ಶಿರಾ ಗ್ರಾಮ ಪಂಚಾಯತಿಗಳಲ್ಲಿ ಜಯಚಂದ್ರ ಬಿರುಸಿನ ಮತಯಾಚನೆ

ಶಿರಾ ಗ್ರಾಮ ಪಂಚಾಯತಿಗಳಲ್ಲಿ ಜಯಚಂದ್ರ ಬಿರುಸಿನ ಮತಯಾಚನೆ


ಶಿರಾ ಗ್ರಾಮ ಪಂಚಾಯತಿಗಳಲ್ಲಿ
ಜಯಂಚದ್ರ ಬಿರುಸಿನ ಮತಯಾಚನೆ


ಶಿರಾ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜೇಂದ್ರ ರಾಜಣ್ಣನವರ ಪರವಾಗಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಭಾನುವಾರ ತಾಲೂಕಿನ ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚಾರ ಸಭೆ ನಡೆಸಿದರು.


ಭಾನುವಾರ ಬೆಳಗಿನಿಂದಲೇ ಪ್ರಚಾರ ಸಭೆ ಆರಂಭಿಸಿದ ಜಯಚಂದ್ರ ಅವರು ತಾಲೂಕಿನ ಬರಗೂರು, ಹಂದಿಕುAಟೆ, ನಾದೂರು, ಹೊಸಳ್ಳಿ, ಹೆಂದೊರೆ, ಮದಲೂರು, ಭೂವನಹಳ್ಳಿ, ಲಕ್ಷಿö್ಮÃಸಾಗರ, ಚಿಕ್ಕನಹಳ್ಳಿ, ಹಾಲೇನಹಳ್ಳಿ, ಕಳ್ಳಂಬೆಳ್ಳ, ಗೋಪಾಲದೇವರಹಳ್ಳಿ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಭೇಟಿಯಾಗಿ ಮತಯಾಚನೆ ಮಾಡಿದರು.


ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ ಅವರಿಗೆ ಮತ ನೀಡುವ ಮೂಲಕ ಕಾಂಗ್ರೆಸ್ ಕೈಯನ್ನು ಬಲಗೊಳಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

 ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಆರ್. ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಸಮಾಜ ಸೇವಕ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾದ ಕಲ್ಕೆರೆ ರವಿಕುಮಾರ್, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾರೋಗೆರೆ ಮಹೇಶ್, ಹಾಲುಗುಂಡೆಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಡಿ.ವೈ. ಗೋಪಾಲ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಂದಿಕುAಟೆ ರವಿ, ಜಿ.ಎನ್. ಮೂರ್ತಿ, ಜಿಲ್ಲಾ ಕೆಪಿಸಿಸಿ ಎಸ್ಟಿ ವಿಭಾಗದ ಅಧ್ಯಕ್ಷ ರಾಕೇಶ್ ಬಾಬು, ಶೇಷನಾಯ್ಕ್, ಚಿದಾನಂದ್, ಸಂತೆಪೇಟೆ ಅಜಯ್ ಮತ್ತಿತರರು ಉಪಸ್ಥಿತರಿದ್ದರು.