ʼಬೆವರಹನಿʼ ಪತ್ರಿಕೆಯ ದೀಪಾವಳಿ ಕಥಾ ಸ್ಪರ್ಧೆ ವಿಜೇತರು ಮತ್ತು ತೀರ್ಪುಗಾರರ ಟಿಪ್ಪಣಿ
ʼಬೆವರಹನಿʼ ಪತ್ರಿಕೆಯ ದೀಪಾವಳಿ ಕಥಾ ಸ್ಪರ್ಧೆ ವಿಜೇತರು ಮತ್ತು ತೀರ್ಪುಗಾರರ ಟಿಪ್ಪಣಿ
ಪ್ರಿಯ ಓದುಗರೇ,
‘ ಬೆವರ ಹನಿ’ ದಿನಪತ್ರಿಕೆಯ 2021ರ ವಿಶೇಷಾಂಕ ಸಂಬAಧಿಸಿದAತೆ ಕರೆಯಲಾಗಿದ್ದ ಕಥಾ ಸ್ಪರ್ಧೆಯಲ್ಲಿ ಮಧುಗಿರಿಯ ವಿಜಯಾ ಮೋಹನ್ ಅವರ ‘ಕಣ್ಣಿಗಬ್ಬದ ಕನಸು’, ಕೋಲಾರದ ರವೀಂದ್ರಸಿAಗ್ ಅವರ ‘ಶೀಲಾ’ ಎಂಬ ಕಥೆಗಳು ಅತ್ಯುತ್ತಮ ಎಂಬುದಾಗಿ ತೀರ್ಪುಗಾರರು ಆಯ್ಕೆ ಮಾಡಿದ್ದಾರೆ.
ಬಹುಮಾನಿತ ಲೇಖಕರಿಗೆ ‘ಬೆವರ ಹನಿ’ ದಿನಪತ್ರಿಕೆ ತಂಡದ ಪರವಾಗಿ ಅಭಿನಂದನೆಗಳು, ಇವರ ಈ ಕತೆಗಳನ್ನು ಪತ್ರಿಕೆಯ ವಿಶೇಷಾಂಕದಲ್ಲಿ ಪ್ರಕಟಿಸಲಾಗುವುದು ಹಾಗೂ ಶೀಘ್ರದಲ್ಲೇ ಏರ್ಪಡಿಸಲಾಗುವ ಸಮಾರಂಭದಲ್ಲಿ ಬಹುಮಾನವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಕಥೆಗಾರರಿಗೂ ಹಾಗೂ ನಮ್ಮ ಮನವಿಗೆ ಓಗೊಟ್ಟು ತೀರ್ಪುಗಾರರಾಗಲು ಒಪ್ಪಿ, ತಾಳ್ಮೆಯಿಂದ ಕಥೆಗಳನ್ನು ಓದಿ ಸರ್ವಸಮ್ಮತ ತೀರ್ಪು ನೀಡಿದ ನಾಡಿನ ಇಬ್ಬರು ಹೆಸರಾಂತ ಕಥೆಗಾರರಾದ ಡಾ.ಮಿe಼Áð ಬಷೀರ್ ಹಾಗೂ ಗುರುಪ್ರಸಾದ್ ಕಂಟಲಗೆರೆಯವರಿಗೆ ಕೃತಜ್ಞತೆಗಳು.
- ಕುಚ್ಚಂಗಿ ಪ್ರಸನ್ನ
ಸಂಪಾದಕ,
‘ಬೆವರ ಹನಿ’ ದಿನಪತ್ರಿಕೆ
ತೀರ್ಪುಗಾರರ ಟಿಪ್ಪಣಿಗಳು
ಓದು ಮುಖ್ಯ: ಡಾ. ಮಿe಼ರ್ಜಾ ಬಷೀರ್
ʼಬೆವರ ಹನಿʼ -2021 ಕಥಾ ಸ್ಪರ್ಧೆಗೆ ಬಂದಿದ್ದ ಕಥೆಗಳ ಪೈಕಿ ತೀರ್ಪುಗಾರರಾದ ನಮ್ಮ ಅವಗಾಹನೆಗೆ ಬಂದ ಕಥೆಗಳ ಸಂಖ್ಯೆ ಆರು. ಇವುಗಳಲ್ಲಿ ಮೊದಲ ಓದಿಗೇ ಎರಡು ಕಥೆಗಳು ಆಯ್ಕೆಯಾದವು.
