ್ಬು ಹೊಲೆಯಾರ್, ಗೀತಾಲಕ್ಷಿö್ಮ, ಪ್ರಕಾಶಕ ಪಲ್ಲವ ವೆಂಕಟೇಶ್ ಭಾಗವಹಿಸುತ್ತಿದ್ದಾರೆ. ಜೊತೆಗೆ ಕನ್ನೂಘಟ್ಟದ ಕಾಂತರಾಜು, ಸಂಗಡಿಗರ ತತ್ವಪದ ಗಾಯನವೂ ಇದೆ, ಎಲ್ಲರನ್ನೂ ಬನ್ನಿ ಎಂದು ಕರೆದಿದ್ದಾರೆ ಕತೆಗಾರ ಎಸ್. ಗಂಗಾಧರಯ್ಯ. ಎರಡೂ ಕೃತಿಗಳ ಮುನ್ನುಡಿಗಳಿಂದ ಆಯ್ದ ಸುಸಂಬದ್ಧ ಉದ್ಧೃತ ಭಾಗಗಳು ನಿಮ್ಮ ಅವಗಾಹನೆಗಾಗಿ ಇಲ್ಲಿವೆ- ಸಂಪಾದಕ 


ಮಣ್ಣಿನ ಮುಚ್ಚಳ 
ಎಸ್.ಗಂಗಾಧರಯ್ಯನವರ ಕಥಾ ಸಂಕಲನ

ಎಸ್.ಗAಗಾಧರಯ್ಯ ಅವರ ಕಥೆಗಳಿಗೆ ನನ್ನ ಪ್ರಸ್ತಾವನೆಯ ಅಗ್ಯವಿಲ್ಲವೆನಿಸುತ್ತದೆ. ಯಾಕೆಂದರೆ ಅವರ ಕಥೆಗಳು ಈಗಾಗಲೇ ಕನ್ನಡದ ಸುಪ್ರಸಿದ್ಧ ನಿಯತಕಾಲಿಕೆಗಳಲ್ಲಿ, ಆಯಾ ಪತ್ರಿಕೆಯ ವಿಶೇಷ ಸಂಚಿಕೆಗಳಲ್ಲಿ ಪ್ರಕಟವಾಗಿರುತ್ತವೆ. ಕನ್ನಡ ಕಥನ ಕಲೆ ಗಂಗಾಧರಯ್ಯನವರAಥ ಕಥೆಗಾರರಿಂದ ತನ್ನ ಗಡಿರೇಖೆಗಳನ್ನು ವಿಸ್ತರಿಸಿಕೊಂಡು ಅದು ಕಾಣಬೇಕಾದ ಭಿನ್ನ ಭಿನ್ನ ರೂಪ ಮತ್ತು ವೈವಿಧ್ಯತೆಯನ್ನು ಕಂಡುಕೊAಡಿರುತ್ತದೆ. ಅಪಾರ ಓದುಗ ಸಂಖ್ಯೆಯನ್ನು ಪಡೆದಿದೆ. ಇದೇ ವೈವಿಧ್ಯಮಯ ವಿಸ್ತಾರ ಕಾವ್ಯ ನಾಟಕಕ್ಕೆ ಒದಗಿ ಬಂದಿಲ್ಲ ಎನಿಸುತ್ತದೆ. ಈ ಥರದ ಮಾತು ನನ್ನ ಅರಿವಿನ ಮಿತಿ ಇರಬಹುದೇನೋ? ಅಥವಾ ನಾನು ಆಧುನಿಕ ಕಾವ್ಯಕ್ಕಿಂತ ಗದ್ಯ ಬರಹಗಳನ್ನು ಇಷ್ಟಪಡುವ ಒಬ್ಬ ಸಾಮಾನ್ಯ ಓದುಗನಾಗಿದ್ದರಿಂದ ಗಂಗಾಧರಯ್ಯನವರAಥ ಪ್ರಯೋಗಶೀಲ ಕಥೆಗಾರರನ್ನಿಟ್ಟುಕೊಂಡು ಕಥಾ ಪ್ರಕಾರದ ತೂಕ ಹೆಚ್ಚಿಸಿ ಮಾತನಾಡುತ್ತಿರುವೆನೇನೋ ಎನಿಸುತ್ತಲಿದೆ.
