ಪುನೀತ್‍ ರಾಜಕುಮಾರ್‍ ಇನ್ನು ನೆನಪು ಮಾತ್ರ

ಪುನೀತ್‍ ರಾಜಕುಮಾರ್‍ ಇನ್ನು ನೆನಪು ಮಾತ್ರ

ಪುನೀತ್‍ ರಾಜಕುಮಾರ್‍ ಇನ್ನು ನೆನಪು ಮಾತ್ರ

ಶುಕ್ರವಾರ ತೀವ್ರ ಹೃದಯಾಘಾತದಿಂದ ನಿಧನರಾದ ಹೆಸರಾಂತ ನಟ, ಗಾಯಕ,ನಿರೂಪಕ ಇವೆಲ್ಲಕ್ಕಿಂತ ಮಿಗಿಲಾಗಿ ಸರಳ, ಸಜ್ಜನ ನಡವಳಿಕೆಯಿಂದ ಎಲ್ಲರ ಪ್ರೀತಿ ಗಳಿಸಿದ್ದ ಪುನೀತ್ ರಾಜಕುಮಾರ್( 46) ಅವರ ಕಳೇಬರವನ್ನು ಕಂಠೀರವ ಸ್ಟುಡಿಯೋದಲ್ಲಿ ಭಾನುವಾರ ಮುಂಜಾನೆ ಮಣ್ಣು ಮಾಡಲಾಯಿತು.

ಕಂಠೀರವ ಕ್ರೀಡಾಂಗಣದಲ್ಲಿ ಎರಡು ದಿನಗಳ ಸುದೀರ್ಘ ಸಾರ್ವಜನಿಕ ಅಂತಿಮ ದರ್ಶನದ ಬಳಿಕ ಬೆಳಗಿನ ಜಾವವೇ ಮೆರವಣಿಗೆಯಲ್ಲಿ ಕಂಠೀರವ ಸ್ಟುಡಿಯೋಕ್ಕೆ ಕರೆತಂದು ಸರ್ಕಾರಿ ಗೌರವ ಸಲ್ಲಿಸಲಾಯಿತು. ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ರಾಜಕೀಯ ಮತ್ತು ಸಿನಿಮಾ ರಂಗದ ಅಸಂಖ್ಯ ಗಣ್ಯರು ಮತ್ತು ಮುಖ್ಯವಾಗಿ ಕುಟುಂಬದ ಎಲ್ಲ ಸದಸ್ಯರ ಹಾಜರಿಯಲ್ಲಿ ಅಂತ್ಯ ಕ್ರಿಯೆ ನಡೆಯಿತು.

ಪುನೀತ್ ಅಕಾಲಿಕ ಸಾವಿಗೆ ಇಡೀ ನಾಡು ಮಮ್ಮಲ ಮರುಗಿದೆ, ಮೂರು ದಿನಗಳಿಂದ ಅಭಿಮಾನಿಗಳು ನಿರಂತರ ಇರುವೆ ಸಾಲಿನಂತೆ ಅಂತಿಮ ದರ್ಶನ ಪಡೆದರು. ಅಪ್ಪ ಡಾ.ರಾಜ್ ಕುಮಾರ್ ಅಮ್ಮ ಪಾರ್ವತಮ್ಮನವರ ಸಮಾಧಿಯ ಮಗ್ಗುಲಲ್ಲೇ ಪುನೀತ್ ಚಿರನಿದ್ರೆಗೆ ಇಳಿದರು.

ಇಂದು‘ಪೃಥ್ವಿ’ ಯೊಡನೆ ‘ಯುವ ರತ್ನ’ನ ‘ಮಿಲನ’
ಹಗಲಿರುಳೂ ಅಂತಿಮ ದರ್ಶನ ಪಡೆದ ಅಸಂಖ್ಯ ಅಭಿಮಾನಿಗಳು 

