ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ' ಮಿಂಚಿ ಮರೆಯಾದ ನಕ್ಷತ್ರʼ
kuchangi prasanna
ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
“ ಕರ್ನಾಟಕದ ನಗರ, ಪಟ್ಟಣ, ಊರಿಗೆ ಹೋದರೂ ಆಟೋ ನಿಲ್ದಾಣಗಳಿಗೆ ಶಂಕರ್‌ನಾಗ್ ಹೆಸರಿಟ್ಟಿರುವುದನ್ನು ಕಾಣುತ್ತೀರಿ. ಬಹುಪಾಲು ಆಟೋಗಳ ಮೇಲೂ ಶಂಕರ್‌ನಾಗ್ ಚಿತ್ರ ಅಥವಾ ಹೆಸರು ಇದ್ದೇ ಇರುತ್ತದೆ. ಶಂಕರ್‌ನಾಗ್ ಆಟೋ ರಾಜ ಸಿನಿಮಾದಲ್ಲಿ ಆಟೋ ಚಾಲಕ ಆಗಿದ್ದಕ್ಕೇ ಇರಬಹುದೇ ಎಂಬುದನ್ನೂ ಮೀರಿ ಇನ್ನೇನೋ ವಿಚಿತ್ರ‍್ರ, ವಿಲಕ್ಷಣ ಸೆಳೆತ ಆಟೋ ಚಾಲಕರು ಹಾಗೂ ಶಂಕರ್‌ನಾಗ್ ನಡುವೆ ಇತ್ತು ಮತ್ತು ಇದೆ ಅಂತ ಅನ್ನಿಸುತ್ತೆ.”
ಮಿಂಚಿ ಮರೆಯಾದ ಆ ನಕ್ಷತ್ರದ ಹೆಸರು ‘ಶಂಕರ್‌ನಾಗ್’
31 ವರ್ಷಗಳ ಹಿಂದಿನ ಮಾತು, ಅವತ್ತು ನಾನ್ಯಾಕೆ ಬೆಂಗಳೂರಿನಲ್ಲಿ ಎಂಜಿ ರಸ್ತೆಯ ಪ್ರಜಾವಾಣಿ ದಿನಪತ್ರಿಕೆ ಕಚೇರಿಗೆ ಶಿವಾಜಿ ಗಣೇಶನ್ ಅವರನ್ನು ಕಾಣಲು ಹೋಗಿದ್ದೆ ಅಂತ ಕಾಣುತ್ತೆ. ಇವತ್ತಿನಂತೆ ಟಿವಿ ಚಾನೆಲ್‌ಗಳ ಬ್ರೇಕಿಂಗ್ ನ್ಯೂಸ್, ಅಂಗೈ ಅರಗಿಣಿ ಮೊಬೈಲ್ ಪೋನ್‌ನೊಳಗೇ ಇಣುಕುವ ಫೇಸ್‌ಬುಕ್, ವಾಟ್ಸಾಪ್‌ಗಳ ಖIP ಫ್ಲಾಷಿಂಗ್ ಮೆಸೇಜುಗಳಿಲ್ಲದ ಆ ಕಾಲದಲ್ಲಿ, ಟಕ ಟಕ ಟರ್ ಎನ್ನುವ ಟೆಲಿಪ್ರಿಂಟರ್‌ಗಳು, ದೂರದೂರಿಗೆ ಟ್ರಂಕ್‌ಕಾಲ್ ಬುಕ್ ಮಾಡಿ ಕಾಯಬೇಕಿದ್ದ ಆ ಲ್ಯಾಂಡ್‌ಲೈನಿನ ಯುಗದಲ್ಲಿ ರಾಜ್ಯ ಪತ್ರಿಕೆಯೊಂದರ ಕಚೇರಿಯ ಸುದ್ದಿ ವಿಭಾಗದಲ್ಲಿ ಹೆಸರಾಂತ ವ್ಯಕ್ತಿಯೊಬ್ಬರ, ಮುಖಪುಟಕ್ಕೆ ಬರಬಹುದಾದ ಶಾಕಿಂಗ್ ಎನ್ನಿಸುವಂತ ನಿಧನ ವಾರ್ತೆ( ಔಃIಖಿ-ಔbiಣuಚಿಡಿಥಿ)ಯೊಂದನ್ನು ಹೇಗೆ ರೂಪಿಸುತ್ತಾರೆ ಎಂಬುದನ್ನು ಪ್ರತ್ಯಕ್ಷವಾಗಿ ನೋಡಿ ಕಲಿಯಲು ಅವಕಾಶ ಮಾಡಿಕೊಟ್ಟದ್ದು ನಮ್ಮ ಶಂಕರ್‌ನಾಗ್ ಎಂಬ ಮಿಂಚಿ ಮರೆಯಾದ ನಕ್ಷತ್ರದ ಅಕಾಲಿಕ ಮರಣ.
