ದೇವನಹಳ್ಳಿ ವಿಮಾನ ನಿಲ್ದಾಣಕ್ಕೂ ಮೆಟ್ರೊ: ಸಿಎಂ
 
                                
ದೇವನಹಳ್ಳಿ ವಿಮಾನ ನಿಲ್ದಾಣಕ್ಕೂ ಮೆಟ್ರೊ: ಸಿಎಂ
ಬೆAಗಳೂರು: ಬೆಂಗಳೂರಿನ ದೇವನಹಳ್ಳಿ ಬಳಿಯ ಅಂತಾರಾಷ್ಟಿçÃಯ ವಿಮಾನ ನಿಲ್ದಾಣಕ್ಕೂ ಮೆಟ್ರೊ ರೈಲು ಸೇವೆ ಒದಗಿಸಲು ನಿರ್ಧರಿಸಲಾಗಿದೆ. ವಿಮಾನ ನಿಲ್ದಾಣಕ್ಕೂ ಮೆಟ್ರೊ ರೈಲು ಮಾರ್ಗವನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೆಟ್ರೊ ರೈಲು ಮಾರ್ಗದ ಸುರಂಗ ಕೊರೆಯುವ ಊರ್ಜಾ ಯಂತ್ರವು ಕಂಟೋಲ್‌ಮೆAಟ್‌ನಿAದ ಶಿವಾಜಿನಗರ ಮೆಟ್ರೊ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆದು ಶಿವಾಜಿನಗರ ಮೆಟ್ರೊ ನಿಲ್ದಾಣದಲ್ಲಿ ಹೊರ ಬರುವುದನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಟ್ರೊ ರೈಲು ಮುಂದಿನ ದಿನಗಳಲ್ಲಿ ಬೆಂಗಳೂರಿನ ಲೈಫ್‌ಲೈನ್ ಆಗಲಿದೆ ಎಂದರು.
ಮೆಟ್ರೊ ರೈಲಿನ ೨ನೇ ಹಂತದ ಕಾಮಗಾರಿಗಳನ್ನು ೨೦೨೪ಕ್ಕೆ ಪೂರ್ಣಗೊಳಿಸಲಾಗುವುದು. ಎರಡನೇ ಹಂತದ ಮೆಟ್ರೊ ರೈಲು ಕಾಮಗಾರಿಗಳನ್ನು ೨೦೨೪ ಕ್ಕೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮೆಟ್ರೊ ೨ನೇ ಹಂತದ ಕಾಮಗಾರಿಗಳನ್ನು ೨೦೨೪ ಕ್ಕೆ ಮುಗಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಿ. ಹೆಚ್ಚು ಜನರನ್ನು ಕೆಲಸಕ್ಕೆ ಬಳಕೆ ಮಾಡಿಕೊಳ್ಳಿ. ಬೇಗ ಕೆಲಸ ಮುಗಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಮೆಟ್ರೊ ಕಾಮಗಾರಿಗೆ ಜನ ಸಹಕಾರ ನೀಡುತ್ತಿದ್ದಾರೆ. ಕಾಮಗಾರಿಗಳಿಂದ ಸ್ವಲ್ಪ ಮಟ್ಟಿಗೆ ಸಂಚಾರಕ್ಕೆ ತೊಂದರೆಯಾದರೂ ಜನ ಅದನ್ನೆಲ್ಲಾ ಸಹಿಸಿಕೊಂಡು ಸಹಕಾರ ನೀಡುತ್ತಿರುವುದನ್ನು ಅವರು ಶ್ಲಾಘಿಸಿದರು.
ಮೆಟ್ರೊ ೨ನೇ ಹಂತದ ಕಾಮಗಾರಿಯ ಸುರಂಗ ಮಾರ್ಗ ಕೊರೆಯುವ ಊರ್ಜಾ ಯಂತ್ರವು ಕಂಟೋನ್‌ಮೆAಟ್‌ನಿAದ ಶಿವಾಜಿನಗರ ಮೆಟ್ರೊ ನಿಲ್ದಾಣದವರೆಗೂ ಒಟ್ಟು ೮೫೫ ಮೀಟರ್ ಸುರಂಗ ಕೊರೆದು ಮುಗಿಸಿದೆ ಎಂದು ಅವರು ಹೇಳಿದರು.
ಸಚಿವರುಗಳಾದ ಉಮೇಶ್‌ಕತ್ತಿ, ಎಸ್.ಟಿ. ಸೋಮಶೇಖರ್, ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್. ವಿಶ್ವನಾಥ್, ಸಂಸದ ಪಿ.ಸಿ. ಮೋಹನ್, ಶಾಸಕರಾದ ರಿಜ್ವಾದ್ ಹರ್ಷದ್, ಲೆಹರ್‌ಸಿಂಗ್ ಇದ್ದರು.
 bevarahani1
                                    bevarahani1                                 
            
             
            
             
            
             
            
             
            
             
            
             
            
             
            
             
            
             
            
             
            
             
            
                                        
                                     
            
             
            
             
            
            