
ಡಾ.ಸುಚೈತ
ಶಿಶುವಿನ ಜನನ ಪ್ರತಿಯೊಂದು ಕುಟುಂಬಕ್ಕೂ ಆಶಾ ಮತ್ತು ಸಂತೋಷದ ಕ್ಷಣ. ಸಾಮಾನ್ಯವಾಗಿ ಒಂಬತ್ತು ತಿಂಗಳು ಅಂದರೆ 37-40 ವಾರಗಳ ವರಿಗೆ ಗರ್ಭದಾರಣೆ ಸಹಜ. ಆದರೆ , ಶಿಶುಗಳು ಕೆಲವೊಮ್ಮೆ 37ವಾರಗಳಿಗಿಂತ ಮುಂಚೆಯೇ ಅಂದರೆ ಅಕಾಲವಾಗಿ ಜನಿಸಬಹುದು ,ಇಂತಹ ಶಿಶುಗಳಿಗೆ 'ಪ್ರೆಟರ್ಮ್ ಬೇಬಿಸ್ ' ಎಂದು ಕರೆಯಲಾಗುತ್ತೆ .
ಅಕಾಲವಾಗಿ ಜನನವು ಜಾಗತಿಕ ಆರೋಗ್ಯದ ಪ್ರಮುಖ ಸವಾಲಾಗಿದೆ .ಈ ಹಿನ್ನಲ್ಲೆಯಲ್ಲಿ ನವೆಂಬರ್ 17 ರಂದು ವಿಶ್ವ ಅಕಾಲ ಜನನ ದಿನ ಎಂದು ಆಚರಿಸಲಾಗುತ್ತೆ , ಎಲ್ಲೆಲ್ಲಿಯೂ ಜಾಗೃತಿ ಮೂಡಿಸಬೇಕಾಗಿದೆ.
<28 ವಾರಗಳ ಮುಂಚೆ ಹೆರಿಗೆಯಾದರೆ 'ಅತಿ ಅಕಾಲ'. 28-32 ವಾರಗಳ ಮಧ್ಯದಲ್ಲಿ 'ಮಧ್ಯಮ ಅಕಾಲ' ಹಾಗು 32-37 ವಾರಗಳ ನಡುವೆ 'ಸ್ವಲ್ಪ ಅಕಾಲ' ಎಂದು ಪಾರಿಗಣಿಸಲಾಗುತದೆ.
ಜಾಗತಿಕವಾಗಿ ಪ್ರತಿ ವರ್ಷ ಸುಮಾರು 1 ಕೋಟಿ 50 ಲಕ್ಷ ಶಿಶುಗಳು ಅಕಾಲವಾಗಿ ಜನಿಸುತಾರೆ .ಈ ಶಿಶುಗಳಿಗೆ ಉಸಿರಾಟದ ತೊಂದರೆ, ಶ್ರವಣ,ಹಲ್ಲು ,ದೃಷ್ಟಿ ಸಮಸ್ಯೆಗಳು ಮತ್ತು ಮನೋವೈಕಲ್ಯಗಳು ಸಾಧಾರಣವಾಗಿ ಸಂಭಾವಿಸುತವೆ.
ಪ್ರೆಟರ್ಮ್ ಪ್ರಸವದ ಅಪಾಯಕಾರಕ ಅಂಶಗಳು :
ಮಾತೃ ವಯಸ್ಸು - <18 ಅಥವಾ >35, ಜೀವನಶ್ಯಲಿ ಸಂಭಂದಿತ ಅಂಶಗಳು - ಧೂಮಪಾನ , ಮಧ್ಯಪಾನ,ಪೋಷಕ ಆಹಾರದ ಕೊರತೆ .ತೀವ್ರ ಶಾರಿರೀಕ ಅಥವಾ ಮಾನಸಿಕ ಒತ್ತಡ , ಎರಡು ಗರ್ಭದಾರಣೆ ಮಧ್ಯ ಆರು ತಿಂಗಳಿಗಿಂತ ಕಡಿಮೆ ಅಂತರ , ಭಾರವಾದ ಕೆಲಸ / ಧೀರ್ಘ ಸಮಯ ನಿಲ್ಲುವುದು ,ಕುಟುಂಬದಲ್ಲಿ ಪ್ರೆಟರ್ಮ್ ಇತಿಹಾಸ,ಆರೋಗ್ಯ ಸೇವೆಗಳ ಕೊರತೆ .
