ಗಾಂಧಿ ಪ್ರಶಸ್ತಿ ಹಿರಿಮೆ ಹಿರಿಯ ಶ್ರೀಗಳಿಗೆ ಸಂದಾಯ ಸಿದ್ಧಗAಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ
siddaganga sri
ಗಾಂಧಿ ಪ್ರಶಸ್ತಿ ಹಿರಿಮೆ ಹಿರಿಯ ಶ್ರೀಗಳಿಗೆ ಸಂದಾಯ
ಸಿದ್ಧಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ
ರಾಷ್ಟ್ರೆಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರಿನ ಸೇವಾ ಪ್ರಶಸ್ತಿ ಸಿದ್ಧಗಂಗಾ ಮಠ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಂದಿರುವುದು ಸಮಾಜ ಸೇವೆಯಲ್ಲೇ ದೇವರನ್ನು ಕಂಡು, ಗಾಂಧೀಜಿ ಮಾರ್ಗದಲ್ಲೇ ನಡೆದು ಸರ್ವಧರ್ಮ ಸಮನ್ವಯತೆ ಸಾಧಿಸಿದ ಶ್ರೀಮಠದ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಅರ್ಪಿಸುವುದಾಗಿ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಆರಂಭಿಸಲಾಗಿರುವ ಜನರಲ್ ವಾರ್ಡ್ ಲೋಕಾರ್ಪಣೆಗೊಳಿಸಿ, ಆಯೋಜಿಸಿದ್ದ ಮಹಾತ್ಮ ಗಾಂಧೀಜಿ, ಲಾಲ್‌ಬಹದ್ದೂರ್ ಶಾಸ್ತಿç ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು.
ಗ್ರಾಮಗಳು ಉದ್ಧಾರವಾದರೆ ರಾಷ್ಟ್ರಅಭಿವೃದ್ಧಿ ಎಂದು ನಂಬಿದ್ದ ಮಹಾತ್ಮ ಗಾಂಧೀಜಿಯವರ ಧ್ಯೇಯೋದ್ದೇಶಗಳನ್ನೇ ಅಳವಡಿಸಿಕೊಂಡಿದ್ದ ಪೂಜ್ಯ ಶ್ರೀಗಳು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಗಾಂಧೀಜಿಯವರ ಬಗ್ಗೆ ಅಪಾರ ಗೌರವಾದರಗಳನ್ನಿಟ್ಟುಕೊಂಡು ಅವರಂತೆಯೇ ನಡೆದವರು ಎಂದು ಸ್ಮರಿಸಿದರು.
ಮಹಾತ್ಮ ಗಾಂಧೀಜಿಯವರ ಆರ್ಟ್ ಆಫ್ ಲಿವಿಂಗ್ ಸೇರಿದಂತೆ ಹಲವಾರು ಪುಸ್ತಕಗಳನ್ನು ಓದಿಕೊಂಡಿದ್ದ ಹಿರಿಯ ಶ್ರೀಗಳು, ಪುಸ್ತಕಗಳಲ್ಲಿ ಗಾಂಧೀಜಿ ಉಲ್ಲೇಖಿಸಿದ್ದ ವಾಕ್ಯಗಳನ್ನು, ಮಾತುಗಳನ್ನು ಸದಾ ಸ್ಮರಿಸುತ್ತಿದ್ದರು, ತಮ್ಮ ಆಶೀರ್ವಚನಗಳಲ್ಲಿ ಉಲ್ಲೇಖಿಸುತ್ತಿದ್ದರು ಎಂದ ಶ್ರೀ ಸಿದ್ಧಲಿಂಗ ಶ್ರೀಗಳು, ಇಂತಹ ಮಹಾನ್ ಚೇತನದ ಹೆಸರಿನ ಪ್ರಶಸ್ತಿ ಶ್ರೀಮಠಕ್ಕೆ ಸಂದಿರುವುದು ಸಂತಸ ತಂದಿದೆ ಎಂದರು.
