ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಒಳ ಮೀಸಲಾತಿಜಾರಿಗೆತಂದರೇ : ಕೆಎನ್‌ಆರ್ , ಜನಸಂಖ್ಯೆಗೆತಕ್ಕಂತೆಮೀಸಲಾತಿ ಹೆಚ್ಚಳ ಏಕಿಲ್ಲ? ನಗರದಲ್ಲಿ ಮಾದಿಗರ ಸಮಾವೇಶದಲ್ಲಿ ಡಾ.ಜಿ.ಪರಮೇಶ್ವರ

ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಒಳ ಮೀಸಲಾತಿಜಾರಿಗೆತಂದರೇ : ಕೆಎನ್‌ಆರ್

ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಒಳ ಮೀಸಲಾತಿಜಾರಿಗೆತಂದರೇ : ಕೆಎನ್‌ಆರ್   ,  ಜನಸಂಖ್ಯೆಗೆತಕ್ಕಂತೆಮೀಸಲಾತಿ ಹೆಚ್ಚಳ ಏಕಿಲ್ಲ?   ನಗರದಲ್ಲಿ ಮಾದಿಗರ ಸಮಾವೇಶದಲ್ಲಿ ಡಾ.ಜಿ.ಪರಮೇಶ್ವರ


ಗೋವಿಂದ ಕಾರಜೋಳ, ನಾರಾಯಣಸ್ವಾಮಿ
ಒಳ ಮೀಸಲಾತಿಜಾರಿಗೆತಂದರೇ : ಕೆಎನ್‌ಆರ್


ತುಮಕೂರು: ರಾಜ್ಯದ ಸಚಿವಗೋವಿಂದ ಕಾರಜೋಳ ಹಾಗೂ ಈಗ ಕೇಂದ್ರದಲ್ಲಿ ಸಚಿವರಾಗಿರುವಎ.ನಾರಾಯಣಸ್ವಾಮಿಇಬ್ಬರು ಶಿರಾ ಉಪಚುನಾವಣೆಯಲ್ಲಿ ಒಳಮೀಸಲಾತಿ ಜಾರಿ ಮಾಡುವುದಾಗಿ ಹೇಳಿದರು, ಅದರಿಂದಗೆದ್ದರು, ಗೆದ್ದ ಮೇಲೆ ಎಲ್ಲಿಯಾದರೂ ಒಳ ಮೀಸಲಾತಿ ಬಗ್ಗೆ ಮಾತನಾಡಿದ್ದಾರೆಯೇ? ಗೆದ್ದಅಭ್ಯರ್ಥಿ ನಾನು ಒಳ ಮೀಸಲಾತಿ ಪರವಾಗಿದ್ದೀನಿ ಎಂದು ಹೇಳಿದ್ದಾರೆಯೇ? ಗೆಲ್ಲಿಸಿದ್ದರಿಂದ ರಾಜಕೀಯವಾಗಿಅವರು ಪ್ರಬಲರಾದರೇ ಹೊರತು ಸಮುದಾಯಕ್ಕೆ ಏನು ಮಾಡಲಿಲ್ಲ ಎಂದು ಮಾಜಿ ಶಾಸಕರು ಹಾಗೂ  ಡಿಸಿಸಿ ಬ್ಯಾಂಕ್‌ಅಧ್ಯಕ್ಷರಾದಕೆ.ಎನ್.ರಾಜಣ್ಣನವರುಆರೋಪಿಸಿದರು.


ಜಿಲ್ಲಾ ಬಾಲಭವನದಲ್ಲಿ ಶನಿವಾರ ನಡೆದಜಿಲ್ಲಾ ಮಾದಿಗರ ಸಮಾವೇಶದಲ್ಲಿ ಮಾತನಾಡಿದಅವರುಕಾಂಗ್ರೆಸ್ ಸರ್ಕಾರಜಾರಿಗೆತಂದ ಉಳುವವನೇ ಭೂಮಿಯಒಡೆಯಯೋಜನೆಯಿಂದರಾಜ್ಯದಅಹಿAದ ವರ್ಗ ಭೂಮಿಯಒಡೆಯರಾದರು, ಕರಾವಳಿಯಲ್ಲಿ ಅಹಿಂದ ವರ್ಗ ಭೂಮಿಒಡೆಯರಾದರು, ಭೂಮಿ ಕಳೆದುಕೊಂಡವರ ಮಾತು ಕೇಳಿ ಶಿಕ್ಷಣ ಬಿಟ್ಟುಕೇಸರಿಕರಣಕ್ಕೆ ಒಳಗಾಗಿದ್ದಾರೆ ಇಂತಹರಾಜಕೀಯ ಶೋಷಣೆಯಿಂದ ಹೊರಬೇಕಾದರೆಅಹಿಂದ ವರ್ಗ ಶಿಕ್ಷಿತರಾಗಬೇಕು ಎಂದು ಹೇಳಿದರು.