ಕನ್ನಡದಲ್ಲಿ ಕಥಾ ಮಾರ್ಗ ತನ್ನ ವೈವಿಧ್ಯತೆಯನ್ನು ಹೇಗೆ ವಿಸ್ತರಿಸಿಕೊಂಡಿದೆಯೆAದರೆ ಆಯಾ ಪ್ರದೇಶದ ಕಥೆಗಾರರರು ಹೊಸತೇ ಹೊಸತು ಎನ್ನುವಂಥ ಭಾಷೆ ಮತ್ತು ವಸ್ತು ಸಂಗತಿಯನ್ನು ತಡಕಾಡುತ್ತಾ ತಮ್ಮ ಪ್ರಾದೇಶಿಕವೆನ್ನುವ ಬರಹಗಳನ್ನು ಸಾರ್ವತ್ರಿಕಗೊಳಿಸುತ್ತಿರುವುದು ಆಶ್ಚರ್ಯದ ಸಂಗತಿಯಾಗಿದೆ. ಇದೇ ಮುಹೂರ್ತದಲ್ಲಿ ಹೇಳಬೇಕಾದ ಇನ್ನೊಂದು ಮಾತೆಂದರೆ ಈ ಹೊತ್ತಿನ ಜಗತ್ತು ಜಾಗತೀಕರಣದತ್ತ,ಅತ್ಯಾಧುನಿಕ ಸಂಗತಿಗಳ ಅಮಲಿನತ್ತ ದೌಡಾಯಿಸುತ್ತಿರಬೇಕಾದರೆ ಕನ್ನಡದ ಅನೇಕಾನೇಕ ಲೇಖಕರು ಆರ್ದೃ ಅಂತಃಕರಣದಿAದ ತಾವು ಬೆಳೆದು ಬಂದ ಗ್ರಾಮ ಬದುಕಿನತ್ತ ದೃಷ್ಟಿ ಮಡಗಿ ಅಲ್ಲಿಯ ವಿದ್ಯಮಾನಗಳನ್ನು ಗ್ರಹಿಸುತ್ತ ಆ ಸಂಗತಿಗಳನ್ನೆಲ್ಲ ಓದುಗರ ಮುಂದಿಟ್ಟು ರವಷ್ಟು ಇತ್ತಲೂ ತಿರುಗಿ ನೋಡಿ ಎನ್ನುತ್ತಿದ್ದಾರೆ. ಈ ಥರದಲ್ಲಿ ಎಸ್.ಗಂಗಾಧರಯ್ಯನವರ ಕಥೆಗಳು ತೀವ್ರ ಗತಿಯ ಬದಲಾವಣೆಯ ಚಕ್ರದಡಿ ಸಿಕ್ಕಿ, ಅಷ್ಟಾಗಿಯೂ ಬದುಕಬೇಕೆಂದು ಬಡಿದಾಡುತ್ತಿರುವ ಪಾತ್ರಗಳನ್ನು ಅವುಗಳ ಉಸಿರಾಟದಂತೆ ಚಿತ್ರಿಸುತ್ತವೆ.
ಈ ಸಂಕಲನದ ಬಹುತೇಕ ಕಥೆಗಳ ಆರಂಭದಲ್ಲೇ ಅಳಿಯುತ್ತಿರುವ ಆದರೆ ಎಂತಾದರೂ ಉಳಿಯಬೇಕೆಂಬ ಹಠದ ಜೀವಗಳ ಬಾಯಿಂದ ಬರುವ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ ಎಂಬAತಿದ್ದರೂ ಅವೇ ಕಥನದ ಬೀಜವಾಕ್ಯಗಳಂತೆ ಕಾಣಿಸಿಕೊಳ್ಳುತ್ತವೆ. 


*****
ಬಂದು ನಿಂತ ಪಟ್ಟಣ, ವಿದೇಶ ಸೇರಿದ ಮಕ್ಕಳ ಐಷಾರಾಮಿ ಬದುಕು ಮತ್ತು ಮಾತು ಇವು ಸಂತೋಷ ನೀಡುತ್ತಿಲ್ಲ. ಹೀಗೆ ಬದುಕಿನ ನೆಲೆಗಳ ವಿಳಾಸ ತಪ್ಪಿ ಹೋಗುತ್ತಿರುವ ಅಥವ ವಿಳಾಸವೇ ಇಲ್ಲದಿರುವ ಜೀವಗಳ ಕಥೆಗಳು ಈ ಸಂಕಲನದಲ್ಲಿವೆ. 
ಗ್ರಾಮೀಣ ಬದುಕು ಪ್ರಕೃತಿಯಂತೆ ತನ್ನಿಂದ ತಾನೇ ಸಹಜವಾಗಿರುವಲ್ಲಿ ಆಧುನಿಕತೆಯೆಂಬುದು ಜತೆಗೆ ಕಲಿತ ಶಿಕ್ಷಣವೆಂಬುದು ಅದನ್ನು ಪಲ್ಲಟಗೊಳಿಸುತ್ತಲಿದೆ. ಅದರ ಸೌಂರ‍್ಯ ವಿರೂಪಗೊಳ್ಳುತ್ತಲಿದೆಯೇನೋ ಎನಿಸುತ್ತದೆ. 
*****
ಯಾವೊತ್ತಿನ ಗ್ರಾಮೀಣ ವಾತಾವರಣದಲ್ಲಿರುವುದೆಲ್ಲವೂ ಮುಗ್ಧವೇ, ಸಹಜ ಸುಂದರವೇ ಎಂದರೆ, ಹಾಗೂ ಇಲ್ಲವೆಂಬ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಆಧುನಿಕತೆ ಕುರುಡಾದರೆ ರೂಢಿಗತ ನಂಬಿಕೆಗಳು ಬದುಕನ್ನು ಕುಂಟುತ್ತಾ ನಡೆವಂತೆ ಮಾಡಿಬಿಟ್ಟಿವೆ. ನಂಬಿಕೆ, ಸಂಪ್ರದಾಯಗಳೇ ಗ್ರಾಮೀಣರ ಕಾಲಿಗೆ ಚುಚ್ಚಿದ ಮುಳ್ಳುಗಳಾಗಿವೆ. ಅಂದರೆ ನೆರಳು ಬರಿಯ ತಂಪುಕೊಡುವAಥದ್ದೇ ಅಂದರೆ ಅಲ್ಲಿ ಇಬ್ಬನಿ ಕವಿದಿದೆ! ..., ನಂಬಿಕೆಗಳೇ ಮನುಷ್ಯ ಸಮೂಹವನ್ನು ದಿಕ್ಕೆಡಿಸಿರುವಂಥದ್ದನ್ನು ಹೇಳುತ್ತದೆ. ಕಲ್ಲಿಗೊಂದು ಕಥೆ, ಮರಕ್ಕೊಂದು ಐತಿಹ್ಯ ಹೀಗೆ ಇಂಥ ಮೌಡ್ಯವೂ ಜೀವಗಳನ್ನು ಸುತ್ತಿಕೊಂಡು, ಸುಸ್ತು ಹೊಡೆಸಿ ಸುಮ್ಮನಾಗಿರಿಸಿರುತ್ತವೆ. ಈ ಮೌಡ್ಯದ ಸಾರ್ವತ್ರಿಕತೆ ಕೇವಲ ಗ್ರಾಮಸ್ಥರನ್ನಲ್ಲದೆ ಸುಶಿಕ್ಷಿತರನ್ನೂ ಅಪ್ಪಿಕೊಂಡಿದೆ. 
******


ಸಂಕಲನದ ಕಥೆಗಳು ಹಲವು ಹತ್ತು ಸಮಸ್ಯೆ, ಸಂಘರ್ಷ, ಸಂಕಟಗಳನ್ನು ಬಿತ್ತರಿಸುತ್ತ ಹೋದರೂ ಅದರೊಳಗೆ ತನ್ನ ಪಾಡಿಗೆ ತಾನೇ ಜೀವದ ಬೆಳಕಿನ ಕುಡಿಯೊಂದು ಹತ್ತಿಕೊಂಡು ಸುತ್ತಣ ದಿಕ್ಕು ಬೆಳಗುವಂತೆ ಮಾಡಿಬಿಡುತ್ತದೆ. ಗ್ರಾಮೀಣ ಭಾಷೆ, ವಸ್ತು, ಇವಿಷ್ಟು ಮಾತ್ರವಲ್ಲದೆ ಜೀವಂತವೆನಿಸಿ ಕಥೆಯ ತುಂಬ ಓಡಾಡುವ ಪಾತ್ರಗಳಿಂದ ಈ ಸಂಕಲನ ತುಂಬಿಕೊAಡು, ತನ್ನಿಂದ ತಾನೇ ಮುಚ್ಚಳ ತೆಗೆದು ಸಾಹಿತ್ಯ ಪ್ರಿಯರನ್ನು ತನ್ನೆಡೆಗೆ ನೋಡುವಂತೆ ಮಾಡುತ್ತದೆ. ಇಂಥ ಬರವಣಿಗೆಗಾಗಿ ಮಿತ್ರ ಗಂಗಾಧರಯ್ಯನವರಿಗೆ ಎಲ್ಲ ಯಶಸ್ಸು ಕೋರುತ್ತೇನೆ.
                                                                             -ಕೃಷ್ಣಮೂರ್ತಿ ಹನೂರು 


