ಭೂಸನೂರ್ ರಮೇಶ್ ಬಾಳಪ್ಪ, ಮಾನೆ ಶ್ರೀನಿವಾಸ್ ಇಂದು ಪ್ರಮಾಣ
ಭೂಸನೂರ್ ರಮೇಶ್ ಬಾಳಪ್ಪ,
ಮಾನೆ ಶ್ರೀನಿವಾಸ್ ಇಂದು ಪ್ರಮಾಣ
ಬೆಂಗಳೂರು: ಉಪ ಚುನಾವಣೆಯಲ್ಲಿ ಚುನಾಯಿತರಾದ ಸಿಂಧಗಿ ವಿಧಾನ ಸಭಾ ಕ್ಷೇತ್ರದ ಭೂಸನೂರ್ ರಮೇಶ್ ಬಾಳಪ್ಪ ಹಾಗೂ ಹಾನಗಲ್ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾದ ಮಾನೆ ಶ್ರೀನಿವಾಸ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ವಿಧಾನಸೌಧ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣ ವಚನ ಬೋಧಿಸಲಿದ್ದಾರೆ.