‘ಹುಟ್ಟನ್ನೇ ಪ್ರಶ್ನಿಸುವ ವ್ಯವಸ್ಥೆಯೊಳಗೆ ಸಾಗುತ್ತಿರುವ ಬದುಕು’ ತುಂಬಾಡಿ ರಾಮಯ್ಯನವರ ‘ಓದೋ ರಂಗ’ ಕೃತಿ ಬಿಡುಗಡೆಯಲ್ಲಿ ಡಾ.ಎಲ್.ಹನುಮಂತಯ್ಯ

tumbadi

‘ಹುಟ್ಟನ್ನೇ ಪ್ರಶ್ನಿಸುವ ವ್ಯವಸ್ಥೆಯೊಳಗೆ ಸಾಗುತ್ತಿರುವ ಬದುಕು’ ತುಂಬಾಡಿ ರಾಮಯ್ಯನವರ ‘ಓದೋ ರಂಗ’ ಕೃತಿ ಬಿಡುಗಡೆಯಲ್ಲಿ ಡಾ.ಎಲ್.ಹನುಮಂತಯ್ಯ

‘ಹುಟ್ಟನ್ನೇ ಪ್ರಶ್ನಿಸುವ ವ್ಯವಸ್ಥೆಯೊಳಗೆ ಸಾಗುತ್ತಿರುವ ಬದುಕು’


ತುಂಬಾಡಿ ರಾಮಯ್ಯನವರ ‘ಓದೋ ರಂಗ’ ಕೃತಿ ಬಿಡುಗಡೆಯಲ್ಲಿ

ಡಾ.ಎಲ್.ಹನುಮಂತಯ್ಯ


ತುಮಕೂರು: ಸಾಹಿತ್ಯ ಯಾರೋ ಹೇಳಿ ಬರೆಸುವುದಲ್ಲ, ಬರಹ ನೈತಿಕ ಮತ್ತು ತಾತ್ವಿಕವಾಗಿ ಲೇಖಕನ ಒಳಗಿನಿಂದ  ಬರಬೇಕು, ತುಂಬಾಡಿ ರಾಮಯ್ಯನವರ ‘ಓದೋ ರಂಗ’ ಕೃತಿ ಹಟ್ಟಿಯಿಂದ  ಹುಟ್ಟಿದ ಕಥೆ , ಅಲ್ಲಿಂದ ಇದು ಬೆಂಗಳೂರಿಗೆ ನಡೆದ ಕಥೆ.ಇದು ಯಾವ  ಪ್ರಾಕಾರದದ್ದು ಎಂಬುವುದರ  ಬಗ್ಗೆ  ಎಲ್ಲ ದಲಿತ ಲೇಖ ಕರಿಗೂ ಇರುವ ಗೊಂದಲದ ಹಾಗೆ ಇಲ್ಲಿಯೂ ಇದೆ  ಯಾಕೆಂದರೆ ದಲಿತ ಸಂವೇದನೆಗಳು ಎಲ್ಲಾ ಪ್ರಾಕಾರಗಳಿಗೂ ಅನ್ವಯಿಸುತ್ತವೆ. ಹುಟ್ಟನ್ನೆ ಪ್ರಶ್ನಿಸುವ ವ್ಯವಸ್ಥೆಯೊಳಗೆ ನಾವು ಬದುಕು  ಸಾಗಿಸುತ್ತಿದ್ದೇವೆ ಎಂದು ಕವಿ ಹಾಗೂ ರಾಜ್ಯ ಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಭಾನುವಾರ ಮಣೆಗಾರ ಖ್ಯಾತಿಯ ತುಂಬಾಡಿ ರಾಮಯ್ಯನವರ ಮೂರನೇ ಕೃತಿ ‘ಓದೋ ರಂಗ’ ಪುಸ್ತಕ ಬಿಡುಗಡೆ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  
 ಪುರಾಣದಲ್ಲಿ ಪ್ರಮುಖವಾಗಿರುವ  ಆದಿ  ಜಾಂಬವ ಪುರಾಣ ವೇದ ಉಪನಿಷತ್ತುಗಳಿಗೂ ಮೊದಲು  ಹುಟ್ಟಿದೆ.  ಅಸ್ಪೃಶ್ಯ ಸಮುದಾಯ ಕೀಳರಿಮೆಯಿಂದ ಹೊರ ಬರಲು ಆದಿಜಾಂಬವ ಪುರಾಣದಲ್ಲಿನ ಹಿರಿಮೆ ಪ್ರಮುಖವಾಗಿರುವುದರಿಂದ  ಇದಕ್ಕೆ ಒತ್ತು ನೀಡುತ್ತಿದ್ದೇವೆ. ಪ್ರಸ್ತುತದಲ್ಲಿ  ಶೈಕ್ಷಣಿಕ ಮಟ್ಟದಲ್ಲಿ ಆದಿ ಜಾಂಬವ ಸಮುದಾಯ  ಹಿಂದುಳಿದ್ದಿದ್ದು ಅನೇಕ ಹೆಮ್ಮೆಯ ಪರಂಪರೆಗಳನ್ನು ಮರೆತಿದೆ .ಇತಿಹಾಸಕಾರರು ಉದ್ದೇಶ ಪರ‍್ವಕವಾಗಿಯೇ ಇವನ್ನೆಲ್ಲ ಮರೆಮಾಚಿದ್ದಾರೆ. ವಿಶ್ವ ವಿದ್ಯಾನಿಲಯಗಳು ಆದಿ ಜಾಂಬವ ಮತ್ತು ಮಾತಂಗ ಪುರಾಣದ ತಳ ಸ್ರ‍್ಶಿ ಅದ್ಯಯನಗಳು ಮಾಡಬೇಕು. ಓದೋರಂಗ ಕೃತಿಯು ಇಂದಿನ ದಿನ ಮಾನಕ್ಕೆ ದಲಿತ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದರು ಎಲ್.ಹನುಮಂತಯ್ಯ.