‘ಒಂದು ಅಂಕ ಮುಗಿದು’
 ಸ್ಮಿತಾ ಮಾಕಳ್ಳಿಯವರ ಕವಿತೆಗಳ ಸಂಕಲನ 

ಭಾಷೆ ಮತ್ತು ಬದುಕು ಪರಸ್ಪರ ಅವಲಂಬಿತ ಸಂಗತಿಗಳು. ಅದರಲ್ಲೂ ಕಾವ್ಯದ ಭಾಷೆ ಮತ್ತು ಬದುಕು ಒಂದನ್ನೊAದು ಬಿಟ್ಟು ಬದುಕಲಾರದಂತಹ ಅವಲಂಬಿತರು. ಬದುಕಿಗೆ ಚಲನೆಯಿದೆ, ಜೀವಂತಿಕೆಯಿದೆ, ಸಂಭ್ರಮವಿದೆ,ಏಕಾAತತೆಯಿದೆ. ಹಾಗೆಯೇ ಮಗ್ಗುಲಲ್ಲಿ ನೀರಸತೆ, ವಿಷಾದವೂ ಇದೆ. ಬದುಕಿನ ಜಲ ನಿರ್ಜನವಾದ ಕಾಡಿನಲ್ಲಿ ಜಲ ಜಲ ಹರಿದು ತನ್ನ ದಾರಿ ತಾನೇ ಕಂಡುಕೊಳ್ಳುವAತೆ ಕಾವ್ಯವೂ ತನ್ನ ಅಭಿವ್ಯಕ್ತಿಯ ದಾರಿಯನ್ನು ಹುಡುಕಿಕೊಳ್ಳುತ್ತದೆ. ಚಲನೆಯಲ್ಲಿನ ಜೀವಂತಿಕೆ, ರಸಿಕತೆ, ಪ್ರೀತಿ ಮಾತ್ರ ಕಾವ್ಯವನ್ನು ಜೀವಂತವಿರುವAತೆ ನೋಡಿಕೊಳ್ಳುತ್ತದೆ. ಕವಿಯಾಗ ಹೊರಟವರಿಗೆ ಜೀವನ ಪ್ರೀತಿಯಷ್ಟೇ ಮುಖ್ಯವಾದುದು ಕಾವ್ಯದ ಬಗೆಗಿನ ಮೋಹ. ಉತ್ಕಟವಾದ ಬದುಕುವಿಕೆ, ಆ ಉತ್ಕಟತೆಯನ್ನು ಕಾವ್ಯವಾಗಿಸುವ ಪ್ರಾಮಾಣಿಕತೆ ಮಾತ್ರ ಜೀವಂತ ಕಾವ್ಯವನ್ನು ಸೃಷ್ಟಿಸುತ್ತದೆ.


