ಭಾಷೆ ಕಲಿಕೆಯಲ್ಲಿ ವಿಶಾಲ ದೃಷ್ಟಿಕೋನ ಅಗತ್ಯ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ಅಭಿಮತ

veereshananda-swamiji-learn-languages-tumakuru

ಭಾಷೆ ಕಲಿಕೆಯಲ್ಲಿ ವಿಶಾಲ ದೃಷ್ಟಿಕೋನ ಅಗತ್ಯ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ಅಭಿಮತ


ಭಾಷೆ ಕಲಿಕೆಯಲ್ಲಿ ವಿಶಾಲ ದೃಷ್ಟಿಕೋನ ಅಗತ್ಯ
ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ಅಭಿಮತ


ತುಮಕೂರು: ಭಾಷೆಯ ಕಲಿಕೆಯ ವಿಚಾರದಲ್ಲಿ ವಿಶಾಲವಾದ ದೃಷ್ಟಿಕೋನ ಅತ್ಯಗತ್ಯ. ಶಿಕ್ಷಣದಲ್ಲಿ ಭಾಷೆಯ ಪಾತ್ರ ಅಪಾರವಾದದ್ದು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.


ಇಂಡಿಯ ಅಸೋಸಿಯೇಷನ್ ಆಫ್ ಸೇಂಟ್ ಲೂಯಿಸ್, ಅಮೆರಿಕಾ ಮತ್ತು ಐಪೆಕ್ ಸಲ್ಯೂಷನ್ಸ್ ಪ್ರೆöÊವೇಟ್ ಲಿಮಿಟೆಡ್, ಬೆಂಗಳೂರು ಇವರ ಸಹಯೋಗದಲ್ಲಿ ಸಂಯೋಜಿಸಿದ್ದ "ಗುಡಿಸಲಿನಲ್ಲಿ ಅರಳಿದ ಹೂವು : ಚಿತ್ರಲಿಂಗಯ್ಯ "ಎಂಬ ಒಂದು ದಿನದ ಅಂತರಾಷ್ಟಿçÃಯ ಅಂತರ್ಜಾಲ ವಿಚಾರ ಸಂಕಿರಣ ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಏಳು ಬೃಹತ್ ಸಂಪುಟ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.


ಜನರಿಗೆ ಹಿರಿಯರಿಂದ ಬರುವ ಆಸ್ತಿಗಳಲ್ಲಿ ಭಾಷೆಯೂ ಕೂಡ ಒಂದು. ಭಾಷೆ ಸದಾ ಸಂಶೋಧನೆಗೆ ಒಳಪಡುವ ಒಂದು ಪವಿತ್ರ ವಸ್ತುವಾಗಿದೆ. ಹಾಗಾಗಿ ಯಾವುದೇ ಭಾಷೆಯನ್ನು ಅತ್ಯಂತ ಲಘುವಾಗಿ ಪರಿಗಣಿಸಬಾರದು. ಅಲ್ಲದೆ ಭಾಷೆ ಭಾಷೆಗಳ ಮಧ್ಯೆ ಯಾವುದೇ ತಿಕ್ಕಾಟ ಇರಬಾರದು. ಯಾವುದೇ ಸಿದ್ಧಾಂತದ ಬಗ್ಗೆ ಕೀಳರಿಮೆ ಬೆಳಸಿಕೊಳ್ಳಬಾರದು. ಒಂದು ಭಾಷೆ ಎಂದರೆ ಒಂದು ದೇಶವಿದ್ದಂತೆ. ಜಪಾನ್ ರಾಷ್ಟçದಲ್ಲಿ ಎಂಟು ವರ್ಷ ಪೂರೈಸುವ ವೇಳೆಗೆ ಒಂದು ಶಾಲಾ ಮಗುವಿಗೆ ಆರು ಭಾಷೆಗಳನ್ನು ಕಲಿಸುತ್ತಾರೆ ಎಂದು ತಿಳಿಸಿದರು.