ರಾಮಾಯಣ ಮತ್ತು ಮಹಾಭಾರತ  ಕಾಲದಿಂದಲೂ ಜಾತಿ ಸೂಚಕ ಪರಂಪರೆ ಸಾಗಿಬಂದಿದೆ. ಆದರೆ ವಚನ ಚಳುವಳಿಕಾಲದಲ್ಲಿ ವಿಡಂಬನೆಯು ಸಾಮಾಜಿಕ ಕ್ರಾಂತಿಗೆ ಕಾರಣವಾಯಿತು.ಅಂಬೇಡ್ಕರ್ ಗ್ರಾಮೀಣ ಭಾಗಗಳು ಪಾಪದ ಕೂಪಗಳು ಎಂದೂ ಜಾತಿ ವ್ಯವಸ್ಥೆಯ ಬಗ್ಗೆ ಉಲ್ಲೇಖಿಸಿದ್ದಾರೆ.ಇದನ್ನು ಸೂಕ್ಷ್ಮವಾಗಿ ದಲಿತರು ಮತ್ತು ಬರಹಗಾರರು ಮಾಡಿಕೊಳ್ಳಬೇಕು ಎಂದು  ಅವರು ತಿಳಿಸಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪತ್ರರ‍್ತ, ಕಥೆಗಾರ   ರಘುನಾಥ್ ಚ.ಹ, ಓದೋರಂಗ ಕೃತಿಯೂ ಅಧುನಿಕ ಪುರಾಣ ಕಾದಂಬರಿಯಾಗಿ ಇಂದಿನ ಅನೇಕ ಸಾಮಾಜಿಕ ಆಯಾಮಗಳನ್ನು ಚಿತ್ರಿಸುವ ,ಜೀವಂತವಾಗಿಸುವ ಪ್ರಯತ್ನ  ಅನೇಕ ಓದುಗರಿಗೆ ವಿವೇಕದ  ಅನವರಣಗೊಳ್ಳಲು ಪ್ರೇರಣೆ ನೀಡುತ್ತದೆ ಎಂದರು.
ಕೃತಿ ಕುರಿತು ಮಾತನಾಡಿದ ಸಾಹಿತಿ ಡಾ
ತುಂಬಾಡಿರಾಮಯ್ಯ ನವರು ಈ ಕೃತಿಯಲ್ಲಿ  ದೇಸಿತನವನ್ನು ,ತಳ ಸಮುದಾಯಗಳ ದ್ವನಿಯನ್ನೂ , ಸಾಮಾಜಿಕ  ಸಂವೇದನೆಯ ಜವಾಬ್ದಾರಿಯನ್ನು  ಕಟ್ಟಿಕೊಡುವ ಪ್ರಯತ್ನದಲ್ಲಿ ಕವಿತ್ವದ ಭಾವನಾತ್ಮಕ  ಪ್ರೇರಣೆಗಳನ್ನು ಕೌಶಲ್ಯಗಳನ್ನು  ಬಳಸಿಕೊಂಡು ಆಧುನಿಕ ಪುರಾಣವನ್ನು ಕಲಾತ್ಮಕವಾಗಿ ಸೃಜಿಸಿ,ದಲಿತ ವಿಮೋಚನೆ ಮರ‍್ಗವಾಗಿಸಿದ್ದಾರೆ ಎಂದರು. 
ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ  ಮಲ್ಲಿಕಾ ಬಸವರಾಜು ಮಾತನಾಡಿ, ನೋವಿಗೆ  ಶೋಷಣೆಗೆ ಒಳಗಾದ ಮನುಷ್ಯ   ಎದೆಗುಂದದೆ ಸಮಾಜಕ್ಕೆ ಬೆಳಕಾಗುವ  ಮೂಲಕ  ಪಾತ್ರಗಳನ್ನೂ  ಸನ್ನಿವೇಶಗಳನ್ನು ಕಟ್ಟಿಕೊಡುವ  ತುಂಬಾಡಿ ರಾಮಯ್ಯ ನವರ ಬರವಣಿಗೆಯ ಶೈಲಿ  ಅಭಿನಂದನೀಯ ಎಂದರು.
ಕಲಾವಿದ  ಡಾ.ಎಂ.ಎಸ್.ಮರ‍್ತಿ ಮಾತಾನಾಡಿ  , ಲೇಖಕರು  ಸಾಮಾಜಿಕ ಜವಾಬ್ದಾರಿ  ಅವಲೋಕಿಸಿದಾಗ    ದಲಿತ ಸಂವೇದನೆ ಮತ್ತ ಸಾಹಿತ್ಯದಾಚೆಗೂ ನಿಲುಕಬಲ್ಲ ವ್ಯಕ್ತಿತ್ವ  ಜಾತ್ಯತೀತ ಧೋರಣೆ ರಾಮಯ್ಯ ನವರದ್ದಾಗಿದೆ ಎಂದರು.