ಕಣ್ಣಿಗಬ್ಬದ ಕನಸು: ಈ ಕಥೆಯು ಸಮಾಜವು ಕೊರೊನ, ಲಾಕ್ ಡೌನ್ ನಂಥ ʼಸಂಕಟ ಸಮೇವಿನಲ್ಲಿʼ ಬಂದೊದಗಿದ್ದ ಗಾಯವನ್ನು ವಿಶಿಷ್ಟ ಭಾಷೆಯಲ್ಲಿ ಹೇಳುತ್ತದೆ. ಕಥೆಗಾರರು ಇನ್ನೂ ಹೆಚ್ಚಿನ ಏಕಾಗ್ರತೆಯಿಂದ ಸಮಸ್ಯೆಯನ್ನು ಎಳೆಎಳೆಯಾಗಿ ಶೋಧಿಸಬಹುದಿತ್ತು ಎನಿಸುತ್ತದೆ.
ಶೀಲಾ : ಈ ಕಥೆಯು ಚಾಲಾಕಿ ಮತ್ತು ಛಲೋ ಹುಡುಗ ಮಲೀಕ ಮತ್ತು ಅಪ್ರತಿಮ ಸುಂದರಿ ಶೀಲಾಳ ಪ್ರೇಮದ ಸುತ್ತ ಹೆಣೆಯಲಾಗಿದೆ. ಪದರಪದರವಾಗಿ ಬಿಚ್ಚಿಕೊಳ್ಳುತ್ತ ಸಾಗುವ ಈ ಕಥೆಯು ಪ್ರೀತಿಯ ಅನೇಕ ಮಗ್ಗುಲುಗಳನ್ನು ಸ್ಪೃರ್ಶಿಸುತ್ತ ಸಾಗುತ್ತದೆ. ಹಸಿವೆಯಲ್ಲಿ ದುಃಖದಲ್ಲಿ, ಏಕಾಂತದಲ್ಲಿ , ಸೇನೆಗೆ ಸೇರಿ ಮಲ್ಲೀಕನು ದೂರದ ಕಾಶ್ಮೀರಕ್ಕೆ ಹೋದಾಗ ವಿರಹದಲ್ಲಿ ಪ್ರೇಮವು ನಾನಾ ಬಣ್ಣಗಳಲ್ಲಿ ಪ್ರಕಟವಾಗುತ್ತದೆ. ಕಥಾನಾಯಕಿ ಮುಳುಬಾಗಿಲಿನಲ್ಲಿ ಬಸ್ಸು ಹತ್ತಿದಾಗ ಪ್ರಾರಂಭವಾಗುವ ಕಥೆ ಬೆಂಗಳೂರಿನಲ್ಲಿ ಅವಳು ಇಳಿದಾಗ ಮುಕ್ತಾಯವಾಗುತ್ತದೆ. ಇಡೀ ಕಥೆಯುದ್ದಕ್ಕೂ ಪ್ರೀತಿ ಮತ್ತು ಬಸ್ಸುಗಳು ಚಲಿಸುತ್ತಲೇ ಇರುತ್ತವೆ.
ಈ ಕಥಾಸ್ಪರ್ಧೆಗೆ ಬಂದ ಎಲ್ಲ ಕಥೆಗಳನ್ನು ಅವಲೋಕಿಸಿ ಹೇಳುವುದೆಂದರೆ :
ಎಲ್ಲ ಕಥೆಗಾರರು ತಿಂಗಳಿಗೊAದಾದರೂ ಕಥಾಸಂಕಲನವನ್ನು ಓದುವ ಪಣ ತೊಡಬೇಕೆಂಬುದು ಮತ್ತು ತಾವು ಮಾಡುವ ಬರಹದ ಸಾವಿರ ಪಟ್ಟು ಓದನ್ನು ವ್ರತದಂತೆ ಓದಬೇಕೆಂಬುದು.
ಡಾ.ಮಿರ್ಜಾ ಬಷೀರ್
ತುಮಕೂರು
9448104973
ಉತ್ತಮ ಮಾದರಿ: -ಗುರುಪ್ರಸಾದ್ ಕಂಟಲಗೆರೆ
"ಬೆವರ ಹನಿ" ಪತ್ರಿಕೆಯು ನಡೆಸಿರುವ ದೀಪಾವಳಿ ಕಥಾ ಪ್ರಶಸ್ತಿಯು ಹಲವು ಕಾರಣಗಳಿಂದ ವಿಶಿಷ್ಟವಾದುದು.