ರಾಜ್ ನಂತರ ಕನ್ನಡದ ಜನರು ಅತಿ ಹೆಚ್ಚು ನೆನಪಿಸಿಕೊಳ್ಳುವ ಮತ್ತು ಆರಾಧಿಸುವ ಕನ್ನಡ ಸಿನಿಮಾ ನಟ ಯಾರು ಅಂತ ಕೇಳಿ ನೋಡಿ, “ಶಂಕರ್‌ನಾಗ್” ಅಂತ ನೀವೇ ಹೇಳಿಬಿಡುತ್ತೀರಿ.
ಕರ್ನಾಟಕದ ನಗರ, ಪಟ್ಟಣ, ಊರಿಗೆ ಹೋದರೂ ಆಟೋ ನಿಲ್ದಾಣಗಳಿಗೆ ಶಂಕರ್‌ನಾಗ್ ಹೆಸರಿಟ್ಟಿರುವುದನ್ನು ಕಾಣುತ್ತೀರಿ. ಬಹುಪಾಲು ಆಟೋಗಳ ಮೇಲೂ ಶಂಕರ್‌ನಾಗ್ ಚಿತ್ರ ಅಥವಾ ಹೆಸರು ಇದ್ದೇ ಇರುತ್ತದೆ. ಶಂಕರ್‌ನಾಗ್ ಆಟೋ ರಾಜ ಸಿನಿಮಾದಲ್ಲಿ ಆಟೋ ಚಾಲಕ ಆಗಿದ್ದಕ್ಕೇ ಇರಬಹುದೇ ಎಂಬುದನ್ನೂ ಮೀರಿ ಇನ್ನೇನೋ ವಿಚಿತ್ರ‍್ರ, ವಿಲಕ್ಷಣ ಸೆಳೆತ ಆಟೋ ಚಾಲಕರು ಹಾಗೂ ಶಂಕರ್‌ನಾಗ್ ನಡುವೆ ಇತ್ತು ಮತ್ತು ಇದೆ ಅಂತ ಅನ್ನಿಸುತ್ತೆ. ಇದೇ ತರದ ಸಂಬAಧ ರಾಜ್ ಮತ್ತು ಕನ್ನಡ ಹೋರಾಟಗಾರರ ನಡುವೆ ಇದೆ. ಇನ್ನೂ ಕೆಲವು ಕಡೆ ಕನ್ನಡ ಹೋರಾಟಗಾರರೂ ಶಂಕರ್‌ನಾಗ್ ಜೊತೆ ಭಾವನಾತ್ಮಕ ನಂಟನ್ನು ಬೆಸೆದುಕೊಂಡಿರುವುದನ್ನು ಕಾಣಬಹುದು.
ಮೊನ್ನೆ ಗುರುವಾರಕ್ಕೆ 31 ವರ್ಷಗಳ ಹಿಂದೆ ಬೆಳಗಿನ ಜಾವ ಶಂಕರ್‌ನಾಗ್ ದಾವಣಗೆರೆ ಸಮೀಪ ಹೆದ್ದಾರಿ ಅಪಘಾತದಲ್ಲಿ ಅಸುನೀಗಿ 31 ವರ್ಷಗಳಾದವು. ಆಗ ಶಂಕರ್‌ನಾಗ್ ವಯಸ್ಸು ಕೇವಲ 35 ವರ್ಷಗಳು. ಅದಾದ ಮೂರು ದಶಕ ಕಳೆದರೂ ಶಂಕರ್‌ನಾಗ್ ಸ್ಮೃತಿ ಜನಮಾನಸದಲ್ಲಿ ಹಚ್ಚ ಹಸಿರಾಗಿದೆ. ಶಂಕರ್‌ನಾಗ್ ಇನ್ನೂ ನಮ್ಮ ನಡುವೆ ಇದ್ದಿದ್ದರೆ ಅವರಿಗೆ ಕೇವಲ 67 ವರ್ಷ ವಯಸ್ಸಾಗಿರುತ್ತಿತ್ತು. ಅವರು ಎಂದಿನ ತಮ್ಮ ಪಾದರಸದಂತ ಚಟುವಟಿಕೆಗಳ ಮೂಲಕ ಕನ್ನಡ ನಾಡಿನಲ್ಲಿ ಕ್ರಿಯಾಶೀಲರಾಗೇ ಇರುತ್ತಿದ್ದರು ಹಾಗೂ ನಾವು ನೀವು ಯಾರೂ ಊಹಿಸಿರದೇ ಇದ್ದ ಅಚ್ಚರಿ, ಅನಿರೀಕ್ಷಿತಗಳನ್ನು ಕನ್ನಡ ಸಿನಿಮಾ ರಂಗಕ್ಕೆ, ರಂಗಭೂಮಿಗೆ ಹಾಗೂ ಕನ್ನಡ ನೆಲಕ್ಕೆ ಕೊಡುಗೆಯಾಗಿ ನೀಡಿರುತ್ತಿದ್ದರು ಎನ್ನುವುದರಲ್ಲಿ ಯಾವ ಸಂಶಯವನ್ನೂ ಇಟ್ಟುಕೊಳ್ಳುವಂತಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಮಲ್ಲಾಪುರ ಎಂಬಲ್ಲಿ 1954ರ ನವೆಂಬರ್ 9ರಂದು ಜನಿಸಿದ ಶಂಕರ ನಾಗರಕಟ್ಟೆ ವೃತ್ತಿಯಲ್ಲಿ ಅಣ್ಣ ಅನಂತ್‌ನಾಗ್ ತರವೇ ಮುಂಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದರೂ ಪ್ರವೃತ್ತಿಯಲ್ಲಿ ಮರಾಠಿ ರಂಗಭೂಮಿಯಲ್ಲಿ ನಟನೆ, ನಾಟಕ ರಚನೆ, ಸಂಭಾಷಣೆ, ನಿರ್ದೇಶನ ಹೀಗೆಲ್ಲ ಸಕ್ರಿಯವಾಗಿದ್ದರು. ಐದಡಿ ಏಳಿಂಚಿನ ಶಂಕರ್‌ನಾಗ್ 1977ರಿಂದ 1990 ಅಂದರೆ ಕೇವಲ 12 ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ನೋಡಿದರೆ ನಿಜಕ್ಕೂ ಅಚ್ಚರಿ ಎನಿಸುತ್ತದೆ.
ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ‘ಒಂದಾನೊAದು ಕಾಲದಲ್ಲಿ' ಶಂಕರ್‌ನಾಗ್ ನಟಿಸಿದ ಮೊದಲ ಕನ್ನಡ ಸಿನಿಮಾ. ಮೊದಲ ಸಿನಿಮಾಕ್ಕೇ 7ನೇ ರಾಷ್ಟ್ರೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಂದಾನೊAದು ಕಾಲದಲ್ಲಿ ಸಿನಿಮಾದ ಅತ್ಯುತ್ತಮ ನಟನೆಗಾಗಿ ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಪಡೆದರು.ಆನಂತರದ 12 ವರ್ಷಗಳಲ್ಲಿ ಕನ್ನಡದ ಸುಮಾರು 92 ಚಿತ್ರಗಳಲ್ಲಿ ನಟಿಸಿದರು. ರಾಜ್ ಅವರ ‘ಒಂದು ಮುತ್ತಿನ ಕಥೆ’ಸೇರಿ 9 ಸಿನಿಮಾಗಳನ್ನು ನಿರ್ದೇಶಿಸಿದರು. ಥೇಟ್ ಹಾಲಿವುಡ್ ಸಿನಿಮಾದಂತೆ ಇದ್ದ ‘ಮಿಂಚಿನ ಓಟ’ ಮತ್ತು ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ಸಿನಿಮಾಗಳಿಗೆ ಕ್ರಮವಾಗಿ ದ್ವಿತೀಯ ಅತ್ಯುತ್ತಮ ಚಿತ್ರ (1979-80) ಹಾಗೂ ತೃತೀಯ ಅತ್ಯುತ್ತಮ ಚಿತ್ರ (1983-84) ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದರು.
ಆಕ್ಸಿಡೆಂಟ್ 1984-85 ರ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಎಂದು ರಾಜ್ಯ ಸರ್ಕಾರವಷ್ಟೇ ಅಲ್ಲದೆ ಪಾನನಿಷೇಧದ ಬಗೆಗಿನ ಉತ್ತಮ ಚಿತ್ರವೆಂದು ಪರಿಗಣಿತವಾಗಿ ರಜತ ಕಮಲ ಮತ್ತು ನಗದು ಬಹುಮಾನವನ್ನು ರಾಷ್ಟ್ರ ಪ್ರಶಸ್ತಿಯಾಗಿ ಪಡೆದರು.
ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದ ಶಂಕರ್ ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಕಿರು ಕಥೆಗಳನ್ನು ಆಧರಿಸಿ ದೂರದರ್ಶನದಲ್ಲಿ ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿ ನಟಿಸಿ, ನಿರ್ದೇಶಿಸಿದರು. ಅವರು ಭಾರತೀಯ ರಾಷ್ಟç ಪ್ರಶಸ್ತಿ ವಿಜೇತ ಮರಾಠಿ ಚಿತ್ರ ‘22 ಜೂನ್ 1897’ದÀ ಸಹ-ಬರಹಗಾರರು ಆಗಿದ್ದರು.
