ಗಂಜಲಗುಂಟೆ: 400 ಎಕರೆ ಪ್ರದೇಶಕ್ಕೆ ನೀರು: ತಲಪರಿಕೆ ಅಭಿವೃದ್ಧಿಗೆ ಆರ್. ರಾಜೇಂದ್ರ ಚಾಲನೆ
r-rajendra-madhugiri-congress-wins-in -2023
ಗಂಜಲಗುಂಟೆ: 400 ಎಕರೆ ಪ್ರದೇಶಕ್ಕೆ ನೀರು:
ತಲಪರಿಕೆ ಅಭಿವೃದ್ಧಿಗೆ ಆರ್. ರಾಜೇಂದ್ರ ಚಾಲನೆ
ಮಧುಗಿರಿ: ಗಂಜಲಗುAಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 400 ಎಕರೆ ಪ್ರದೇಶಕ್ಕೆ ನಿರಂತರ ನೀರುಣಿಸುವ ತಲಪುರಿಕೆಯಲ್ಲಿ ಮುಚ್ಚಿ ಹೋಗಿದ್ದ ಕಾಲುವೆಯನ್ನು ತೆಗೆಯುವ ಮೂಲಕ ರೈತರಿಗೆ ಅನುಕೂಲವಾಗುವ ಮಹತ್ಕಾರ್ಯಕ್ಕೆ ಕೆ.ಎನ್.ಆರ್. ಅಭಿಮಾನಿ ಬಳಗ, ಆರ್.ಆರ್. ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರರವರು ಜೆಸಿಬಿ ಚಾಲನೆ ಮಾಡುವ ಮೂಲಕ ಬುಧವಾರ ಚಾಲನೆ ನೀಡಿದರು.
ಬುಧವಾರ ಗಂಜಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಗಂಜಲಗುAಟೆ ಗ್ರಾಮದಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದ ಮುಂಭಾಗ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜವಾರ
ಕೆರೆ ಕೋಡಿ ಬಿದ್ದ ನಂತರ ಈ ಭಾಗದಲ್ಲಿ ತಲಪುರಿಕೆಗಳಿಗೆ ನೀರಿನ ಜೀವಕಳೆ ಉದ್ಭವಿಸುತ್ತದೆ. ಈ ತಲಪುರಿಕೆ ನೀರು ಮೋಟಾರ್ ಪಂಪ್ ಸೆಟ್ ಉಪಯೋಗಿಸದೆ ನೀರು ತನ್ನಂತಾನೆ ಉಕ್ಕುವ ನೀರನ್ನು ರೈತರು ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಗಂಜಲಗುAಟೆ ಗ್ರಾಮದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಬಳಿ ಈ ತಲಪುರಿಕೆ ಇದ್ದು ಅಲ್ಲಿಂದ ಮುಚ್ಚಿಹೋಗಿರುವ ಕಾಲುವೆಯನ್ನು ಸ್ವಚ್ಛಗೊಳಿಸುವುದರಿಂದ ರೈತರಿಗೆ ಅನುಕೂಲ ಆಗಲಿದೆ. ರೈತರು ನೀರನ್ನು ಸದುಪಯೋಗ ಪಡಿಸಿಕೊಂಡು ಯಾವುದೇ ಕಿತ್ತಾಟ ಮಾಡಿಕೊಳ್ಳದೆ ಸದುಪಯೋಗ ಮಾಡಿಕೊಳ್ಳಿ, ಅಮರಾವತಿ ಬಳಿಯ ಕಾಲುವೆಯನ್ನು ತೆಗೆಸಲಾಗುವುದೆಂದರು.
ಕೆಎನ್‌ಆರ್‌ರನ್ನು ಗೆಲ್ಲಿಸಿ ಆರ್.ರಾಜೇಂದ್ರ ಮನವಿ:
ಕೆ.ಎನ್. ರಾಜಣ್ಣನವರು ಶಾಸಕರಾಗಿದ್ದ ಕಾಲದಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಕಣ್ಮುಂದೆ ಇದೆ. 2023 ರ ಚುನಾವಣೆಯಲ್ಲಿ ಅವರನ್ನು ಶಾಸಕರನ್ನಾಗಿಸಿ ಎಂದು ಮನವಿ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗುವುದು ನಿಶ್ಚಿತ ರಾಜಣ್ಣನವರು ಮಂತ್ರಿಯಾಗುತ್ತಾರೆಂದು ಎಂಎಲ್‌ಸಿ ಆರ್. ರಾಜೇಂದ್ರ ಭವಿಷ್ಯ ನುಡಿದರು.