ಮೊದಲನೆಯದಾಗಿ ಇಲ್ಲಿ ಪ್ರಥಮ, ದ್ವಿತೀಯ, ಎಂಬ ಶ್ರೇಣೀಕರಣವಿಲ್ಲದೆ ಉತ್ತಮ ಕತೆಗಳು ಎಂಬ ಆಯ್ಕೆಯ ಮಾನದಂಡವಿದೆ. ಉತ್ತಮವಾದುದನ್ನೇ ಆರಿಸಲು ಇದೊಂದು ಉತ್ತಮ ಮಾದರಿ ಎಂಬುದರಲ್ಲಿ ಅನುಮಾನವಿಲ್ಲ.
ಕಥೆಗಳು ತಮ್ಮ ಗುಣಮಟ್ಟದಿಂದ ಒಂದಕ್ಕೊAದು ಜಿದ್ದಿಗೆ ಬಿದ್ದಿದ್ದರೆ ಯಾವುದು ಮೊದಲು, ನಂತರ ಯಾವುದು ಎಂಬ ಸವಾಲು ಇದ್ದೇ ಇರುತ್ತಿತ್ತು. ಆದರೆ ಇಲ್ಲಿ ಆ ರೀತಿ ಆಗಿಲ್ಲ ಬೆಲೆಗಟ್ಟುವ ವಿಚಾರದಲ್ಲಿ ಅಂತರ ಇದ್ದರೂ ಪ್ರತಿಯೊಂದು ಕಥೆಯೂ ತಮ್ಮ ವಿಶಿಷ್ಟತೆಗಳಿಂದ ಗಮನ ಸೆಳೆಯುತ್ತವೆ.
"ಕಣ್ಣಿಗಬ್ಬದ ಕನಸು" ಕಥೆ ಸಣ್ಣ ಕಥೆಗಿರುವ ಬಂಧ, ತಂತ್ರಗಾರಿಕೆ, ಭಾಷೆ ಎಲ್ಲದ್ದರಿಂದಲೂ ಸೈ ಎನಿಸಿಕೊಳ್ಳುತ್ತದೆ.
ಕಥಾ ವಸ್ತುವೂ ಭಿನ್ನವಾಗಿದ್ದು ಲಾಕ್ ಡೌನ್ ಸಂದರ್ಭದಲ್ಲಿ ಉಂಟಾದ ಅವಾಂತರಗಳ ಮನೋಕ್ಷೋಭೆಯನ್ನು ಇನ್ನೊಂದು ಮಗ್ಗುಲಿನಿಂದ ಎತ್ತಿಕೊಳ್ಳುತ್ತದೆ. ಇಲ್ಲಿನ ಪ್ರಧಾನ ಪಾತ್ರ ಸರೋಜಿ ಉಗಾದಿ ಹಬ್ಬದ ಸಂದರ್ಭದಲ್ಲಿ ಇದ್ದು, ಕಳೆದ ವರ್ಷ ಉಗಾದಿಯಲ್ಲಿ ತಾನು ಬದುಕ ಅರಸಿ ಮಂಗಳೂರು ಮುಟ್ಟಿರುವಾಗ ಇದ್ದಕ್ಕಿದ್ದಂತೆ ಘೋಷಿಸಿದ ಲಾಕ್ಡೌನ್ ನಿಂದ ವಾಪಾಸ್ ಬರಲು ಪಟ್ಟ ಪರಿಶ್ರಮಗಳೆಲ್ಲವೂ ಫ್ಲಾಷ್ ಬ್ಯಾಕ್ ತಂತ್ರದಲ್ಲಿ ತೆರೆದುಕೊಳ್ಳುತ್ತದೆ. ಹಬ್ಬಕ್ಕೆ ಹೊರಟವರು ಯಾವುದೋ ಶಾಲೆಯಲ್ಲಿ ಕ್ವಾರಂಟೈನ್ ಆಗುವುದು, ಪೋಲೀಸರ ದೌರ್ಜನ್ಯಕ್ಕೆ ತುತ್ತಾಗುವುದು ಇತ್ಯಾದಿಯಿಂದ ಮನಕಲಕುತ್ತದೆ. ಇಲ್ಲಿನ ಭಾಷೆಯೂ ಕೂಡ ಕಥೆಯ ಬಂಧವನ್ನು ಹೆಚ್ಚಿಸಿದೆ. ಕೊನೆಯಲ್ಲಿ ಸಾವು ಬದುಕಿನ ವೈರಾಗ್ಯದ ಇನ್ನೊಂದು ಮಗ್ಗುಲಿಗೆ ಕತೆ ಹೊರಳಿ ಆಧ್ಯಾತ್ಮದ ದಿಕ್ಕನ್ನೂ ಹೊಕ್ಕುತ್ತದೆ. ಈ ಕಥೆ ಇಷ್ಟವಾಗುವುದು ತಾನು ಅಂತರಾಳದಲ್ಲಿ ಹುದುಗಿಸಿಟ್ಟುಕೊಂಡಿರುವ ಮಾನವೀಯತೆಯ ಹಂಬಲದಿಂದಾಗಿ.