ಸ್ಮಿತಾ ಮಾಕಳ್ಳಿಯವರ ಚೊಚ್ಚಲ ಕವನ ಸಂಕಲನದಲ್ಲಿ ಇಂತಹ ನಿರ್ಜನ ಬಯಲಿನಲ್ಲಿ ಹರಿವ ಜಲದ ಸಲಿಲವಾದ ಹೆಜ್ಜೆಯ ಗುರುತುಗಳಿವೆ. ಇಲ್ಲಿನ ಕವಿತೆಗಳಲ್ಲಿ ಕಾವ್ಯದ ಕಟ್ಟುಪಾಡುಗಳಲ್ಲಿ ಬಂಧಿಸಿಕೊಳ್ಳದ ಸ್ವತಂತ್ರö್ಯ ಮನೋಭಾವವೊಂದು ಮೇಲಿಂದ ಮೇಲೆ ಅಲೆದಾಡುತ್ತದೆ. ಈ ಮನೋಭಾವ ಹೊಸ ಅನುಭವಗಳಿಗೆ, ಹೊಸ ಸಂವೇದನೆಗಳಿಗೆ ಮೇಲಿಂದ ಮೇಲೆ ತೆರೆದುಕೊಳ್ಳುತ್ತದೆ. `ಅಲೈಸ್ ಇನ್ ವಂಡರ್ ಲ್ಯಾಂಡ್’ನಲ್ಲಿ ಕನಸು, ಕನವರಿಕೆಗಳ ಮಧ್ಯೆ ಅಲೆದಾಡುವಂತ ಹುಡುಗಿಯೊಬ್ಬಳು ಇಲ್ಲಿ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದಾಳೆ. ತನ್ನನ್ನು ಕಂಡುಕೊಳ್ಳಲು ಯತ್ನಿಸುತ್ತಾಳೆ. ಅವಳ ನಿರಿ, ನಿರಿ ನಿರಿಗೆಯ ಲಂಗದೊಳಗೆ ನಕ್ಷತ್ರ,ಚಂದಿರ, ಬಣ್ಣ-ಬಣ್ಣದ ಹೂಗಳು ಮಿನುಗುತ್ತವೆ. ಕೈಯ್ಯಲ್ಲೊಂದು ಮಂತ್ರದAಡವಿದ್ದು ಅದು ಹೊಸ ಹೊಸ ಲೋಕದ ಬಾಗಿಲನ್ನು ತೆರೆದು ತೋರಿಸುತ್ತದೆ. ಇದೆಲ್ಲದರ ಮಧ್ಯೆ ಸುಂದರವಾದ, ಕನಸು ಕಂಗಳ ಹುಡುಗಿಯೊಬ್ಬಳು `ಸಿಂಡ್ರೆಲ್ಲಾ’ಳAತೆ ಕಷ್ಟದ ನಡುವೆಯೂ ಮಂದಹಾಸ ಚೆಲ್ಲುತ್ತಾ ಬೆಳಕಿನ ಕೋಲೆಂಬAತೆ ನಡೆದಾಡುತ್ತಿದ್ದಾಳೆ.
ಸ್ಮಿತಾ ಕವಿತೆಗಳು ಅಲೈಸಳಂತೆ, ಸಿಂಡ್ರೆಲ್ಲಾಳAತೆ, ಚಿಟ್ಟೆಗಳಂತೆ ಸಂಚರಿಸುತ್ತಾ ಲೋಕದ ಪ್ರತಿ ಅನುಭವವನ್ನು ಮುಟ್ಟುವ, ಮೂಸುವ, ಗಾಢವಾಗಿ ವಾಸನೆಯನ್ನು ಆಘ್ರಾಣಿಸುವ ತೆರದಲ್ಲಿ ಕಣ್ಣೆದುರು ನಿಲ್ಲುತ್ತವೆ. 


ನಿರ್ದಿಷ್ಟವಾಗಿ ಸ್ಮಿತಾ ಕವಿತೆಗಳನ್ನು ಕುರಿತು ಹೀಗೇ ಎಂದು ಗುರುತಿಸಿ ಮಾತನಾಡುವುದಕ್ಕೆ ಸಾಧ್ಯವಾಗದಷ್ಟು ಇಲ್ಲಿನ ಕವಿತೆಗಳು ಬಿಡಿ ಬಿಡಿ ಚಿಟ್ಟೆಗಳಾಗಿ ಹಾರಿ ಸಂಚರಿಸುತ್ತವೆ. 
*****


