ಕೈಗಾರಿಕಾ ಪ್ರದೇಶದಲ್ಲಿ ಆಸ್ತಿ ತೆರಿಗೆಗೆ ನಿರ್ಧಾರ ಪಾಲಿಕೆಗೆ 30 ರಿಂದ 40 ಕೋಟಿ ರೂ. ಸಂಪನ್ಮೂಲ ನಿರೀಕ್ಷೆ

ಕೈಗಾರಿಕಾ ಪ್ರದೇಶದಲ್ಲಿ ಆಸ್ತಿ ತೆರಿಗೆಗೆ ನಿರ್ಧಾರ ಪಾಲಿಕೆಗೆ 30 ರಿಂದ 40 ಕೋಟಿ ರೂ. ಸಂಪನ್ಮೂಲ ನಿರೀಕ್ಷೆ, property tax from tumkur mahanagarapalike

ಕೈಗಾರಿಕಾ ಪ್ರದೇಶದಲ್ಲಿ ಆಸ್ತಿ ತೆರಿಗೆಗೆ ನಿರ್ಧಾರ ಪಾಲಿಕೆಗೆ 30 ರಿಂದ 40 ಕೋಟಿ ರೂ. ಸಂಪನ್ಮೂಲ ನಿರೀಕ್ಷೆಕೈಗಾರಿಕಾ ಪ್ರದೇಶದಲ್ಲಿ ಆಸ್ತಿ ತೆರಿಗೆಗೆ ನಿರ್ಧಾರ
ಪಾಲಿಕೆಗೆ 30 ರಿಂದ 40 ಕೋಟಿ ರೂ. ಸಂಪನ್ಮೂಲ ನಿರೀಕ್ಷೆ


ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರು ಪ್ರತ್ಯೇಕ ಕೈಗಾರಿಕಾ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಗೆ ಸರ್ಕಾರದ ನಿರ್ದೇಶನದ ಅನುಸಾರ ಆಸ್ತಿ ತೆರಿಗೆ ವಿಧಿಸುವ ಬಗ್ಗೆ ಮಹತ್ವದ ನಿರ್ಧಾರವೊಂದನ್ನು ಮಹಾನಗರ ಪಾಲಿಕೆಯ ತೆರಿಗೆ ನಿರ್ಧರಣೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಕೈಗೊಂಡಿದೆ.
 ಇದರಿAದ ಪಾಲಿಕೆಗೆ ಸುಮಾರು 30 ರಿಂದ 40 ಕೋಟಿ ರೂ.ಗಳಷ್ಟು ಸಂಪನ್ಮೂಲ ಸಂಗ್ರಹವಾಗುವುದೆAದು ನಿರೀಕ್ಷಿಸಲಾಗಿದೆ.


 ಪಾಲಿಕೆ ವ್ಯಾಪ್ತಿಯಲ್ಲಿ ಕೆ.ಎಸ್.ಎಸ್.ಐ.ಡಿ.ಸಿ., ಕೆ.ಐ.ಎ.ಡಿ.ಬಿ. ಮತ್ತು ಡಿ.ಐ.ಸಿ. ಕೈಗಾರಿಕಾ ಪ್ರದೇಶಗಳಿವೆ. ಈ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಒಟ್ಟು ಸುಮಾರು 420 ಕೈಗಾರಿಕೆಗಳಿವೆ. ಇವುಗಳಿಗೆ ಆಸ್ತಿ ತೆರಿಗೆ ವಿಧಿಸುವ ಬಗ್ಗೆ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.


 2021 ರ ಡಿಸೆಂಬರ್ 15 ರಂದು ಪ್ರಕಟವಾಗಿರುವ “ಕರ್ನಾಟಕ ರಾಜ್ಯ ಪತ್ರ”ದಲ್ಲಿ ಕೈಗಾರಿಕಾ ಪ್ರದೇಶಗಳ ಆಸ್ತಿ ತೆರಿಗೆ ಪರಿಷ್ಕಾರಕ್ಕೆ ಸೂಚಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ವಾಣಿಜ್ಯ ಕಟ್ಟಡಗಳಿಗೆ ಹಾಲಿ ವಿಧಿಸುತ್ತಿರುವ ಆಸ್ತಿ ತೆರಿಗೆಯ ಶೇ. 70 ರಷ್ಟನ್ನು ಕೈಗಾರಿಕಾ ಪ್ರದೇಶದ ಕೈಗಾರಿಕಾ ಕಟ್ಟಡಗಳಿಗೆ ವಿಧಿಸಲು ಸೂಚನೆ ನೀಡಲಾಗಿದೆ. ಈ ವಿಷಯವನ್ನು ಸ್ಥಾಯಿ ಸಮಿತಿ ಸಭೆಯಲ್ಲಿ ಮಂಡಿಸಿದ್ದು, ಅಲ್ಲಿ ವ್ಯಾಪಕ ಚರ್ಚೆಗೆ ಒಳಗಾಯಿತು. 


