‘ಬಾಕಿ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಎಲ್ಲರೂ ಶ್ರಮಿಸಿ’ - ಹೈಕೋರ್ಟ ನ್ಯಾಯ ಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್

‘ಬಾಕಿ ಪ್ರಕರಣ ಶೀಘ್ರ ಇತ್ರ‍್ಥಕ್ಕೆ ಎಲ್ಲರೂ ಶ್ರಮಿಸಿ’

‘ಬಾಕಿ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಎಲ್ಲರೂ ಶ್ರಮಿಸಿ’  - ಹೈಕೋರ್ಟ ನ್ಯಾಯ ಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್


‘ಬಾಕಿ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಎಲ್ಲರೂ ಶ್ರಮಿಸಿ’

 ಹೈಕೋರ್ಟ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್


      ತುಮಕೂರು: ನ್ಯಾಯಾಲಯಗಳು ಹೆಚ್ಚಿದರೆ ಸಾಲದು, ಬಾಕಿ ಇರುವ ಪ್ರಕರಣಗಳು ಶೀಘ್ರ ಇತ್ಯರ್ಥವಾಗಬೇಕು. ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನ್ಯಾಯಾಂಗಕ್ಕೆ ಸಂಬಂಧಿಸಿದ ಪ್ರತಿಯೊಬ್ಬರೂ ಶ್ರಮಿಸಿದಾಗ ಮಾತ್ರ ತ್ವರಿತ ನ್ಯಾಯದಾನ ಸಾಧ್ಯ  ಎಂದು  ಕರ್ನಾಟಕ ಹೈಕರ‍್ಟ್   ನ್ಯಾಯಮೂರ್ತಿ  ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯ ಮೂರ್ತಿಗಳಾದ ಶ್ರೀನಿವಾಸ ಹರೀಶ್ ಕುಮಾರ್ ಸಲಹೆ ನೀಡಿದರು.


ನ್ಯಾಯಮೂರ‍್ತಿಯವರು, ಶನಿವಾರ ಸಂಜೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಏರ್ಪಾಟಾಗಿದ್ದ ಹಳೆಯ ಕಲ್ಲು ಕಟ್ಟಡದ 2ನೇ ಅಂತಸ್ತಿನ ನಿರ್ಮಾಣದ ಶಂಕುಸ್ಥಾಪನೆ  ಮತ್ತು ನೂತನ ಕಟ್ಟಡದ ಮೇಲ್ಬಾಗ ಅಳವಡಿಸಿರುವ ಸೋಲಾರ್ ರೂಫ್ ಟಾಪ್ ಪಿವಿ ಪ್ರಾಜೆಕ್ಟ್ ಉದ್ಘಾಟಿಸಿ  ಮಾತನಾಡಿ, ನಾನು ಇಲ್ಲಿ 2002 ರಲ್ಲಿ ನ್ಯಾಯಾಧೀಶನಾಗಿ ಬಂದಾಗ  ಕಡಿಮೆ ಪ್ರಕರಣಗಳು ಇದ್ದವು. ಈಗ ಆ ಕಟ್ಟಡ ಹೋಗಿ ಹೊಸ ಕಟ್ಟಡ ಬಂದಿದೆ. ಪ್ರಕರಣಗಳೂ ಹೆಚ್ಚಾಗಿವೆ.  ಹೊಸ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಬಾಕಿ ಪ್ರಕರಣಗಳೂ ಹೆಚ್ಚಿನ ಪ್ರಮಾಣದಲ್ಲಿ  ಉಳಿಯುತ್ತವೆ .  ಆದ ಕಾರಣ  ವಿಳಂಬದ ಅಪವಾದದಿಂದ ಹೊರ ಬರಲು ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.


ಇಂದು ಸಂವಿಧಾನ ದಿನ ಆಚರಿಸುತ್ತಿದ್ದೇವೆ. ತ್ವರಿತ ನ್ಯಾಯ ವಿತರಣೆ ಸಂವಿಧಾನದ ಆಶಯಗಳಲ್ಲಿ ಒಂದು. ಬೇಸರದ ಸಂಗತಿ ಎಂದರೆ ಸಮಾಜದ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಕರ್ತವ್ಯಗಳಿಂದ ವಿಮುಖರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


 ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್ ಮಾತನಾಡಿ  ಕರ‍್ಟ್ಗಳು ಹೆಚ್ಚಾದವೆಂದು ಸಂಭ್ರಮಪಡಬೇಕಿಲ್ಲ, ಕೇಸ್ ಗಳು ಹೆಚ್ಚಾದವು ಎಂದು ಸುಮ್ಮನೆ ಕೂರುವಂತೆಯೂ ಇಲ್ಲ, ಯಾಕಾಗಿ ಕೇಸ್ ಗಳು ಹೆಚ್ಚಾಗುತ್ತಿವೆ ಎಂದು ಯೋಚಿಸಬೇಕು. ಕೇಸ್ ಹೆಚ್ಚಳ ಸಮಾಜ ಕೆಟ್ಟು ಹೋಗುತ್ತಿದೆಯೇ ಎಂಬ ಪ್ರಶ್ನೆ ಮೂಡಬೇಕು. ಈ ವಿಷಯವನ್ನು ಸುಪ್ರೀಂ ಕೋರ್ಟ   ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಅವರು ಹೇಳುತ್ತಿದ್ದರು. ನಾವೂ ಸಹ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.


 ಬಹಳಷ್ಟು ಸಣ್ಣ ವಿಷಯಗಳಿಗಾಗಿ ಬಡವರು ನ್ಯಾಯಾಲಯಕ್ಕೆ ಬರುತ್ತಾರೆ. ಅಂತಹವರ ಬಗ್ಗೆ ಒಂದು ಸಾಮಾಜಿಕ ಹೊಣೆಗಾರಿಕೆ ನಮ್ಮೆಲ್ಲರಲ್ಲಿ ಇರಬೇಕು. ಈ ನಿಟ್ಟಿನಲ್ಲಿ ವಕೀಲರಿಗೆ ತರಬೇತಿ ಆಯೋಜಿಸುವ ಕಡೆಗೆ ವಕೀಲರ ಸಂಘಗಳು ಚಿಂತಿಸುವAತೆ ಅವರು ಸಲಹೆ ನೀಡಿದರು.


ಭಾಗವಹಿಸಿದ್ದ ಪ್ರಮುಖರು


ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಮುರಳೀಧರ ಪೈ, ರಾಜ್ಯ ವಕೀಲರ ಪರಿಷತ್ ಸದಸ್ಯ ಎಂ.ಎನ್. ಮಧುಸೂಧನ್, ಎಸ್. ಬಸವರಾಜು, ಸೋಲಾರ್ ಕ್ಲೀನ್ ಎನರ್ಜಿ ಸಲೂಷನ್ ನಿರ್ದೇಶಕ ಕೆ. ಆರ್. ಹರಿನಾರಾಯಣ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ  ಕೆ.ಬಿ. ಗೀತಾ , ಮೊದಲಾದವರು.


ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ,ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಸಮಾರಂಭ ನಡೆಯಿತು.