ನಮ್ಮನ್ನು ಕೂಗಿ ಕರೆಯುತ್ತಿದ್ದ  ಮೆಸ್ಸುಗಳು ಮತ್ತು ಹೊಟೆಲ್‌ಗಳು - ಪ್ರಬಂಧ -  ಕೃಷ್ಣಮೂರ್ತಿ ಬಿಳಿಗೆರೆ

ನಮ್ಮನ್ನು ಕೂಗಿ ಕರೆಯುತ್ತಿದ್ದ  ಮೆಸ್ಸುಗಳು ಮತ್ತು ಹೊಟೆಲ್‌ಗಳು ಪ್ರಬಂಧ  ಕೃಷ್ಣಮೂರ್ತಿ ಬಿಳಿಗೆರೆ

ನಮ್ಮನ್ನು ಕೂಗಿ ಕರೆಯುತ್ತಿದ್ದ    ಮೆಸ್ಸುಗಳು ಮತ್ತು ಹೊಟೆಲ್‌ಗಳು    - ಪ್ರಬಂಧ    -  ಕೃಷ್ಣಮೂರ್ತಿ ಬಿಳಿಗೆರೆ


ನಮ್ಮನ್ನು ಕೂಗಿ ಕರೆಯುತ್ತಿದ್ದ 


ಮೆಸ್ಸುಗಳು ಮತ್ತು ಹೊಟೆಲ್‌ಗಳು

ಪ್ರಬಂಧ

 ಕೃಷ್ಣಮೂರ್ತಿ ಬಿಳಿಗೆರೆ

 

ಓದಲು ಮನೆಬಿಟ್ಟು ಬಂದಕಾಲದಲ್ಲಿಯಾವಾಗಲು ಊಟ ತಿಂಡಿಗಳದೇ ಚಿಂತೆಯಾಗಿರುತ್ತಿತ್ತು. ಮೆಸ್ಸುಗಳು ಮತ್ತು ಹೊಟೆಲ್ಗಳು ಒಂದಾದ ಮೇಲೆ ಒಂದರಂತೆ ಬೆನ್ನಟ್ಟುತ್ತಿದ್ದವು. ಅದು ಅನೇಕ ಹಸಿವುಗಳನ್ನು ಹೊತ್ತುಓಡಾಡುತ್ತಿದ್ದ ಕಾಲ.  ಹಾಸ್ಟೆಲ್ನಲ್ಲ್ಲಿಎರಡು ಹೊತ್ತು ಊಟ ಮಾಡುತ್ತಿದ್ದುದು ನಿಜ. ಫ್ರೀ ಹಾಸ್ಟೆಲ್ಗಳು ನಮಗೆ ಕೊಟ್ಟ ಆ ಅನ್ನ ಓದಿಗೆ ಜೀವದ್ರವ್ಯ ಒದಗಿಸಿತ್ತು. ಆದರೆಇನ್ನೊಂದು ಹೊತ್ತಿನಊಟ ಇಲ್ಲವಾಗಿತ್ತಲ್ಲಅದು ನಮ್ಮನ್ನುತೀವ್ರವಾಗಿಕಾಡುತ್ತಿತ್ತು, ಎರಡು ಪಟ್ಟಿನಆಹಾರ ಬೇಡುತ್ತಿತ್ತು.  ಮಾತೆತ್ತಿದರೆ ಹೊಟೆಲ್ಲುತಿಂಡಿಕಾಫಿ ಮೆಸ್ಸುಗಳ ಊಟಗಳನ್ನು ಹಿಂಬಾಲಿಸಿಕೊಂಡು ತಿರುಗಲುಇದೇಕಾರಣವಾಗಿತ್ತು.


ನಾವು ವಾಸವಾಗಿದ್ದ ಸಿದ್ಧಗಂಗಾ ಬಡಾವಣೆ ಮತ್ತು ಸೋಮೇಶ್ವರ ಬಡಾವಣೆ ಮಧ್ಯೆಇದ್ದರಾಜಣ್ಣಇಡ್ಲಿ ಮೆಸ್ಸು ಆಗ ತುಂಬಾ ಫೇಮಸ್ಸಾಗಿತ್ತು. ನಲವತ್ತು ವರ್ಷ ಕಳೆದಿರಬಹುದು, ಆದರೇನುರಾಜಣ್ಣನಇಡ್ಲಿ ಮತ್ತು ಮಸಾಲೆ ಒಡೆಗಳ ಸಂಗಮವನ್ನು ನೆನೆದರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಅವರು ಬಡವರ ಬಂಧುಎAದು ಹೆಸರಾಗಿದ್ದರು. ಅಲ್ಲಿಗೆ ನಮ್ಮಂತ ಸದಾ ಹಸಿವನ್ನು ಹೊಟ್ಟೆಗೆಕಟ್ಟಿಕೊಂಡುಓಡಾಡುತ್ತಿದ್ದ ಹುಡುಗರು ಮತ್ತುಕಾರ್ಮಿಕರುಜಮಾಯಿಸುತ್ತಿದ್ದರು. ರಾಜಣ್ಣಇಡ್ಲಿಉತ್ಪಾದಿಸುವುದಕ್ಕೆ ಹುಟ್ಟಿ ಬಂದAತೆ ಲಕ್ಷಾಂತರಇಡ್ಲಿ ಸೃಷ್ಟಿಸಿ ಹಸಿವಿಗೆ ಉತ್ತರವಾಗಿದ್ದರು. ತುಮಕೂರಿನಲ್ಲಿಇಡ್ಲಿಗೆ ಪರ್ಯಾಯ ಹೆಸರಾಗಿದ್ದವರುರಾಜಣ್ಣ. ಇವರು ಮಾಡುತ್ತಿದ್ದಚಪ್ಪಡಿಇಡ್ಲಿಯನ್ನುಒಂದುತಿಂದರೆ ಸಾಕು ಹೊಟ್ಟೆತುಂಬುತ್ತಿತ್ತು. ಅದರಜೊತೆಗೆ ಬೃಹದಾಕಾರದ ಕಡ್ಲೆಬೇಳೆ ಮಸಾಲೆ ವಡೆಯನ್ನೂ ಹಾಕಿಸಿಕೊಂಡರೆ ಅಲ್ಲಿಗೆ ಮುಗಿಯಿತು. ಬೆಳಗ್ಗೆ ಏಳರಿಂದ ಹತ್ತುಗಂಟೆಯವರೆಗೆಅಲ್ಲಿಜನಜಾತ್ರೆ ನೆರೆಯುತ್ತಿತ್ತು. ಆ ದೃಶ್ಯವನ್ನುದೂರದಿಂದ ನೋಡಿದವರಿಗೆಇಡ್ಲಿ ಪರೀಕ್ಷೆಯಲ್ಲಿ ಪುಕ್ಕಟ್ಟೆಯಾಗಿಜನಇಡ್ಲಿತಿನ್ನುತ್ತಿರುವಂತೆ ಭಾಸವಾಗುತ್ತಿತ್ತು. ನಮಗೂ ಒಮ್ಮೊಮ್ಮೆ ಈ ರಾಜಣ್ಣತಮಾಷೆಗಾಗಿ ಹೀಗೆ ಇಡ್ಲಿ ಹಂಚುತ್ತಿರುವAತೆ ಭ್ರಮೆಯಾಗುತ್ತಿತ್ತು. ಮುವತ್ತು ಪೈಸೆಗೊಂದುಇಡ್ಲಿ, ಹದಿನೈದು ಪೈಸೆಗೊಂದು ವಡೆಕೊಟ್ಟುಅದೇನು ಲಾಭ ಮಾಡುತ್ತಿದ್ದರೋ ಏನೋ, ಇಷ್ಟೇ ಅಲ್ಲದೆಎಂದೂ, ಯಾರು ಎಷ್ಟು ಇಡ್ಲಿತಿಂದರು ಎಷ್ಟು ವಡೆತಿಂದರು ಎಂಬ ಲೆಕ್ಕ ತಪಾಸಣೆ ಮಾಡುತ್ತಿರಲಿಲ್ಲ. ತಿಂದವರನ್ನೇ ಎಷ್ಟು ತಿಂದಿರಿಎAದು ಕೇಳಿ ಹಣ ಪಡೆಯುತ್ತಿದ್ದರು. ಅವರುಕೊಟ್ಟಷ್ಟುಇವರು ಪಡೆದಷ್ಟು. ಇಂಥ ಮನುಷ್ಯರಾಜಣ್ಣ. ನಾವು ನಾಲ್ಕು ಜನ ರೂಂಮೇಟ್ಸ್ಗಳು ರಾಜಣ್ಣನಇಡ್ಲಿಗೆ ನೇತ್ಗಡಿದ್ದರಿಂದಲೂ ಅವನ ಚಟ್ನಿಇಡ್ಲಿ ವಡೆಗಳ ಧಾರಾಳತನದ ಕಾರಣದಿಂದಲೂ ಅವನು ಕೊಡುತ್ತಿದ್ದ ಸಾಲ ಸೌಲಭ್ಯ ಸಿಗುತ್ತಿದ್ದುದರಿಂದಲೂ ರಾಜಣ್ಣನಇಡ್ಲಿ ಮೆಸ್ಸಿಗೆ ಖಾಯಂ ಗಿರಾಕಿಗಳಾಗಿದ್ದೆವು. 


ರಾಜಣ್ಣನಇಡ್ಲಿ ಮೆಸ್ಸು, ರಾಜಣ್ಣನಇಡ್ಲಿ ಮೆಸ್ಸುಎಂದುಯಾಕೆಒತ್ತಿ ಹೇಳುತ್ತಿದ್ದೇನೆ ಎಂದರೆ ಹೋಟೆಲ್ಗೂ ಮೆಸ್ಸಿಗೂ ಅಪಾರ ಫರಕ್‌ಉಂಟು. ಹೊಟೆಲ್ನಲೆಕ್ಕಾಚಾರ, ಜಿಪುಣತನ ವ್ಯವಹಾರಿಕ ಬುದ್ದಿ ಮತ್ತು ಕೃತಕತೆಗಳು ಮೆಸ್ಸಿನಲ್ಲಿರುವುದಿಲ್ಲ. ಇದು ಹೆಚ್ಚು ಕಡಿಮೆ ಮನೆಯಂತೆ, ಧಾರಾಳತನ ಮತ್ತು ಪ್ರೀತಿಗಳು ಇಲ್ಲಿ ಲಭ್ಯ. 


ಹೀಗಿರುತ್ತಿರಲಾಗಿ, ತುಮಕೂರಿನಲ್ಲಿಯೇ ಈ ರಾಜಣ್ಣನಇಡ್ಲಿ ಹೋಟಿಲ್ ಲೋಕವಿಖ್ಯಾತವಾಗಲುಎಲ್ಲಿಲ್ಲಿಂದಲೋ ಇಲ್ಲಿಗೆಜನಇಡ್ಲಿ ವಡೆ ಹುಡುಕಿಕೊಂಡು ಬರಲಾಗಿ ಕೊನೆಕೊನೆಗೆ ನಮಗೇ ಇಡ್ಲಿ ವಡೆಗಳು ಸುಲಭವಾಗಿ ಸಿಗದಂತಾದದ್ದು ವಿಪರ್ಯಾಸ. ಆದರೆ ನಾವು ಅಷ್ಟು ಸುಲಭವಾಗಿ ಪಟ್ಟುಬಿಡುತ್ತಿರಲಿಲ್ಲ. ಇನ್ನೂ ಬೆಳಕು ಹರಿಯುವ ಮುನ್ನವೇ ಹೋಗಿ ರಾಜಣ್ಣನಕಣ್ಣಿಗೆ ಬಿದ್ದು, ನಮ್ಮ ಹೊಟ್ಟೆಗೆಇಡ್ಲಿ ಬೀಳುವುದನ್ನು ಖಾತ್ರಿ ಪಡಿಸಿಕೊಂಡು ನಿರಾಳವಾಗುತ್ತಿದ್ದೆವು. ಒಮ್ಮೊಮ್ಮೆ ನುಗ್ಗಿ ಹೋರಾಟ ಮಾಡಿ ಆ ಸಂಪತ್ತು ಸಂಪಾದಿಸುತ್ತಿದ್ದೆವುಎAಬುದು ಬೇರೆ ವಿಷಯ. 


ರಾಜಣ್ಣಗಿಡ್ಡ ಆಳು. ಅವನೆಂದೂ ಖಾಕಿ ಚೆಡ್ಡಿಯ ಹೊರತಾಗಿ ಮತ್ತೊಂದನ್ನುತೊಟ್ಟಿದ್ದನ್ನು ನೋಡಲೇಇಲ್ಲ.  ಬನಿಯನ್ನುಅವರದೊಡ್ಡ ಹೊಟ್ಟೆಯನ್ನು ಪೂರ ಮುಚ್ಚಲು ಸದಾ ಕಾಲವೂ ವಿಫಲವಾಗಿತ್ತು. ರಾಜಣ್ಣಒಬ್ಬನೇಒಬ್ಬ ಸಹಾಯಕನೊಂದಿಗೆತನ್ನಕಾಯಕ ಮಾಡಿಕೊಂಡು ಹೋಗುತ್ತಿದ್ದರು. ಇಡ್ಲಿಚಟ್ನಿ ವಡೆ. ವಡೆಚಟ್ನಿಇಡ್ಲಿ ಎಂಬ ನೂರಾರು ಕೂಗಿನ ಅಳಲಿಗೆ ಪದಾರ್ಥಸಹಿತಉತ್ತರಕೊಡುವುದು ಸುಲಭವೇನಾಗಿರಲಿಲ್ಲ. ಇಡ್ಲಿ ಸರಿಯನ್ನುತಟ್ಟೆಗೆ ಹಾಕುವುದು, ಬೆಂದಇಡ್ಲಿಯನ್ನುತೆಗೆದುದೊಡ್ಡ ಮಂಕರಿಗೆ ಹಾಕುವುದು, ಮಂಕರಿಯಿಂದ ಶ್ರೀಜನರ ತಟ್ಟೆಗೆತಟಾಯಿಸುವುದು, ಚಟ್ನಿರುಬ್ಬುವುದು, ಆ ಚಟ್ನಿಯಸಪ್ಲೆ, ಬಾಂಡ್ಲಿಗೆ ವಡೆ ಬಿಡುವುದು, ಅದರ ಸಪ್ಲೆ, ಇವೆಲ್ಲವನ್ನುರಾಜಣ್ಣಒಬ್ಬರೇ ವೇಗ ಮತ್ತುಉತ್ಸಾಹದಿಂದ  ನಿಭಾಯಿಸುತ್ತಿದ್ದರು. ಈ ಸಪ್ಲೆಗಳ ಸಂದರ್ಭದಲ್ಲಿ ಮೆತ್ತಿಕೊಂಡಿರುತ್ತಿದ್ದ ಸರಿ, ಚಟ್ನಿ, ವಡೆಗಳ ಹಸಿ ಅಂಶಗಳನ್ನು ಚಡ್ಡಿಗೆ ಒರೆಸಿಕೊಂಡು  ವೇಗ ಮತ್ತುಉತ್ಸಾಹದಿಂದಲೇತಿಂಡಿದುಡ್ಡು ಪಡೆಯುತ್ತಿದ್ದರು. ಹೀಗೆ ಚಡ್ಡಿಗೆ ಮೆತ್ತಿಕೊಂಡ ಉಳಿಕೆಯಲ್ಲಿಯೇ ಕನಿಷ್ಟ ಎರಡು ಇಡ್ಲಿಗಳನ್ನು, ಎರಡು ವಡೆಗಳನ್ನು ಮಾಡಬಹುದೆಂದುಜನ ಮಾತಾಡಿಕೊಳ್ಳುತ್ತಿದ್ದರು. ಇದೊಂದೇಕಾರಣಕ್ಕೆ ಕೊಳಕು ಚಡ್ಡಿರಾಜಣ್ಣಎಂದು ಕೆಲವು ಜನರಾಡಿಕೊಳ್ಳುತ್ತಿದ್ದ ಮಾತನ್ನು “ಇದು ಹೊಟ್ಟೆತುಂಬಿದವರು ಮಾತ್ರಆಡುವ ಮಾತುಎಂದುಕಿವಿಯಾರೆ ಕೇಳಿಸಿಕೊಂಡಿದ್ದೇವೆ. ರಾಜಣ್ಣನಇಡ್ಲಿ ಮುಂದೆ ಈ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತೂಇರಲಿಲ್ಲ. ರಾಜಣ್ಣಇಡ್ಲಿದೊಡ್ಡದು, ಅವರು ನಮಗೆ ಕೊಡುತ್ತಿದ್ದ ಸಾಲದ ಪ್ರೀತಿಕೂಡ.