 ಅಂತರಸನಹಳ್ಳಿ, ಬಟವಾಡಿ ಮತ್ತು ಸತ್ಯಮಂಗಲದಲ್ಲಿ ಕೆ.ಎಸ್.ಎಸ್.ಐ.ಡಿ.ಸಿ., ಡಿ.ಐ.ಸಿ. ಮತ್ತು ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶವಿದೆ. ಈ ಮೂರು ಸ್ಥಳಗಳಿಂದ ಒಟ್ಟು 420 ಕೈಗಾರಿಕೆಗಳಿವೆಯೆಂದು ಗುರುತಿಸಲಾಗಿದೆ. ಇವುಗಳಿಗೆ ಸರ್ಕಾರದ ನಿರ್ದೇಶನದ ಅನುಸಾರ ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳಿಗೆ ವಿಧಿಸುವ ಆಸ್ತಿ ತೆರಿಗೆಯ ಶೇ. 70 ರಷ್ಟು ಪ್ರಮಾಣದಲ್ಲಿ ಆಸ್ತಿ ತೆರಿಗೆ ವಿಧಿಸಿದರೆ, ಪಾಲಿಕೆಗೆ 30 ರಿಂದ 40 ಕೋಟಿ ರೂ. ಸಂಪನ್ಮೂಲ ಸಂಗ್ರಹವಾಗುತ್ತದೆAದು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಅಂತಿಮವಾಗಿ ಇದಕ್ಕೆ ಸ್ಥಾಯಿ ಸಮಿತಿಯು ಸರ್ವಾನುಮತದ ಒಪ್ಪಿಗೆ ಸೂಚಿಸಿದೆ. 


ಆಡಿಟ್ ಆಕ್ಷೇಪಣೆಯನ್ನು ವಜಾಗೊಳಿಸಬೇಕು:


 ಇದೇ ಕೈಗಾರಿಕಾ ಪ್ರದೇಶಗಳ ಕೈಗಾರಿಕೆಗಳಿಂದ ಕಂದಾಯ ಬಾಕಿ ಇರುವ ಬಗ್ಗೆ ಆಡಿಟ್ ಇಲಾಖೆಯು ವ್ಯಕ್ತಪಡಿಸಿರುವ ಆಕ್ಷೇಪಣೆಯನ್ನು ವಜಾಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂಬ ಇನ್ನೊಂದು ಮಹತ್ವದ ನಿರ್ಧಾರವನ್ನೂ ಇದೇ ಸ್ಥಾಯಿ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ. 


 2002-03 ನೇ ಸಾಲಿನಿಂದ 2017-18 ರವರೆಗೆ ಈ ಕೈಗಾರಿಕೆಗಳಿಂದ ಒಟ್ಟು 66 ಕೋಟಿ 26 ಲಕ್ಷ 67,046 ರೂ. ಕಂದಾಯ ಬಾಕಿ ಇದೆಯೆಂದೂ, ಇದನ್ನು ಸಂಗ್ರಹಿಸಿಲ್ಲವೆAದೂ ಆಡಿಟ್ ವರದಿಯಲ್ಲಿ ತೀವ್ರ ಆಕ್ಷೇಪಣೆ ವ್ಯಕ್ತವಾಗಿತ್ತು. ಈ ಬಗ್ಗೆ ಸಮಿತಿ ಸಭೆಯಲ್ಲಿ ವ್ಯಾಪಕ ಚರ್ಚೆ ಆಯಿತು. ಕೆ.ಎಸ್.ಎಸ್.ಐ.ಡಿ.ಸಿ., ಡಿ.ಐ.ಸಿ. ಮತ್ತು ಕೆ.ಐ.ಎ.ಡಿ.ಬಿ.ಯವರು ಈವರೆಗೆ ತಮ್ಮ ವ್ಯಾಪ್ತಿಯ ಆಸ್ತಿಗಳ ದಾಖಲಾತಿಗಳನ್ನು ಪಾಲಿಕೆಗೆ ಅಧಿಕೃತವಾಗಿ ಹಸ್ತಾಂತರಿಸಿಲ್ಲವೆAದು ಪಾಲಿಕೆ ಅಧಿಕಾರಿಗಳು ವಾದಿಸಿದರು. ಈ ಕಾರಣದಿಂದ ಸದರಿ ಆಡಿಟ್ ಆಕ್ಷೇಪಣೆಯನ್ನು ವಜಾಗೊಳಿಸಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಅಧಿಕಾರಿಗಳು ಕೋರಿದಾಗ, ಸಭೆಯು ಇದಕ್ಕೆ ಸರ್ವಾನುಮತದಿಂದ ಸಮ್ಮತಿಸಿದೆ.


ಸಮಿತಿ ಅಧ್ಯಕ್ಷೆ ನಳಿನಾ ಇಂದ್ರಕುಮಾರ್ ಅವರ ಅಧ್ಯಕ್ಷತೆಯಲ್ಲಿ ಏರ್ಪಟ್ಟಿದ್ದ ಈ ಸಭೆಯಲ್ಲಿ, ಮೇಯರ್ ಬಿ.ಜಿ. ಕೃಷ್ಣಪ್ಪ, ಉಪಮೇಯರ್ ನಾಜಿಮಾಬಿ, ಆಯುಕ್ತೆ ರೇಣುಕಾ, ಸಮಿತಿ ಸದಸ್ಯರುಗಳಾದ ನವೀನಾ ಅರುಣಾ, ಹೆಚ್.ಎಂ. ದೀಪಶ್ರೀ, ಬಿ.ಜಿ. ವೀಣಾ, ಹೆಚ್.ಎಸ್. ನಿರ್ಮಲ ಶಿವಕುಮಾರ್, ಎ. ಶ್ರೀನಿವಾಸ್ ಮತ್ತು ಟಿ.ಎಂ. ಮಹೇಶ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.