ಶಂಕರ್‌ನಾಗ್ ಪತ್ನಿ ರಂಗಭೂಮಿ ಕಲಾವಿದೆ ಅರುಂಧತಿ ಪತಿಯ ಮಹದಾಸೆಯಾಗಿದ್ದ ರಂಗಮAದಿರವನ್ನು ನಿರ್ಮಿಸಿ ‘ರಂಗ ಶಂಕರ’ ಎಂದು ಹೆಸರಿಟ್ಟರು. ಇವರಿಬ್ಬರ ಮಗಳು ಕಾವ್ಯ. ಶಂಕರ್‌ನಾಗ್ ಅರುಂಧತಿ ದಂಪತಿ ರೂಪಿಸಿದ್ದ ‘ಸಂಕೇತ್’ ಎಂಬ ಹವ್ಯಾಸಿ ರಂಗ ತಂಡ ‘ಅಂಜುಮಲ್ಲಿಗೆ’, ‘ಬ್ಯಾರಿಸ್ಟರ್’, ‘ಸಂಧ್ಯಾ ಛಾಯ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಟ ಬೊಂಬಾಟ’, ‘ನಾಗಮಂಡಲ’ ಮುಂತಾದ ಹೆಸರಾಂತ ನಾಟಕಗಳನ್ನು ಕನ್ನಡ ರಂಗಭೂಮಿಗೆ ನೀಡಿತು.
ಶಂಕರ್‌ನಾಗ್ ಒರಿಜಿನಲ್ ಕನಸುಗಾರನಾಗಿದ್ದರು. ಕೇವಲ ಹಗಲುಗನಸು ಕಾಣುತ್ತಿರಲಿಲ್ಲ. ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ಅತ್ಯಾಧುನಿಕ ರಂಗಮAದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಸರ್ಕಾರದ ಮುಂದೆ ಇಟ್ಟಿದ್ದರು ಅವರು.
‘ಜನ್ಮ ಜನ್ಮದ ಅನುಬಂಧ’, ‘ಮಿಂಚಿನ ಓಟ’, ‘ಗೀತಾ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಹೊಸ ತೀರ್ಪು’, ‘ಆಕ್ಸಿಡೆಂಟ್’, ‘ಒಂದು ಮುತ್ತಿನ ಕಥೆ’, ‘ಮಾಲ್ಗುಡಿ ಡೇಸ್’ ಧಾರಾವಾಹಿ ಹಾಗೂ ‘ಲಾಲಚ್’ (ಹಿಂದಿ) ಇವು ಶಂಕರ್‌ನಾಗ್ ನಿರ್ದೇಶಿಸಿದ ಸಿನಿಮಾಗಳು, ಇವುಗಳಲ್ಲಿ ಮೊದಲ ನಾಲ್ಕೆöÊದು ಸಿನಿಮಾಗಳ ನಿರ್ಮಾಣವೂ ಅವರದೇ ಆಗಿತ್ತು. ಶಂಕರ್‌ನಾಗ್ ನಟಿಸಿದ ಸಿನಿಮಾಗಳು ವರ್ಷಕ್ಕೆ ಸರಾಸರಿ ಎಂಟರAತೆ 12 ವರ್ಷಗಳಲ್ಲಿ 92 ಸಿನಿಮಾಗಳು ತೆರೆಗೆ ಬಂದಿದ್ದವು, 1984ನೇ ಒಂದೇ ವರ್ಷದಲ್ಲಿ ಶಂಕರ್‌ನಾಗ್‌ರ 15 ಸಿನಿಮಾಗಳು ಬಿಡುಗಡೆ ಕಂಡವು ಎಂದರೆ ಅವರ ವೇಗವನ್ನು ಅರ್ಥ ಮಾಡಿಕೊಳ್ಳಿ. ಶಂಕರ್ ನಿಧನಾನಂತರ ಐದು ಸಿನಿಮಾಗಳು ರಿಲೀಸ್ ಆದವು. ಶಂಕರ್‌ನಾಗ್ ಗಿರೀಶ್ ಕಾರ್ನಾಡ್ ಅವರ ‘ಉತ್ಸವ್’ ಹಿಂದಿ ಸಿನಿಮಾದಲ್ಲಿ ಮಾಡಿದ ಕಳ್ಳನ ಪಾತ್ರ ನೋಡುಗರ ಮೆಚ್ಚುಗೆ ಗಳಿಸಿತ್ತು. ಅವತ್ತಿನ ಜನಪ್ರಿಯ ಪೊಲೀಸ್ ಅಧಿಕಾರಿ ಸಾಂಗ್ಲಿಯಾನಾ ಆಗಿ ಶಂಕರ್‌ನಾಗ್ ನಟಿಸಿದ ಅದೇ ಹೆಸರಿನ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಿದ್ದು ವಿಶೇಷವಾಗಿತ್ತು.