ರಾಜಣ್ಣನಇಡ್ಲಿ ಮೆಸ್ಸಿನಂತೆಯೇ ಜನಪ್ರಿಯವಾಗಿದ್ದಇನ್ನೊಂದುಜಾಗ “ಅಜ್ಜಿ ಮೆಸ್ಸು”. ಅಲ್ಲಿನಒಡತಿಯಾದಅಜ್ಜಿ ಹೆಸರಿಗಷ್ಟೇಅಜ್ಜಿಯಾಗಿತ್ತು. ನೋಡಲುಅಜ್ಜಿಯೇನಾಗಿರಲಿಲ್ಲ. ಘನತೆ ಗೌರವಗಳೊಂದಿಗೆ ಸ್ವಾವಲಂಬಿ ಜೀವನ ನಡೆಸುತ್ತಿತ್ತು. ಅಜ್ಜಿ ಮೆಸ್ಸಿಗೆ ಊಟಕ್ಕೆ ಹೋಗುವುದುಗೌರವದ ವಿಷಯವಾಗಿತ್ತು. ಒಂದೂವರೆರೂಪಾಯಿಗೆಎಷ್ಟಾದರುತಿನ್ನಬಹುದಿತ್ತು. ಸರ್ಕಾರಿ ನೌಕರರು ಮಧ್ಯಾಹ್ನನಊಟಕ್ಕೆಇಲ್ಲಿಗೆ ನುಗ್ಗಿ ಬರುತ್ತಿದ್ದರು. ಅವರದು ತಿಂಗಳ ಲೆಕ್ಕ. ಲೆಕ್ಕದ ಪುಸ್ತಕದಲ್ಲಿಗುರ್ತುಹಾಕುವುದಷ್ಟೇಅವರ ಕೆಲಸ.  ರಾಜರಂತೆ ಬಂದುಉAಡು ಹೋಗುತ್ತಿದ್ದರು. ನಾವಾದರೋ ಆ ಜೇಬು ಈ ಜೇಬು ಹುಡುಕಿತಡಕಿ ಪುಡಿಗಾಸುಉಂಡೆ ಮಾಡಿ ಹಣ ಪಾವತಿಸಿ ಬರುತ್ತಿದ್ದೆವು.  ನಾವು ಅವರುಉಂಡು ಸುಮ್ಮನೆ ಕೈಒರೆಸಿಕೊಂಡು ಹೋಗುತ್ತಿದ್ದ  ವೈಭವವನ್ನು  ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದೆವು. ಅಜ್ಜಿಯಾರಿಗೆ ಸಾಲ ಕೊಡುತ್ತಿರಲಿಲ್ಲ.   


ಈ ಅಜ್ಜಿಗೆಒಬ್ಬಗಂಡನಿದ್ದ. ಸದಾಕುಡಿಯುತ್ತಿದ್ದಈತನನ್ನು ಸಂಭಾಳಿಸುವುದೇ ದೊಡ್ಡಕಷ್ಟವಾಗಿತ್ತು. ಆದರೆಇದನ್ನು ಲೆಕ್ಕಿಸದೆಅಜ್ಜಿ ಮೆಸ್ಸನ್ನು ಸಮರ್ಥವಾಗಿ ನಡೆಸುತ್ತಿತ್ತು. ಇಲ್ಲಿ ಮಾಡುತ್ತಿದ್ದ ದಿನಕ್ಕೊಂದು ಬಗೆಯ ಉಂಡೆಗಾಳಿನ ಸಾರುಜನರಿಗೆ ಬೇಕಾಗಿದ್ದ ವಿಟಮಿನ್ನು ಪ್ರೋಟೀನುಗಳನ್ನು ಕೊರೆಇಲ್ಲದೆಒದಗಿಸುತ್ತಿದ್ದವು. ಯಾವಾಗಲಾದರೂಒಮ್ಮೆ ನಾವು ಫಸ್ಟ್ಷೋ ಸಿನೆಮಾಗೆ ಹೋದ ದಿನ ತಡವಾಗಿ ಮೆಸ್ಸಿಗೆ ಹೋದರೆಅಜ್ಜಿ ನಮ್ಮನ್ನು ಬೈದು ಊಟ ಹಾಕುತ್ತಿದ್ದರು. ಆಗ ಆ ಅಜ್ಜಿಯಗಂಡಅನ್ನಕ್ಕೆ ವಿಸ್ಕಿ ಸುರಿದುಕೊಂಡುಉಣ್ಣುತ್ತಿದ್ದದೃಶ್ಯವನ್ನು ನೋಡಿ ದಕ್ಕಿಸಿಕೊಳ್ಳಬೇಕಾಗಿತ್ತು. ನಾವು ತುಮಕೂರು ಬಿಡುವಷ್ಟ್ಟರಲ್ಲೇತೀರಿಹೋದರು. 


ಇನ್ನು ನಮ್ಮ ನಾಲಗೆಯ ಚಪಲಕ್ಕೆ ಪರಿಹಾರಒದಗಿಸುತ್ತಿದ್ದುದು, ಸಿದ್ದರಾಮಣ್ಣ ಹಾಸ್ಟೆಲ್ಗೆಹೊಂದಿಕೊAಡಿದ್ದ ಸಿದ್ದರಾಮಣ್ಣ ಟ್ರಸ್ಟ್ ಬಿಲ್ಡಿಂಗಿನಲ್ಲೇಇದ್ದ ಈಗಲೂ ಇರುವಉಡ್‌ಲ್ಯಾಂಡ್ ಹೋಟೆಲ್. ಹಾಸ್ಟೆಲ್ನ ಮುದ್ದೆಗಳನ್ನು ಬೆಳಬೆಳಗ್ಗೆಯೇ ನುಂಗುವುದುಕಷ್ಟ್ಟವಾದಾಗ, ಒಮ್ಮೊಮ್ಮೆ ನಮ್ಮನಾಲ್ಕು ಜನರಟೀಮ್ ಈ ಹೋಟೆಲ್ ಎಂಬ ಕನಸಿಗೆ ವಾಸ್ತವವಾಗಿ ಹೋಗಿ ಕೂರುತ್ತಿದ್ದೆವುಅದೂ ಸ್ಪೆಷಲ್‌ರೂಮಿಗೆ. ನಮಗೆ ಅದಕ್ಕೆ ಪ್ರತ್ಯೇಕಚಾರ್ಜ್ಇರಲಿಲ್ಲ. ಇಲ್ಲಿ ಮಾಡುತ್ತಿದ್ದ ಸೆಟ್‌ದೋಸೆ ಬಲು ಪ್ರಸಿದ್ಧವಾಗಿತ್ತು. ಜನ ಮಸಾಲೆ ದೋಸೆಗಿಂತ ಸೆಟ್‌ದೋಸೆಯನ್ನುಖಾಯಷ್ ಪಟ್ಟುತಿನ್ನುತ್ತಿದ್ದರು. ಅದಕ್ಕೆಕಾರಣಅದಕ್ಕೆ ಹೊಂದಿಕೊಳ್ಳುತ್ತಿದ್ದ ತೆಂಗಿನ ಕಾಯಿ ಚಟ್ನಿಯ ಧಾರಳ ಲಭ್ಯತೆ ಮತ್ತುದೋಸೆಯ ಮಧ್ಯೆ ಹಾಕುತ್ತಿದ್ದ ನಿಜ ಬೆಣ್ಣೆ , ಆ ಬೆಣ್ಣೆಕರಗಿ ತೂತುಗಳ ಮೂಲಕ ಸೆಟ್ಟಿನ ಮೂರು ದೋಸೆಗಳನ್ನು ತಲುಪಿ ಸಮಸಂತೋಷ ನೀಡುತ್ತಿದ್ದುದು ವಿಶೇಷ. ತುಮಕೂರಿನ ಸದ್ಗೃಹಸ್ಥರು ಈ ಸೆಟ್ದೋಸೆತಿನ್ನಲು ಮುಗಿಬೀಳುತ್ತಿದ್ದರು. 

