ಕೋಲಾರ ಜಿಲ್ಲೆಯಾದ್ಯಂತ ಎಲ್ಲೋ ಅಲರ್ಟ್ ಘೋಷಣೆ

ಕೋಲಾರ ಜಿಲ್ಲೆಯಾದ್ಯಂತ ಎಲ್ಲೋ ಅಲರ್ಟ್ ಘೋಷಣೆ

ಕೋಲಾರ ಜಿಲ್ಲೆಯಾದ್ಯಂತ ಎಲ್ಲೋ ಅಲರ್ಟ್ ಘೋಷಣೆ


ಕೋಲಾರ:  ಜಿಲ್ಲೆಯಾದ್ಯಂತ ಮುಂಬರುವ 24 ಗಂಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವುದರಿಂದ ಎಲ್ಲೋ ಅಲರ್ಟ್ನ್ನು ಜಿಲ್ಲಾಧಿಕಾರಿಗಳಾದ ಡಾ||ಆರ್.ಸೆಲ್ವಮಣಿ ಅವರು ಘೋಷಣೆ ಮಾಡಿದ್ದಾರೆ.
 ಜಿಲ್ಲೆಯಾದ್ಯಂತ ಮಳೆಯಿಂದ ಸಾರ್ವಜನಿಕ ಆಸ್ತಿ ಹಾಗೂ ಮಾನವ, ಜಾನುವಾರುಗಳ ಜೀವ ಹಾನಿಯಾಗದಂತೆ ಮನ್ನೆಚ್ಚರಿಕೆಯಾಗಿ ಜಿಲ್ಲಾ ವಿಪತ್ತು ನಿರ್ವಾಹಣಾ ಕಂಟ್ರೋಲ್ ರೂಂನಲ್ಲಿ ಸಿಬ್ಬಂಧಿಗಳು ದಿನದ 24/7 ಕಾರ್ಯನಿರ್ವಹಿಸುತ್ತಿದ್ದು,  ಕಂಟ್ರೋಲ್ ರೂಂನ ಸಿಬ್ಬಂದಿಗಳಾದ ಎನ್.ಗೋವಿಂದ ರಾಜು ಅವರ ಮೊಬೈಲ್ ಸಂಖ್ಯೆ 9740050061, ವಿ.ಮಂಜುನಾಥ್ ಅವರ ಮೊಬೈಲ್ ಸಂಖ್ಯೆ 9916301221 ಹಾಗೂ ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 1077, 08152-243506 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.