ಮತ್ತೊಂದು ಉತ್ತಮ ಕಥೆ ಅನಿಸಿದ್ದು 'ಶೀಲ'. ಇದೊಂದು ಪ್ರೇಮ ಕತೆ. ಬಸ್ ಪ್ರಯಾಣದ ಜೊತೆಗೆ ತನ್ನ ಸ್ನೇಹಿತ ಮಲ್ಲಿಕನ ನವಿರು ನೆನಪುಗಳನ್ನು ಹೊತ್ತು ಕತೆ ಸಾಗುತ್ತದೆ. ಯಾವ ಒತ್ತಡಕ್ಕೂ ಸಿಲುಕದೆ ಸಾವಧಾನದ ನಿರೂಪಣೆಯಿಂದ ಕೂಡಿರುವುದು ಇದರ ವಿಶಿಷ್ಟತೆ. ಗೆಳೆಯ ಕೊಟ್ಟಿದ್ದ ಕೆಂಪು ಕರ್ಚೀಫ್ ಒಂದು ರೂಪಕದಂತೆಯೂ ಕತೆಯುದ್ದಕ್ಕೂ ಕಾಣಿಸಿಕೊಳ್ಳುತ್ತ ಅಂತ್ಯದಲ್ಲಿ ಇದೇ ಪ್ರಮುಖ ಪಾತ್ರದಾರಿಯೇನೊ ಅನ್ನುವಷ್ಟರ ಮಟ್ಟಿಗೆ ಸ್ಥಾಯಿಯಾಗಿ ಉಳಿಯುತ್ತದೆ. "ಶೀಲಾ" ಓದುತ್ತಾ ಸಾಗಿದಂತೆಲ್ಲ ಕಾದಂಬರಿಯೊAದರ ಓದಿನ ಅನುಭವ ನೀಡುವುದರಿಂದ ಸಣ್ಣ ಕತೆಗಿರುವ ಚೌಕಟ್ಟನ್ನು, ಬಂಧವನ್ನು ಬಿಟ್ಟುಕೊಟ್ಟಿದೆ ಎನಿಸುವುದು ಸುಳ್ಳಲ್ಲ.
ಸ್ಪರ್ಧೆಯಲ್ಲಿದ್ದ ಇನ್ನಿತರ ಕತೆಗಳಲ್ಲಿ ಗಮನ ಸೆಳೆದವೆಂದರೆ "ಎಲ್ವಿನ್ ಗ್ರೇಸ್" ವಸ್ತು ಹೊಸದೆನಿಸಿದರೂ ನಾಟಕೀಯ ತಿರುವುಗಳಿಂದ ಅವಾಸ್ತಕವೆನಿಸಿಬಿಡುತ್ತದೆ. ಕೊನೆ ಕೊನೆಗೆ ನಿರೂಪಕನೇ ಸಂದೇಶ ನೀಡಲು ನಿಂತು ಬಿಡುತ್ತಾನೆ. "ಪ್ರತೀಕಾರ" ಕತೆಯೂ ಬೇರೊಂದು ಕೋನದಲ್ಲಿ ಮೇಲಿನದ್ದೆ ಅನುಭವ ನೀಡುತ್ತದೆ. "ಮನಕಲಕುವ ಕತೆ" ಕಲಕುತ್ತದಾದರೂ ನಿರೂಪಣೆಯಿಂದ ಎಳಸು ಅನಿಸಿಬಿಡುತ್ತದೆ.
ಗುರುಪ್ರಸಾದ್ ಕಂಟಲಗೆರೆ
ಚಿಕ್ಕನಾಯಕನಹಳ್ಳಿ
9964521083