ಕ್ರೀಡಾ ಮನೋಭಾವದಿಂದ ಖಾಲಿಯಾದ ಬೌಲ್‌ಗಳು ತುಂಬಿ ತುಳುಕುವಂತೆ ಮಾಡುತ್ತಿದ್ದರು. ಇದೂ ಸಾಲದೆಂಬಂತೆ ಪಕ್ಕದ ಟೇಬಲ್ಲಿನ ಚಟ್ನಿ ಬೌಲ್ಗಳನ್ನು ವಶಪಡಿಸಿಕೊಂಡುದುಂಟು.  ಸಾಮಾನ್ಯವಾಗಿ ಈ ಬಗೆಯ ಧಾರಾಳತನವನ್ನು ಮೆಸ್ಸುಗಳಲ್ಲಿ ಮಾತ್ರ ನಿರೀಕ್ಷಿಸುತ್ತಿದ್ದ ನಾವು ಇಲ್ಲಿಯೂ ಅಂತಹುದೇ ಆನಂದ ಅನುಭವಿಸುತ್ತಿದ್ದೆವು. ಸಪ್ಲೈಯರುಗಳ ಈ ಬಗೆಯ ಧಾರಾಳತನಕ್ಕೆ ಓನರ್ ಮೇಲಿನ ಅನೇಕ ಬಗೆಯ ಸಿಟ್ಟುಗಳು ಕಾರಣವೆನಿಸುತ್ತಿದೆ.  ಆ ನಂತರದ ದಿನಗಳಲ್ಲಿ ಹೀಗೆ ತುಂಬಿದ ಚಟ್ನಿ ಬೌಲ್‌ಗಳನ್ನು ಟೇಬಲ್ಲಿನ ಮೇಲೆ ರಾಜಾರೋಷವಾಗಿ ಇಡುವುದನ್ನು ನಿಲ್ಲಿಸಿದರು ಎಂಬುದು ಅಷ್ಟೇನು ಹಿತಕರ ಸುದ್ದಿಯಾಗಿರಲಿಲ್ಲ.   


ತುಮಕೂರಿನ ಎಂ ಜಿ ರಸ್ತೆಯ ಐದನೇ ಕ್ರಾಸಿನಲ್ಲೊಂದು ಹೋಟೆಲ್ ಅಲ್ಲದ ಹೋಟೆಲ್ ಇತ್ತು. ಅದರ ಹೆಸರು ಸುಧಾ ಟೀ ಹೌಸ್. ನಮ್ಮ ಬಳಿ ಅತಿ ಕಡಿಮೆ ದುಡ್ಡಿದ್ದಾಗ  ಇಲ್ಲಿಗೆ ಹೋಗುತ್ತಿದ್ದೆವು. ಕಾಲೇಜಿನ ಹುಡುಗರಿಗೆ ಫೇಸ್ ಪೌಡರ್ ಹಾಕಿಕೊಂಡು ಎಂ. ಜಿ ರಸ್ತೆಗೆ  ವಾಕಿಂಗ್ ಹೋಗುವುದು ಒಂದು ಥ್ರಿಲ್ಲಿಂಗ್ ಅನುಭವವಾಗಿತ್ತು. ಇಲ್ಲಿನ ವಾಕಿಂಗ್ ಅನ್ನು ಸೀಯಿಂಗ್ ವಾಕ್ ಎಂದರೆ ಹೆಚ್ಚು ಸಮಂಜಸವಾದೀತು. ನಾವೆಲ್ಲ ಹುಡುಗಿಯರನ್ನು ತೀರಾ ಹತ್ತಿರದಿಂದ ನೋಡಿದ್ದು ಇಲ್ಲಿಯೇ.  ಸಂಜೆ ಈ ರಸ್ತೆ ತುಂಬಿ ತುಳುಕುತ್ತಿತ್ತು. 