ಭಾಷೆ ಭಾವವಾಹಿನಿ, ನಮ್ಮ ಅಂತರAಗದ ಸತ್ಯವನ್ನು ಬಹಿರಂಗಗೊಳಿಸುವುದೇ ಭಾಷೆ ಎಂದು ರಾಮಕೃಷ್ಣ ಮಹಾಸಂಘದ ಶ್ರೇಷ್ಟ ಯತಿಗಳಾದ ಬ್ರಹ್ಮಲೀನ ಪರಮಪೂಜ್ಯ ಶ್ರೀ ಪುರುಷೋತ್ತಮನಂದ ಸ್ವಾಮಿಗಳು ತಿಳಿಸಿದ್ದಾರೆ. ಇವರು ಸುಮಾರು ಎಪ್ಪತ್ತೆöÊದು ಪುಸ್ತಕಗಳನ್ನು ಬರೆದಿದ್ದಾರೆ. ದೇಶದ ಉದ್ದಗಲಕ್ಕೂ ತಮ್ಮ ಗಾಯನದ ಮೂಲಕ ಖ್ಯಾತರಾಗಿದ್ದಾರೆ. ಅವರ ಪ್ರೇರಣೆಯಿಂದ ಭಾರತ ಮತ್ತು ಹೊರ ರಾಷ್ಟçಗಳಲ್ಲಿ ನೂರಕ್ಕೂ ಹೆಚ್ಚು ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಅಧ್ಯಾತ್ಮಿಕ ಜೀವನವನ್ನು ಒಪ್ಪಿಕೊಂಡು ಸಾಧನೆಯಲ್ಲಿ ತೊಡಗಿದ್ದಾರೆ. ಇಂತಹ ಮಹಾನ್ ಸಾಧಕರು ಕನ್ನಡ ಸಾರಸ್ವತ ಲೋಕದಲ್ಲಿ ಎಷ್ಟರ ಮಟ್ಟಿಗೆ ಪರಿಚಯವಾದರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.


ಕನ್ನಡ ಸಾಹಿತ್ಯವು ಶ್ರೇಷ್ಟ ಪರಂಪರೆಯನ್ನು ಒಳಗೊಂಡಿದೆ. ಕವಿ, ಋಷಿ, ಸಂತರು ಒಂದು ವಿಶೇಷವಾದ ಆದರ್ಶವನ್ನು ಸಮಾಜಕ್ಕೆ ಅನುಗ್ರಹಿಸುತ್ತಾರೆ. ಸರ್ವರಲ್ಲಿಯೂ ಆತ್ಮಜಾಗೃತಿಗೆ ಇವರೆಲ್ಲರೂ ಕಾರಣರಾಗುತ್ತಾರೆಂಬುದು ಕುವೆಂಪುರವರ ಅಭಿಮತವಾಗಿತ್ತು. ಡಿ.ವಿ. ಗುಂಡಪ್ಪ, ಟಿ.ಎಸ್. ವೆಂಕಣ್ಣಯ್ಯ, ತ.ಸು. ಶಾಮರಾಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇವರೆಲ್ಲರೂ ಕನ್ನಡವನ್ನು ಪ್ರೀತಿಸಿ ಕನ್ನಡ ಸಾಹಿತ್ಯ ಸಂಪತ್ತನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದರು.


ಕೃತಿಗಳನ್ನು ಲೋಕಾರ್ಪಣೆ ಮಾಡಿದ ಖ್ಯಾತ ಚಲನಚಿತ್ರ ನಟರಾದ ಸುಚೇಂದ್ರ ಪ್ರಸಾದ್ ಅವರು ಮಾತನಾಡುತ್ತಾ, ಯಾವುದೇ ವಿಷಯವನ್ನು ಅಂತರ್ ಶಿಸ್ತೀಯ ನೆಲೆಯಲ್ಲಿ ಗ್ರಹಿಸಿದಾಗ ಮಾತ್ರ ಅದರ ವೈಶಿಷ್ಟ್ಯತೆ ಅರಿಯಲು ಸಾಧ್ಯವಾಗುತ್ತದೆ. ಯುವ ಲೇಖಕರಾದ ಚಿತ್ರಲಿಂಗಯ್ಯನವರು ಕನ್ನಡ ಸಾರಸ್ವತ ಲೋಕದಲ್ಲಿ ಛಲ ಬಿಡದ ತ್ರಿವಿಕ್ರಮನಂತೆ ಏನಾದರೊಂದು ಕಾಯಕವನ್ನು ಬಹಳ ನಿಷ್ಠೆಯಿಂದ ಮಾಡುತ್ತಿರುತ್ತಾರೆ. ಅವರ ಈ ನಡೆ ಮುಂದಿನ ತಲೆಮಾರಿಗೆ ಮಾದರಿಯಾಗಿದೆ ಎಂದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಸವ ಜ್ಯೋತಿ ಪ್ರಶಸ್ತಿ ಪುರಸ್ಕೃತರಾದ ಮತ್ತು ಆರ್.ಎನ್.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಧೀರ್ ಪೈ ಕೆ.ಎಲ್. ಮಾತನಾಡುತ್ತಾ, ಸಾಹಿತ್ಯದ ಅಧ್ಯಯನದಿಂದ ಮನುಷ್ಯ ತನ್ನಲ್ಲಿ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳಬಹುದು. ಮಾನವೀಯ ನೆಲೆಯಲ್ಲಿ ನಾವು ಸಾಗಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಇಂಡಿಯ ಅಸೋಸಿಯೇಷನ್ ಆಫ್ ಸೆಂಟ್ ಲೂಯಿಸ್ ಅಮೆರಿಕಾ ಅಧ್ಯಕ್ಷ ಸತೀಶ್ ನಂಜಪ್ಪ ಮಾತನಾಡಿ, ಬೇರೆ ಬೇರೆ ಭಾಷೆಗಳನ್ನು ಗೌರವಿಸಬೇಕು. ಆದರೆ ಕನ್ನಡ ಭಾಷೆಯನ್ನು ಹೃದಯದ ಭಾಷೆಯನ್ನಾಗಿಸಿಕೊಳ್ಳಬೇಕು. ಕನ್ನಡ ಭಾಷೆಯು ತನ್ನ ವೈಶಿಷ್ಟ್ಯತೆಯಿಂದ ಇಡೀ ವಿಶ್ವದಾದ್ಯಂತ ಪಸರಿಸಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಲೇಖಕರಾದ  ಡಾ. ಡಿ.ಸಿ. ಚಿತ್ರಲಿಂಗಯ್ಯ, ಪ್ರವೀಣ್ ರೈ ಮತ್ತು ಶಿವನಂದನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂತರರಾಷ್ಟಿçÃಯ ಜಾನಪದ ಗಾಯಕರಾದ ಅಮ್ಮ ರಾಮಚಂದ್ರ ಪ್ರಾರ್ಥಿಸಿದರು. ಶ್ರೀಮತಿ ಮಂಜುಳಾ ನಿರೂಪಿಸಿದರು.


ಅಧ್ಯಯನವಿರದ ಅಧ್ಯಾಪನ ಒಳ್ಳೆಯದಲ್ಲ. ಹಾಗಾಗಿ ನಾವು ಮೊದಲು ನಮ್ಮ ಹಿಂದಿನ ಪರಂಪರೆಯನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಾವು ಬೇರುಗಳಿಲ್ಲದ ಮರಗಳಾಗಿ ನಿಂತು ಬಿಡುತ್ತೇವೆ.


- ಸುಚೇಂದ್ರ ಪ್ರಸಾದ್, ಚಲನಚಿತ್ರ ನಟ



ನಮ್ಮದು ಜ್ಞಾನದಾಹಿ ಸಮಾಜವಾಗಬೇಕೆ ಹೊರತು ಧನದಾಹಿ ಸಮಾಜ ಆಗಬಾರದು. ಪ್ರತಿಯೊಂದು ವಿಷಯದಲ್ಲೂ ಸೂಕ್ಷ್ಮವಾದ ವಿವೇಚನೆಯನ್ನು ಇಟ್ಟುಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣವೊಂದೇ ಮನುಷ್ಯನಿಗೆ ಮುಕ್ತವಾದ ಸ್ವಾತಂತ್ರ‍್ಯವನ್ನು ಕೊಡುತ್ತದೆ.


- ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಅಧ್ಯಕ್ಷರು,
 ರಾಮಕೃಷ್ಣ ವಿವೇಕಾನಂದ ಆಶ್ರಮ