ಕನ್ನಡದ ನುಡಿಭಕ್ತ ಬೆಳ್ಳಾವಿ ವೆಂಕಟನಾರಾಯಣಪ್ಪ

kannada-nudi-bhakta-venkatanarayanappa, ಕನ್ನಡದ ನುಡಿಭಕ್ತ ಬೆಳ್ಳಾವಿ ವೆಂಕಟನಾರಾಯಣಪ್ಪ

ಕನ್ನಡದ ನುಡಿಭಕ್ತ ಬೆಳ್ಳಾವಿ ವೆಂಕಟನಾರಾಯಣಪ್ಪ

ಕನ್ನಡದ ನುಡಿಭಕ್ತ ಬೆಳ್ಳಾವಿ ವೆಂಕಟನಾರಾಯಣಪ್ಪ

 ಕನ್ನಡ ಭಾಷೆ ಕಲಿಕೆಯಿಂದ ಲಾಭವೂ ಇಲ್ಲ ಭವಿಷ್ಯವೂ ಇಲ್ಲ ಎಂದು ವಿದ್ಯಾವಂತರೇ ಮೂಗು ಮುರಿಯುತ್ತಿದ್ದ ಅಂದಿನ ಕಾಲ. ಇಂದಿನ ಕಾಲದಲ್ಲಿ ಕಾಯಾ ವಾಚ ಮನಸಾ ದುಡಿದು ಕನ್ನಡಕ್ಕಾಗಿ ನೆಲೆ-ಬೆಲೆ ತಂದುಕೊಟ್ಟವರು ಬೆಳ್ಳಾವಿ ವೆಂಕಟನಾರಾಯಣಪ್ಪನವರು. ಇವರ ಮಾತೃಭಾಷೆ ತೆಲುಗು, ಆದರೂ ಕನ್ನಡ ನಾಡು ನುಡಿಗೆ ತಮ್ಮ ಜೀವಮಾನವನ್ನೇ ತೇದು ಕೃತಾರ್ಥರಾದವರು. ಕನ್ನಡ ಪರಿಷತ್ತಿನ ಸ್ಥಾಪನೆಯ ಪ್ರಾರಂಭದ 20 ವರ್ಷಗಳ ಕಾಲ ಪರಿಷತ್ತಿನ ಪುರೋಭಿವೃದ್ಧಿಗಾಗಿ ಟೊಂಕ ಕಟ್ಟಿ ನಿಂತು ಸೇವೆ ಸಂದಾಯ ಮಾಡಿದವರು. ಕಸ ಗುಡಿಸುವುದರಿಂದ ಹಿಡಿದು ಗ್ರಂಥ ಸಂಪಾದನೆ, ಮುದ್ರಣ ಕಾರ್ಯ, ಕೇಂದ್ರ ಪರಿಷತ್ತಿನ ಕಟ್ಟಡ ಕಾರ್ಯ, ಲೆಕ್ಕಪತ್ರಗಳ ನಿರ್ವಹಣೆ, ಸಾಹಿತ್ಯ ಸಮ್ಮೇಳನಗಳ ವ್ಯವಸ್ಥೆ ಮಾಡುವವರೆಗೆ ಯಾವುದೇ ಕೆಲಸಗಳನ್ನು ಶುದ್ಧಹಸ್ತರಾಗಿ, ನಿಷ್ಟೆಯಿಂದ ಹಾಗೂ ದಕ್ಷತೆಯಿಂದ ನಿರ್ವಹಿಸಿದ ಎದೆಗಾರರು. ಯಾವುದೇ ಸ್ಥಾನಮಾನ ಇರಲಿ, ಇಲ್ಲದಿರಲಿ ಕನ್ನಡ ಸಾಹಿತ್ಯ ಪರಿಷತ್ತಿನ ಏಳಿಗೆಗಾಗಿ ತ್ರಿಕರಣಪೂರ್ವಕವಾಗಿ ದುಡಿದವರು. ಕನ್ನಡ ಕಟ್ಟುವ ಕೆಲಸದಲ್ಲಿ ಇವರ ದಕ್ಷತೆ, ಸೇವಾನಿಷ್ಟೆ ಹಾಗೂ ಪ್ರಾಮಾಣಿಕತೆಗಳು ಆದರ್ಶಪ್ರಾಯವಾಗಿದ್ದವು.

