‘ಹರಡುತ್ತಿರುವ ದ್ವೇಷ ಶಮನಕ್ಕೆ ಬಸವ ಚಿಂತನೆ ಬೇಕು’ ಸಿದ್ಧಗಂಗಾ ಮಠದ ಪ್ರಾರ್ಥನಾ ಸಭೆಯಲ್ಲಿ ರಾಹುಲ್ ಗಾಂಧಿ ಆಶಯ

‘ಹರಡುತ್ತಿರುವ ದ್ವೇಷ ಶಮನಕ್ಕೆ ಬಸವ ಚಿಂತನೆ ಬೇಕು’ ಸಿದ್ಧಗಂಗಾ ಮಠದ ಪ್ರಾರ್ಥನಾ ಸಭೆಯಲ್ಲಿ ರಾಹುಲ್ ಗಾಂಧಿ ಆಶಯ

 


“ನಾವೆಲ್ಲರೂ ಮನುಷ್ಯರಾಗಿ  ಬದುಕಬೇಕು”


ರಾಷ್ಟç ರಾಜಕಾರಣದಲ್ಲಿ ಮುನ್ನಡಿಯಿಡುತ್ತಿರುವ ದಕ್ಷ ಹಾಗೂ ಯುವ ಐಕಾನ್ ರಾಹುಲ್ ಗಾಂಧಿಯವರು  ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮ ದಿನ ಆಚರಣೆಯ ಮುನ್ನಾದಿನ ಶ್ರೀಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿರುವುದು ಅತ್ಯಂತ ಸಂತಸ ತರುವ ಸಂಗತಿ. 


ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಅವರೂ ಶ್ರೀಮಠಕ್ಕೆ ಭೇಟಿ ನೀಡಿದ್ದರು, ಸೋನಿಯಾ ಗಾಂಧಿ ಹಾಗೂ ಹಿರಿಯ ಶ್ರೀಗಳು ಹಾಗೂ ನಾನು ಮೂವರೇ ಕಾರಿನಲ್ಲಿ ಪ್ರಯಾಣಿಸುವ ಅವಕಾಶ ದೊರಕಿತು. ಸೋನಿಯಾ ಗಾಂಧಿಯವರು ಅವರ ಅಂಗರಕ್ಷಕನನ್ನು ಕೆಳಗಿಳಿಸಿ ನನ್ನನ್ನು ಮುಂದಿನ ಸೀಟಿನಲ್ಲಿ ಕೂರಲು ಅವಕಾಶ ಮಾಡಿಕೊಟ್ಟಿದ್ದರು.


ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿ 
ಸಿದ್ಧಗಂಗಾ ಮಠಾಧ್ಯಕ್ಷರು‘ಹರಡುತ್ತಿರುವ ದ್ವೇಷ ಶಮನಕ್ಕೆ ಬಸವ ಚಿಂತನೆ ಬೇಕು’
ಸಿದ್ಧಗಂಗಾ ಮಠದ ಪ್ರಾರ್ಥನಾ ಸಭೆಯಲ್ಲಿ ರಾಹುಲ್ ಗಾಂಧಿ ಆಶಯ


ಸಿದ್ಧಗಂಗಾ ಮಠ:ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ನಮಗೆ ನೀಡಿರುವ ಸಂದೇಶದಂತೆ ನಾವೆಲ್ಲರೂ ಒಂದೇ , ನಾವು ಮನುಷ್ಯರಾಗಿ  ಬದುಕಬೇಕು, ನಮ್ಮಲ್ಲಿರುವ ದ್ವೇಷ ಅಸೂಯೆಗಳನ್ನು ದೂರ ಸರಿಸಬೇಕು. ಜಾತಿ ಧರ್ಮಗಳನ್ನು ನೋಡದೇ ಎಲ್ಲರನ್ನೂ ಅಪ್ಪಿಕೊಳ್ಳುವ ಪ್ರೀತಿಸುವ, ಜೀವನವನ್ನು ಸಾಗಿಸುವಂಥ ವಾತಾವರಣ ಹೆಚ್ಚು ಪ್ರಮಾಣದಲ್ಲಿ ಆಗಬೇಕು, ಅಂಥ ವಾತಾವರಣವನ್ನು ಶ್ರೀ ಮಠ ನಿರ್ಮಾಣ ಮಾಡುತ್ತಿದೆ. ದೇಶದಲ್ಲಿ ದ್ವೇಷ ಹರಡುತ್ತಿರುವ ಈ ದಿನಗಳಲ್ಲಿ ದ್ವೇಷವನ್ನು ಶಮನಗೊಳಿಸಲು ಈ ವಿಚಾರದ ಅವಶ್ಯಕತೆ ಹಿಂದೆAದಿಗಿAತಲೂ ಹೆಚ್ಚಿನದಾಗಿದೆ ಎಂದು ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದರು.


ಡಾ. ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮ ದಿನ ಆಚರಣೆಯ ಮುನ್ನಾದಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ಪೂಜೆ ಸಲ್ಲಿಸಿ, ಶ್ರೀಗಳನ್ನು ಭೇಟಿಯಾದ ಬಳಿಕ ದೈನಂದಿನ ಸಂಜೆಯ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ನನ್ನ ಹಾಗೂ ಮಠದ ಸಂಬಂಧ ಹೊಸತೇನೂ ಅಲ್ಲ, ನನ್ನ ಅಜ್ಜಿ ಇಂದಿರಾ ಗಾಂಧಿ, ಅಪ್ಪ ರಾಜೀವ್ ಗಾಂಧಿ ಹಾಗೂ ಅಮ್ಮ ಸೋನಿಯಾ ಗಾಂಧಿಯವರು ಇಲ್ಲಿಗೆ ಹಿಂದಿನಿAದಲೂ ಭೇಟಿ ನೀಡುತ್ತ ಬಂದಿದ್ದಾರೆ. ನಾನೂ ಸಹ ಒಂದು ಸಲ ಬಂದಿದ್ದೆ, ಆಗ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೆ, ಈ ಭೇಟಿಯಲ್ಲಿ ಅವರ ಅನುಪಸ್ಥಿತಿ ನನ್ನಲ್ಲಿ ದುಃಖವನ್ನು ಉಂಟು ಮಾಡಿದೆ ಎಂದರು.


ಸಮಾಜಕ್ಕೆ ಒಳಿತನ್ನು ಕಲಿಸುವ ಶ್ರೀ ಮಠಕ್ಕೆ ಯಾವುದೇ ನೆರವು ನೀಡಲು ನಾನು ಸದಾ ಸಿದ್ಧ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು. 


ಜೊತೆಯಲ್ಲಿದ್ದ ಗಣ್ಯರು 


ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ, ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ, ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಶಾಸಕಿ ಲಕ್ಷಿö್ಮÃ ಹೆಬ್ಬಾಳ್ಕರ್, ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಮಾಜಿ ಶಾಸಕ ಡಾ.ಎಸ್.ರಫೀಕ್ ಅಹ್ಮದ್