ನಸಂಖ್ಯೆಗೆತಕ್ಕಂತೆಮೀಸಲಾತಿ ಹೆಚ್ಚಳ ಏಕಿಲ್ಲ?


ನಗರದಲ್ಲಿ ಮಾದಿಗರ ಸಮಾವೇಶದಲ್ಲಿ ಡಾ.ಜಿ.ಪರಮೇಶ್ವರಪ್ರಶ್ನೆ


ತುಮಕೂರು: ಅಂಬೇಡ್ಕರ್‌ಅವರು ಸಂವಿಧಾನದಲ್ಲಿಅಸ್ಪೃಶ್ಯರಿಗೆ ಮೀಸಲಾತಿ ನೀಡಿಅವರನ್ನು ಮುಖ್ಯವಾಹಿನಿಗೆ ತಂದರು, ಆದರೆ ಸ್ಪೃಶ್ಯ ಸಮಾಜಗಳು ಮೀಸಲಾತಿಯನ್ನು ಪಡೆದುಕೊಂಡಿವೆ, ರಾಜ್ಯದಲ್ಲಿ ಶೇ.24.1ರಷ್ಟು ಪರಿಶಿಷ್ಟ ಜಾತಿ, ಪಂಗಡದಜನಸAಖ್ಯೆಇದೆ, ಆದರೆಜಾತಿಸಂಖ್ಯೆಗೆಅನುಗುಣವಾಗಿ ಪರಿಶಿಷ್ಟರ ಮೀಸಲಾತಿಯನ್ನುಏರಿಕೆ ಮಾಡಿಲ್ಲವೇಕೆಎಂದುಮಾಜಿಉಪಮುಖ್ಯಮAತ್ರಿ ಡಾ.ಜಿ.ಪರಮೇಶ್ವರಪ್ರಶ್ನಿಸಿದರು.


ಜಿಲ್ಲಾ ಬಾಲಭವನದಲ್ಲಿ ಶನಿವಾರ ನಡೆದಜಿಲ್ಲಾ ಮಾದಿಗರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದಅವರು,ಬಾಬಾ ಸಾಹೇಬ್‌ಅಂಬೇಡ್ಕರ್‌ಅವರ ಸಮಾನತೆಯ ವಿರುದ್ಧ ವರ್ಗಿಕರಣ ಮಾಡುವಂತಹಕ್ರಿಯೆದೇಶದಲ್ಲಿ ನಡೆಯುತ್ತಿದೆ, ವರ್ಣಾಶ್ರಮದಆಧಾರದ ಮೇಲೆ ಇಂದು ಮೀಸಲಾತಿಯನ್ನುಕೇಂದ್ರ ಸರ್ಕಾರ ನೀಡಿದೆ. ಸಂವಿಧಾನಾತ್ಮಕವಾಗಿಜನಸAಖ್ಯೆಗೆಆಧಾರದ ಮೇಲೆ ಮೀಸಲಾತಿಯನ್ನು ನೀಡಲು ಅವಕಾಶ ನೀಡಿದ್ದರು ಅನುಷ್ಟಾನಗೊಳಿಸಲು ಆಗುತ್ತಿಲ್ಲ, ಸಂವಿಧಾನಕ್ಕೆ ಬದಲಾವಣೆತಂದರೂ ಮೀಸಲಾತಿ ಹೆಚ್ಚಳ ಆಗಲಿಲ್ಲ, ಎಂದು ಹೇಳಿದರು.


ಪರಿಶಿಷ್ಟ ಜಾತಿಯ ಉಪಜಾತಿಗಳ ಮೀಸಲಾತಿ ವರ್ಗಿಕರಣಕ್ಕಾಗಿ ಆಯೋಗದ ವರದಿ ಸಲ್ಲಿಸಿದೆ ಆದರೆಅದಕ್ಕೆ ಪರಿಹಾರವನ್ನುಯಾವುದೇ ಸರ್ಕಾರ ಕಂಡುಕೊಳ್ಳಲಿಲ್ಲ, ಬೊಮ್ಮಾಯಿ ನೇತೃತ್ವದಲ್ಲಿರುವ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ, ಒಳಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.


