ಕುಣಿಗಲ್: ಗೊಟ್ಟೀಕೆರೆ, ಅಂಚೆಪಾಳ್ಯಗಳ ಕುಡಿಯುವ ನೀರು ಕಲುಶಿತ: ಬೀಗ ಮುದ್ರೆ ಒಡೆದ ಕಾರ್ಖಾನೆಗಳ ವಿರುದ್ಧ ಪ್ರತಿಭಟನೆ
ಕುಣಿಗಲ್: ಗೊಟ್ಟೀಕೆರೆ, ಅಂಚೆಪಾಳ್ಯಗಳ ಕುಡಿಯುವ ನೀರು ಕಲುಶಿತ:
ಬೀಗ ಮುದ್ರೆ ಒಡೆದ ಕಾರ್ಖಾನೆಗಳ ವಿರುದ್ಧ ಪ್ರತಿಭಟನೆ
ಕುಣಿಗಲ್ : ಕಾರ್ಖಾನೆಗಳ ತ್ಯಾಜ್ಯವನ್ನ ರೈತರ ಜಮೀನು, ಖಾಲಿ ಬೋರ್‌ವೆಲ್ ಹಾಗೂ ಕೆರೆಕಟ್ಟೆಗೆ ಕದ್ದು ಹರಿಸುತ್ತಿರುವುದರಿಂದ ಕೆರೆಕಟ್ಟೆ ಹಾಗೂ ಕುಡಿಯುವ ನೀರು ಕಲುಶಿತಗೊಂಡಿದೆ ಎಂದು ಗೊಟ್ಟೀಕೆರೆ, ಅಂಚೇಪಾಳ್ಯದ ಸುತ್ತಮುತ್ತಲ ರೈತರು ಪ್ರತಿಭಟಿಸಿದ್ದ ಹಿನ್ನೆಲೆಯಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಉಪವಿಭಾಗಾಧಿಕಾರಿಗಳಾದ ಅಜಯ್ ನೇತೃತ್ವದ ತಂಡ ಗೋವಿಂದ ಸಾಲ್ವೆಂಟ್ ಮತ್ತು ಬೆಂಗಳೂರಿನ ಇನ್ಸಿನೆರೇರ‍್ಸ್ ಕಂಪನಿಗೆ ಬೀಗ ಹಾಕಿದ್ದರು. ಆದರೆ ಹಾಕಿದ ಬೀಗ ಒಡೆದು ಕಂಪನಿ ಕೆಲಸ ಆರಂಭಿಸಿದ್ದಾರೆ ಎಂದು ಆರೋಪಿಸಿ ಕಾರ್ಖಾನೆ ಮುಂಭಾಗ ಬುಧವಾರÀ ನೂರಾರು ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವವಹಿಸಿದ್ದ ಶಿವಣ್ಣ ಮಾತನಾಡಿ ಅಧಿಕಾರಿಗಳು ಕಾರ್ಖಾನೆಗೆ ಬೀಗ ಹಾಕಿದ್ದರೂ ಕಾರ್ಖಾನೆ ಮಾಲೀಕರು ಅಕ್ರಮವಾಗಿ ಬೀಗ ಒಡೆದು ಒಳ ಪ್ರವೇಶಿಸಿ ಕಾರ್ಖಾನೆಯ ಕೆಲಸ ಆರಂಭಿಸಿರುವುದು ಕಾನೂನು ಬಾಹಿರವಾಗಿದೆ. ಹೀಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಸಮ್ಮನಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಾರ್ಖಾನೆಯವರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ, ಜಿಲ್ಲಾ, ತಾಲ್ಲೂಕು ಆಡಳಿತ ಇದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆಂದು ಕಾರ್ಖಾನೆ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹುತ್ರಿದುರ್ಗ ಹೋಬಳಿ ರಾಜಸ್ವ ನೀರೀಕ್ಷಕರಾದ ಮಲ್ಲಿಕಾರ್ಜುನ್ ಮಾತನಾಡಿ ಉಪವಿಭಾಗಾಧಿಕಾರಿಗಳು ಆದೇಶ ನೀಡಿದ್ದಾರೆಂದು ಕಾರ್ಖಾನೆಯ ಮಾಲೀಕರು ಬೀಗ ಒಡೆದಿರುವುದು ಕಾನೂನು ಬಾಹಿರ, ಆದೇಶ ವಿದ್ದರೆ ನಿಯಮಾನುಸಾರ ತಹಸೀಲ್ದಾರ್ ರವರನ್ನ ಭೇಟಿ ಮಾಡಿ ಆದೇಶದ ನಕಲನ್ನು ನೀಡಿ ಬೀಗ ತೆರವುಗೊಳಿಸಿಕೊಂಡಿದ್ದರೆ ನಮ್ಮದು ಅಭ್ಯಂತರ ವಿರಲಿಲ್ಲ, ಆದರೆ ಯಾವ ಅದೇಶವೂ ಇಲ್ಲದೆ ಸುಳ್ಳು ಹೇಳುತ್ತ ಉಪವಿಭಾಗಾಧಿಕಾರಿಗಳ ತಂಡ ಕಾರ್ಖಾನೆಗೆ ಹಾಕಿದ್ದ ಬೀಗವನ್ನ ಹೊಡೆದು ಒಳ ಹೋಗಿರುವುದು ಕಾನೂನು ಬಾಹಿರವಾಗಿದೆÀ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದೇನೆ ಎಂದರು.
ಗೋವಿಂದ್ ಸಾಲ್ವೆಂಟ್ ಮಾಲೀಕರಾದ ವರಲಕ್ಷಿö್ಮÃ ಮಾತನಾಡಿ ನ್ಯಾಯಾಲಯದ ಆದೇಶದಂತೆ ನಾವು ಬೀಗತೆಗೆದು ಕೆಲಸ ಮಾಡುತ್ತಿದ್ದೇವೆ, ನ.16ರ ಒಳಗೆ ಕಾರ್ಖಾನೆಯಲ್ಲಿರುವ ತ್ಯಾಜ್ಯವನ್ನ ವಿಲೇವಾರಿ ಮಾಡಲು ಉಪ ವಿಭಾಗಾಧಿಕಾರಿಗಳು ಸೂಚಿಸಿದ್ದಾರೆ, ಅದರಂತೆ ಕೆಲಸ ನಡೆಯುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಯಲಿಯೂರು ಗ್ರಾ.ಪಂ. ಅಧ್ಯಕ್ಷ ಶೈಲಜಾ ದಯಾನಂದ್, ಸದಸ್ಯರಾದ ರೇವಣ್ಣಗೌಡ, ಮಾಜಿ ತಾ.ಪಂ. ಸದಸ್ಯಶಿವರಾಜ್, ಶಿವಣ್ಣ, ಮಹದೇವ್, ಅಂಚೇಪಾಳ್ಯ ಹಾಗೂ ಅಕ್ಕಪಕ್ಕದ ಗ್ರಾಮದ ನೂರಾರು ರೈತರು ಭಾಗವಹಿಸಿದ್ದರು.