ಎಸಿಬಿ ದಾಳಿ ಕೋಟ್ಯಂತರ ರೂ ಅಕ್ರಮ ಆಸ್ತಿ ಪತ್ತೆ

ACB raid

ಎಸಿಬಿ ದಾಳಿ ಕೋಟ್ಯಂತರ ರೂ ಅಕ್ರಮ ಆಸ್ತಿ ಪತ್ತೆ

ಎಸಿಬಿ ದಾಳಿ ಕೋಟ್ಯಂತರ ರೂ ಅಕ್ರಮ ಆಸ್ತಿ ಪತ್ತೆ


ಬೆಂಗಳೂರು: ಕೆಎಎಸ್ ಅಧಿಕಾರಿ ಸೇರಿ 15 ಮಂದಿ ಭ್ರಷ್ಟ ನೌಕರರ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ರಾಜ್ಯದ ಸುಮಾರು 60 ಕ್ಕೂ ಹೆಚ್ಚು ಕಡೆಗಳಲ್ಲಿ 8 ಮಂದಿ ಎಸ್‌ಪಿಗಳು, 100 ಮಂದಿ ಅಧಿಕಾರಿಗಳು ಸೇರಿ 408 ಕ್ಕೂ ಹೆಚ್ಚಿನ ಸಿಬ್ಬಂದಿಯು ಏಕಕಾಲದಲ್ಲಿ ದಾಳಿ ಪತ್ತೆಹಚ್ಚಿರುವ ಚಿನ್ನ ಬೆಳ್ಳಿ ನಗದು ಬಂಗಲೆ ಮನೆಗಳು ನಿವೇಶನಗಳು ಆಸ್ತಿಪಾಸ್ತಿ ಕಂಡು ಎಸಿಬಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.

ಬಲೆಗೆ ಬಿದ್ದರುವ ಅಧಿಕಾರಿಗಳು ಗಳಿಸಿರುವ ಅಕ್ರಮ ಆಸ್ತಿ ಬಗ್ಗೆ ಬಂದ ನೂರಾರು ದೂರುಗಳ ಹಿನ್ನಲೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಏಕಕಾಲಕ್ಕೆ ದಾಳಿ ನಡೆಸಿದಾಗ ಪತ್ತೆಯಾದ ಅಕ್ರಮ ಆಸ್ತಿಪಾಸ್ತಿಗಳನ್ನು ಒಂದೆಡೆ ಕಲೆ ಹಾಕಿ ಲೆಕ್ಕ ಮಾಡುವುದೇ ಅಧಿಕಾರಿಗಳಿಗೆ ಸಾಕು ಸಾಕಾಗಿ ಹೋಗಿದೆ.

ಗದಗದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರ ಮನೆಯಲ್ಲಿ 3.5ಕೋಟಿ ಮೌಲ್ಯದ 7ಕೆಜಿ ಚಿನ್ನ 17ಲಕ್ಷ ನಗದು ದೊರೆತಿದ್ದು ಇದು ಕೇವಲ ಪ್ರಾಥಮಿಕ ಮಾಹಿತಿಯಷ್ಟೇ ಆಗಿದೆ.

ದೊಡ್ಡಬಳ್ಳಾಪುರದ ರೆವಿನ್ಯೂ ಇನ್ಸ್ಪೆಕ್ಟರ್ ಲಕ್ಷಿ÷್ಮಕಾಂತಯ್ಯ ಅವರ ಬಹು ಮಹಡಿಗಳ ಕಟ್ಟಡ ಕೋಟ್ಯಾಂತರ ಮೌಲ್ಯದ್ದಾಗಿದ್ದು ಅವರ ಮನೆಯಲ್ಲಿ ಕೋಟಿ ಮೌಲ್ಯದ ಚಿನ್ನ ಬೆಳ್ಳಿ ಪತ್ತೆಯಾಗಿದೆ.

ಜೇವರ್ಗಿಯ ಲೋಕೋಪಯೋಗಿ ಎಂಜಿನಿಯರ್ ಎಸ್.ಎಂ.ಬಿರಾದಾರ್ ಅವರ ಬಂಗಲೆ ಯಾವ ಸಚಿವರ ಬಂಗಲೆಗಿAತ ಕಡಿಮೆ ಇಲ್ಲ ಎನಿಸುತ್ತದೆ.