ನಾವೂ ಇಂಥಾ ರಸ್ತೆಯಲ್ಲಿದ್ದ ಸುಧಾ ಟೀ ಹೌಸ್‌ಗೆ ಹೋಗಿ ಐವತ್ತು ಪೈಸೆಗೆ ಬೇಲ್ ಪುರಿ ಅಥವಾ ಮಸಾಲ್ ಪುರಿ ತಿಂದು ಅರ್ಧ ಟೀ ಕುಡಿಯುವ ಅಭ್ಯಾಸ ಇಟ್ಟುಕೊಂಡದ್ದುಂಟು.  ಎರಡರಲ್ಲಿ ನಾಲ್ಕು ಟೀ ಕೊಡಿ ಎಂದರೆ ಅದರ ಮಾಲಿಕ ಇಪ್ಪತ್ತನಾಲ್ಕು ಟೀ ಎಂದೂ, ನಾವು ಮೂರು ಜನರಿದ್ದಾಗ ಎರಡರಲ್ಲಿ ಮೂರು ಟೀ ಕೊಡಿ ಎಂದರೆ ಇಪ್ಪತ್ತಮೂರು ಟೀ ಎಂದು ಜೋರಾಗಿ ಕೂಗುತ್ತಿದ್ದುದು ಹೊಸಬರನ್ನು ತಬ್ಬಿಬ್ಬಾಗುವಂತೆ ಮಾಡುತ್ತಿತ್ತು. ಹಳೇ ಗಿರಾಕಿಗಳಿಗೆ ಇದು ಪುಕ್ಕಟ್ಟೆ ಮನರಂಜನೆ ಒದಗಿಸುತ್ತಿತ್ತು. ಇಲ್ಲಿ ಟೀ ಒಂದು ವಿಶೇಷ  ಭಕ್ಕ್ಷ್ಯದಂತೆ ತಯಾರಾಗುತ್ತಿತ್ತು. ಒಂದು ದೊಡ್ಡ ಹಿಡಿ ಪಾತ್ರೆಯನ್ನು ಎತ್ತಿ ಆಕಾಶದಿಂದ ಎಂಬಂತೆ ಸಣ್ಣ ಗಾಜಿನ ಕಪ್ಪಿಗೆ ಪಾತಾಳಕ್ಕೆಂಬಂತೆ ಸುರಿಯುತ್ತಿದ್ದ ರೀತಿಗೆ ಬೆರಗಾಗದವರು ಕಡಿಮೆ. ಆ ಅಸಲಿ ಹಾಲಿನ ಅಪರೂಪದ ಘಮಲಿನ ಟೀ ಪುಡಿಯಿಂದಾದ  ಶುಂಠಿ ಮಿಶ್ರಿತ ಟೀ ರುಚಿಯನ್ನು ಮರೆಯಲು ಹೇಗೆ ಸಾಧ್ಯ. ಸುಧಾ ಟೀ ಹೌಸ್ ಜನರಿಲ್ಲದೆ ನೊಣ ಹೊಡೆದದ್ದನ್ನು ನಾವು ನೋಡಿಯೇ ಇಲ್ಲ. ಆ ಸುತ್ತಿನ ಕೆಲವು ಜನ ಅದರ ಖಾಯಂ ಗಿರಾಕಿಗಳು ಯಾವಾಗಲೂ ಟೀ ಕುಡಿಯುತ್ತಿರುವಂತೆ ನಮಗೆ ತೋರುತ್ತಿತ್ತು. ನಾವು ಯಾವಾಗ ಹೋದರು ಅವರು ಅಲ್ಲಿ ಟೀ ಕುಡಿಯುತ್ತಾ ಹರಟೆ ಹೊಡೆಯುತ್ತಾ ಕುಳಿತಿರುತ್ತಿದ್ದರು. ಇವರೆ ಅಲ್ಲಿನ ವಾತಾವರಣವನ್ನು ಕಳೆಗಟ್ಟಿಸುತ್ತಿದ್ದುದು. ಇವರಂತೆ ನಾವಾಗುವುದು ಎಂದು  ಅಂದುಕೊಳ್ಳುತ್ತಿದ್ದೆವು.


ನಾವು ಪ್ರತಿ ವಾರದ ಭೇಟಿಗಾಗಿ ಕಾಯುತ್ತಿದ್ದ ಇನ್ನೊಂದು ಜಾಗ ಪ್ರಸಾದ್ ಲಂಚ್ ಹೋಮ್.  ಇದು ಎಂ ಜಿ ರಸ್ತೆಯ ಮೂರನೇ ಕ್ರಾಸಿನಲ್ಲಿತ್ತು. ಕಾಲೇಜಿನ ಎನ್ ಎಸ್ ಎಸ್ ವಿಭಾಗದಿಂದ ಶ್ರಮದಾನದ ನಂತರ ಕೊಡುತ್ತಿದ್ದ ಮುವತ್ತು ಪೈಸೆಯ ಕೂಪನ್ ನಮ್ಮನ್ನು ಇಲ್ಲಿಗೆ ಬರುವ ಭಾಗ್ಯ ಕರುಣಿಸುತ್ತಿತ್ತು. ಆ ಹಗುರದ, ಹಳದಿ ಬಣ್ಣದ ತೆಳ್ಳನೆಯ ಪುಟ್ಟ ಕೂಪನ್ನನ್ನು ಜತನದಿಂದ ಕಾಪಾಡಿಕೊಂಡು ಘನಗಂಭೀರವಾಗಿ ಗೆಳೆಯರೊಂದಿಗೆ ಸದರಿ ಹೊಟೆಲ್ ಪ್ರವೇಶಿಸುತ್ತಿದ್ದೆವು. ಯಾಕೋ ಏನೋ ಎನ್ ಎಸ್ ಎಸ್ ಕೂಪನ್ ಹೊತ್ತು ಬರುವ ವಿದ್ಯಾರ್ಥಿಗಳ ಬಗೆಗೆ ಓನರ್‌ಗೆ ಸಿಟ್ಟು ಮಿಶ್ರಿತ ಉದಾಸೀನ ಭಾವವಿರುತ್ತಿತ್ತು. ನಾವು ಎಂದರೆ ಅವರಿಗೆ ಅಷ್ಟಕ್ಕಷ್ಟೆ. ನಮ್ಮ ಮುವತ್ತು ಪೈಸೆಗೆ ಬರುತ್ತಿದ್ದ ಎರಡು ಖಾಲಿ ದೋಸೆ ತಿನ್ನಲು ಅರವತ್ತು ಪೈಸೆ ಬೆಲೆಬಾಳುವ ಚಟ್ನಿಯನ್ನು ಯಾವ ಮುಜುಗರವೂ ಇಲ್ಲದೆ ಹಾಕಿಸಿಕೊಂಡು ತಿನ್ನುತ್ತಿದ್ದುದು ಅವರ ಸಿಟ್ಟು ಮಿಶ್ರಿತ ಉದಾಸೀನಕ್ಕೆ ಕಾರಣವಾಗಿತ್ತೆನಿಸುತ್ತದೆ. ನಾವೇನು ಅವರ ಹಾವಭಾವಗಳಿಗೆ ಸೊಪ್ಪು ಹಾಕುವವರೇನು ಆಗಿರಲಿಲ್ಲ. ಆಗ  ವಿದ್ಯಾರ್ಥಿ ಸಮುದಾಯದ  ಶಕ್ತಿ ತುಂಬಾ ಬಲವಾಗಿತ್ತು. ಹೊಟೆಲ್ ತಿಂಡಿಗಳ ಬೆಲೆಯನ್ನು ತಮಗೆ ಅನುಕೂಲಕರವಾಗಿಟ್ಟುಕ್ಕೊಳ್ಳುವಷ್ಟು. ಈ ಮಧ್ಯೆ ಹೊಟೆಲ್ ಓನರ್ ನಮ್ಮ ಈ ಬಗೆಯ ಚಟ್ನಿ ಯಜ್ಞಕ್ಕೆ ಪರಿಹಾರಾರ್ಥವಾಗಿ ಚಟ್ನಿಯನ್ನೇ ರಣಖಾರವಾಗಿಸುವ ತಂತ್ರ ಬಳಸಿದರು. ಅವರ ಈ ತಂತ್ರವನ್ನು ನಿಷ್ಕ್ರಿಯಗೊಳಿಸಿ ಅಷ್ಟೇ ಚಟ್ನಿ ತಿನ್ನತೊಡಗಿದ ಮೇಲೆ ಅವರು ಕೈ ಚೆಲ್ಲಬೇಕಾಯಿತು.


