ಬಿಕ್ಕೇಗುಡ್ಡ-ಹಾಗಲವಾಡಿ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ: ಸಚಿವ ಜೆಸಿಎಂ
ಬಿಕ್ಕೇಗುಡ್ಡ-ಹಾಗಲವಾಡಿ ಯೋಜನೆಗಳನ್ನು
ಗಂಭೀರವಾಗಿ ಪರಿಗಣಿಸಿದ್ದೇನೆ: ಸಚಿವ ಜೆಸಿಎಂ
ನಿಟ್ಟೂರು: ಗುಬ್ಬಿ ತಾಲ್ಲೂಕಿನ ಬಿಕ್ಕೇಗುಡ್ಡ ಹಾಗೂ ಹಾಗಲವಾಡಿ ಯೋಜನೆಗಳನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದು ಕೂಡಲೇ ಆ ಯೋಜನೆಗಳ ಮೂಲಕ ಆ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹಾಗೂ ಇಡಕನಹಳ್ಳಿ ಗ್ರಾಮದಲ್ಲಿ ತಿಮ್ಮಪ್ಪನಹಟ್ಟಿ, ಹೊಸಹಳ್ಳಿ ಹಾಗೂ ನಿಟ್ಟೂರಿನ ಮರಿಯಮ್ಮ ದೇವಾಲಯದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇಡೀ ಜಿಲ್ಲೆಯನ್ನು ಸಮಗ್ರ ನೀರಾವರಿ ಯೋಜನೆ ಮಾಡಬೇಕು ಎಂಬುದು ನನ್ನ ಹಂಬಲವಾಗಿದೆ. ಹಾಗಾಗಿ ಅಭಿವೃದ್ಧಿಯ ವಿಚಾರದಲ್ಲಿ ಎಲ್ಲಿಯೂ ಕೂಡ ರಾಜಕೀಯವನ್ನೂ ಮಾಡಿಲ್ಲ ಎಂದರು.
ಜಿಲ್ಲೆಗೆ ಹೇಮಾವತಿ ನೀರಿನಿಂದ ಈ ಬಾರಿ ಸಾಕಷ್ಟು ನೀರು ಹರಿಯುತ್ತಿದೆ. ಆದರೆ ಕೆಲವು ಭಾಗದ ಕೆರೆಗಳನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ಪಂಪು ಮೋಟಾರು ಅಳವಡಿಸಿರುವುದು, ಹಾಗೂ ಏತ ನೀರಾವರಿ ವ್ಯವಸ್ಥೆ ಇರುವ ಭಾಗದಲ್ಲಿ ಸಾಕಷÀÄ್ಟ ಸಮಸ್ಯೆಯಿದೆ ಮತ್ತು ಹಿಂದೆ ಕೆರೆಗಳಿಗೆ ಮಾಡಿರುವ ಅಲೋಕೇಶನ್ ನೀರು ಹರಿಸುವ ಪ್ರಮಾಣದಲ್ಲಿ ಸಾಕಷÀÄ್ಟ ತಪ್ಪಾಗಿದೆ. ಹಾಗಾಗಿ ಎಲ್ಲಾ ಕೆರೆಗಳಲ್ಲೂ ಕೂಡ ನೀರು ನಿಲ್ಲಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಬಹುತೇಕ ಯೋಜನೆಗಳನ್ನು ಕುಡಿಯುವ ನೀರಿನ ಯೋಜನೆಯಾಗಿ ಅಳವಡಿಸಿರುವುದರಿಂದ ಅಲ್ಲಿಗೆ ಹೆಚ್ಚಿನ ನೀರನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.
ತುರುವೇಕೆರೆ ಹಾಗೂ ಗುಬ್ಬಿ ತಾಲ್ಲೂಕಿನ ಬಹುತೇಕ ಕೆರೆಗಳು ಸಮೃದ್ಧವಾಗಿವೆ. ಇನ್ನೂ ತುಮಕೂರು ಗ್ರಾಮಾಂತರ ಕುಣಿಗಲ್‌ವರೆಗೂ ಕೂಡ ಎಲ್ಲಾ ಕೆರೆಗಳನ್ನು ತುಂಬಿಸುವAತಹ ಯೋಜನೆಯನ್ನು ಮಾಡಲಾಗುತ್ತಿದ್ದು ಭದ್ರಾ ಮೇಲ್ದಂಡೆ, ಹೇಮಾವತಿ, ಏತನೀರಾವರಿ 3 ಯೋಜನೆಗಳನ್ನು ಬಳಸಿಕೊಂಡು ಎಲ್ಲಾ ಕೆರೆಗಳಿಗೂ ನೀರು ಹರಿಸುವಂತಹ ಯೋಜನೆಯನ್ನು ಮಾಡಲಾಗುತ್ತದೆ ಎಂದರು.
