‘ರಾಜ್ಯದಲ್ಲಿ ಸಾಮರಸ್ಯ ಕೆಡದಂತೆ  ಕ್ರಮ’ ಗಂಡಸ್ತನದ ಪ್ರಶ್ನೆ ಬರಲ್ಲ:ಬೊಮ್ಮಾಯಿ

‘ರಾಜ್ಯದಲ್ಲಿ ಸಾಮರಸ್ಯ ಕೆಡದಂತೆ  ಕ್ರಮ’ ಗಂಡಸ್ತನದ ಪ್ರಶ್ನೆ ಬರಲ್ಲ:ಬೊಮ್ಮಾಯಿ


‘ರಾಜ್ಯದಲ್ಲಿ ಸಾಮರಸ್ಯ ಕೆಡದಂತೆ  ಕ್ರಮ’
ಗಂಡಸ್ತನದ ಪ್ರಶ್ನೆ ಬರಲ್ಲ:ಬೊಮ್ಮಾಯಿ


ತುಮಕೂರು:  ರಾಜ್ಯದಲ್ಲಿ ಸಾಮರಸ್ಯ ಕೆಡದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲಾಗುವುದು, ಈ ವಿಚಾರದಲ್ಲಿ ಗಂಡಸ್ತನದ ಪ್ರಶ್ನೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ಪಡಿಸಿದರು.

ಹಿಂದೂಪರ ಸಂಘಟನೆಗಳ ಕರ‍್ಯಗಳನ್ನು ಭಾಜಪ ಪಕ್ಷ ತಡೆಯುವುದೆ ಎಂಬ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನೀಡಿರುವ ಹೇಳಿಕೆಗೆ ಬಗ್ಗೆ ಅವರು ನಗರದ ಸಿದ್ಧಗಂಗಾ ಮಠದಲ್ಲಿ ಪ್ರತಿಕ್ರಿಯೆ ನೀಡಿ, ರ‍್ಕಾರ ಸಮವಸ್ತ್ರ ಪ್ರಕರಣ ಸೇರಿದಂತೆ ಎಲ್ಲ ವಿಚಾರಗಳನ್ನು ದಕ್ಷ ರೀತಿಯಲ್ಲಿ ನಿಭಾಯಿಸಿದೆ,ಕಾನೂನು ಸುವ್ಯವಸ್ಥೆ ಕಾಪಾಡುವುದು ಹೇಗೆ ಎಂಬುದು ನನಗೆ ಗೊತ್ತು ಎಂದು ಸಿಎಂ ಮಾರುತ್ತರ ನೀಡಿದರು.


 
ಸಿದ್ಧಗಂಗಾ ಶ್ರೀಗಳ 115ನೇ ಜಯಂತಿ
ನಾಡ ಉತ್ಸವದಂತೆ ನಡೆಯಲಿ: ಸಿಎಂ


ತುಮಕೂರು: ಲಿಂಗೈಕ್ಯ ಡಾ. ಶಿವಕುಮಾರ ಮಹಾ ಸ್ವಾಮಿಯವರ 115ನೇ ಜಯಂತಿಯನ್ನು ಏಪ್ರಿಲ್ ಒಂದರ ಶುಕ್ರವಾರ ಬೆಳಿಗ್ಗೆ ಸಿದ್ಧಗಂಗಾ ಮಠದಲ್ಲಿ ಒಂದು ಉತ್ಸವದ ರೀತಿಯಲ್ಲಿ ಆಚರಿಸಬೇಕು. ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಶ್ರೀಮಠದ ಪರಂಪರೆ, ದಾಸೋಹ, ಶಿಕ್ಷಣ ಪದ್ದತಿಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ, ನಾಡಿಗೆ ಒಳ್ಳೆಯ ಸಂದೇಶವನ್ನು ಸಾರುವ ರ‍್ಥಪರ‍್ಣ ಕರ‍್ಯಕ್ರಮವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು


ಶ್ರೀಗಳ ಜಯಂತಿ ಮತ್ತು ಗುರುವಂದನಾ ಸಮಾರಂಭಕ್ಕೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ಸುಮಾರು 2 ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು ಸಿಎಂ. 