ಎಲ್ಲ ಸಮಕಾಲೀನ ನಟರೊಂದಿಗೆ ಸಹಜ ಸ್ನೇಹ, ಸಂಬAಧ ಹೊಂದಿದ್ದ ಶಂಕರ್‌ನಾಗ್ ರಾಜ್ ಜೊತೆ ನಟಿಸಿದ ಅಪೂರ್ವ ಸಂಗಮವೂ ನೋಡುಗರ ಮನಸೂರೆಗೊಂಡಿತ್ತು.
ಬಾಕ್ಸ್
ನನ್ನನ್ನೆ ನಾನು ನೋಡ್ದಾಗ....,
ಶಂಕರ್ ನಾಗ್ 1988ರ ಜುಲೈನಲ್ಲಿ ಆಕಾಶವಾಣಿಯಲ್ಲಿ ಕೊಟ್ಟ ಸಂದರ್ಶನದ ಆಯ್ದ ಪ್ಯಾರಾಗಳು ಅವರ ಒಳಗನ್ನು ಎತ್ತಿ ತೋರುತ್ತವೆ. ಓದಿ ನೋಡಿ.
“ ನೋಡಿ ಸ್ವಾಮಿ ನೋಡಿ ಸ್ವಾಮಿ ನಾವ್ ಹೀಗಿರೋದಕ್ಕೆ ಕಾರಣ ಒಂದಾನೊAದು ಕಾಲ ಅಂದ್ರೆ ಗಿರೀಶ್ ಕಾರ್ನಾಡ್ ಅವರ ಚಿತ್ರ “ಒಂದಾನೊAದು ಕಾಲದಲ್ಲಿ”. ಆ ಸಿನಿಮಾದಲ್ಲಿ ಕೆಲ್ಸ ಮಾಡೊ ಅವಕಾಶ ಸಿಗೊ ಮುಂಚೆ ನಾನು ಬಹಳಷ್ಟು ನಾಟಕಗಳಲ್ಲಿ ಕೆಲ್ಸ ಮಾಡ್ತಾಯಿದ್ದೆ, ಪಾತ್ರ , ನಿರ್ದೇಶನ , ಲೈಟಿಂಗು, ಬ್ಯಾಕ್ ಸ್ಟೇಜು ಎಲ್ಲಾ, ಬ್ಯಾಂಕಲ್ಲಿ ನೌಕ್ರಿನು ಮಾಡ್ತಾಯಿದ್ದೆ ಮ್ಯಾನೇಜರ್ ಅಲ್ಲ ಅಕೌಂಟೆAಟ್ ಅಲ್ಲ ಓಸಿಯಾಗಿ ಓಸಿ ರಿ ಓಸಿ ಅಂದ್ರೆ ಗೊತ್ತಿಲ್ವ ನಿಮ್ಗೆ ಆರ್ಡಿನರಿ ಕ್ಲರ್ಕ್. ಆ ಒಂದಾನೊAದು ಸಾಯಂಕಾಲ ಬ್ಯಾಂಕ್ ನೌಕ್ರಿ ಮುಗ್ಸಿ ಒಂದು ನಾಟ್ಕದ ರಿಹರ್ಸಲ್ ಮಾಡ್ತಿರೊವಾಗ ಗಿರೀಶ್ ಕಾರ್ನಾಡ್ ಅವ್ರು ಬಂದ್ರು ನೋಡುದ್ರು ಮತ್ ಕೇಳುದ್ರು ಸಿನಿಮಾದಲ್ಲಿ ಪಾರ್ಟ್ ಮಾಡ್ತಿಯೇನೋ ಹುಡುಗ ಅಂತ ಸಿನಿಮಾ ಅಂದ್ರೆ ಸ್ವಲ್ಪ ಭಯ ಹೆದ್ರಿಕೆ ಇದ್ದೆ ಇತ್ತು ಆದ್ರು ಧೈರ್ಯ ಮಾಡಿ ಓ ಸಿನಿಮಾ ತಾನೆ ಅದ್ರಲ್ ಏನಂತೆ ಮಾಡಣ ಸಾರ್ ಅಂದೆ ಚಿತ್ರೀಕರಣ ಪ್ರಾರಂಭವಾಯಿತು ದಾಂಡೇಲಿಯ ಗಾಢವಾದ ಸುಂದರವಾದ ಅರಣ್ಯದಲ್ಲಿ ಅದೆ ಒಂದಾನೊAದು ಕಾಲದ ಚಿತ್ರದ ಈ ಹಾಡು ಒಂದಾನೊAದು ಕಾಲದಾಗ ಒಂದಾನೊAದು ಕಾಲದಲ್ಲಿ ಚಿತ್ರೀಕರಣ ಮುಗಿತು ಡಬ್ಬಿಂಗು ಆಯ್ತು ಫಸ್ಟ್ ಪ್ರಿಂಟು ಆಚೆ ಬಂತು ಸುತ್ ಮುತ್ ಇರೊ ಸ್ವಲ್ಪ್ ಜನಗಳು ಅಂದ್ರೆ ಪ್ರಿವ್ಯೂ ನೋಡ್ದೋರು ಪರ್ವಾಗಿಲ್ವೆ ಹುಡ್ಗ ಸುಮಾರಾಗ್ ಅಭಿನಯ ಮಾಡ್ತಾನೆ ಅಂದ್ರು ಈ ಮಾತ್ ಕೇಳಿದ್ದೆ ಕ್ಷಣ ನನ್ನ ಈ ಹುಬ್ಬು ತಲೆಕೂದ್ಲಿಗೆ ಎಗ್ರಿ ಸಿಕ್ಕಾಕೊಬಿಡ್ತು ಇನ್ ಶಾರ್ಟ್ ಸಿನಿಮಾ ಆಕ್ಟರ್ ಆಗ್ತಿನಿ ಅಂತ ನಾನು ಕನ್ಸಲ್ಲು ನೆನ್ಕೊಂಡಿರ್ಲಿಲ್ಲ ರಜತ ಪರದೆ ಮೇಲೆ ಮೊದಲ್ನೆ ಸಲ ನನ್ನನ್ನೆ ನಾನು ನೋಡ್ದಾಗ ಒಂತರಾ ಅನ್ನುಸ್ತು ಅಲ್ಲ ಇದ್ಯಾಕ್ ನನ್ ಮೊಕ, ಹೀಗ್ ಕಾಣಿಸ್ತಾ ಇದೆ ಅದ್ಯಾಕೆ ನಡೆಯೊವಾಗ ನನ್ ಕೈ ವಂಕ್ ಪಂಕ್ ಆಗಿ ಎಲ್ಲೆಲ್ಲೋ ಹೋಗುತ್ತೆ.
ಇಂಥ ಯೋಚ್ನೆ ಇರೋವಾಗ ಅಬ್ಬಯ್ಯನಾಯ್ಡು ಅವ್ರ್ ಕಣ್ಣು ನನ್ಮೇಲೆ ಬಿತ್ತು ಮತ್ತೆ ಸೀತಾರಾಮು ಈ ಚಿತ್ರದಲ್ಲಿ ಅಭಿನಯ ಮಾಡೋಕೆ ಅವ್ರ್ ದೊಡ್ ಮನಸ್ ಮಾಡಿ ನನ್ಗೊಂದು ಅವಕಾಶ ಕೊಟ್ರು ಮೊದಲ್ನೆ ದಿನ ಚಿತ್ರೀಕರಣಕ್ ಹೋದ್ರೆ ನನ್ ಹೃದಯ ಅಲ್ಲೇ ನಿಂತ್ ಬಿಡ್ತು ಯಾಕಂದ್ರೆ ಮೊದಲ್ನೆ ದಿನವೆ ಈ ಹಾಡಿನ ಚಿತ್ರೀಕರಣ ಇತ್ತು.