ಹಾಗೂ ಗುಬ್ಬಿ ತಾಲ್ಲೂಕಿನ ನಿಟ್ಟೂರು ಭಾಗದಲ್ಲಿ ಎಚ್‌ಎಎಲ್ ನಿರ್ಮಾಣವಾಗಿರುವುದರಿಂದ ಅಲ್ಲಿಗೆ ಬೇಕಾದಂತಹ ನೀರನ್ನು ಕಡಬಕೆರೆಯಿಂದ ಒದಗಿಸಲು ಯೋಜಿಸಲಾಗಿದೆ. ಕೆರೆಯ ಬದಲಿಗೆ ನೇರವಾಗಿ ನಾಲೆಯಿಂದಲೇ ಕೈಗಾರಿಕೆ ಒಳಭಾಗಕ್ಕೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ತುಮಕೂರು ಗ್ರಾಮಾಂತರ ಭಾಗದಲ್ಲಿ ನಲವತ್ತು ಕೆರೆಗಳಿಗೆ ಯೋಜನೆ ಮಾಡಲಾಗಿದೆ. ಆದರೆ ಅರ್ಧ ಟಿಎಂಸಿ ನೀರನ್ನು ಮಾತ್ರ ಇಡಲಾಗಿದೆ. ಹಾಗಾಗಿ ಎಲ್ಲಾ ಕೆರೆಗಳಿಗೂ ನೀರನ್ನು ತುಂಬಿಸುವುದು ಕಷ್ಟ. ಇದು ವೈಜ್ಞಾನಿಕವಾಗಿದೆ ಎಂದು ಹೇಳಿದ್ದೇ ದೊಡ್ಡ ಸುದ್ದಿಯಾಗಿತ್ತು ಎಂದು ತಿಳಿಸಿದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಮುಂದಿನ ವಷÀðದ ಮಾರ್ಚ್, ಏಪ್ರಿಲ್ ತಿಂಗಳ ಅವಧಿಯಲ್ಲಿ ಈ ಭಾಗದಲ್ಲಿ ನಿರ್ಮಾಣವಾಗಿರುವ ಎಚ್‌ಎಎಲ್ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಇಲ್ಲಿ ಈ ಘಟಕ ನಿರ್ಮಾಣವಾಗುತ್ತಿರುವುದರಿಂದ ಸಾವಿರಾರು ಜನರಿಗೆ ಜಿಲ್ಲೆಯಲ್ಲಿ ಉದ್ಯೋಗ ಸಿಗುತ್ತದೆ ಹಾಗೂ ನಿಟ್ಟೂರು ಭಾಗವು ಜಿಲ್ಲೆಯಲ್ಲೇ ಅತ್ಯಂತ ಅಭಿವೃದ್ಧಿ ಕ್ಷೇತ್ರವಾಗಿ ನಿರ್ಮಾಣವಾಗುವುದರಲ್ಲಿ ಎರಡನೆಯ ಮಾತಿಲ್ಲ ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಬಿ. ಚಂದ್ರಶೇಖರ್ ಬಾಬು ಮಾತನಾಡಿ, ಸುಮಾರು 12 ವಷÀðಗಳಿಂದ ಕಡಬ ಕೆರೆಯನ್ನು ತುಂಬಿಸಲು ಸಾಧ್ಯವಾಗಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಹೇಮಾವತಿ ನಾಲೆಯಲ್ಲಿ ಹೆಚ್ಚಿನ ನೀರನ್ನು ಹರಿಸಿದ ಕಾರಣದಿಂದಾಗಿ ದಶಕದ ಕನಸು ಈಗ ನನಸಾಗಿದೆ. ಕೇವಲ ನೀರಾವರಿ ಮಾತ್ರವಲ್ಲದೆ ಸಮಗ್ರ ಅಭಿವೃದ್ಧಿಯನ್ನು ಜಿಲ್ಲೆಯಲ್ಲಿ ಮಾಡುತ್ತಿದ್ದಾರೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎನ್.ಸಿ. ಪ್ರಕಾಶ್ ತಾಲ್ಲೂಕು ಅಧ್ಯಕ್ಷ ಪಂಚಾಕ್ಷರಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ನವ್ಯಾ ಚಂದ್ರಶೇಖರಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೀಶ್, ವಿಎಸ್‌ಎಸ್‌ಎನ್ ಅಧ್ಯಕ್ಷ ಕಿಡಿಗಣ್ಣಪ್ಪ, ಹಿಂದುಳಿದ ವರ್ಗದ ಮುಖಂಡ ಜಿ.ಎನ್. ಬೆಟ್ಟಸ್ವಾಮಿ, ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ನರಸೇಗೌಡ, ಸದಸ್ಯೆ ನವ್ಯಾ ಸೇರಿದಂತೆ ಮುಖಂಡರುಗಳು ಹಾಜರಿದ್ದರು.