ಸಾಂದರ‍್ಭಿಕ ಸಾಗರ ರಾಮನಹಳ್ಳಿ " ಕನ್ನಡ ಎಲ್ಲೆಡೆ ರಾರಾಜಿಸಲಿ "

ಸಾಂದರ‍್ಭಿಕ ಸಾಗರ ರಾಮನಹಳ್ಳಿ  " ಕನ್ನಡ ಎಲ್ಲೆಡೆ ರಾರಾಜಿಸಲಿ "

ಸಾಂದರ‍್ಭಿಕ
ಸಾಗರ ರಾಮನಹಳ್ಳಿ

" ಕನ್ನಡ ಎಲ್ಲೆಡೆ ರಾರಾಜಿಸಲಿ "


ನವೆಂಬರ್ ೧ ಕನ್ನಡಿಗರೆಲ್ಲ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಸುದಿನ. ಕನ್ನಡದ ಕುಲಪುರೋಹಿತರಾದ "ಆಲೂರು ವೆಂಕಟರಾವ್ ರವರು" ರ‍್ನಾಟಕದ ಏಕೀಕರಣದ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದ ಪ್ರತಿಫಲವಾಗಿ ೧೯೫೬ ರ ನವೆಂಬರ್ ೧ರಂದು  ನಮ್ಮ ಚೆಲುವ ಕನ್ನಡ ನಾಡು ಉದಯಿಸಿ ಕನ್ನಡಿಗರೆಲ್ಲ ಸಂಭ್ರಮ ಪಡುವಂತಾದದ್ದು  ಇತಿಹಾಸ. ಸರಿಸುಮಾರು ಎರಡೂವರೆ ಸಾವಿರ ರ‍್ಷಗಳ ಇತಿಹಾಸ ಹೊಂದಿರುವ  ನಾಡು (ಭಾಷೆ) ಕನ್ನಡ, ಹಾಗೂ ಆರು ಕೋಟಿಗೂ ಹೆಚ್ಚು ವಿಶಾಲ ಹೃದಯದ ಕನ್ನಡಿಗರನ್ನು ಒಳಗೊಂಡ ಪುಣ್ಯ ಭೂಮಿ ನಮ್ಮದು. ನಮ್ಮ ನಾಡು ಸಂಸ್ಕೃತಿಯ ನೆಲೆವೀಡು ಇದು ಸಾಧಕರ ರ‍್ಮಭೂಮಿ ನಾಡು-ನುಡಿ ಸಂಸ್ಕೃತಿಗಳಿಗಾಗಿ ರ‍್ವಸ್ವದೊಂದಿಗೆ ಜೀವನವನ್ನು ತೆತ್ತವರ ಮಣ್ಣಿದು. ಕುವೆಂಪು, ದಾ ರಾ ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್,  ವಿಕೃ ಗೋಕಾಕ್, ಯು ಆರ್ ಅನಂತಮರ‍್ತಿ, ಗಿರೀಶ್ ಕರ‍್ನಾಡ್, ಚಂದ್ರಶೇಖರ ಕಂಬಾರ, ಇವರುಗಳು ಜ್ಞಾನಪೀಠ ಪ್ರಶಸ್ತಿ ಪಡೆದು ಕರುನಾಡ ಪ್ರಾಚೀನತೆ ಹಾಗೂ ಕನ್ನಡದ ಶ್ರೀಮಂತ ಪರಂಪರೆಯನ್ನು ಕನ್ನಡದ ಅತ್ಯದ್ಭುತ ಪದಗಳಲ್ಲಿ ಶೃಂಗರಿಸಿ ಮೆರೆಸಿದ್ದಾರೆ. ಕನ್ನಡ ಎಂದರೆ ಕೇವಲ ರ‍್ಣಮಾಲೆಯಲ್ಲ ಅದು ಕರುನಾಡ ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ-ಕಲೆ, ಸಂಗೀತ, ನೃತ್ಯ ಎಲ್ಲವನ್ನೂ ಒಳಗೊಂಡಿದೆ. ಬೇಲೂರು, ಹಳೇಬೀಡು, ಮೈಸೂರು, ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಇವು ಚಾಳುಕ್ಯರ ಗಂಗರ ಕದಂಬರ ಹೊಯ್ಸಳರ ವೀರ ಆಳ್ವಿಕೆಯ ದೃಶ್ಯವನ್ನು ಇಂದಿಗೂ ಸಾರುತ್ತಿವೆ. ರ‍್ನಾಟಕದ ವಾಸ್ತು ಶಿಲ್ಪಗಳು ನೋಡುಗರ ಗಮನಸೆಳೆಯುತ್ತಿವೆ.ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಸಿರು ಜಲಪಾತಗಳು ನೋಡುಗರನ್ನು ಕೈ ಬೀಸಿ ಕರೆಯುತ್ತಿವೆ. ಮಂಗಳೂರು, ಮುರುಡೇಶ್ವರದಂತಹ ಕಡಲತೀರಗಳು ಪ್ರವಾಸಿಗರನ್ನು  ಆರ‍್ಷಿಸುತ್ತಿವೆ. ಗುಡವಿ, ರಂಗನತಿಟ್ಟಿನ ಪಕ್ಷಿಧಾಮಗಳಿಗೆ ಹೊರ  ರಾಜ್ಯಗಳಿಂದ ಪಕ್ಷಿ ಪ್ರಪಂಚವೇ ಹಾರಿಬಂದು ನಮ್ಮ ರಾಜ್ಯದ ಹಸಿರ ಸಿಹಿಯನ್ನು ಸವಿಯುತ್ತಿವೆ. ರ‍್ನಾಟಕವು ಬನ್ನೇರುಘಟ್ಟ, ಭದ್ರ, ಶರಾವತಿ ಕಣಿವೆ, ಹಾಗೂ ಹಲವಾರು ಅಭಯಾರಣ್ಯಗಳನ್ನು ಒಳಗೊಂಡಿದೆ. ಕಾವೇರಿ, ಕೃಷ್ಣಾ, ಗೋದಾವರಿ, ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ಶರಾವತಿ, ಚಕ್ರ,  ನೇತ್ರಾವತಿ, ನದಿಗಳು ಮೈದುಂಬಿ ಹರಿದು ಇಲ್ಲಿಯ ರೈತರ ಬಾಳಿಗೆ ಆಸರೆಯಾಗಿವೆ. ರ‍್ನಾಟಕದ ಬೆಟ್ಟಗಳು ಕರುನಾಡ ಗತ ವೈಭವವನ್ನು ಸಾರುತ್ತಿವೆ. ಕರುನಾಡಿಗೆ ಚಾಮುಂಡೇಶ್ವರಿಯ ರಕ್ಷೆಯಿದೆ, ಶೃಂಗೇರಿ ಶಾರದಾಂಬೆಯ ವಿದ್ಯಾಶರ‍್ವಾದದಿಂದ ಕೂಡಿದೆ. ನಮ್ಮ ಕರುನಾಡು ವಿಶ್ವೇಶ್ವರಯ್ಯನವರಂತಹ ಮಹಾನ್ ವ್ಯಕ್ತಿಗಳು ಜನಿಸಿದ ನಾಡು, ಪಕ್ಕದ ರಾಜ್ಯದಲ್ಲಿ ಜನಿಸಿದ ಬಾಲಸುಬ್ರಹ್ಮಣ್ಯಮ್ ರವರು ಮರುಜನ್ಮವಿದ್ದರೆ ಕರುನಾಡಿನಲ್ಲೆ ಜನಿಸುವೆ ಎಂದು ಮಧುರ ಕಂಠದಿಂದ ಹಾಡಿದ ನಾಡು