 ಬೆಳ್ಳಾವಿ ವೆಂಕಟನಾರಾಯಣಪ್ಪನವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿಜ್ಞಾನ ಪ್ರಾಧ್ಯಾಪಕರಾಗಿ ಬಿ.ಎಂ.ಶ್ರೀಕAಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎಂ.ಆರ್.ಶ್ರೀನಿವಾಸಮೂರ್ತಿ, ದ.ಕ.ಭಾರದ್ವಾಜ್, ಬಿ.ಪುಟ್ಟಯ್ಯ, ಸರ್ ಮಿರ್ಜಾ ಇಸ್ಮಾಯಿಲ್, ಡಾ. ಎಲ್.ಸುಬ್ಬರಾವ್, ಡಾ. ಬಿ.ಕೆ.ನಾರಾಯಣ್ ಮೊದಲಾದ ಅಪ್ರತಿಮ ಪ್ರತಿಭೆಯ ಶಿಷ್ಯರಿಗೆ ಪಾಠ ಹೇಳಿ ಪ್ರಭಾವ ಬೀರಿದ ಪ್ರತಿಭಾವಂತರು.

 ಆರು ಅಡಿ ಒಂದು ಅಂಗುಲ ಎತ್ತರದ ತೆಳ್ಳನೆಯ ಶಾರೀರಿಕ ನಿಲುವು, ವಿಶಾಲವಾದ ಹಣೆ, ತಿದ್ದಿ ತೀಡಿ ಕಚ್ಚೆಹಾಕಿ ಉಟ್ಟ ಬಿಳಿಪಂಚೆ, ಕ್ಲೋಸ್ ಕಾಲರ್ ಕೋಟು, ಮಡಿಕೆ ಹಾಕಿ ಇಸ್ತಿç ಮಾಡಿದ ಉತ್ತರೀಯ, ತಲೆಯ ಮೇಲೆ ಕಂಬಿಪೇಟ, ಎದೆಗೆ ಅವಚಿ ಹಿಡಿದ ಪುಸ್ತಕಗಳನ್ನು ಹಿಡಿದು ಗಂಭೀರ ಮುಖಮುದ್ರೆಯೊಂದಿಗೆ ಮೆಟ್ಟಿದ ಚಪ್ಪಲಿಯೊಂದಿಗೆ ಕಾಲೇಜಿನಲ್ಲಿ ಕಾಣಿಸುತ್ತಿದ್ದರು.

ಜನನ-ಬಾಲ್ಯ-ವಿದ್ಯಾಭ್ಯಾಸ
 ತುಮಕೂರು ತಾಲ್ಲೂಕು, ಬೆಳ್ಳಾವಿ ಗ್ರಾಮದ ಸಂಪ್ರದಾಯಸ್ಥ ವೆಂಕಟಕೃಷ್ಣಯ್ಯ ಮತ್ತು ಲಕ್ಷಿö್ಮÃದೇವಮ್ಮ ದಂಪತಿಗಳ ಪುತ್ರ ವೆಂಕಟನಾರಾಯಣಪ್ಪ 10-02-1872ರಲ್ಲಿ ಬೆಳ್ಳಾವಿಯಲ್ಲಿ ಜನಿಸಿದರು. ವೆಂಕಟಕೃಷ್ಣಯ್ಯನವರು ಅಂಚೆ ಇಲಾಖೆಯಲ್ಲಿ ಬೆಳ್ಳಾವಿ ಮತ್ತು ತುಮಕೂರಿನಲ್ಲಿ ಸೇವೆ ಮಾಡಿ ಮುತ್ಸದ್ದಿ ಎಂಬ ಕೀರ್ತಿಗೆ ಭಾಜನರಾಗಿದ್ದರು. ಇವರ ಪೂರ್ವಿಕರು ಆಂಧ್ರದವರು ಬೆಳ್ಳಾವಿಗೆ ಬಂದು ನೆಲೆಸಿದ್ದರು. ಇವರ ಮನೆದೇವರು ತಿರುಪತಿ ವೆಂಕಟೇಶ್ವರ. ಆಚಾರ ವಿಚಾರ ಕಟ್ಟುನಿಟ್ಟಾಗಿ ಆಚರಿಸುತ್ತಿದ್ದರು. ವೆಂಕಟನಾರಾಯಣಪ್ಪನವರ ಅಕ್ಷರಾಭ್ಯಾಸ ಬೆಳ್ಳಾವಿ ಕೂಲಿಮಠದಲ್ಲಿ ನಡೆಯಿತು.

 ಮುಂದಿನ ಪ್ರೌಢಶಾಲೆ ಅಭ್ಯಾಸ ತುಮಕೂರಿನಲ್ಲಿ ನಡೆಯಿತು. ಇವರಿಗೆ 15ನೇ ವಯಸ್ಸಿನಲ್ಲೇ ಮದುವೆಯಾಯಿತು. 19ನೇ ವಯಸ್ಸಿನಲ್ಲೇ ಪ್ರಥಮ ದರ್ಜೆಯಲ್ಲಿ ಮೆಟ್ರಿಕ್ ತೇರ್ಗಡೆ ಆದರು. ತುಮಕೂರಿನಲ್ಲಿ ಕಾಲೇಜು ಇಲ್ಲದ ಕಾರಣ ಬೆಂಗಳೂರಿನಲ್ಲಿ ಇವರ ದೊಡ್ಡಪ್ಪನವರ ಆಶ್ರಯದಲ್ಲಿದ್ದು ಸೆಂಟ್ರಲ್ ಕಾಲೇಜಿಗೆ ಸೇರಿಸಲಾಯಿತು. ಓದಿನಲ್ಲಿ ಚುರುಕಾಗಿದ್ದ ನಾರಾಯಣಪ್ಪನವರು ಎಫ್.ಎ.ಬಿ.ಎ. ಬ್ರಿಟಿಷ್ ಇತಿಹಾಸ, ಗ್ರೀಕ್ ರೋಮನ್ ಇತಿಹಾಸ, ತರ್ಕಶಾಸ್ತç, ಮಾನವ ಶರೀರ ಶಾಸ್ತç, ಭೌತಶಾಸ್ತç ಇವು ವೆಂಕಟನಾರಾಯಣಪ್ಪನವರು ಓದಿದ ವಿಷಯಗಳು.

ಆದರ್ಶ ಅಧ್ಯಾಪಕ
 ಶಿಸ್ತು ಮತ್ತು ವಿಧೇಯತೆಗಳ ಒಳ್ಳೆಯ ವಿಷಯ ಜ್ಞಾನವನ್ನು ಮೈಗೂಡಿಸಿಕೊಂಡಿದ್ದರಿAದ ವೆಂಕಟನಾರಾಯಣಪ್ಪನವರಿಗೆ ಸಹಜವಾಗಿ ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಆಯ್ಕೆಯಾದರು. 1905ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಪಡೆದು ತೇರ್ಗಡೆಯಾದರು. ಕರ್ತವ್ಯ ನಿಷ್ಟೆ, ಸಮಯ ಪಾಲನೆಯಲ್ಲಿ ವೆಂಕಟನಾರಾಯಣಪ್ಪನವರು ಇತರರಿಗೆ ಮಾದರಿಯಾದರು. ಇವರು ಕರ್ತವ್ಯ ನಿಷ್ಟೆ, ನೀತಿ ನಿಯಮಗಳನ್ನು ನೋಡಿದ ಸಹಪಾಠಿಗಳು ಅಸೂಯೆಪಡುತ್ತಿದ್ದರು. ಇವರು ಆತ್ಮಸಾಕ್ಷಿಗೆ ವಿರುದ್ಧ ನಡೆದುಕೊಂಡವರಲ್ಲ. ಅವರುಗಳನ್ನು ನೋಡಿ ಕೋಪ ಮತ್ತು ಸಿಡಿಮಿಡಿಗೊಳ್ಳುತ್ತಿದ್ದರು. ಕೊನೆಗೆ ಬೇಸರವಾಗಿ ಬೇಸತ್ತು 1923ರಲ್ಲಿ ಸ್ವಯಂನಿವೃತ್ತಿ ಹೊಂದಿದರು.