ಮಹಾತ್ಮ ಗಾಂಧೀಜಿ, ಲಾಲ್‌ಬಹದ್ದೂರ್ ಶಾಸ್ತಿç ಇಬ್ಬರೂ ರಾಷ್ಟçದ ಮಹಾನ್ ಚೇತನರು. ದೇಶವನ್ನು ಹೊಸದಿಕ್ಕಿಗೆ ಕೊಂಡೊಯ್ದ ಹಿರಿಮೆ ಲಾಲ್‌ಬಹದ್ದೂರ್ ಶಾಸ್ತಿçಯವರಿಗೆ ಸಲ್ಲುತ್ತದೆ. ಗಾಂಧೀಜಿಯವರಿAದ ಪ್ರಭಾವಿತರಾಗಿದ್ದ ಶಾಸ್ತಿçÃಜಿಯವರು ಅವರಂತೆಯೇ ಸರಳವಾಗಿ ಜೀವಿಸಿದ್ದರಲ್ಲದೆ, ಹಸಿರು ಕ್ರಾಂತಿಗೆ ನಾಂದಿ ಹಾಡಿದ್ದರು. ಮಹಿಳೆಯರು ಸಬಲರಾಗಬೇಕೆಂಬ ಮಹದಾಶಯ ಹೊಂದಿದ್ದ ಶಾಸ್ತಿçಗಳು, ಜೈ ಜವಾನ್, ಜೈ ಕಿಸಾನ್ ಘೋಷಣೆ ಮೂಲಕ ರೈತರು ಮತ್ತು ಸೈನಿಕರರ ಅಗತ್ಯವನ್ನು ಇಡೀ ರಾಷ್ಟçಕ್ಕೆ ಸಾರಿದ್ದರು ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯದ ಮಹತ್ವದ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೂ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯಬೇಕೆಂಬ ಆಶಯದಲ್ಲಿ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಉಚಿತ ವಾರ್ಡ್ ಆರಂಭಿಸಲಾಗಿದೆ. ಇಲ್ಲಿ ರೋಗಿಗಳಿಗೆ ಉಚಿತ ತಪಾಸಣೆ ಸೌಲಭ್ಯ ದೊರೆಯಲಿದೆ ಎಂದು ಶ್ರೀಗಳು ನುಡಿದರು.
ಸಿದ್ಧಗಂಗಾ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಎಸ್. ಪರಮೇಶ್ ಮಾತನಾಡಿ, ತನ್ನ ಉತ್ಕೃಷ್ಟ ವೈದ್ಯಕೀಯ ಸೇವೆಯೊಂದಿಗೆ ರಾಜ್ಯದಲ್ಲೇ ಹೆಸರು ಮಾಡಿರುವ ಸಿದ್ಧಗಂಗಾ ಆಸ್ಪತ್ರೆ ಎನ್.ಎ.ಹೆಚ್. ಮಾನ್ಯತೆ ಗಳಿಸಿದೆ. ಪ್ರಸ್ತುತ ಆರಂಭಿಸಲಾಗಿರುವ ಜನರಲ್ ವಿಭಾಗದಲ್ಲಿ ಜನಸಾಮಾನ್ಯ ರೋಗಿಗಳಿಗೆ ಹೆಚ್ಚು ಹೊರೆಯಾಗದಂತೆ ಅತ್ಯಲ್ಪ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆಯಲಿದೆ ಎಂದರು.
ಹಾಜರಿದ್ದ ಗಣ್ಯರು:
ಸಂಸದ ಜಿ.ಎಸ್. ಬಸವರಾಜು, ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗೇಂದ್ರಪ್ಪ, ಡಾ. ಎಂ.ಎನ್. ಚನ್ನಬಸಪ್ಪ, ಡಾ. ಶಿವಕುಮಾರಯ್ಯ, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಟಿ.ಎಂ. ಸ್ವಾಮಿ, ಎಂ.ಬಿ. ನಂದೀಶ್, ಕೋರಿ ಸದಾಶಿವಯ್ಯ, ಡಿ.ಎನ್. ಯೋಗೀಶ್, ಎಚ್.ಜಿ. ಚಂದ್ರಮೌಳಿ, ಆಶಾ ಪ್ರಸನ್ನಕುಮಾರ್, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮತ್ತಿತರರು ಹಾಜರಿದ್ದರು.