ಗೋಕಾಕ್‌ನ ಹಿರಿಯ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಸದಾಶಿವ ಮರಲಿಂಗಣ್ಣನವರ್, ಅವರ ಮನೆಯಲ್ಲಿ ದೊರೆತ 1ಕೆಜಿ 135 ಗ್ರಾಂ ಚಿನ್ನಾಭರಣಗಳು 82 ಲಕ್ಷ 21ಸಾವಿರ 172 ನಗದು ಪರಿಶೀಲನೆ ನಡೆಸಲಾಗಿದೆ.

ನಗರದ ಸಕಾಲ ಕೆಎಎಸ್ ಅಧಿಕಾರಿ ನಾಗರಾಜ್, ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಜಿಯೋಥೆರಪಿಸ್ಟ್ ರಾಜಶೇಖರ, ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ ಮಾಯಣ್ಣ, ಬಿಬಿಎಂಪಿ ಸಿಬ್ಬಂದಿ ಬಾಗಲಗುಂಟೆಯ ಗಿರಿ ಅವರ ಕಚೇರಿ ಮನೆಗಳ ಮೇಲೆ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎಸ್. ಲಿಂಗೇಗೌಡ, ಕಾವೇರಿ ನೀರಾವರಿ ನಿಗಮದ ಮಂಡ್ಯದ ಹೇಮಾವತಿ ಎಡದಂಡೆ ಕಾಲುವೆ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್ ಕೆ. ಬೆಂಗಳೂರು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದ ವಾಸುದೇವ್, ಸವದತ್ತಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಎ.ಕೆ. ಮಾಸ್ತಿ, ಗೋಕಾಕದ ಹಿರಿಯ ಮೋಟಾರು ವಾಹನ ನಿರೀಕ್ಷಕ ಸದಾಶಿವ ಮರಿಲಿಂಗಣ್ಣನವರ್, ಬೆಳಗಾವಿಯ ಹೆಸ್ಕಾಂ ಕಚೇರಿಯ ಸಿ ದರ್ಜೆ ಸಿಬ್ಬಂದಿ ನತಾಜಿ ಹೀರಾಜಿ ಪಾಟೀಲ್, ಬಳ್ಳಾರಿಯ ನಿವೃತ್ತ ಉಪ ನೋಂದಣಾಧಿಕಾರಿ ಶಿವಾನಂದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

2021ರ ಜುಲೈನಲ್ಲಿ ನಿವೃತ್ತಿ ಹೊಂದಿದ್ದ ಬಳ್ಳಾರಿ ಸಬ್ ರಿಜಿಸ್ಟರ್ ಕೆ.ಎಸ್.ಶಿವಾನಂದ್ ಅವರ ಬಳಿ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.

ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿಗಳ ಕಚೇರಿ ಮನೆಗಳು ಆಸ್ತಿ ಪಾಸ್ತಿಗಳ ಮೇಲೆ ಇಂದು ಮುಂಜಾನೆಯಿAದ ನಡೆದಿರುವ ದಾಳಿಯು ಇನ್ನೂ ಮುಂದುವರೆದಿದ್ದು ವಶಪಡಿಸಿಕೊಂಡ ಆಸ್ತಿಪಾಸ್ತಿಗಳು ಸ್ವತ್ತುಗಳ ಪರಿಶೀಲನೆ ನಡೆಸಲಾಗಿದೆ ಒಂದೆರಡು ದಿನಗಳಲ್ಲಿ ಅವುಗಳ ಒಟ್ಟಾರೆ ಮೌಲ್ಯ ದೊರೆಯಲಿದೆ ಎಂದರು.

ಎಸಿಬಿ ಬಲೆಗೆ ಬಿದ್ದ ಶಾಂತನಗೌಡರು ಮನೆಯ ಪೈಪ್‌ನಲ್ಲಿ ಹಣ ಬಚ್ಚಿಟ್ಟಿದ್ದರು. ಅಷ್ಟೇ ಅಲ್ಲದೆ ಬಕೆಟ್‌ನಲ್ಲಿ ಹಣ ತುಂಬಿಟ್ಟಿದ್ದು ಪತ್ತೆಯಾಗಿದೆ.