ಬೆಂಗಳೂರು: ಶುಕ್ರವಾರ ತೀವ್ರ ಹೃದಯಾಘಾತದಿಂದ ನಿಧನರಾದ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಎರಡು ದಿನಗಳ ದಾಖಲೆಯ ಅಂತಿಮ ದರ್ಶನದ ಬಳಿಕ ಭಾನುವಾರ ಮುಂಜಾನೆ ಮೆರವಣಿಗೆಯಲ್ಲಿ ಸಾಗಿ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಪ್ರತಿಷ್ಟಾನ ಭೂಮಿಯಲ್ಲಿ ಬೆಳಗ್ಗೆ ೧೦.೩೦ರೊಳಗೆ ಅಂತ್ಯ ಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ. ನಟ ಪುನೀತ್ ರಾಜ್ ಕುಮಾರ್ ಅಂತಿಮ ವಿಧಿವಿಧಾನ ಕಾರ್ಯವನ್ನು ಪುನೀತ್ ಅಣ್ಣ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ನೆರವೇರಿಸುವಂತೆ ಕುಟುಂಬ ನಿರ್ಧರಿಸಿದೆ.
 
ರಾಜ್ ಕುಮಾರ್ ಕುಟುಂಬ ಸದಸ್ಯರು ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು, ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಿಗೆ ಇಬ್ಬರೂ ಹೆಣ್ಣು ಮಕ್ಕಳಿರುವುದರಿಂದ ಪುನೀತ್ ಅಣ್ಣ ರಾಘವೇಂದ್ರ ಅವರ ಪುತ್ರನಿಂದ ಕಾರ್ಯ ನೆರವೇರಿಸಲು ನಿರ್ಧರಿಸಲಾಗಿದೆ.
ಮೆರವಣಿಗಾಗಿ ಈಗಾಗಲೇ ವಿಶೇಷ ವಾಹನವನ್ನು ‘ಅಪ್ಪು’ ಭಾವಚಿತ್ರಗಳೊಂದಿಗೆ ಸಿಂಗರಿಸಿ ಸಿದ್ಧಗೊಳಿಸಲಾಗಿದೆ. ಬೆಳಗ್ಗೆ ೬ ಗಂಟೆಗೆ ಅಭಿಮಾನಿಗಳು ಹಾಗೂ ಸಾರ್ವಜನಿಕರ ದರ್ಶನವನ್ನು ಅಂತ್ಯಗೊಳಿಸಿ ಮೆರವಣಿಗೆಯಲ್ಲಿ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ತೆಗೆದುಕೊಂಡು ಹೋಗಲಾಗುತ್ತದೆ.. ಪುನೀತ್ ಹೆತ್ತವರಾದ ಡಾ. ರಾಜ್‌ಕುಮಾರ್ ಮತ್ತು ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಮಾಧಿಯ ಪಕ್ಕದಲ್ಲೇ ಪುನೀತ್ ಅವರ ಅಂತ್ಯಸAಸ್ಕಾರಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಪುನೀತ್ ರಾಜಕುಮಾರ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಪ್ರಸ್ತುತ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರದ ದರ್ಶನ ಶುಕ್ರವಾರ ಸಂಜೆಯಿAದ ನಿರಂತರವಾಗಿ ನಡೆಯುತ್ತಿದ್ದು, ರಾಜ್ಯ ಮತ್ತು ಹೊರರಾಜ್ಯಗಳಿಂದ ಲಕ್ಷಾಂತರ ಅಭಿಮಾನಿಗಳು ಸಾಗರೋಪಾದಿಯಲ್ಲಿ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ತಮ್ಮ ಅಭಿಮಾನಿ ನಟನ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಶನಿವಾರ ಸಂಜೆಯ ವೇಳೆಗೆ ಸುಮಾರು ೧೨ ಲಕ್ಷ ಅಭಿಮಾನಿಗಳು ಪುನೀತ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದು, ಭಾನುವಾರ ಬೆಳಗಿನ ವೇಳೆಗೆ ಇನ್ನೂ ಎಂಟು ಲಕ್ಷ ಅಭಿಮಾನಿಗಳು ಆಗಮಿಸಬಹುದೆಂದು ನಿರೀಕ್ಷಿಸಲಾಗಿದೆ. ಸುರಿಯುವ ಮಳೆಯನ್ನೂ ಲೆಕ್ಕಿಸದೇ ಸಾಗರೋಪಾದಿಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದು, ಅಷ್ಟೇ ಶಿಸ್ತುಬದ್ಧವಾಗಿ ದರ್ಶನ ಪಡೆದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಪುನೀತ್ ನಿಧನಕ್ಕೆ ದೇಶದ ವಿವಿಧ ಭಾಷೆಗಳ ಚಿತ್ರರಂಗಗಳು, ಕಲಾವಿದರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವೀಟ್ ಮೂಲಕ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಸಚಿವ ಪ್ರಹ್ಲಾದ್ ಜೋಷಿ ಶನಿವಾರ ಪುನೀತ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಲವಾರು ರಾಜಕೀಯ ಮುಖಂಡರು ಗೌರವ ಸಲ್ಲಿಸಿದರು.