ಪ್ರೆಟರ್ಮ್ ಪ್ರಸವದ ಪ್ರಮುಖ ಕಾರಣಗಳು :
ಸಂಕ್ರಮಗಳು [ಇಂಫೆಕ್ಷನ್ಸ್]- ಮೂತ್ರನಾಳದಲ್ಲಿ/ಯೋನಿಯಲ್ಲಿ ,ಗರ್ಭಶಾಯ ಅಪೇಕ್ಷಿತ ಸಮಸ್ಯೆಗಳು - ಗರ್ಭಶಯದ ರಚನಾ ತೊಂದರೆಗಳು . ಗರ್ಭಾಶಯದ ಬಾಯಿಯ ದುರ್ಬಲತೆ , ಬಾಹುಗರ್ಭಧಾರಣೆ - ಟ್ವಿನ್ಸ್/ಟ್ರಿಪ್ಲೆಟ್ಸ್ ಅಥವಾ ಜಾಸ್ತಿ ,ಮುಂಚೆ ಗರ್ಭಧಾರಣೆಯಲ್ಲಿ ಪ್ರೆಟರ್ಮ್ ಆಗಿದ್ದರೆ, ತಾಯಿಯ ಆರೋಗ್ಯ ಸಮಸ್ಯೆಗಳು - ಹೆಚ್ಚು ರಕ್ತದೊತ್ತಡ , ಮಧುಮೇಹ ,ರಕ್ತಹೀನತೆ,ಥೈರಾಯಿಡ್ ಅಸಮತೋಲನ ,ಪ್ಲಾಸೆಂಟಾ ಸಂಬಂದಿತ ತೊಂದರೆಗಳು -PREVIA /ABRUPTION , ಆಮ್ನಿಯೋಟಿಕ್ ದ್ರವದ ಅಸಮತೋಲನ - ಪೊಲಿಹೈಡ್ರಾಮ್ನಿಯೋಸ್/ವೋಲಿಗೋ ಹೈಡ್ರಾಮ್ನಿಯೋಸ್
ಪ್ರೆಟರ್ಮ್ ಪ್ರಸವದ ಆರಂಭಿಕ ಲಕ್ಷಣ ಗಳು :
- ಕೆಳ ಹೊಟ್ಟೆಯಲ್ಲಿ ನಿರಂತರ ಒತ್ತಡ,ಯೋನಿಯಿಂದ ನೀರಿನ ಸೋರುವಿಕೆ , ರಕ್ತಸ್ರಾವ
- ಕೆಳಭಾಗದಲ್ಲಿ ಬೆನ್ನುನೋವು , ಗರ್ಭಕೋಶದಲ್ಲಿ ಕಟ್ಟುವಿಕೆ
ಆರೈಕೆ ಮತ್ತು ಮಾತಾಳಿಕೆ:
- NICU ಎಂದರೆ ತೀವ್ರ ನಿಘಾ ಘಟಕದಲ್ಲಿ ತಕ್ಷಣ ನಿರೀಕ್ಷಿಸಬೇಕಾಗುತದೆ, ಕಾಂಗರೂ ಮಾತೃ ಕೇರ್- ಚರ್ಮ-ಚರ್ಮಾಸ್ಪರ್ಶ ಶಿಶು ತಾಯಿಯ ಎದೆಗೆ ಹತ್ತಿರ ಹಿಡಿದು ಉಷ್ಣತೆ ಹಾಗು ಭಾವನಾತ್ಮಕ ಅನುಬಂಧ ಕೊಡುವುದು , ತಾಯಿಯ ಎದೆಹಾಲಿನಿಂದ ಪೋಷಣೆ-ಶಿಶುಗೆ ಅಮೂಲ್ಯವಾಗಿದೆ
ಶಿಶುಗಳಿಗೆ ಸತತ ಆರೋಗ್ಯಪರ ಮಾಪನ
- ಉಸಿರಾಟ, ತೂಕ ವರ್ಧನೆ, ಚಲನೆಯ ವಿಕಾಸ ಮಾಪನ
- ಬಾಲ್ಯಾವಸ್ಥೆಯಲ್ಲಿ ಶ್ರಾವಣ, ದೃಷ್ಠಿ,ಬೆಳವಣಿಗೆ ಚಟುವಟಿಕೆಗಳ ಪರಿಶೀಲನೆ
ಪ್ರತಿಬಂಧಕ ಕ್ರಮಗಳು
- ಗರ್ಭಧಾರಣೆಯ ಮುಂಚಿನಿಂದ ತಾಯಿಯ ಆರೋಗ್ಯದ ಮೇಲ್ವಿಚಾರಣೆ - ಜನನ ಮುಂದಿನ ಸಿದ್ಧತೆ
- ಗರ್ಭಧಾರಣೆಯ ಅವಧಿಯಲ್ಲಿ ಧೂಮಪಾನ, ಮಧ್ಯಪಾನ,ಹಾನಿಕಾರಕ ಔಷಧಿಗಳ ಬಳಕೆ ತಪ್ಪಿಸುವುದು
- ಗರ್ಭಪೂರ ಯಾತ್ರೆ,ಆಹಾರ ಸಮತೋಲ ಕುಟುಂಬ , ಪರಿವಾರದ ಸಹಾಯ
- ಸೋಂಕುಗಳ ಚಿಕಿತ್ಸೆ - ANTENATAL ಕೇರ್ ಸರಿಯಾಗಿ ಪಡೆಯುವುದು
- ಗರ್ಭಧಾರಣೆಯ ನಡುವೆ ಸರಿಯಾದ ಅಂತರ
ಸುಸಂಸ್ಕೃತ ಆರೈಕೆ , ಪ್ರೀತಿ ,ಸಹಕಾರ-ಈ ಮೂರು ಅಂಶಗಳು ಶಿಶುಗಳ ಬದುಕಿನಲ್ಲಿ ದೊಡ್ಡ ಭಿನ್ನತೆಯನ್ನು ತರಬಹುದು. ಆದ್ದರಿಂದ ಶಿಶುಗಳ ಆರೈಕೆ, ತಾಯಿ ತಂದೆಯರ ಬೆಂಬಲದ ಬಗ್ಗೆ ಹಾಗು ಸಮುದಾಯದ ಜಾಗೃತಿಯ ಬಗ್ಗೆ ಒಟ್ಟು ಆಲೋಚಿಸೋಣ .
- ಡಾ.ಸುಚೈತ.ಎಂ.ಎಸ್ , ಸಹಾಯಕ ಅಧ್ಯಾಪಕಿ , ಸಿದ್ಧಾರ್ಥ ಮೆಡಿಕಲ್ ಕಾಲೇಜು ತುಮಕೂರು