ದೇಶದ  ಸ್ತ್ರೀಯರು ಸ್ವಾವಲಂಬಿಗಳಾಗಲು ಸ್ತ್ರೀಶಕ್ತಿ ಸಂಘಗಳು ಅತ್ಯಗತ್ಯ – ಮುನಿರತ್ನ

ದೇಶದ  ಸ್ತ್ರೀಯರು ಸ್ವಾವಲಂಬಿಗಳಾಗಲು ಸ್ತ್ರೀಶಕ್ತಿ ಸಂಘಗಳು ಅತ್ಯಗತ್ಯ – ಮುನಿರತ್ನ

ದೇಶದ  ಸ್ತ್ರೀಯರು ಸ್ವಾವಲಂಬಿಗಳಾಗಲು ಸ್ತ್ರೀಶಕ್ತಿ ಸಂಘಗಳು ಅತ್ಯಗತ್ಯ – ಮುನಿರತ್ನ


ಕೋಲಾರ : ದೇಶದ ಸ್ತಿçÃಯರು ಸ್ವಾವಲಂಬಿ ಜೀವನ ನಡೆಸಲು ಸ್ತಿçà ಶಕ್ತಿಗಳು ಅತ್ಯಗತ್ಯವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳ ಮೂಲಕ ಸಹಾಯಧನವನ್ನು ಹಾಗೂ ಸಾಲ ಸೌಲಭ್ಯವನ್ನು ನೀಡುತ್ತಿವೆ ಎಂದು ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ತಿಳಿಸಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಇವರ ಸಂಯುಕ್ತಾಶ್ರಯದಲ್ಲಿ ಸ್ತಿçà ಶಕ್ತಿ ಮಹಿಳಾ ಸಮಾವೇಶ, ಪ್ರದಾನಮಂತ್ರಿ ಮಾತೃ ವಂದನಾ ಯೋಜನೆಯ ಸಪ್ತಾಹ ಮತ್ತು ಪೋಷಣ್ ಅಭಿಯಾನ ಯೋಜನೆಯ ಮಾಸಾಚರಣೆ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ೫೦೧೨ ಸಂಘಗಳಿದ್ದು ೭೮,೭೨೦ ಪಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ೧೨.೬೦ ಕೋಟಿ ಸಾಲ ಸೌಲಭ್ಯವನ್ನು ನೀಡಲಾಗಿದೆ. ಸಾಲ ವಿತರಣೆಯಲ್ಲಿ ಲೋಪಗಳಾದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ತಿಳಿಸಿದರು.
ಲೋಕಸಭಾ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ  ಕೋವಿಡ್ ಸಂದರ್ಭದಲ್ಲಿ ಪುರುಷರಿಗೆ ಉದ್ಯೋಗವಿಲ್ಲದಿದ್ದರೂ ಸ್ರೀಯರು ಸ್ವ ಸಹಾಯ ಸಂಘಗಳ ಮೂಲಕ ಸಾಲ ಪಡೆದು ಕುಟುಂಬ ನಿರ್ವಹಣೆ ಮಾಡಿದ್ದಾರೆ. ಬ್ಯಾಂಕುಗಳು ಕರೋನಾ ಸಂದರ್ಭದಲ್ಲಿ ಸ್ತಿçà ಶಕ್ತಿ ಸಂಘಗಳಿಗೆ ನೀಡಿರುವ ಸಾಲವನ್ನು ಮರುಪಾವತಿಸುವಂತೆ ಒತ್ತಾಯ ಮಾಡುವಂತಿಲ್ಲ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಪುರುಷರಿಗೆ ಸಮಾನವಾಗಿದ್ದಾರೆ ಎಂದರು.
ವಿದ್ಯಾಸಿರಿ ಯೋಜನೆಯಡಿ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರ ೬೦೦೦ ಹಾಗೂ ರಾಜ್ಯ ಸರ್ಕಾರ ೪೦೦೦ ಸಹಾಯಧನ ನೀಡುತ್ತಿದೆ. ದೇಶದ ಜನತೆಯನ್ನು ಕರೋನಾ ಇಂದ ರಕ್ಷಿಸಲು ಕರೋನಾ ಲಸಿಕೆಯನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಕುಡಾ ಅಧ್ಯಕ್ಷರಾದ ಚಲಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಎಂ.ಜಿ.ಪಾಲಿ ಸೇರಿದಂತೆ ಅಧಿಕಾರಿಗಳು ಹಾಗೂ ಸ್ತಿçà ಶಕ್ತಿ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.