ಡಾ.ಎನ್.ಎಸ್.ಜಯಕುಮಾರ್ ಸರಳ ಹುಟ್ಟು ಹಬ್ಬ ಆಚರಣೆ
ಡಾ.ಎನ್.ಎಸ್.ಜಯಕುಮಾರ್ ಸರಳ ಹುಟ್ಟು ಹಬ್ಬ ಆಚರಣೆ
ತುಮಕೂರು: ನಗರದ ಹೆಸರಾಂತ ಉದ್ಯಮಿ, ತುಮಕೂರು ಮರ್ಚ್ಂಟ್ ಕ್ರೆಡಿಟ್ ಕೋ ಅಪರೇಟಿವ್ ಹಾಗೂ ಶಾರದಾ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎನ್.ಎಸ್.ಜಯಕುಮಾರ್ ಅವರ ಹುಟ್ಟು ಹಬ್ಬವನ್ನು ಕನ್ನಡ ಸೇನೆಯ ವತಿಯಿಂದ ಮಂಗಳವಾರ ಸರಳವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಉದ್ಯಮಿಗಳಾದ ಡಾ. ಎನ್.ಎಸ್. ಜಯಕುಮಾರ್,ಕಳೆದ ಎರಡು ವರ್ಷಗಳ ಕೊರೊನಾ ಪಿಡುಗಿನ ಸಂದರ್ಭದಲ್ಲಿ ಮಾಡಿದ ಸಮಾಜ ಸೇವೆಯನ್ನು ಮರೆಯಲು ಸಾಧ್ಯವೇ ಇಲ್ಲ. ನಗರಪಾಲಿಕೆಯ 800ಕ್ಕೂ ಹೆಚ್ಚು ಜನ ಪೌರಕಾರ್ಮಿಕರಿಗೆ ಸಮವಸ್ತç ವಿತರಿಸಿದ್ದಲ್ಲದೆ,ತಮ್ಮ ಗೆಳೆಯರ ಜೊತೆ ಸೇರಿ 750ಕ್ಕೂ ಹೆಚ್ಚು ಅಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಡಳಿತಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಜಿಲ್ಲಾಡಳಿತ ಅಮ್ಲಜನಕಕ್ಕಾಗಿ ಪರದಾಡುವುದನ್ನು ತಪ್ಪಿಸಿದರು. ಅಲ್ಲದೆ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಮಹಿಳಾ ಪದವಿ ಕಾಲೇಜಿನ ಮಕ್ಕಳಿಗಾಗಿ ತಮ್ಮ ಸ್ವಂತ ಹಣದಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ನೂರಾರು ಬಡ ವಿದ್ಯಾರ್ಥಿಗಳಿಗೆ ಓದಲು ನೆರವಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನಗರದ ಹಲವು ಸ್ಮಶಾನಗಳನ್ನು ಶುಚಿಗೊಳಿಸಿ, ಶವಸಂಸ್ಕಾರಕ್ಕೆ ಅಗತ್ಯ ಮಾಡಿದಲ್ಲದೆ,ನಗರದಲ್ಲಿ ಯಾವುದೇ ಕ್ರೀಡಾಕೂಟ ನಡೆದರೂ ತಮ್ಮ ಕೈಲಾದ ಸಹಕಾರ ನೀಡುವ ಎನ್.ಎಸ್.ಜಯಕುಮಾರ್, ಜಿಲ್ಲೆಯಿಂದ ಬೇರೆ ಊರುಗಳಿಗೆ ಕ್ರೀಡಾಕೂಟಕ್ಕಾಗಿ ತೆರಳುವ ಮಕ್ಕಳಿಗೂ ಊಟ, ವಸತಿ ಭತ್ಯ ಒದಗಿಸುವ ಜೊತೆ, ಸಮವಸ್ತç ನೀಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಎಂದರು.
ಮಾಜಿ ಸಚಿವರಾದ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರಾದ ವಾಸಣ್ಣ(ಎಸ್.ಆರ್.ಶ್ರೀನಿವಾಸ್) ಮುಖಂಡರಾದ ಕೆ.ಹೆಚ್.ಜಯರಾಮ್, ವಾಲೆ ಚಂದ್ರು, ನರಸೇಗೌಡ, ವಿಠಲ್, ಅನಿಲ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಲಕ್ಷಿö್ಮÃನಾರಾಯಣ್(ನಂಜಪ್ಪ), ಕಾರ್ಪೊರೇಟರ್ ಶ್ರೀನಿವಾಸಮೂರ್ತಿ, ತುಮಕೂರು ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಆರ್.ದೇವರಾಜು, ರೆಡ್ಡಿ ಜನಸಂಘದ ಅಧ್ಯಕ್ಷರಾದ ರೆಡ್ಡಿ, ಬೆವರ ಹನಿ ದಿನಪತ್ರಿಕೆ ಸಂಪಾದಕರಾದ ಕುಚ್ಚಂಗಿ ಪ್ರಸನ್ನ, ಬಾರ‍್ಸ್ ಹೊಟೆಲ್‌ನ ಕೃಷ್ಣಮೂರ್ತಿ ಇದ್ದರು.