"ಇಂದು ಕುಣಿಯುತ್ತಿರುವ ಮತಾಂಧತೆ- ಒಂದೇ ತಾಯಿಯ ಸಂತಾನ ..,”   -ದೇವನೂರ ಮಹಾದೇವ  

"ಇಂದು ಕುಣಿಯುತ್ತಿರುವ ಮತಾಂಧತೆ-  ಒಂದೇ ತಾಯಿಯ ಸಂತಾನ ..,”     -ದೇವನೂರ ಮಹಾದೇವ   

"ಇಂದು ಕುಣಿಯುತ್ತಿರುವ ಮತಾಂಧತೆ-

ಒಂದೇ ತಾಯಿಯ ಸಂತಾನ ..,”

 

-ದೇವನೂರ ಮಹಾದೇವ

 

"ಇಂದು ಕುಣಿಯುತ್ತಿರುವ ಮತಾಂಧತೆ- ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಯಾವುದೇ ಜಾತಿ ಜನಾಂಗದ್ದೇ ಇರಲಿ- ಇವುಗಳೆಲ್ಲ ಒಂದೇ ತಾಯಿಯ ಸಂತಾನ. ಇವುಗಳ ಬಹಿರಂಗ ಬೇರೆ ಬೇರೆಯಾಗಿ ಕಾಣಬಹುದು. ಆದರೆ ಇವುಗಳ ಅಂತರಂಗ ಒಂದೇ. ಯಾರದೇ ಮತಾಂಧತೆಯು ತಿಂದು ಹಾಕುವುದು ಮಾನವತೆಯನ್ನು ಮಾತ್ರ. ಹಿಡಿಯಷ್ಟು ಇರುವ ಮತಾಂಧತೆಗೆ ಸುಮ್ಮನೆ ವೀಕ್ಷಕರಾಗಿರುವ ಬಹುಸಂಖ್ಯಾತ ಜನ ಸಮುದಾಯ ಬೆಚ್ಚಿ ಅಸಹಕಾರ ತೋರಿದರೆ ಮಾತ್ರ ಈಗ ಉಳಿಗಾಲವಿದೆ.

ಇಲ್ಲದಿದ್ದರೆ ಯಾವುದೇ, ಯಾರದೇ ಮತಾಂಧತೆಯು ಮೊದಲು ಮಾಡುವುದು ತನ್ನವರ, ತನಗೆ ಸೇರಿದವರ ಕಣ್ಣುಗಳನ್ನು ಕಿತ್ತು ಅಂಧರನ್ನಾಗಿಸುವುದು. ಆಮೇಲೆ ಮಿದುಳು ಕಿತ್ತು ವಿವೇಕಶೂನ್ಯರನ್ನಾಗಿಸುವುದು. ನಂತರ ಹೃದಯ ಕಿತ್ತು ಕ್ರೂರಿಗಳನ್ನಾಗಿಸುವುದು. ಆಮೇಲೆ ನರಬಲಿ ಕೇಳುವುದು. ಇಂದು ಇದು ಹೆಚ್ಚುತ್ತಿದೆ.

ಬಹಳ ತುರ್ತಾಗಿ ನಮ್ಮ ಮಕ್ಕಳ ಕಣ್ಣು, ಹೃದಯ, ಮಿದುಳುಗಳನ್ನು ಮತಾಂಧತೆಯ ದವಡೆಯಿಂದ ರಕ್ಷಿಸಬೇಕಾಗಿದೆ."

ಕೃಪೆ: -'ಎದೆಗೆ ಬಿದ್ದ ಅಕ್ಷರ' (ಪುಟ: 120-121, 2012)