ಬಲೆಗೆ ಬಿದ್ದವರು

1.ಕೆ.ಎಸ್ ಲಿಂಗೇಗೌಡ,ಕಾರ್ಯನಿರ್ವಾಹಕ ಇಂಜಿನಿಯರ್ ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರು
2. ಶ್ರೀನಿವಾಸ್ ಕೆ. ಕಾರ್ಯನಿರ್ವಾಹಕ
ಇಂಜಿನಿಯರ್ ಹೆಚ್.ಎಲ್.ಬಿ.ಸಿ ಮಂಡ್ಯ
3. ಲಕ್ಷಿ÷್ಮಕಾಂತಯ್ಯ, ರೆವಿನ್ಯೂ ಇನ್ಸ್ಪೆಕ್ಟರ್ ದೊಡ್ಡಬಳ್ಳಾಪುರ.
4. ವಾಸುದೇವ್, ಪ್ರಾಜೆಕ್ಟ್ ಮ್ಯಾನೇಜರ್ ನಿರ್ಮಿತಿ ಕೇಂದ್ರ ಬೆಂಗಳೂರು.
5. ಬಿ.ಕೃಷ್ಣಾರೆಡ್ಡಿ, ಜನರಲ್ ಮ್ಯಾನೇಜರ್, ನಂದಿನಿ ಡೈರಿ ಬೆಂಗಳೂರು.
6. ಟಿ.ಎಸ್.ರುದ್ರೇಶಪ್ಪ, ಜಂಟಿ ನಿರ್ದೇಶಕ ಕೃಷಿ ಇಲಾಖೆ ಗದಗ
7. ಎ.ಕೆ.ಮಸ್ತಿ, ಕೋ ಆಪರೇಟಿವ್ ಅಭಿವೃದ್ಧಿ ಅಧಿಕಾರಿ ಸವದತ್ತಿ ಎರವಲು ಸೇವೆ, ಬೈಲಹೊಂಗಲ
8. ಸದಾಶಿವ ಮರಲಿಂಗಣ್ಣನವರ್, ಸೀನಿಯರ್ ಮೋಟಾರ್ ಇನ್ಸ್?ಪೆಕ್ಟರ್ ಗೋಕಾಕ್
9.ನಾತಾಜೀ ಹೀರಾಜಿ ಪಾಟೀಲ್, ಗ್ರೂಪ್ ಸಿ ಬೆಳಗಾಂ ಹೆಸ್ಕಾಂ
10.ಕೆ.ಎಸ್.ಶಿವಾನAದ್, ನಿವೃತ್ತ ಸಬ್ ರಿಜಿಸ್ಟರ್, ಬಳ್ಳಾರಿ
11. ರಾಜಶೇಖರ್, ಫಿಜಿಯೋಥೆರಪಿಸ್ಟ್, ಯಲಹಂಕ ಸರ್ಕಾರಿ ಆಸ್ಪತ್ರೆ
12. ಮಾಯಣ್ಣ.ಎಂ, ಪ್ರಥಮ ದರ್ಜೆ ಸಹಾಯಕ ಬಿಬಿಎಂಪಿ ಬೆಂಗಳೂರು ರೋಡ್ಸ್ &ಇನ್ಫಾçಸ್ಟçಕ್ಚರ್
13. ಎಲ್.ಸಿ.ನಾಗರಾಜ್, ಸಕಾಲ, ಅಡಳಿತಾಧಿಕಾರಿ, ಬೆಂಗಳೂರು
14. ಜಿ.ವಿ.ಗಿರಿ, ಡಿ ಗ್ರೂಪ್ ಸಿಬ್ಬಂದಿ ಬಿಬಿಎಂಪಿ ಯಶವಂತಪುರ
15. ಎಸ್.ಎಂ.ಬಿರಾದಾರ್, ಜಾಯಿಂಟ್ ಎಂಜಿನಿಯರ್ ಲೋಕೋಪಯೋಗಿ ಇಲಾಖೆ, ಜೇವರ್ಗಿ.

ರಾಜ್ಯದ 68 ಕ್ಕೂ ಕಡೆಗಳಲ್ಲಿ ಭ್ರಷ್ಟರ ವಿರುದ್ಧ ನಡೆದ ಬೃಹತ್ ಏಕಕಾಲದ ದಾಳಿಯಲ್ಲಿ ಎಸಿಬಿಯ 8 ಎಸ್‌ಪಿಗಳು ಹಾಗೂ 100 ಮಂದಿ ವಿವಿಧ ಹಂತದ ಅಧಿಕಾರಿಗಳು ಸೇರಿ ಒಟ್ಟು 408 ಪಾಲ್ಗೊಂಡಿದ್ದು ಶೋಧ ಪರಿಶೀಲನೆ ಮುಂದುವರೆದಿದೆ.