ಕೊರಟಗೆರೆಯಲ್ಲಿ ಮಾದಿಗ ಸಮುದಾಯದ ಮಠ ಸ್ಥಾಪಿಸಲು ಭೂಮಿಯನ್ನು ಹುಡುಕಲು ತಹಶೀಲ್ದಾರ್ ಅವರಿಗೆ ಸೂಚಿಸಿದ್ದು, ಸರ್ಕಾರಎಲ್ಲ ಸಮುದಾಯಗಳಿಗೆ ಜಾಗ ನೀಡಿದ್ದು, ಮಾದಿಗ ಸಮುದಾಯದ ಮಠ ಸ್ಥಾಪನೆಗೆ ಶೀಘ್ರ 5 ಎಕರೆ ಭೂಮಿ ಮಂಜೂರು ಮಾಡಿಸುವುದಾಗಿಕೊರಟಗೆರೆ ಶಾಸಕರೂಆಗಿರುವ ಪರಮೇಶ್ವರತಿಳಿಸಿದರು.


ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಒಳಮೀಸಲಾತಿ ರಚನೆಗಾಗಿ ನಡೆದ ಹೋರಾಟ, ವರದಿ ಸಲ್ಲಿಕೆಯಾದ ಮೇಲೆ ತಣ್ಣಗಾಯಿತು, ಸರ್ಕಾರಗಳು ಬದಲಾದಂತೆ ಒಳಮೀಸಲಾತಿಯನ್ನು ನಿರ್ಲಕ್ಷಿಸಲಾಯಿತು, ದೇಶದಲ್ಲಿ ಬಹು ಪಕ್ಷಗಳಿಗೆ ಅವಕಾಶ ನೀಡಿದ್ದರಿಂದ ಪ್ರಬಲ ವಿರೋಧ ಪಕ್ಷಇಲ್ಲದಂತಾಯಿತು, ರಾಜಕೀಯ ಪ್ರಜ್ಞೆಇಲ್ಲದ ಭಾರತೀಯರ ಸ್ಥಿತಿ ಹೀಗೆ ಮುಂದುವರೆದರೆ ಭೀಕರ ಸನ್ನಿವೇಶಗಳನ್ನು ಎದುರಿಸಬೇಕಾಗಿದೆಎಂದುಆತAಕ ವ್ಯಕ್ತಪಡಿಸಿದರು.


ಹಂಪಿ ಮಾತಂಗ ಮಹರ್ಷಿ ಸೇವಾಶ್ರಮದ ಶ್ರೀಭಾರತಿಪೂರ್ಣಾನಂದ ಸ್ವಾಮೀಜಿ, ಓಂಕಾರ ಮುನಿ ಸ್ವಾಮೀಜಿವಹಿಸಿದ್ದರು. ಮಾಜಿ ಶಾಸಕರಾದಗಂಗಹನುಮಯ್ಯ, ರಫೀಕ್‌ಅಹ್ಮದ್,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್.ಕೆಂಚಮಾರಯ್ಯ, ಸಾಹಿತಿ ಡಾ.ಓ.ನಾಗರಾಜು, ಮುಖಂಡರಾದ ವಾಲೆಚಂದ್ರು, ಕೊಟ್ಟಶಂಕರ್, ಶಶಿ ಹುಲಿಕುಂಟೆಮಠ್, ಹಾಲನೂರು ನರಸಿಂಹರಾಜು, ಟಿ.ಸಿ.ರಾಮಯ್ಯ, ಜೆಸಿಬಿ ವೆಂಕಟೇಶ್, ಹೆಚ್.ಆರ್.ರಾಮಮೂರ್ತಿ, ಅಗಲಗುಂಟೆರAಗಸ್ವಾಮಿ, ಕೌತಮಾರನಹಳ್ಳಿ ಶಿವರಾಜು, ಮಾರುತಿಪ್ರಸಾದ್, ಕೋರಾರಾಜು, ಸಿದ್ದೇಶ್ ನೇಗಲಾಲ, ಅಮರ್ ಟಿ.ಸಿ, ಸಂತೋಷ್‌ಕುಮಾರ್, ಮಾರುತಿ, ನರಸಿಂಹಮೂರ್ತಿ ತಿಮ್ಮಲಾಪುರ ಸೇರಿಇತರರಿದ್ದರು.