ಎಂ ಜಿ ರಸ್ತೆಯಲ್ಲೆ ಇದ್ದ ಈಗಲೂ ಅಲ್ಲೇ ಇರುವ ಅದೇ ವೈಭವ ಉಳಿಸಿಕೊಂಡಿರುವು ನಮ್ಮ ಕನಸಿನ ಹೊಟೆಲ್ ದ್ವಾರಕ. ಅಲ್ಲಿಗೆ ಸುಲಭವಾಗಿ ಹೋಗುವಂತಿರಲಿಲ್ಲ. ಅದು ಕಾಲದ ದುಬಾರಿ ದರದ  ದೊಡ್ಡ ಹೋಟೆಲ್. ದ್ವಾರಕ ಹೊಕ್ಕರೆ ಅಲ್ಲಿನ ಮಸಾಲೆ ದೋಸೆ, ವಡೆ, ಪೂರಿ ಇತ್ಯಾದಿಗಳ ಮಿಶ್ರಣದ ಸೊಗಸಾದ ಸಗಟು ಘಮಲು ಮೂಗಿಗೆ ಹಿತಾನುಭವ ನೀಡುತ್ತಿತ್ತು. ನಾವು ಎಷ್ಟೋ ದಿನ ಸುಮ್ಮನೆ ಹೋಗಿ ಸ್ವಲ್ಪ ಹೊತ್ತು ಕೂತು ಘಮಲು ಕುಡಿದು ಏನೂ ತಿನ್ನದೆ ನೀರು ಕುಡಿಯಲು ಬಂದವರಂತೆ ನಟಿಸಿ ಕಾಲು ಕಿತ್ತ ಉದಾಹರಣೆಗಳಿವೆ. ಆದರೂ ಬಿಡದೆ, ನಮ್ನಲ್ಲಿ ಯಾರಿಗಾದರೂ ಸ್ಕಾಲರ್ ಶಿಪ್ ಬಂದಾಗಲೋ, ಮನೆಯಲ್ಲಿ ಹೇಳಿದ ಸುಳ್ಳಿನ ಪರಿಣಾಮವಾಗಿ ಒದಗಿ ಬಂದ ಎಕ್ಸ್ಟ್ರಾ ದುಡ್ಡು ಸಿಕ್ಕಿದಾಗಲೋ ಇಲ್ಲಿಗೆ ಭೇಟಿ ಕೊಟ್ಟು ಮಸಾಲೆ ಅಥವಾ ರವೆ ದೋಸೆ ತಿಂದು ನಮ್ಮ ದ್ವಾರಕಾ ಘನತೆ ಹೆಚ್ಚಿಸಿಕೊಳ್ಳುತ್ತಿದ್ದೆವು. ಅದೊಂದು ಅನಿರ್ವಚನೀಯ ಅನುಭವ.