ಸಿದ್ದಗಂಗಾ ಮಠದಲ್ಲಿ  ನಡೆದಿರುವ ಅಂತಿಮ ಹಂತದ ಸಿದ್ದತೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.


ಮುಖ್ಯಮಂತ್ರಿಯವರ ಜೊತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ, ಕಾನೂನು ಹಾಗೂ ಸಣ್ಣ ನೀರಾವರಿ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ, ವಸತಿ ಸಚಿವ ವಿ.ಸೋಮಣ್ಣ, ಶಾಸಕರಾದ ಜ್ಯೋತಿ ಗಣೇಶ್ ಹಾಗೂ ಡಾ.ರಾಜೇಶ್ , ಮಾಜಿ ಸಚಿವ ಸೊಗಡು ಶಿವಣ್ಣ ಇದ್ದರು. ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ನಂತರ ಸರ‍್ಪಡೆಯಾದರು.


ಮುಖ್ಯಮಂತ್ರಿಯವರು  ಪರಿಶೀಲನೆ ಸಂರ‍್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಅವರಿಂದ ಮಾಹಿತಿ ಪಡೆದರು.

ಗಣ್ಯರು ಹಾಗೂ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಗಳಾಗದAತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜೊತೆಗೆ ಭಕ್ತಾದಿಗಳು ಸಾಕಷ್ಟು ಮುಂಚಿತವಾಗಿ ಆಗಮಿಸಿ ಆಸೀನರಾದಲ್ಲಿ ಸಮಾರಂಭವನ್ನು ವ್ಯವಸ್ಥಿತವಾಗಿ ನಡೆಸಲು ಅವಕಾಶವಾಗುತ್ತದೆ ಎಂದರು ಸಿಎಂ.


ಮಾಜಿ ಸಚಿವ ಸೊಗಡು ಶಿವಣ್ಣ, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ, ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಇದ್ದರು.  
ಅದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರೊಂದಿಗೆ ಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಂತರ ಸಿದ್ಧಗಂಗಾ ಮಠಾಧೀಶ ಶ್ರೀ ಸಿದ್ಧಲಿಂಗ ಮಹಾಸ್ವಾಮಿಯವರನ್ನು ಭೇಟಿ ಮಾಡಿ,ಮಾತುಕತೆ ನಡೆಸಿದರು,ನಂತರ ಮಠದಲ್ಲೇ ಊಟ ಮಾಡಿ, ಬೆಂಗಳೂರಿಗೆ ಹೊರಟರು.



ಅಮಿತ್ ಶಾ ಚಲನವಲನ


ಏ. 1 ರಂದು ಬೆಳಿಗ್ಗೆ ಬೆಳಿಗ್ಗೆ 10.45ಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗೆ ಹೆಲಿಪ್ಯಾಡ್‌ನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಬಂದಿಳಿಯುವರು. 10.50ಕ್ಕೆ ಶ್ರೀಮಠಕ್ಕೆ ಆಗಮಿಸಲಿರುವ ಅಮಿತ್ ಶಾ ಅವರು ಮೊದಲಿಗೆ ಶ್ರೀಗಳ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವರು. ನಂತರ 11 ಗಂಟೆಗೆ ಗುರುವಂದನಾ ಸಮಾರಂಭದ ವೇದಿಕೆಗೆ ಆಗಮಿಸಿ ಸುಮಾರು 2 ಗಂಟೆಗಳ ಕಾಲ ಉಪಸ್ಥಿತರಿರುವರು. ಮಧ್ಯಾಹ್ನ ಪ್ರಸಾದ ಸೇವಿಸಿದ ಬಳಿಕ ಅಮಿತ್ ಶಾ ಬೆಂಗಳೂರಿಗೆ ಹಿಂದಿರುಗುವರು.