ನಮ್ಮದು. ಕಾವೇರಿಯಂತಹ ಹಲವು ಪುಣ್ಯ ನದಿಗಳು ಹುಟ್ಟಿ ಹರಿವ ನಾಡು, ಶಾಂತಿ-ನೆಮ್ಮದಿ ಸಮೃದ್ಧಿಯ ಬೀಡು. ಕರುನಾಡಿಗೆ ಹೊರಗಿನಿಂದ ಪ್ರವಾಸಕ್ಕೆ ಬರುವವರು ಸಂಖ್ಯೆ ಹೆಚ್ಚುತ್ತಿದೆ ಹಸಿರು ಅವರನ್ನು ಆರ‍್ಷಿಸುತ್ತಿದೆ. ಹೊರ ಜನರು ಪ್ರವಾಸ, ಹೊರಸಂಚಾರಕ್ಕಾಗಿ ಬೆಟ್ಟಗಳಿಗೆ ಚಾರಣಕ್ಕೆಂದು ಬಂದು ಅಲ್ಲಿ ಸಂತಸದಿಂದ ಸುತ್ತಾಡಿ ಅವರ ರಾಜ್ಯದ ಸ್ನೇಹಿತರಿಗೆ ನಮ್ಮ ನಾಡಿನ ಪರಿಸರದ ವೈವಿಧ್ಯಮಯ ವೈಭವವನ್ನು ಸಾರುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ರ‍್ನಾಟಕದಲ್ಲಿ ಲಕ್ಷಾಂತರ ಕುಟುಂಬಗಳು ವಾಸಿಸುತ್ತಿವೆ, ಇಲ್ಲಿನ ನೆಲ ಅವರಿಗೆ ಜೀವಿಸಲು ಬೇಕಾದ ಅತ್ಯಮೂಲ್ಯ ಸಂಪತ್ತನ್ನು ದೊರಕಿಸುತ್ತಿದೆ. ಸಜ್ಜನರ ನಾಡು ನಮ್ಮ ಕರುನಾಡು ನೀರು ಕೇಳಿದರೆ ಪಾನಕವನ್ನೇ ನೀಡುವ ಜನರಿಂದ ಕೂಡಿದ. ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು, ಬದುಕಿದು ಜಟಕಾ ಬಂಡಿ ಇದು ವಿಧಿಯಾಡಿಸುವ  ಬಂಡಿ ಎಂದು ಅಣ್ಣಾವ್ರು ಹಾಡಿ ಕುಣಿದು ನಲಿದ ನಾಡು ನಮ್ಮದು.ಆತ್ಮೀಯರೇ ರ‍್ನಾಟಕವು ತನ್ನದೇ ಆದ ಹಿರಿಮೆ ಗರಿಮೆ ಮತ್ತು ಪರಂಪರೆಯುಳ್ಳ ಭಾರತದ ರಾಜ್ಯಗಳಲ್ಲಿ ಒಂದಾಗಿದೆ. ಪ್ರಕೃತಿ ಸೌಂರ‍್ಯ ವನ್ಯಜೀವಿಗಳ ಸಮೃದ್ಧಿಯಾಗಿ ವಿಶ್ವಪರಂಪರೆಯ ಸಾಲಿನಲ್ಲಿ ಪ್ರಸಿದ್ಧಿ ಪಡೆದ ಕರ‍್ತಿ ನಮ್ಮ ರ‍್ನಾಟಕ ರಾಜ್ಯಕ್ಕಿದೆ ರ‍್ನಾಟಕದಲ್ಲಿ ಹಲವಾರು ರಾಜ ಮನೆತನಗಳು ಆಳ್ವಿಕೆ ನಡೆಸಿವೆ ಅಲ್ಲಿನ ಕಲ್ಲಿನ ಕೆತ್ತನೆಗಳು ಅವರ ಆಳ್ವಿಕೆಯನ್ನು ಸಾರುತ್ತಿವೆ. ನಮ್ಮ ನಾಡು ಇಷ್ಟೆಲ್ಲ ವೈಭವದಿಂದ ಕೂಡಿಯು  ನಾಡಿನ ಭಾಷೆ ಸ್ವಲ್ಪ ಸ್ವಲ್ಪವೇ ಕ್ಷೀಣಿಸುತ್ತಿರುವುದು ಬೇಸರದ ಸಂಗತಿ. ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಅಂಗಡಿ ಮುಂಗಟ್ಟು, ಮಾರುಕಟ್ಟೆ ಇನ್ನಿತರ ಸ್ಥಳಗಳಲ್ಲಿ ಅನ್ಯಭಾಷೆಯ ಫಲಕಗಳು ಹೆಚ್ಚುತ್ತಿವೆ. ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚುತ್ತಿವೆ ಇವೆಲ್ಲವೂ ಬದಲಾಗಲೇಬೇಕು, ಕನ್ನಡ ಶಾಲೆಗಳು ಉಳಿಯಬೇಕು, ಕನ್ನಡ ಎಲ್ಲರ ಬಾಯಲ್ಲಿ ನಲಿದಾಡಬೇಕು, ಫಲಕಗಳು ಕನ್ನಡದಲ್ಲಿಯೇ ಇರಬೇಕು, ಆಗ ಮಾತ್ರ ನಾಡಿನ ಭಾಷೆ ಉಳಿಯಲು ಸಾಧ್ಯ. ಬೆಂಗಳೂರಿನಲ್ಲಿ ರಾಜಕಾರಣ ಮತ್ತು ಆಡಳಿತದ ಹೊರತಾಗಿ ಬೇರೆ ಎಲ್ಲಾ ಮುಖ್ಯ ವಹಿವಾಟು- ವ್ಯವಹಾರಗಳು ಪರಭಾಷೀಯರ ಕೈಯಲ್ಲಿವೆ ನಾವು ಹೆಸರಿಗೆ ಮಾತ್ರ ಆಳುವ ಜನರು, ಖಜಾನೆಯ ಬೀಗದ ಕೈ ಎಲ್ಲಾ ಬೇರೆಯವರ ಬಳಿಯಲ್ಲಿ. ನಮ್ಮಲ್ಲಿ ಹಬ್ಬಗಳನ್ನು ಆದಷ್ಟು ಮನೆಪರ‍್ತಿ ಮಾಡಿಕೊಂಡು ಕುಟುಂಬದವರಿಗೂ, ಆಪ್ತರಿಗೂ ಸೀಮಿತವಾಗಿಟ್ಟುಕೂಳ್ಳುವುದು ಹೆಚ್ಚು ಸರ‍್ವಜನಿಕ ಹಾಗೂ ಸಾಮೂಹಿಕ ಸಮಾರಂಭಗಳನ್ನು ತಮ್ಮ ಸ್ವರ‍್ಥಕ್ಕಾಗಿ ಸ್ಥಳೀಯ ಪುಂಡರಿ ಗಳು ಉಪಯೋಗಿಸಿಕೊಂಡು ಅಲ್ಲಿ ಸಂಸ್ಕೃತಿಯ ಪ್ರರ‍್ಶನಕ್ಕಿಂತ ರಾಜಕೀಯವೇ ಹೆಚ್ಚು. ಅಮಾಯಕ ನಿರುದ್ಯೋಗಿ ಯುವಕರನ್ನು ಉಪಯೋಗಿಸಿಕೊಳ್ಳುವ ಇಂಥ ಸಮಾರಂಭಗಳಿಗೆ ಭಾಗವಹಿಸಲು ಸುಸಂಸ್ಕೃತ ರ‍್ಯಾದಸ್ತ ಜನ ಮುಂದೆ ಬರುವುದು ಕಡಿಮೆ ಇದರಿಂದ ಇಲ್ಲಿ ಜಾಸ್ತಿ ಪ್ರರ‍್ಶನವಾಗುವುದೇ ಬೇರೆ. ರ‍್ನಾಟಕದಲ್ಲಿ ಫಲಕಗಳು ಹೆಚ್ಚು ಕನ್ನಡದಲ್ಲಿಯೇ ಇರಬೇಕು, ಕನ್ನಡ ಶಾಲೆಗಳ ಅಭಿವೃದ್ಧಿ ಹೆಚ್ಚಿಸಬೇಕು, ಎಲ್ಲರ ಬಾಯಲ್ಲಿ ಕನ್ನಡ ನಲಿದಾಡ ಬೇಕು, ಎಲ್ಲರೂ ಪ್ರತಿನಿತ್ಯ ಕನ್ನಡವನ್ನು ನುಡಿಯಬೇಕು, ಕನ್ನಡ ನಾಡು-ನುಡಿ ಸಂಸ್ಕೃತಿಯ ಬಗ್ಗೆ ಎಲ್ಲರಿಗೂ ತಿಳಿಸಬೇಕು, ಹೆಚ್ಚೆಚ್ಚು ಕನ್ನಡ ಪುಸ್ತಕಗಳನ್ನು ಓದಬೇಕು, ಮತ್ತು ಓದಲು ಆಸಕ್ತಿ ಯುಳ್ಳವರಿಗೆ ಕನ್ನಡ ಪುಸ್ತಕಗಳನ್ನು ನೀಡಬೇಕು, ಕರುನಾಡಿನಲ್ಲಿ ಜನಿಸಿದ ಎಲ್ಲರೂ ಕನ್ನಡವನ್ನು ಕಟ್ಟುವ ಕರ‍್ಯದಲ್ಲಿ ಮುಂದಾಗಬೇಕು,ಭಾಷೆಯನ್ನು ಉಳಿಸಬೇಕು ಪ್ರತಿಯೊಬ್ಬರ ಉಸಿರು ಕನ್ನಡವಾಗಬೇಕು ಕನ್ನಡವನ್ನು ಬೆಳೆಸಬೇಕು ಎಲ್ಲರೂ ಅನೇಕ ಕನ್ನಡ ಪರ ಸಂಘಟನೆಗಳ ಸಂರ‍್ಕ ಸೇರಬೇಕು.ಅದೇ ರೀತಿ ತಮ್ಮ ತಮ್ಮ ಊರುಗಳಲ್ಲಿ ಕನ್ನಡಪರ ಸಂಘಟನೆಗಳನ್ನು ಸ್ಥಾಪಿಸಿ ಕನ್ನಡದ ಇತಿಹಾಸ ವೈಭವವನ್ನು ಸಾರುವ ವಂತಾಗಬೇಕು.ಕನ್ನಡಪರ ಸಂಘಟನೆಗಳು ಶಾಲೆಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ಕರ‍್ಯಕ್ರಮಗಳನ್ನು ಮಾಡುವುದರ ಮೂಲಕ ಮಕ್ಕಳಿಗೆ ಕನ್ನಡ ನಾಡು- ನುಡಿಯ ಬಗ್ಗೆ ತಿಳಿಸಬೇಕು. ಕನ್ನಡ ಪರಂಪರೆ ಸಾರುವ ನಾಟಕಗಳನ್ನು ಊರುಗಳಲ್ಲಿ ಮಾಡುವುದರ ಮೂಲಕ ಜನರಿಗೆ ಅರಿವು ಮೂಡಿಸಬೇಕು.ಕರುನಾಡಿನಲ್ಲಿ ಹುಟ್ಟಿದ ಎಲ್ಲರೂ ಕನ್ನಡಾಂಬೆಯ ಸೇವೆಗೆ ಸದಾ ಸಿದ್ಧರಿರಬೇಕು. ಕನ್ನಡ ಪ್ರತಿಯೊಬ್ಬ ಕನ್ನಡಿಗನ ಉಸಿರಲ್ಲಿ ಹಸಿರಾಗಬೇಕು ಕನ್ನಡದ ಶ್ರೀಮಂತ ಪರಂಪರೆಯ ವೈಭವವನ್ನು ಎಲ್ಲರೂ ಎಲ್ಲೆಡೆ ಸಾರಬೇಕು ಎಂಬುದೇ "ಸಾಗರ್ ರಾಮನಹಳ್ಳಿಯವರ" ಆಶಯ.ಇಂದಿನಿಂದಲೇ ಕನ್ನಡವನ್ನು ಕಟ್ಟುವ ಕರ‍್ಯವನ್ನು ಪ್ರಾರಂಭಿಸೋಣ . ವಿಶ್ವದೆಲ್ಲೆಡೆ ಕನ್ನಡಿಗರು ಪ್ರತಿ ರ‍್ಷವೂ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸುತ್ತಾ ಬಂದಿದ್ದಾರೆ. ಅದೇ ರೀತಿ ಈ ರ‍್ಷವೂ ಸಹ ನಾವು ಸಂಭ್ರಮದಿಂದ  ಕನ್ನಡ ರಾಜ್ಯೋತ್ಸವವನ್ನು ಆಚರಿ ಸೋಣ  ಧನ್ಯವಾದಗಳು.