ಪುನೀತ್ ಅವರ ತೆಲುಗು ಮತ್ತು ತಮಿಳು ಚಿತ್ರರಂಗದೊAದಿಗೆ ಅವಿನಭಾವ ಸಂಬAಧ ಹೊಂದಿದ್ದು, ಬಹು ಭಾಷಾ ನಟ ಪ್ರಕಾಶ್ ರಾಜ್, ತೆೆಲುಗು ಚಿತ್ರ ನಟರಾದ ಚಿರಂಜೀವಿ, ವೆಂಕಟೇಶ್, ಜ್ಯೂನಿಯರ್ ಎನ್‌ಟಿಆರ್, ಬಾಲಕೃಷ್ಣ, ತಮಿಳು ಚಿತ್ರಕಲಾವಿದ ಪ್ರಭುದೇವ್, ಶರತ್‌ಕುಮಾರ್, ಅರ್ಜುನ್ ಸರ್ಜಾ ಮತ್ತಿತರರು ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಕಂಬನಿ ಮಿಡಿದರು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಕಲಾವಿದರು ಆಗಮಿಸಿ ಸ್ಥಳದಲ್ಲೇ ಇದ್ದು ಕಂಬನಿ ಮಿಡಿದರು.


ಮಗಳಿಂದ ಅಂತಿಮ ದರ್ಶನ

ಪುನೀತ್ ನಿಧನದ ಸುದ್ದಿ ತಿಳಿದು ಶುಕ್ರವಾರ ಮಧ್ಯಾಹ್ನವೇ ಅಮೆರಿಕಾದಿಂದ ಹೊರಟಿದ್ದ ಪುನೀತ್ ಪುತ್ರಿ ಧೃತಿ ಇಂದು ಸಂಜೆ ಸುಮಾರು ನಾಲ್ಕು ಗಂಟೆ ವೇಳೆಗೆ ಬೆಂಗಳೂರಿಗೆ ಆಗಮಿಸಿದರು. ಅಂತರಾಷ್ಟಿçÃಯ ವಿಮಾನ ನಿಲ್ದಾಣದಿಂದ ಅವರನ್ನು ಪೋಲೀಸ್ ಬೆಂಗಾವಲಿನಲ್ಲಿ ಕರೆತರಲಾಯಿತು. ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ ಅವರು ತಮ್ಮ ತಂದೆಯ ಪಾರ್ಥಿವ ಶರೀರವನ್ನು ಮುಟ್ಟಿ, ಹಣೆ ಸವರಿ ``ಪಪ್ಪಾ.. ಪಪ್ಪಾ.. ಮಾತಾಡಪ್ಪ’’ ಎಂದು ಕಣ್ಣಿರಿಟ್ಟಿದ್ದು ನೋಡುಗರ ಕರುಳುಹಿಂಡುತ್ತಿತ್ತು.
ಪುನೀತ್ ಪತ್ನಿ ಅಶ್ವಿನಿ ಅವರು ತನ್ನ ಇಬ್ಬರು ಮಕ್ಕಳನ್ನು ಸಂತೈಸುತ್ತಿದ್ದರು. ದೊಡ್ದಪ್ಪ ಶಿವರಾಜ್ ಕುಮಾರ್ ಧೃತಿಯನ್ನ್ಪು ಅಪ್ಪಿ ಸಂತೈಸಿದರು.