ಕೋವಿಡ್ ಕಷ್ಟ ಕಾಲದಲ್ಲಿ ಈ ಭಾಗದಲ್ಲಿ ಇರುವ ವಿಎಸ್ಸೆಸ್ಸೆನ್ ಮೂಲಕ 10 ಕೋಟಿ ರೂ.ಗಳವರೆಗೂ ರೈತರಿಗೆ ಸಾಲವನ್ನು ನೀಡಲಾಗಿದೆ. ಈ ತಲಪುರಿಕೆ ನೀರು ಹಾದು ಹೋಗುವ ಕಾಲುವೆ ಮುಚ್ಚಿ ಹೋಗಿದ್ದರೂ ತೆರವುಗೊಳಿಸಲು ರಾಜಣ್ಣನವರು ತಮ್ಮ ಸ್ವಂತ ಖರ್ಚಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಮಾಡಿರುತ್ತಾರೆ. 2015 ರಲ್ಲಿ ಬಿಜವಾರ ಕೆರೆ ತುಂಬಿದಾಗ ಶಾಸಕರಾಗಿದ್ದ ಕೆ.ಎನ್. ರಾಜಣ್ಣ ಅವರ ಈ ಕಾಲುವೆ ತೆರವುಗೊಳಿಸಿದ್ದರೆಂದು ಇಲ್ಲಿನ ರೈತರು ಹೇಳುತ್ತಾರೆ ಮತ್ತೆ ಈಗ ಬಿಜವಾರ ಕೆರೆ ಕೋಡಿ ಹರಿದಿರುವುದರಿಂದ ತಲಪುರಿಕೆಗೆ ಮತ್ತೆ ಜೀವ ಬಂದಿದೆ ಇದು ಒಂದು ವರ್ಷ ಹರಿಯಲಿದ್ದು, ಜಲಮೂಲಗಳ ಅಭಿವೃದ್ಧಿಗೆ ಶಾಸಕ ಕೆ.ಎನ್. ರಾಜಣ್ಣನವರು ತೆಗೆದುಕೊಳ್ಳವ ಮುತುವರ್ಜಿ ಫಲ ಜಯಮಂಗಲಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿದ್ದರಿಂದ ಮೂವತ್ತು ವರ್ಷಗಳ ನಂತರ ದೊಡ್ಡಮಾಲೂರು ಕೆರೆ ತುಂಬಿರುವುದು ನಿದರ್ಶನವೆಂದರು.
ನಿಮ್ಮ ಪ್ರೀತಿ-ವಿಶ್ವಾಸ ಇದೇ ರೀತಿ ನನ್ನ ಮೇಲಿರಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಅಣಿಯಾಗಬೇಕು, ನನ್ನನ್ನು ಆಯ್ಕೆ ಮಾಡುವ ಮೂಲಕ ಒಂದು ಶಕ್ತಿಯನ್ನು ತುಂಬಿದ್ದೀರಿ ಪಕ್ಷಾತೀತವಾಗಿ ನನಗೆ ಸಹಕಾರ ನೀಡಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಕೆ.ಎನ್. ರಾಜಣ್ಣನವರ ಕೈ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆಂದರು.
ಇದೇ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ .ನಾಗೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಎಸ್. ಮಲ್ಲಿಕಾರ್ಜುನಯ್ಯ, ಎಸ್.ಆರ್. ರಾಜಗೋಪಾಲ್, ಗಂಜಲಗುAಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ ಡಿ.ಹೆಚ್. ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷೆ ಮರಿಯಣ್ಣ, ವಿಎಸ್ಸೆಸ್ಸೆನ್ ಅಧ್ಯಕ್ಷ ಪಾಜೀಲ್, ಗ್ರಾಪಂ ಉಪಾಧ್ಯಕ್ಷೆ ಚೇತನಾ, ಸದಸ್ಯರುಗಳಾದ ಮಾಲಾ, ನಾಗಭೂಷಣ, ರಾಮಚಂದ್ರಪ್ಪ, ಲಕ್ಷಿ÷್ಮನಾರಾಯಣ, ರಂಗರಾಜು, ಅಮರಾವತಿ ದಾಸೇಗೌಡ ವೀರೇಶ್, ಭಕ್ತರಹಳ್ಳಿ ವೀರನಾಗಪ್ಪ, ಜಿ.ಎನ್. ರವಿ, ತಿಮ್ಮಣ್ಣ, ಕೆ. ರಮೇಶ್, ಪಟೇಲ್ ರಾಮಣ್ಣ, ಬ್ಯಾಂಕ್ ರಾಮಚಂದ್ರಪ್ಪ, ಎಚ್.ಎಸ್. ನಾಗಭೂಷಣ, ರಂಗರಾಜು ಇತರರು ಇದ್ದರು. ಕಾಂಗ್ರೆಸ್ ಮುಖಂಡ ಡಿ.ಹೆಚ್. ನಾಗರಾಜ್ ಸ್ವಾಗತಿಸಿ ನಿರೂಪಿಸಿದರು.
ಮಧುಗಿರಿ ಪಟ್ಟಣದಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅವರನ್ನು ಅವರ ನಿವಾಸದಲ್ಲಿ ಮಧುಗಿರಿ ತಾಲ್ಲೋಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಅಧ್ಯಕ್ಷ ಪ್ರಸನ್ನಕುಮಾರ್, ಪತ್ರಕರ್ತರಾದ ಮಾರುತಿ ಪ್ರಸನ್ನ ನಾರಾಯಣ ರಾಜು, ವಿ.ಆರ್. ಭಾಸ್ಕರ್, ಕಂಟಿ ಮಂಜು, ರೆಡ್ಡಿಹಳ್ಳಿ ಗಂಗಾಧರ ಹಾಜರಿದ್ದರು