ಪಂಚ ರತ್ನ ರಥ ಯಾತ್ರೆಯಲ್ಲಿ ಮಾಜಿ  ಸಿಎಂ ಕುಮಾರಸ್ವಾಮಿ ವಿಶ್ವಾಸ ,  ‘ಕೊರಟಗೆರೆ ಜೆಡಿಎಸ್ ಭದ್ರಕೋಟೆ- ಲಾಲ್ ಗೆಲ್ಲುತ್ತಾರೆ’

ಕೊರಟಗೆರೆಯಲ್ಲಿ ಜೆಡಿಎಸ್‌ ಗೆಲ್ಲುವ ವಿಶ್ವಾಸ-ಕುಮಾರಸ್ವಾಮಿ

ಪಂಚ ರತ್ನ ರಥ ಯಾತ್ರೆಯಲ್ಲಿ ಮಾಜಿ  ಸಿಎಂ ಕುಮಾರಸ್ವಾಮಿ ವಿಶ್ವಾಸ ,  ‘ಕೊರಟಗೆರೆ ಜೆಡಿಎಸ್ ಭದ್ರಕೋಟೆ- ಲಾಲ್ ಗೆಲ್ಲುತ್ತಾರೆ’

ಪಂಚ ರತ್ನ ರಥ ಯಾತ್ರೆಯಲ್ಲಿ ಮಾಜಿ  ಸಿಎಂ ಕುಮಾರಸ್ವಾಮಿ ವಿಶ್ವಾಸ

 ‘ಕೊರಟಗೆರೆ ಜೆಡಿಎಸ್ ಭದ್ರಕೋಟೆ- ಲಾಲ್ ಗೆಲ್ಲುತ್ತಾರೆ’

ಕೊರಟಗೆರೆ:  ಸುಧಾಕರ್ ಲಾಲ್ ಸಭ್ಯ ಹಾಗೂ ಜನಗಳ ಜೊತೆ ಬೆರೆಯುವ ವ್ಯಕ್ತಿ. ಅವರನ್ನು ಗೆಲ್ಲಿಸಬೇಕೆಂದು ಕೊರಟಗೆರೆ ಕ್ಷೇತ್ರದ ಜನರು ನಿರ್ಧರಿಸಿದ್ದಾರೆ. ಜೊತೆಗೆ ಕೊರಟಗೆರೆ ಜೆಡಿಎಸ್‍ ಭದ್ರಕೋಟೆ ಎಂದು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ತುಮಕೂರು ಜಿಲ್ಲೆಯಲ್ಲಿ ಪಂಚ ರತ್ನ ಯಾತ್ರೆಯ ಮೂರನೇ ದಿನವಾದ ಶನಿವಾರ ಮಧುಗಿರಿಯಿಂದ ಕೊರಟಗೆರೆ ವಿಧಾನ ಸಭಾ ಕ್ಷೇತ್ರ ಪ್ರವೇಶಿಸಿ, ಗೊಂದಿಹಳ‍್ಳಿಯಲ್ಲಿ ಸುಧಾಕರಲಾಲ್ ಜೊತೆಗೂಡಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಕೊರಟಗೆರೆಯ ಹಾಲಿ ಶಾಸಕ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್ ಸಿಎಂ ಆಗ್ತಾರೆ ಎಂಬ ವಿಚಾರ ಕುರಿತು ಮಾತನಾಡಿದ ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೇ ಕಾಂಗ್ರೆಸ್ ಅವರನ್ನು ಸಿಎಂ ಮಾಡಲಿಲ್ಲ, ಈಗ ಮಾಡುತ್ತಾರೆಂದು ನಂಬಲು ಸಾಧ್ಯವಿಲ್ಲ.

2013ರಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದವರು ಯಾರು? ಅವ್ರನ್ನು ಜೆಡಿಎಸ್ ನವರು ಸೋಲಿಸಿದ್ರಾ?ಎಂದು ಪ್ರಶ್ನಿಸಿದ  ಕುಮಾರ ಸ್ವಾಮಿ ಕಾಂಗ್ರೆಸ್ ನವರೇ ತಮ್ಮನ್ನು ಸೋಲಿಸಿದರು ಅಂತ ಅವರೇ ಹೇಳಿದ್ದಾರೆ ಎಂದರು

 

ಪಂಚರತ್ನ ರಥಯಾತ್ರೆಯ ಇಂದಿನ ಮುಖ್ಯಾಂಶಗಳು

 • ಕೊರಟಗೆರೆ ಮೊದಲ ತಾಣ
 • ಕೊರಟಗೆರೆ ಕ್ಷೇತ್ರದ ಗೊಂದಿಹಳ್ಳಿಯಲ್ಲಿ ಬಹಿರಂಗ ಸಭೆ
 • ನೇರವಾಗಿ ಜನರ ಜತೆ ಸಂವಾದ,
 •  ರೈತರು, ವ್ಯಾಪಾರಿಗಳ ಕಷ್ಟ ಆಲಿಸಿದ ಮಾಜಿ ಮುಖ್ಯಮಂತ್ರಿಗಳು
 •  ಗೊಂದಿಹಳ್ಳಿಯ 30 ಅಡಿ ಎತ್ತರದ ಏಕಶಿಲಾ ವಿಗ್ರಹ ಶ್ರೀ ಆಂಜನೇಯ ಸ್ವಾಮಿ ಗೆ  ಪೂಜೆ
 • **
 • ಗೊಂದಿಹಳ್ಳಿ ಸರಕಾರಿ ಶಾಲೆ ಮಕ್ಕಳ ಜತೆ ನೇರ ಸಂವಾದ
 • ಶಾಲೆಗೆ ಬಸ್ ಇಲ್ಲ ಎಂದು ದೂರಿದ ಮಕ್ಕಳು
 • ಶಾಲೆ ಕಟ್ಟಡ ಸೋರುತ್ತದೆ ಎಂದು ಹೇಳಿದ ಮಕ್ಕಳು
 • ಸರಿ ಮಾಡಿಕೊಡುವುದಾಗಿ ಭರವಸೆ ನೀಡಿದ ಮಾಜಿ ಮುಖ್ಯಮಂತ್ರಿ
 • ಬಸ್ ವ್ಯವಸ್ಥೆ ಮಾಡಲು ಸುಧಾಕರ್ ಲಾಲ್ ಅವರಿಗೆ ಸೂಚಿಸಿದ ಮಾಜಿ ಮುಖ್ಯಮಂತ್ರಿ
 • ಕೊರಟಗೆರೆ ಕ್ಷೇತ್ರದ ಹಳೇತಿಮ್ಮನಹಳ್ಳಿಯ ಮುತ್ತರಿಯಪ್ಪ ಜೆಡಿಎಸ್ ಸೀನಿಯರ್ ನಾಯಕರು
 • ಸಂಚಾರಕ್ಕೆ ಸ್ಕೂಟರ್ ಬೇಕು ಅಂದ್ರು,
 • ಕೊಡಿಸುವೆ ಎಂದರು ಹೆಚ್ಡಿಕೆ
 • ಒಂದು ಕಾಲು ಇಲ್ಲ, ಕೃತಕ ಕಾಲಿನಲ್ಲಿ ಓಡಾಡುತ್ತಾರೆ
 • ಏನೇ ಸಮಸ್ಯೆ ಇದ್ದರೂ ಕರೆ ಎಂದು ಫೋನ್ ನಂಬರ್ ಕೊಟ್ಟ ಮಾಜಿ ಸಿಎಂ
 • **
 • ಶಾಲೆಗೆ ಬರಲು ಮಕ್ಕಳಿಗೆ ಕರಡಿ ಕಾಟ
 • ದಿನಕ್ಕೆ ಎಂಟು ಕಿಮೀ ನಡೀಬೇಕು
 • ಬಸ್ ಇಲ್ಲ, ದಾರಿಯಲ್ಲಿ ಕರಡಿ ದಾಳಿ ಭೀತಿ
 • ಹೆಸರು ಸವಿತಾ, 7676596338 ಟಿ ಗೊಲ್ಲರಹಟ್ಟಿ ವಿಧ್ಯಾರ್ಥಿನಿ
 • ಬೆಳಗ್ಗೆ 8 ಗಂಟೆಗೆ ಮನೆ ಬಿಡಬೇಕು
 • ಸಂಜೆ6.30ಗೆ ಮನೆಗೆ ಹೋಗೋದು
 • ಹಳ್ಳದಲ್ಲಿ ಕಾಡಿನ ಮಧ್ಯೆ ನಡೆಯಬೇಕು
 • ತಾಂಡದಿಂದ ನಡೆದುಕೊಂಡು ಬರಬೇಕು
 •  **
 • ಟಿ ಗೊಲ್ಲರಹಟ್ಟಿ ಯಿಂದ ಪುರವರ ಶಾಲೆಗೆ ಬರೋದು.
 • ಮಾಜಿ ಸಿಎಂ ಮುಂದೆ ಕನೀರಿಟ್ಟ ವಿಧ್ಯಾರ್ಥಿನಿ
 • ಸಿಎಂ ಆಗಿದ್ದಾಗ ಆಶ್ರಮ ಅಭಿವೃದ್ಧಿಗೆ ಒಂದು ಕೋಟಿ ಅನುದಾನ ನೀಡಿದ್ದರು.
 • ಶ್ರೀ ರಾಮಾನಂದ ಸ್ವಾಮೀಜಿ ಅವರ ಭೇಟಿ
 • ತಗ್ಗಿಹಳ್ಳಿಯ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ
 • ಮಾಜಿ ಸಿಎಂ ಅವರನ್ನು ಸತ್ಕರಿಸಿದ ಶ್ರೀಗಳು
 • ಆಶ್ರಮದ ಅಭಿವೃದ್ಧಿಗೆ ನೆರವಿನ ಭರವಸೆ
 •  **
 • ನೀವು ಬಂದಿದ್ದು ನಮ್ಮ ಸೌಭಾಗ್ಯ ಎಂದ ಶ್ರೀಗಳು

