``ಆಧ್ಯಾತ್ಮಿಕತೆಯಿಂದ ಮಾನಸಿಕ ಸ್ಥಿತಿ ಸುಧಾರಣೆ’’
siddarabetta-veerabhadra-shivacharya

``ಆಧ್ಯಾತ್ಮಿಕತೆಯಿಂದ ಮಾನಸಿಕ ಸ್ಥಿತಿ ಸುಧಾರಣೆ’’
ಕೊರಟಗೆರೆ: ಆಧ್ಯಾತ್ಮಿಕತೆಯಿಂದ ಮನುಷ್ಯನ ಮಾನಸಿಕ ಸ್ಥಿತಿ ಸುಧಾರಣೆಯಾಗಲಿದ್ದು ದೇವರ ಧ್ಯಾನದಿಂದ ಜೀವನವದಲ್ಲಿನ ನೋವು, ಭಯ, ಸಂಕಷ್ಟಗಳನ್ನು ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ ಎಂದು ತಾಲೂಕಿನ ಶ್ರೀಕ್ಷೇತ್ರ ಸಿದ್ದರಬೆಟ್ಟದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರಶೀವಾಚಾರ್ಯ ಸ್ವಾಮಿಜಿ ತಿಳಿಸಿದರು.
ಅವರು ಪಟ್ಟಣದ ತೇರಿನಬೀದಿ ಕೋಟೆಬೀದಿ ಮಧ್ಯಭಾಗದಲ್ಲಿರುವ ಶನೇಶ್ವರಸ್ವಾಮಿ ದೇವಾಲಯದಲ್ಲಿ ಶ್ರೀ ಶನೇಶ್ವರ ಸೇವಾ ಟ್ರಸ್ಟ್ ವತಿಯಿಂದ ದೇವರ ವಾಹನ ಕಾಕಸುರ ಅಥವಾ ಕಾಕವಾಹನ ವಿಗ್ರಹದ ಪ್ರಾಣ ಪ್ರತಿಷ್ಟಾಪನೆ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಆಧುನಿಕ ಜಗತ್ತಿನ ತಂತ್ರಜ್ಞಾನ ಮತ್ತು ಬದುಕಿನ ಒತ್ತಡದಲ್ಲಿ ಮನುಷ್ಯ ವಿಚಲಿತನಾಗುತ್ತಿದ್ದಾನೆ. ದೇವರ ಮುಂದೆ ಕೆಲವು ನಿಮಿಷಗಳ ಕಾಲ ಪ್ರಾರ್ಥನೆ ಮಾಡಿದಾಗ ಮನಸ್ಸಿನ ಸ್ಥಿಮಿತಕ್ಕೆ ಬರುತ್ತದೆ. ಅದಕ್ಕಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ತÀಕ್ಕಂತೆ ದೇವಾಲಯಗಳು ಹೆಚ್ಚುತ್ತಿವೆ. ಶನಿದೇವರು ಮನುಷ್ಯನು ನೇಮ-ನಿಷ್ಟೆ ತಪ್ಪಿದಾಗ ಶಿಕ್ಷಿಸುವ ದೇವರು ಎಂದು ಪುರಾಣಗಳಲ್ಲಿ ತಿಳಿಸಿದ್ದು ಇದರಿಂದ ಜನರು ಉತ್ತಮ ದಾರಿಯಲ್ಲಿ ನಡೆಯುತ್ತಾರೆ ಎಂದರು.
ಕೊರಟಗೆರೆ ಆರಕ್ಷಕ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಎಲ್ಲಾ ಜಾತಿಯವರು ಒಟ್ಟು ಗೂಡಿ ನಿರ್ವಹಿಸುವುದರಿಂದ ಜನರಲ್ಲಿ ಸಮಾನತೆ ಬೆಳೆಯುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಸಮಾಜ ಶಾಂತಿಯುತವಾಗಿರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಎಂ.ಜಿ. ಸುಧೀರ್ ವಹಿಸಿದ್ದರು ಪ.ಪಂ. ಮುಖ್ಯಾಧಿಕಾರಿ ಲಕ್ಷö್ಮಣಕುಮಾರ್ ಸದಸ್ಯ ಕೆ.ಎನ್. ಲಕ್ಷಿö್ಮÃನಾರಾಯಣ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಂ.ಜಿ. ಬದ್ರಿಪ್ರಸಾದ್ ಸೇವಾಕರ್ತರಾದ ಚಂದ್ರಯ್ಯ ಶ್ರೇಷ್ಠಿ ವಿಜಯಕುಮಾರ್ ಟ್ರಸ್ಟ್ ಪದಾಧಿಕಾರಿಗಳಾದ ಕೆ.ಆರ್.ರಾಜಣ್ಣ ಹೆಚ್.ಎಲ್. ನಾರಾಯಣ ಕೆ.ಎಲ್. ವೆಂಕಟಾಚಲಶೆÀಟ್ಟಿ ಸತ್ಯನಾರಾಯಣ್ (ಕುದುರೆ) ಕೆ.ಆರ್. ಅನುಪ್ರಸಾದ್ ಕೆ.ಆರ್. ಚಂದ್ರಶೇಖರ್ ಕೆ. ಪರಶುರಾಮ್ ಕೆ.ವಿ. ಪುರುಷೋತ್ತಮ ಕೆ.ಹೆಚ್. ಅಂಜನ್‌ಕುಮಾರ್ ಉಮೇಶ್ ಪ್ರಧಾನ ಅರ್ಚಕ ಕುಂಭೀನಾರಾಯಣಚಾರ್ ವಿಶೇಷ ಅರ್ಚಕರುಗಳಾದ ಪ್ರಕಾಶಚಾರ್ ವೇಣುಗೋಪಾಲ್ ಉಪಸ್ಥತರಿದ್ದರು.