ಈ ಹೊತ್ತಿನ ಮಹಿಳಾ ಕಾವ್ಯ ಸಿದ್ಧ ದಾರಿ ಅಥವಾ ಪೊರೆಸಲ್ಪಟ್ಟ ದಾರಿಯನ್ನು ವಿಸ್ತರಿಸಿಕೊಳ್ಳುವ ಸಂಧಿ ಕಾಲದಲ್ಲಿದೆ. ಮಹಿಳಾ ಕಾವ್ಯ ಹೀಗೇ ಇರಬೇಕು ಎಂಬ ಸಿದ್ಧ ಕಲ್ಪನೆಗಳನ್ನು ಮುರಿದು ಕಟ್ಟುವ ಕ್ರಮದೊಂದಿಗೆ ತಮ್ಮದೇ ದಾರಿಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿ ಹಲವು ಹೊಸ ತಲೆಮಾರಿನ ಲೇಖಕಿಯರು ಇಂದು ಭರವಸೆಯೊಂದಿಗೆ ಬರೆಯುತ್ತಿದ್ದಾರೆ. ಕೆಲವರು ಸ್ತಿçà ಹಾಗೂ ಸ್ತಿçÃವಾದದ ಫಲಿತಗಳ ಮುಂದುವರಿಕೆಯAತೆ ಬರೆಯುತ್ತಿದ್ದರೆ, ಯಾವ ವಾದಗಳ ಹಂಗಿಲ್ಲದೆ ತಮ್ಮ ದಾರಿಯನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಮತ್ತೆ ಕೆಲವರಿದ್ದಾರೆ. ಹೆಣ್ಣ ದೇಹ ಮತ್ತು ಹೆಣ್ಣು ಭಾಷೆಯ ಕುರಿತಾಗಿ ಪ್ರಜ್ಞಾಪೂರ್ವಕವಾಗಿ ಬರೆಯುತ್ತಾ ಮಿಸ್‌ಇಂಟರ್‌ಪ್ರಿಟೇಷನ್‌ನಲ್ಲಿ ಆದ ತಪ್ಪುಗಳನ್ನು ಸರಿಪಡಿಸುವ ಆಲೋಚನಾ ಕ್ರಮವೊಂದು ಸಹ ಕನ್ನಡದ ಮಹಿಳಾ ಕಾವ್ಯದಲಿ ್ಲಪ್ರಚಲಿತವಿದೆ. ಇಂತಹ ಕಾವ್ಯ ಸಂದರ್ಭದಲ್ಲಿ ಸ್ಮಿತಾ ಮಾಕಳ್ಳಿ ತನ್ನದೇ ಆದ ಆಪ್ತವಾದ ಭಾವಲೋಕವೊಂದನ್ನು ಅಭಿವ್ಯಕ್ತಿಸ ಹೊರಟಿರುವುದು ಗಮನಾರ್ಹವಾದ ಪ್ರಯತ್ನವಾಗಿದೆ. 


ತನ್ನ ಆಪ್ತವಾದ ಭಾವಲೋಕವನ್ನು ನಿಧಾನವಾಗಿ ಆದರೆ ಸ್ಥಿರವಾಗಿ ಖಾತರಿಪಡಿಸಿಕೊಳ್ಳುತ್ತಾ ಅದನ್ನು ಬಿಡಿ ಬಿಡಿ ಚಿತ್ರಗಳ ಮೂಲಕ ಹಿಡಿದಿಡುವ ಜೀವನ ಪ್ರೀತಿಯ ಹುಡುಗಿಯೊಬ್ಬಳು ಇಲ್ಲಿನ ಕವಿತೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಾಳೆ. ಚಿತ್ರಗಳು ಪದಗಳ ಜೋಡಿಸುವಿಕೆಯಿಂದಾಗಿ ಮೈದುಂಬಿಕೊAಡು ಇಲ್ಲಿ ಕವಿತೆಗಳಾಗಿವೆ. ಈಗಾಗಲೇ ತಮ್ಮ ಬಿಡಿಬಿಡಿ ಕವಿತೆಗಳ ಮೂಲಕ ಓದುಗರ ಗಮನ ಸೆಳೆದಿದ್ದ ಸ್ಮಿತಾ ಮಾಕಳ್ಳಿ ಕವನ ಸಂಕಲನ ಪ್ರಕಟಿಸುವ ಮೂಲಕ ಹೊಸ ತಲೆಮಾರಿನ ಕವಯಿತ್ರಿಯರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಈ ಮೂಲಕ ಶುಭ ಕೋರುತ್ತೇನೆ. 
-ಡಾ. ಹೆಚ್.ಎಲ್.ಪುಷ್ಪ


(ಪುಸ್ತಕದ ಮುನ್ನುಡಿಯಿಂದ ಆಯ್ದ ಕಂಡಿಕೆಗಳು)