ಚಿತ್ರರಂಗ ಮಾತ್ರವಲ್ಲ ಸಮಾಜಕ್ಕೂ ನಷ್ಟ: ಕೆಎನ್‌ಆರ್

ಚಿತ್ರರಂಗ ಮಾತ್ರವಲ್ಲ ಸಮಾಜಕ್ಕೂ ನಷ್ಟ: ಕೆಎನ್‌ಆರ್
ಮಧುಗಿರಿ : ಪುನೀತ್ ರಾಜ್‌ಕುಮಾರ್ ಅವರ ಸಾವಿನಿಂದ ಚಿತ್ರರಂಗಕ್ಕೆ ಅಲ್ಲದೇ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿರುವುದು ನನಗೂ ಮತ್ತು ಅವರ ಅಭಿಮಾನಿಗಳಿಗೆ ತುಂಬಾ ನೋವುಂಟಾಗಿದೆ
ಚಿತ್ರನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕರೂ ಆಗಿದ್ದ ಪುನೀತ್ ರಾಜ್‌ಕುಮಾರ್, ಬಾಲ ನಟರಾಗಿ ೧೦ ಸಿನಿಮಾಗಳಲ್ಲಿ ಹಾಗೂ ೨೬ ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿ ಜನಪ್ರಿಯತೆಗಳಿಸಿದ್ದರು. ಚಿತ್ರರಂಗಕ್ಕೆ ಸೀಮಿತವಾಗದೆ ಅನಾಥಶ್ರಮ, ಗೋ ಶಾಲೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಣಕಾಸಿನ ನೆರವು ನೀಡುವ ಮೂಲಕ ಸಮಾಜಮುಖಿಯಾದ ಕೆಲಸ - ಕಾರ್ಯಗಳನ್ನು ಮಾಡುವ ಉತ್ತಮ ಹೆಸರುಗಳಿಸಿ, ಎಲ್ಲರಿಗೂ ಮಾದರಿಯಾಗಿದ್ದರು ಎಂದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜನಪ್ರಿಯ ಯೋಜನೆಗಳ ರಾಯಭಾರಿಯಾಗಿ ನಟ ಪುನೀತ್ ಕಾರ್ಯನಿರ್ವಹಿಸಿದ್ದರು ಎಂದ ಅವರು, ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ರಾಜ್ಯ ಸಹಕಾರ ಮಹಾಮಂಡಳ ಮಾಜಿ ಅಧ್ಯಕ್ಷ ಎನ್.ಗಂಗಣ್ಣ , ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನAಜುAಡಯ್ಯ, ಸದಸ್ಯರಾದ ಎಂ.ವಿ.ಮAಜುನಾಥ್, ಲಾಲಾಪೇಟೆ ಮಂಜುನಾಥ್, ಮಾಜಿ ಸದಸ್ಯ ಉಮೇಶ್ , ದಲಿತ ಮುಖಂಡ ಗೋಪಾಲಯ್ಯ, ಗ್ರಾ.ಪಂ.ಮಾಜಿ ಅಧ್ಯಕ್ಷ ವಿ.ಆರ್.ಭಾಸ್ಕರ್, ದೀಪಕ್ ಹಾಗೂ ಹಾಜರಿದ್ದು ಪುನೀತ್ ನಿಧನಕ್ಕೆ ಸಂತಾಪ ಸಲ್ಲಿಸಿದರು.