 • ಗೊಂದಿಹಳ್ಳಿಯಲ್ಲಿ ಕಡಲೆಕಾಯಿ ಹಾರ ಹಾಕಿದ ಅಭಿಮಾನಿಗಳು
 • ಅಕ್ಕಿರಾಂಪುರ ಮತ್ತು ಸೊಂಪುರದಲ್ಲಿ ಪಂಚರತ್ನ ರಥಯಾತ್ರೆ
 • ರೋಡ್ ಶೋ ನಡೆಸಿದ ಮಾಜಿ ಮುಖ್ಯಮಂತ್ರಿ
 • ದಾರಿಯುದ್ದಕ್ಕೂ ಸೇಬಿನ ಹಾರಗಳ ಜೋರು
 • ಮಹಿಳಾ ಸ್ವ ಸಹಾಯ ಸಂಘಗಳ ಸಾಲ ಸಂಪೂರ್ಣ ಮನ್ನಾ ಭರವಸೆ
 •  65 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಮಾಸಿಕ 5000 ಮಾಶಾಸನ
 • ಹೊಳವನಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಅಡಿಕೆ ಹಾರದ ಗೌರವ
 •  ಮಧುಗಿರಿಯಿಂದ ಕೊರಟಗೆರೆ ಕಡೆಗೆ ಹೊರಟ ಪಂಚರತ್ನ ರಥಯಾತ್ರೆ
 •  ಮಧುಗಿರಿಯಲ್ಲಿ ಗ್ರಾಮ ವಾಸ್ತವ್ಯ ಮುಗಿಸಿ ಹೊರಟ ಮಾಜಿ ಮುಖ್ಯಮಂತ್ರಿಗಳು
 •  ಮಧುಗಿರಿಯಲ್ಲಿ ಬೆಳಗ್ಗೆ ಜನ ಸಂಪರ್ಕ ಸಭೆ, ಸ್ಥಳೀಯ ಮುಖಂಡರ ಜತೆ ಚರ್ಚೆ
 •  ಮಾಜಿ ಸಿಎಂ ಬಳಿ ಕಷ್ಟಗಳನ್ನು ಹೇಳಿಕೊಂಡ ಜನರು
 •   ಕೊರಟಗೆರೆ ಕ್ಷೇತ್ರದ ಗೊಂದಿಹಳ್ಳಿ ಗ್ರಾಮದಲ್ಲಿ ರೋಡ್ ಶೋ
 •  ಮಾಜಿ ಶಾಸಕ ಸುಧಾಕರ್ ಲಾಲ್ ಭಾಗಿ