“ಒಂದೇ ಒಂದು ಆಸೆಯು ತೋಳಲಿ ಬಳಸಲು ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು, ಈ ಹಾಡಿನ ಚಿತ್ರೀಕರಣ ಮುಗಿಯೊಷ್ಟರಲ್ಲಿ ನಿಂತೋಗಿರೋ ನನ್ನ ಹೃದಯ ಆಚೆನೇ ಬಂದ್ಬಿಡ್ತು ಅಂದ್ರೆ ಅತಿಶಯೋಕ್ತಿ ಆಗಲಾರದು ಯಾಕೆಂದ್ರೆ ಚಿತ್ರೀಕರಣ ಮುಂಚೆ ನಾನ್ ಎಲ್ಲೂ ಸ್ಕ್ರೀನ್ ಮೇಲೆ ಹಾಡಿರ್ಲಿಲ್ಲ, ಡ್ಯಾನ್ಸ್ ಅಂದ್ರೆ ಏನು ಅಂತ ಅದಕ್ ಮುಂಚೆನೆ ಗೊತ್ತಿರ್ಲಿಲ್ಲ, ಡೈರೆಕ್ಟರ್ ಸೋಮಶೇಖರ್ ಅವ್ರು ಡ್ಯಾನ್ಸ್ ಮಾಸ್ಟರ್ ಉಡುಪಿ ಜಯರಾಂ ಅವ್ರು ಆ್ಯಕ್ಷನ್ ಅಂದ್ರು ಜಿಗಿತ ಜಿಗಿತ ಸ್ಟೆಪ್ ಹಾಕು ಅಂದ್ರು ನಾನ್ ಪ್ರಯತ್ನ ಮಾಡ್ದೆ ರಿ ಪ್ರಯತ್ನ ಮಾಡ್ದೆ ಆದ್ರೆ ಕೈ ಬರ್ಬೆಕಾಗ್ ಜಾಗ್‌ದಲ್ಲಿ ಧೀ ಬರ್ತಾಯಿತ್ತು, ಕಾಲ್ ಸರಿ ಬಿದ್ರೆ ಕೈ ಎಲ್ಲೆಲ್ಲೋ ಹೋಗ್ತಾ ಇತ್ತು ಕೊನೆಗ್ ಸುಸ್ತಾಗಿ ಒಂದ್ ಮೂಲೆಲ್ ಹೋಗಿ ಸಿಗರೆಟ್ ಸೇದ್ತಾ ಕುತ್ಕೊಬಿಟ್ಟೆ ಆಗ ಆ ಚಿತ್ರದ ನಾಯಕಿ ಮಂಜುಳಾ ಬಂದ್ರು ಧೈರ್ಯ ಕೊಟ್ರು ಮೊದಲ್ನೆ ಸಲ ಹಾಗ್ ಆಗುತ್ತೆ ಬಿಡಿ ನನ್ ಜೊತೆ ಎಲ್ಲ ಸ್ಟೆಪ್ ಒಂದ್ ಸಲ ಹಾಕ್ ನೋಡಿ ಎಲ್ಲಾ ಸರಿಹೋಗುತ್ತೆ ಬನ್ನಿ ಅಂದ್ರು ಅವರ ಆ ಪ್ರೋತ್ಸಾಹ ಆ ಸಹಾಯ ನಾನೆಂದು ಮರೆಯೊ ಹಾಗಿಲ್ಲ ಆ ಚಿತ್ರ ಬಿಡುಗಡೆ ಆದ ನಂತರ ಮಂಜುಳಾ ಅವ್ರ್ ಜೊತೆಲಿ ಎಷ್ಟೋ ಚಿತ್ರಗಳಲ್ಲಿ ಅಭಿನಯಿಸೊ ಅವಕಾಶ ನನಗ್ ಸಿಕ್ತು ಆದ್ರೆ ಇವತ್ ದುಃಖ ಒಂದೇ ಈಗ್ ಒಳ್ಳೆ ಕಾಲ ಜೊತೆಯಲ್ ಕಳೆಯೋಣ ಅಂದ್ರೆ ಮಂಜುಳಾ ಅವ್ರು ನಮ್ಮ ಜೊತೆಲಿ ಇಲ್ಲ. ಕೆಲವು ಸಲ ಮಂಜುಳಾ ಅಂಥ ಒಳ್ಳೆ ನಟಿ ಇವತ್ತು ಇಲ್ಲ ಅಂತ ನಂಬೋಕೆ ಆಗಲ್ಲ ಆದ್ರೆ ಜೀವನ ಇರೋದೆ ಹೀಗೆ ಅನ್ಸುತ್ತೆ.