ನಮ್ಮ ರೂಮಿಗೆ ಕಲ್ಲೆಸೆಯುವಷ್ಟು ದೂರದಲ್ಲಿ ಮರಾಠ ಹಾಸ್ಟೆಲ್ ಮೂಲೆಯಲ್ಲಿ ರಾಜಣ್ಣ ಎಂಬ ಇನ್ನೊಬ್ಬ ಅತ್ಯಂತ ಸಣಕಲ ವ್ಯಕ್ತಿಯ ಪೆಟ್ಟಿಗೆ ಅಂಗಡಿಯಿತ್ತು. ಅದು ನಮ್ಮ ಓದಿಗೆ ಇಂಬಾಗಿ ನಿಂತಿದ್ದ ಪವಿತ್ರ ಅಷ್ಟೇ ಅಲ್ಲ ಪ್ರೇರಣಾ ಕೇಂದ್ರವಾಗಿತ್ತು. ಎರಡು ಮೂರು ಗಂಟೆಗಳ ನಿರಂತರ ಅಧ್ಯಯನದಿಂದಾದ ಆಯಾಸ ಶಮನಾರ್ಥವಾಗಿ ಗೆಳೆಯರು ಈ ಅಂಗಡಿಗೆ ಚೋಟಾ ಟೀ ಕುಡಿಯಲು ಹೋಗುತ್ತಿದ್ದೆವು. ಅವನು ಶೀಕಲನಾಗಿದ್ದರೇನು, ಅವನು ಮಾಡುತ್ತಿದ್ದ ಚೋಟ ಟೀ ಬಲು ಬಲವಾಗಿರುತ್ತಿತ್ತು. ರಾಜಣ್ಣ  ಗಾಜಿನ ಕಪ್ಪಿನಲ್ಲಿ ಕೊಡುತ್ತಿದ್ದ ಸದರಿ ಟೀಯನ್ನು ಚಪ್ಪರಿಸಿಕೊಂಡು ಕುಡಿಯುತ್ತಿದ್ದೆವು. ನಾವು ಮೂರು ಜನ ಕೇವಲ ಟೀ ಕುಡಿಯುತ್ತಿದ್ದರೆ ನಾಲ್ಕನೇ ಗೆಳೆಯ ಟೀ ಜೊತೆಗೆ ಒಂದು ಬರ್ಕಲಿ ಫಿಲ್ಟರ್ ಸಿಗರೇಟು ಹಚ್ಚುತ್ತಿದ್ದ. ಅವನಿಗೆ ಅವನ ಸರ್ಕಾರಿ ಕೆಲಸದಲ್ಲಿದ್ದ ಅಣ್ಣನಿಂದ ಹೆಚ್ಚು ಅನ್ನುವಷ್ಟೇ ಹಣ ಸಂದಾಯವಾಗುತ್ತಿತ್ತು. ಈ ಸಿಗರೇಟಿಗೆ  ಆ ಹಣ ಪ್ರೇರಣೆಯಾಗಿತ್ತು. ನಾವು ಮಿಲಿಟರಿ ಲೆಕ್ಕದಲ್ಲಿ ನಮ್ಮ ನಮ್ಮ ಚೋಟಾ ಟೀ ಹಣ ತೆತ್ತರೆ ಆ ಗೆಳೆಯ “ರಾಜಣ್ಣ ಲೆಕ್ಕ ಬರ್ಕಾ” ಎಂದು ಗತ್ತಿನಿಂದ ಹೇಳಿ ಅವನನ್ನು ನೋಡದೆ ನಮ್ಮ ಜೊತೆ ರೂಮಿನತ್ತ ಕಾಲಾಕುತ್ತಿದ್ದ. ರಾಜಣ್ಣ ಸಿಗರೇಟಿನ ಪ್ಯಾಕ್ ಹರಿದು ಮಾಡಿದ ಲೆಕ್ಕದ ಕಟ್ಟಿನ ರಬ್ಬರ್ ಬ್ಯಾಂಡ್ ತೆಗೆದು, ಇವನ ಪುಟದಲ್ಲಿ ಲೆಕ್ಕ ದಾಖಲಿಸಿ ಅದೇ ರಬ್ಬರ್ ಬ್ಯಾಂಡ್‌ನಿಂದ ಭದ್ರಪಡಿಸಿ ಕಣ್ಣು ಕಣ್ಣು ಬಿಡುತ್ತಿದ್ದ ದೃಶ್ಯವನ್ನು ಅನೇಕ ಬಾರಿ ನೋಡಿದ್ದೇನೆ. ಸಹಜವಾಗಿಯೇ  ಈ ಲೆಕ್ಕಕ್ಕೆ ಸಂಬಂಧಿಸಿದಂತೆ ಸಿಗರೇಟ್ ಗೆಳೆಯ ಮತ್ತು ರಾಜಣ್ಣರ ನಡುವೆ ಸಂಘರ್ಷ ಏರ್ಪಡುತ್ತಿತ್ತು. ಅದು ಕೊಟ್ಟಿದ್ದೇನೆ ಎಂದು ಸಿಗರೇಟ್ ಗೆಳೆಯ, ಅದು ಕೊಟ್ಟಿಲ್ಲ ಎಂದು ರಾಜಣ್ಣ ಹೀಗೆ... ರಾಜಣ್ಣ ನೋವಿನಿಂದಲೇ ಒಮ್ಮೊಮ್ಮೆ ನಮಗೆ ನ್ಯಾಯ ಒಪ್ಪಿಸುತ್ತಿದ್ದ. ಆದರೆ ಅನಿವಾರ್ಯವಾಗಿ ನಾವು ಗೆಳೆಯನ ಪರವಾಗಿಯೇ ವಾದಿಸುತ್ತಿದ್ದುದರಿಂದ ನಮಗೆ ಕಷ್ಟ ಕಾಲದಲ್ಲಿ ರಾಜಣ್ಣ ಕೊಡುತ್ತಿದ್ದ ಪುಕ್ಕಟೆ ಟೀಯನ್ನು ಕಳೆದುಕೊಳ್ಳಬೇಕಾಯಿತು.  ಗೆಳೆಯನಿಗೆ ಸಾಲ ಕೊಡುವುದನ್ನೂ ಬಂದ್ ಮಾಡಿದ. ಅವನ ಅಂಗಡಿಯ ಮುಂದೆಯೇ ಇನ್ನೊಂದು ಪೆಟ್ಟಿಗೆ ಅಂಗಡಿಗೆ ಹೋಗುವಾಗ ಸಿಗರೇಟು ಗೆಳೆಯ ರಾಜಣ್ಣನನ್ನು ಬಾಯಿಗೆ ಬಂದಂತೆ ಬೈಯ್ಯುವುದನ್ನು ಅವನ ಜೊತೆಗೆ ನಾವೂ ಕೇಳಿಸಿಕೊಳ್ಳಬೇಕಾಗಿತ್ತು. ನಮ್ಮ ವಯಸ್ಸಿಗಿಂತಾ ಸ್ವಲ್ಪ ಹೆಚ್ಚು ವಯಸ್ಸಾಗಿದ್ದ  ರಾಜಣ್ಣ ಈಗ ಎಲ್ಲಿರಬಹುದು.  ಅವನು ಸಿಕ್ಕಿದರೆ ಸಿಗರೇಟು ಗೆಳೆಯ ಅವನ ಎಲ್ಲಾ ಸಾಲವನ್ನು ನ್ಯಾಯವಾಗಿ ತೀರಿಸಲು ಸಿದ್ಧನಿದ್ದಾನೆ.... 


****