ಪತ್ರಿಕೋದ್ಯಮ
 ಭೌತವಿಜ್ಞಾನ ಮತ್ತು ಜೀವ ವಿಜ್ಞಾನದ ಬಗ್ಗೆ ಆಳವಾಗಿ ಅಭ್ಯಾಸ ಮಾಡಿದ್ದ ವೆಂಕಟನಾರಾಯಣಪ್ಪ ನವರಿಗೆ ಆಂಗ್ಲಭಾಷೆಗೆ ಒಗ್ಗಿಹೋಗಿದ್ದ ವಿಜ್ಞಾನ ವಿಷಯಗಳು ಕನ್ನಡದಲ್ಲಿ ಹೇಳಬೇಕೆಂಬ ತೀವ್ರವಾದ ಆಕಾಂಕ್ಷೆಯಾಗಿತ್ತು. ಕನ್ನಡದಲ್ಲಿ ವಿಜ್ಞಾನ ಗ್ರಂಥಗಳನ್ನು ಕಾಣುವುದು ಸಾಧ್ಯವೇ ಇಲ್ಲ ಎನ್ನುವ ನಂಬಿಕೆ ಬೆಳೆದುಹೋಗಿತ್ತು. ಇಂತಹ ಸಂದರ್ಭದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ನೆರವಿನೊಂದಿಗೆ ಕರ್ನಾಟಕ ವಿಜ್ಞಾನ ಪ್ರಚಾರಿಣಿ ಸಮಿತಿ ರಚನೆಯಾಗಿ ಇದರ ಕಾರ್ಯದರ್ಶಿಯಾಗಿ ಬೆಳ್ಳಾವಿ ವೆಂಕಟನಾರಾಯಣಪ್ಪನವರು ಆಯ್ಕೆಯಾದರು. ಸಮಿತಿ ಕನ್ನಡದಲ್ಲಿ ವಿಜ್ಞಾನ ವಿಷಯಗಳ ಗ್ರಂಥಪ್ರಕಟಣೆ, ಉಪನ್ಯಾಸಗಳು ನಡೆದವು. ಹೀಗೆ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಪ್ರಚಾರ ಮಾಡಿದ ಕೀರ್ತಿಗೆ ಪಾತ್ರರಾದ ಮಹನೀಯರು. 1919ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಪತ್ರಿಕೆಯ ಸಂಪಾದಕ ಮಂಡಲಿ ಸದಸ್ಯರಾಗಿ, ಬರಹಗಾರರಾಗಿ ಚಂದಾದಾರರನ್ನು ಕಲೆಹಾಕುವ ಕ್ರಿಯಾಶೀಲ ಸಂಘಟಕರಾಗಿ ಕನ್ನಡ ಸೇವೆ ಅತ್ಯಂತ ಸ್ಮರಣೀಯವಾದದ್ದು.

ಇಂಗ್ಲೀಷ್ ಕನ್ನಡ ನಿಘಂಟು
 ಕನ್ನಡ ವಿಜ್ಞಾನ ಮಾಸಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದ ವೆಂಕಟನಾರಾಯಣಪ್ಪನವರಿಗೆ ವೈಜ್ಞಾನಿಕ ವಿಷಯಗಳನ್ನು ಕನ್ನಡಕ್ಕೆ ಪರಿವರ್ತಿಸಲು ಇಂಗ್ಲೀಷ್ ಕನ್ನಡ ನಿಘಂಟಿನ ಅವಶ್ಯಕತೆ ಎಷ್ಟೆಂಬುದು ಅನುಭವವೇದ್ಯವಾಗಿತ್ತು. ಈ ವಿಷಯವನ್ನು ಇವರ ಶಿಷ್ಯರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ದಿವಾನರಾಗಿದ್ದರು. ಇವರಿಗೆ ತಿಳಿಸಿದರು. ಗುರುಗಳ ಬಗ್ಗೆ ಅಪಾರ ಭಕ್ತಿಭಾವಗಳನ್ನು ಹೊಂದಿದ್ದ ಮಿರ್ಜಾರವರು ಮಹಾರಾಜರ ಅಪ್ಪಣೆ ಪಡೆದು ಮೈಸೂರು ವಿಶ್ವವಿದ್ಯಾಲಯದ ಮೂಲಕ ನಿಘಂಟಿನ ಕೆಲಸವನ್ನು ವೆಂಕಟನಾರಾಯಣಪ್ಪನವರಿಗೆ ವಹಿಸಿದರು. ಇವರ ಪ್ರಧಾನ ಸಂಪಾದಕತ್ವದಲ್ಲಿ 1933ರಲ್ಲಿ ನಿಘಂಟಿನ ಕೆಲಸ ಪ್ರಾರಂಭವಾಯಿತು.

ಕೃತಿಗಳು
 ವೆಂಕಟನಾರಾಯಣಪ್ಪನವರು ಪ್ರತಿಭೆ ಮತ್ತು ದುಡಿಮೆಗಳು ಹಲವಾರು ಕ್ಷೇತ್ರಗಳಿಗೆ ಹಂಚಿಹೋಗಿದ್ದರಿಂದ ಸ್ವಂತ ಕೃತಿಗಳಾಗಿ ಬರವಣಿಗೆ ಮಾಡಿದ್ದು ಸ್ವಲ್ಪ ಮಾತ್ರ. ಯಾವುದೇ ಕ್ಷೇತ್ರದಲ್ಲಿಯಾಗಲಿ ಆರ್ಥಿಕ ಲಾಭಕ್ಕಾಗಲಿ ಆಸೆಪಟ್ಟವರಲ್ಲ. ಅವರು ಸ್ವತಂತ್ರವಾಗಿ ರಚಿಸಿದ ಮೂರು ಕೃತಿಗಳಲ್ಲಿ ಗುಣಸಾಗರ (ಕಾದಂಬರಿ), ಜೀವವಿಜ್ಞಾನ, ಕನ್ನಡ ಐದನೆ ಪುಸ್ತಕ.

 ಶಬ್ಧಮಣಿದರ್ಪಣ, ಪಂಪರಾಮಾಯಣ, ಸೋಮೇಶ್ವರ ಶತಕ, ಪಂಪಭಾರತದ ನಿಘಂಟು, ಷಟ್ಪದಿಗ್ರಂಥಗಳ ನಿಘಂಟು, ಪಂಪಭಾರತ ಕರ್ನಾಟಕ, ಇಂಗ್ಲೀಷ್ ಕನ್ನಡ ನಿಘಂಟು, ವಿಜ್ಞಾನ ಸಂಪುಟ-1 ಮತ್ತು 2 ಇವರ ಸಂಪಾದನ ಗ್ರಂಥಗಳು.

ಸಂಘ ಸಂಸ್ಥೆಗಳ ಸೇವಾವೃತ್ತಿ
 ಜನಪರ ಸೇವಾ ಸಂಸ್ಥೆಗಳ ಸೇವೆಗೆ ವೆಂಕಟನಾರಾಯಣಪ್ಪನವರು ಮುಂದಾಗಿ ನಿಲ್ಲುತ್ತಿದ್ದರು. ಆದ್ದರಿಂದ ಅನೇಕ ಸಂಘ ಸಂಸ್ಥೆಗಳು ಇವರ ಸೇವೆ ಪಡೆದುಕೊಂಡವು. ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಸ್ಥಾಪನೆ 1918ರಲ್ಲಿ ಪ್ರಥಮ ಅಧ್ಯಕ್ಷರು. ಬಸವನಗುಡಿ ಸಹಕಾರ ಸಂಘ, ಗಾಂಧಿ ಬಜಾರ್ ಪ್ರದೇಶದ ಶ್ರೀರಾಮಕೃಷ್ಣ ವಿದ್ಯಾರ್ಥಿನಿಲಯ, ಮೈಸೂರು ತಮಿಳುನಾಡು ಕಾವೇರಿ ನದಿ ನೀರಿನ ಹಂಚಿಕೆ ಸಮಿತಿ ಸದಸ್ಯರು. ಮಾಗಡಿ ಕರಣಿಕರ ವೈದಿಕ ಪಾಠಶಾಲೆ ಮುಂತಾದ ಪ್ರಮುಖ ಸಂಘ ಸಂಸ್ಥೆಗಳಲ್ಲಿ ಪ್ರಮುಖವಾದವು.