ನಾವು ಸಿನಿಮಾ ಹಾಡುಗಳು ಅಥವಾ ಬ್ಯಾಗ್ರೌಂಡ್ ಮ್ಯೂಸಿಕ್ ರೆಕಾರ್ಡ್ ಮಾಡ್ಬೇಕು ಅಂದ್ರೆ ಮದ್ರಾಸು ಅಥವಾ ಬಾಂಬೆಗೆ ಹೋಗಿ ಮಾಡ್ಬೇಕಾಗಿತ್ತು ಯಾಕಂದ್ರೆ ಆ ರೆಕಾರ್ಡಿಂಗ್ ಸೌಲಭ್ಯಗಳು ನಮ್ಮ ಕರ್ನಾಟಕದಲ್ಲಿ ಇರ್ಲಿಲ್ಲ ಅಂತ ಅದಕ್ಕೆ ಪ್ರತಿ ಸಲ ಮದ್ರಾಸು ಅಥವಾ ಬಾಂಬೆಗೆ ಹೋಗಿ ತಿಂಗ್ಳಾAಗಟ್ಲೆ ಲೈನಲ್ ನಿಂತ್ಕೊAಡು ನಮಸ್ಕಾರ ಸಾರ್ ನಮಸ್ಕಾರ ಸಾರ್ ಅಂತ ಮಸ್ಕ ಹೊಡ್ದು ರೆಕಾರ್ಡಿಂಗ್ ಮಾಡ್ಬೆಕಾಗಿತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಈ ಸ್ಥಿತಿ ನೋಡಿ ಅಯ್ಯೊ ಅನ್ನುಸ್ತು ಅಂದ್ರೆ ಸಿನಿಮಾ ತೆಗೆಯೋದು ಕನ್ನಡ್ದಲ್ಲಿ ನೋಡೊ ಪ್ರೇಕ್ಷಕರು ಕನ್ನಡಿಗರು ಮತ್ತೆ ಸಂಗೀತ ರೆಕಾರ್ಡ್ ಮಾಡೋದು ಮಾತ್ರ ಮದ್ರಾಸ್ನಲ್ಲಿ ಅಂತ ಬಹಳ ಯೋಚ್ನೆ ಆಗ್ಬಿಟಿತ್ತು ಆಗ ಸಿ.ವಿ.ಎಲ್ ಶಾಸ್ತ್ರಿ, ಅನಂತ್ ನಾಗ್, ರಮೇಶ್ ಭಟ್, ಸೂರ್ಯ ರಾವ್ ಅಂತ ಸ್ನೇಹಿತರ ಹತ್ರ ಆರ್ಥಿಕ ಸಹಾಯ ಕೇಳ್ಕೊಂಡು ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅವರ ಬೆಂಬಲದಿAದ ಈ ಸಂಕೇತ್ ರೆಕಾರ್ಡಿಂಗ್ ಸ್ಟುಡಿಯೋ ಮಾಡಿದ್ವಿ. ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರಿಂದ ಉದ್ಘಾಟನೆ ಆಯ್ತು ಕರ್ನಾಟಕದಲ್ಲೂ ಸಿನಿಮಾ ಸಂಗೀತ ಕೂಡ ಬಾರ್ಸೊ ಒಳ್ಳೊಳ್ಳೆ ಕಲಾವಿದರು ಮ್ಯೂಸಿಷಿಯನ್ ಇದ್ದಾರೆ ನಮ್ಮಲ್ಲೂ ಎಲ್ಲಾ ಸೌಲಭ್ಯಗಳಿವೆ ಅನ್ನೊ ಸಂಕೇತವೆ ಈ ಸಂಕೇತ್ ಸ್ಟುಡಿಯೋ.
ಇಂಥ ಸಂದರ್ಭಗಳಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಜ್ಞಾಪಕಕ್ ಬರ್ತಾರೆ ಅತ್ಯಂತ ಪ್ರತಿಭಾಶಾಲಿ ಜೀನಿಯಸ್ ಅಂತ ಕರಿತೀವಲ್ಲ ಅಂಥ ಒಂದು ವ್ಯಕ್ತಿ ಅವ್ರ್ ಸಂಗೀತ ಜಗತ್ತೆ ಬೇರೆ ಆ ಠೇಕಾನೆ ಬೇರೆ ಆ ಲಹರಿನೆ ಬೇರೆ ಅವ್ರ್ ಜೊತೆಲಿ ಮ್ಯೂಸಿಕ್ ಕಂಪೋಸಿಗೆ ಕೂತ್ಕೊಂಡ್ರೆ ಸಮಯ ಹ್ಯಾಗ್ ಕಳಿಯುತ್ತೆ ಅಂತ ಲೆಕ್ಕಾನೆ ಇರೋದಿಲ್ಲ ಯಾವ್ದಾದ್ರು ಒಂದು ಸನ್ನಿವೇಶಕ್ಕೆ ಒಂದು ಟ್ಯೂನು ಕೇಳಿದ್ರೆ ಎಂಟೊAಭತ್ತು ಟ್ಯೂನು ಚಿಟಿಕೆ ಹೊಡಿಯೊಷ್ಟ್ರಲ್ಲಿ ರೆಡಿ ಮಾಡ್ಬಿಡ್ತಾರೆ ಒಂದಕ್ಕಿAತ ಒಂದು ಟ್ಯೂನು ಅಂದವಾಗಿ ಇರುತ್ತೆ ಸೊಗಸಾಗಿರುತ್ತೆ ಒಂದು ಸಣ್ಣ ಉದಾಹರಣೆ ಅಂದ್ರೆ ಗೀತಾ ಚಿತ್ರದ ಈ ಹಾಡು “ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು”.