ಸ್ಥಳೀಯವಾಗಿ ಮನೆ ನಿರ್ಮಾಣಕ್ಕೆ ಮರಳು ಉಪಯೋಗಿಸಿಕೊಳ್ಳಲು ಅಧಿಕಾರಿಗಳು ತೊಂದರೆ ನೀಡಬಾರದು.ಕೆ.ಎನ್.ರಾಜಣ್ಣ.
ಸ್ಥಳೀಯವಾಗಿ ಮನೆ ನಿರ್ಮಾಣಕ್ಕೆ ಮರಳು ಉಪಯೋಗಿಸಿಕೊಳ್ಳಲು ಅಧಿಕಾರಿಗಳು ತೊಂದರೆ ನೀಡಬಾರದು.ಕೆ.ಎನ್.ರಾಜಣ್ಣ.

ಸ್ಥಳೀಯವಾಗಿ ಮನೆ ನಿರ್ಮಾಣಕ್ಕೆ ಮರಳು
ಉಪಯೋಗಿಸಿಕೊಳ್ಳಲು ಅಧಿಕಾರಿಗಳು ತೊಂದರೆ
ನೀಡಬಾರದು.ಕೆ.ಎನ್.ರಾಜಣ್ಣ.
ಮಧುಗಿರಿ : ಸ್ಥಳೀಯವಾಗಿ ಮನೆಗಳನ್ನು ಹಾಗೂ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಮರಳನ್ನು ಉಪಯೋಗಿಸಿಕೊಳ್ಳಲು ಅಧಿಕಾರಿಗಳು ಅವಕಾಶ ನೀಡಬೇಕೆಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ.ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿರುವ ಮರಳನ್ನು ಸಾಗಾಟ ಮಾಡಿದರೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಿ ಆದರೆ ಸ್ಥಳೀಯ ನಿವಾಸಿಗಳು ಮನೆಗಳನ್ನು ನಿರ್ಮಾಣ ಮಾಡುವುದಕ್ಕೆ ತೊಂದರೆ ನೀಡುವುದು ಸರಿಯಾದ ಕ್ರಮವಲ್ಲ. ಇತ್ತೀಚೆಗೆ ಮನೆ ಹಾಗೂ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಮರಳು ತುಂಬಿದ ಟ್ರಾ÷್ಯಕ್ಟರ್ ಗಳನ್ನು ಪೊಲೀಸರು ಹಿಡಿದು ಬಾರಿ ಮೊತ್ತದ ದಂಡ ಹಾಕಿದರೆ ಬಡವರು ಮನೆ ನಿರ್ಮಾಣ ಮಾಡುವುದಕ್ಕೂ ಕಷ್ಟ ಆಗುತ್ತದೆ. ಸರ್ಕಾರವೇ ಮನೆ ನಿರ್ಮಾಣಕ್ಕೆ ಬಡವರಿಗೆ ಸಹಾಯಧನ ನೀಡುತ್ತಿದೆ.ಇದನ್ನು ಅಧಿಕಾರಿಗಳು ಅರಿತು ಕೆಲಸ ಮಾಡಬೇಕೆಂದು ತಿಳಿಸಿದರು. ಅಕ್ರಮವಾಗಿ ಬೇರೆ ತಾಲ್ಲೂಕಿಗೆ ಮರಳನ್ನು ಸಾಗಾಟ ಮಾಡಿದರೆ ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ರಾಜ್ಯ ಸಹಕಾರ ಮಹಾ ಮಂಡಳ ಮಾಜಿ ಅಧ್ಯಕ್ಷ ಎನ್.ಗಂಗಣ್ಣ , ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು , ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯ ಲಾಲಾಪೇಟೆ ಮಂಜುನಾಥ್ ಹಾಜರಿದ್ದರು.