ಸಾಹಿತ್ಯ ಪರಿಷತ್ತು
 ಬೆಂಗಳೂರು ಚಾಮರಾಜಪೇಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಾಡಿಗೆ ಮನೆಯಲ್ಲಿ ಪ್ರಾರಂಭವಾದಾಗ ತಾವೇ ಕಸ ಗುಡಿಸಿ ನೆಲದ ಮೇಲೆ ಕುಳಿತು ಪರಿಷತ್ತಿನ ಕಾಗದ ಪತ್ರಗಳು ಲೆಕ್ಕ ಬರೆಯುತ್ತಿದ್ದರು. ಚಾಮರಾಜಪೇಟೆ ಗಾಂಧಿ ಮೈದಾನದಲ್ಲಿ ಸಾಹಿತ್ಯ ಪರಿಷತ್ತಿನ ಕಟ್ಟಡವನ್ನು ಹಗಲು ರಾತ್ರಿಯೆನ್ನದೆ ಶ್ರಮವಹಿಸಿ ನಿರ್ಮಾಣಕ್ಕೆ ಕಾರಣೀಭೂತರಾದರು.

 ಸಮಕಾಲೀನ ವ್ಯಕ್ತಿಗಳ ಮೇಲೆ ವೆಂಕಟನಾರಾಯಣಪ್ಪನವರ ಪ್ರಾಮಾಣಿಕತೆ, ನಿಸ್ವಾರ್ಥತೆ, ತ್ಯಾಗ ಮನೋಭಾವ ಮೊದಲಾದ ಜೀವನಾದರ್ಶಗಳು ಹೆಚ್ಚು ಪ್ರಭಾವ ಬೀರಿದ್ದಲ್ಲಿ ಆಶ್ಚರ್ಯವಿಲ್ಲ. ಕರ್ನಾಟಕ ಸಾಹಿತ್ಯ ಪರಿಷತ್ತು 1937ರಲ್ಲಿ ನಡೆದ 22ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಗೌರವಿಸಿತು.

 ನಾಡು ನುಡಿ ಸೇವೆಗೆ ರಾಜ್ಯ ಮನೆಮಾತಾಗಿದ್ದ ಬೆಳ್ಳಾವಿ ವೆಂಕಟನಾರಾಯಣಪ್ಪನವರನ್ನು 1940ರಲ್ಲಿ ದಸರಾ ಉತ್ಸವದಲ್ಲಿ ಮೈಸೂರು ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್‌ರವರು `ರಾಜಸೇವಾಸಕ್ತ’ ಬಿರುದು ನೀಡಿ ಸನ್ಮಾನಿಸಿದರು. 01-11-1941ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಬಿನ್ನವತ್ತಳೆ ನೀಡಿ ಸನ್ಮಾನಿಸಿತು.

 ಹೀಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಸ್ಥಾಪಕರಲ್ಲೊಬ್ಬರಾಗಿ ಆಧಾರಸ್ತಂಭವಾಗಿದ್ದ ಈ ಮಹನೀಯರ ಸೇವೆ ಪರಿಷತ್ತಿನ ಚರಿತ್ರೆಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡತಕ್ಕದ್ದಾಗಿದೆ.

 ಬೆಳ್ಳಾವಿ ವೆಂಕಟನಾರಾಯಣಪ್ಪನವರು ಎಲ್ಲಾ ರೀತಿಯಿಂದಲೂ ಆದರ್ಶರಾದವರು ಮತ್ತು ಪೂಜ್ಯರಾದವರು. ತಮ್ಮ 72ನೇ ವಯಸ್ಸಿನಲ್ಲಿ (01-08-1943ರಲ್ಲಿ) ದೈವಾಧೀನರಾದರು.

ಸಂಗ್ರಹ
    ಸಿ.ಮು.ಶಿವಕುಮಾರ್ ಚಿಕ್ಕಬೆಳ್ಳಾವಿ
ಅಧ್ಯಕ್ಷರು
  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು,
     ತುಮಕೂರು.