ಹಿಜಾಬ್ ತೀರ್ಪು ಎಲ್ಲರೂ ಗೌರಿಸಬೇಕು: ವಾಸಣ್ಣ

ಹಿಜಾಬ್ ತೀರ್ಪು ಎಲ್ಲರೂ ಗೌರಿಸಬೇಕು: ವಾಸಣ್ಣ

ಹಿಜಾಬ್ ತೀರ್ಪು ಎಲ್ಲರೂ ಗೌರಿಸಬೇಕು: ವಾಸಣ್ಣ


ಹಿಜಾಬ್ ತೀರ್ಪು ಎಲ್ಲರೂ ಗೌರಿಸಬೇಕು: ವಾಸಣ್ಣ


ಗುಬ್ಬಿ: ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರೂ ಗೌರವಿಸಬೇಕು ಎಂದು ಮಾಜಿ ಸಚಿವ ಹಾಲಿ ಶಾಸಕರಾದ ವಾಸಣ್ಣ ತಿಳಿಸಿದರು. 


ತಾಲ್ಲೂಕಿನ ಕಸಬಾ ಹೋಬಳಿಯ ಚಿಕ್ಕನೆಟ್ಟಗುಂಟೆ ಗೊಲ್ಲರಹಟ್ಟಿಯಲ್ಲಿ 3 ಲಕ್ಷ ವೆಚ್ಚದ ಚಿಕ್ಕನೆಟ್ಟಗುಂಟೆ ಗೊಲ್ಲರಹಟ್ಟಿ ಗ್ರಾಮದಿಂದ ಉಪ್ಪಾರಪಾಳ್ಯ ಗ್ರಾಮಕ್ಕೆ ಡಾಂಬರ್ ರಸ್ತೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕರೋನ ಹಿನ್ನೆಲೆಯಲ್ಲಿ ಕಳೆದ ವರ್ಷದಲ್ಲಿ ಹೆಚ್ಚಿನ ಅನುದಾನ ಬಿಡುಗಡೆಯಾಗಿರಲಿಲ್ಲ. ಈಗ ಹಣ ಬಿಡುಗಡೆಯಾಗುತ್ತಿರುವುದರಿಂದ ಗ್ರಾಮೀಣ ಭಾಗದ ಎಲ್ಲಾ ರಸ್ತೆಗಳನ್ನು ಸಹ ಅಭಿವೃದ್ಧಿ ಮಾಡುತ್ತಿರುವ ಕೆಲಸವನ್ನು ಮಾಡಲಾಗುತ್ತಿದೆ. ಪ್ರತಿ ಗ್ರಾಮದಲ್ಲಿಯೂ ಸಹ ಸಿಸಿ ರಸ್ತೆಗಳನ್ನು ಮಾಡಲಾಗುತ್ತಿದೆ ಎಂದರು.


ಇತ್ತೀಚೆಗೆ ಅಮ್ಮನಘಟ್ಟ ಗ್ರಾಮದಲ್ಲಿ ಅಡಿಕೆ ತೆಂಗು ಬಾಳೆಯನ್ನು ಅರಣ್ಯ ಇಲಾಖೆ ಕಡಿದು ಹಾಕಿದ ವಿಚಾರವನ್ನು ವಿಧಾನಸಭೆಯ ಅಧಿವೇಶನದಲ್ಲಿ ಕೂಡ ಮಾತನಾಡಿದ್ದು 2014 ರಲ್ಲಿ ಅರಣ್ಯ ಇಲಾಖೆಯೇ ಬೌಂಡರಿ ಮಾಡಿದೆ ಎಂಬ ಮಾಹಿತಿ ಇದ್ದು ಅದನ್ನು ಇಲಾಖೆ ಎಲ್ಲ ಮಾನದಂಡದಲ್ಲಿಯೂ ಸಹ ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಣ್ಣ ತಾಯಮ್ಮ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಗೋಪಿನಾಥ್, ಸುಮಿತ್ರಾ, ಗಂಗಾಧರಯ್ಯ, ಮುಖಂಡರುಗಳಾದ ತಮ್ಮಯ್ಯ, ಗುರುಲಿಂಗಯ್ಯ, ಸಿದ್ಧಲಿಂಗಪ್ಪ, ಜುಂಜೇಗೌಡ, ಸಿದ್ಧರಾಜು, ಶಿವಣ್ಣ, ಸಿದ್ಧಲಿಂಗಪ್ಪ,  ರಾಮಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು