ಮಧುಗಿರಿ-ಬಗರ್‌ಹುಕುಂ ಜಮೀನು: ನಾಳೆ ಗ್ರಾಮಸ್ಥರ ಪ್ರತಿಭಟನಾ ಸಭೆ

ಮಧುಗಿರಿ-ಬಗರ್‌ಹುಕುಂ ಜಮೀನು: ನಾಳೆ ಗ್ರಾಮಸ್ಥರ ಪ್ರತಿಭಟನಾ ಸಭೆ

ಮಧುಗಿರಿ-ಬಗರ್‌ಹುಕುಂ ಜಮೀನು: ನಾಳೆ ಗ್ರಾಮಸ್ಥರ ಪ್ರತಿಭಟನಾ ಸಭೆ

ಮಧುಗಿರಿ-ಬಗರ್‌ಹುಕುಂ ಜಮೀನು:
ನಾಳೆ ಗ್ರಾಮಸ್ಥರ ಪ್ರತಿಭಟನಾ ಸಭೆ


ಮಧುಗಿರಿ: ಮಾರ್ಚ್ 12ರ ಶನಿವಾರ ಬೆಳಿಗ್ಗೆ 10.30 ಕ್ಕೆ ಮಧುಗಿರಿ ತಾಲ್ಲೋಕು ಬಂದ್ರೆಹಳ್ಳಿ ತೇರಿನಬೀದಿ ಸಮೀಪದ ಬೆಳ್ಳೂರು ಕಟ್ಟೆ ಬಳಿ ರೈತರ ಬಗರ್ ಹುಕುಂ ಸಾಗುವಳಿ ಜಮೀನುಗಳನ್ನು ಅರಣ್ಯ ಇಲಾಖೆ ಬಲವಂತವಾಗಿ ಕಸಿದುಕೊಳ್ಳುವ ಹಾಗೂ ಸರ್ಕಾರದ ಹುನ್ನಾರದ ವಿರುದ್ಧ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ.


ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಸಹಕಾರದಲ್ಲಿ ಈ ಸಭೆ ನಡೆಯಲಿದ್ದು ಸಭೆಗೆ ಭೂಮಿ ಕಳೆದುಕೊಳ್ಳುತ್ತಿರುವ 25 ಹಳ್ಳಿಗಳ ಬಡಕುಟುಂಬದ ರೈತರು ಕುಟುಂಬ ಸಮೇತ ಆಗಮಿಸಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು ತಿಳಿಸಿದ್ದಾರೆ.