 ವಿಮರ್ಶಕ ಡಾ.ರವಿ ಕುಮಾರ್ ನೀಹ  ಪ್ರಾಸ್ತಾವಿಕ ನುಡಿಗಳನ್ನು ಆಡಿ, ದಲಿತರು ಬರೆದಿರುವ ಪುಸ್ತಕಗಳನ್ನು ದಲಿತರೇ ಓದುವಂತೆ ಮಾಡುತ್ತಿದ್ದಾರೆ. ಬ್ರಾಹ್ಮಣರು ಬರೆದಿರುವಂತಹ ಪುಸ್ತಕಗಳನ್ನು ಬ್ರಾಹ್ಮಣರೇ ಓದುವಂತಾಗುತ್ತಿದ್ದಾರೆ. ಎಲ್ಲರೂ ಪುಸ್ತಕಗಳು ಓದಬೇಕು ಎಂದು ಹೇಳಲು ಇಚ್ಚಿಸುತ್ತೇನೆ ಎಂದರು.
ಸಮರಿಟಾನ್ಸ್ ಟ್ರಸ್ಟ್ ,ಭೂಮಿ ಪ್ರಕಾಶನ ಬೆಂಗಳೂರು, ರ‍್ನಾಟಕ ಲೇಖಕಿಯರ ಸಂಘ ,ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ತುಮಕೂರು  ಇವರ ಸಹಯೋಗದಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು.