ಸುಣಕಲ್ಲು ಅರಣ್ಯ ಪ್ರದೇಶದಲ್ಲಿ ಬೀಜದುಂಡೆ ಬಿತ್ತನೆ ಅಭಿಯಾನ  ಪ್ರಕೃತಿ ಮೇಲಿನ ದಾಳಿಯಿಂದ ಶಾಪಕ್ಕೆ ಗುರಿಯಾಗಿದ್ದೇವೆ- ರಮೇಶ್‌ಕುಮಾರ್

ramesh kumar

ಸುಣಕಲ್ಲು ಅರಣ್ಯ ಪ್ರದೇಶದಲ್ಲಿ ಬೀಜದುಂಡೆ ಬಿತ್ತನೆ ಅಭಿಯಾನ  ಪ್ರಕೃತಿ ಮೇಲಿನ ದಾಳಿಯಿಂದ ಶಾಪಕ್ಕೆ ಗುರಿಯಾಗಿದ್ದೇವೆ- ರಮೇಶ್‌ಕುಮಾರ್

ಸುಣಕಲ್ಲು ಅರಣ್ಯ ಪ್ರದೇಶದಲ್ಲಿ ಬೀಜದುಂಡೆ ಬಿತ್ತನೆ ಅಭಿಯಾನ 

ಪ್ರಕೃತಿ ಮೇಲಿನ ದಾಳಿಯಿಂದ ಶಾಪಕ್ಕೆ ಗುರಿಯಾಗಿದ್ದೇವೆ-

ರಮೇಶ್‌ಕುಮಾರ್

ಕೋಲಾರ: ಇದುವೆರರೆಗೂ ನಾವೆಲ್ಲ ಪ್ರಕೃತಿಯ ಶಾಪಕ್ಕೆ ಗುರಿಯಾಗಿದ್ದೇವೆ ಇನ್ನಾದರೂ ಎಚ್ಚೆತ್ತುಕೊಂಡು ಪ್ರಕೃತಿಯ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು. ಅರಣ್ಯ ಇಲಾಖೆ ಮತ್ತು ಜನರ ಮಧ್ಯೆ ಸೌಹರ್ದತೆ ಬೆಳೆಯಬೇಕಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.
ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸುಣಕಲ್ಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೀಜದುಂಡೆ ಬಿತ್ತನೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೀಜ ಹುಂಡೆಗಳನ್ನು ಅರಣ್ಯೀಕರಣಕ್ಕೆ 1985ರಲ್ಲಿ ಎಸ್.ಟಿ.ರಾಮರಾವ್‌ರವರು ಸಿಎಂ ಆದಾಗ ತಿರುಪತಿ ಬೆಟ್ಟದಲ್ಲಿ ಬೀಜದುಂಡು ಬೀತ್ತನೆ ಕಾರ್ಯ ನಡೆಸಿದರು. ಇದರ ಪರಿಣಾಮ ಈಗ ದಟ್ಟವಾದ ಅರಣ್ಯ ಪ್ರದೇಶವಿದೆ. ಈ ಕಾರ್ಯಕ್ರಮವೇ ನನಗೂ ಪ್ರೇರಣೆಯಾಗಿದೆ ಎಂದು ಸ್ಮರಿಸಿದರು.
ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ಯಾರಾ ಗ್ಲೇಂಡರ್ ಮೂಲಕ ಕಾರ್ಯ ಆರಂಭಿಸಿದ್ದು, ವಾರಾವರಣ ವೈಪರಿತ್ಯ ಆದರೆ ನಿಲ್ಲಿಸಲು ಸೂಚಿಸಲಾಗಿದೆ. ಅರಣ್ಯ ಇಲಾಖೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಕೆಸಿ ವ್ಯಾಲಿ ಯೋಜನೆಯಿಂದ 124 ಕೆರೆ ಪೈಕಿ 104 ಕೆರೆ ತುಂಬಿದೆ. ಸಣ್ಣಪುಟ್ಟ ತೊಂದರೆಗಳು ಎದುರಾದರು ಬಗೆಹರಿಸಲು ಸಿದ್ದರಿದ್ದೇವೆ. ಅಂತರ್ಜಲ ವೃದ್ಧಿಯಾಗುತ್ತಿದೆ. ಕೆರೆಗಳು ಒತ್ತುವರಿಯಾಗಿದೆ. ಕೆರೆಯಲ್ಲಿ ನೀರು ತುಂಬಿಕೊAಡರೆ ಒತ್ತುವರಿದಾರರು ತಾನಾಗಿಯೇ ಸ್ಥಳಬಿಟ್ಟು ಹೋಗುತ್ತಾರೆ ಎಂದರು.
ನೀಲಗಿರಿ ತೆಗೆಯಲು ಶಾಸನ ಅಂಗೀಕಾರವಾಗಿದೆ. ಅಂದೋಲನ ರೀತಿ ತೆರವು ಕಾರ್ಯ ನಡೆಯುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಕೋಲಾರ ಜಿಲ್ಲೆ ಮಲೆನಾಡು ಪ್ರದೇಶ ಆಗುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ತಾಲೂಕಿನ 9000 ಎಕರೆ ಪ್ರದೇಶದಲ್ಲಿ 1500 ಕೆಜಿ ಬೀಜದುಂಡೆಗಳನ್ನು ಬಿತ್ತನೆ ಮಾಡಲಾಗುತ್ತಿದೆ. ಡಾಬಾಗಳು ಬಂದು ನಮ್ಮ ನಾಡಿನ ಸಂಸ್ಕೃತಿಯನ್ನು ಹಾಳು ಮಾಡಿದೆ. ಕೆಲವರು ಅರಿವಿಲ್ಲದೆ ಧರ್ಮದ ಬಗ್ಗೆ ಮಾತನಾಡುತ್ತಾರೆ. ಕಾರ್ಯಕ್ರಮಕ್ಕೆ ರೈತರು ಪಂಚೆ ಪೇಟ ಮೂಲಕ ವಿಭಿನ್ನ ರೀತಿ ಆಗಮಿಸಿರುವುದು ಸಂತೋಷ ತಂದಿದೆ ಎಂದರು.
ಗ್ಯಾಸ್ ಬಂದಿರುವುದರಿAದ ಮರಗಳಿಗೆ ಕೊಡಲಿ ಹಾಕುವುದು ನಿಯಂತ್ರಣಕ್ಕೆ ಬರುತ್ತಿದೆ. ಇದರಿಂದ ಅರಣ್ಯ ಪ್ರದೇಶದ ವಿಸ್ತೀರ್ಣ ಹೆಚ್ಚಾಗುತ್ತದೆ. ಸದ್ಯ ಎಸ್.ಅಗ್ರಹಾರ ಕೆರೆ ಸಮೀಪ ಬಿದಿರು ಸೇರಿದಂತೆ ವಿವಿಧ ತಳಿಯ ಮರಗಳು ಬೆಳೆದಿವೆ. ಅಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಆಸೆಗಳು ಬೆಟ್ಟದಷ್ಟಿದೆ. ಅವಕಾಶ ಸಿಕ್ಕಾಗ ಹಂತಹAತವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲಾಗುತ್ತದೆ ಜನ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಮಧ್ಯೆ ಸೌಹರ್ಧ ಸಂಬಧವಿರಬೇಕು ಜನ ಜಾಗೃತರಾಗಬೇಕು ಎಂದು ಕಿವಿಮಾತು ಹೇಳಿದರು.
ಕೊರೋನ ಸೋಂಕಿನಿAದ ಸುಮಾರು ಮಂದಿ ಮೃತಪಟ್ಟಿದ್ದಾರೆ. ಅವರ ಕುಟುಂಬ ಪರಿಸ್ಥಿತಿ ಬಗ್ಗೆ ಯಾರಾದರು ಯೋಚನೆ ಮಾಡಿದ್ದಾರೆಯೇ. ಬದುಕು ಕೊಡಲು ಯೋಗ್ಯತೆ ಇಲ್ಲದಿದ್ದಾಗ, ಸಾವಿನ ಬಗ್ಗೆಯೂ ಮಾತನಾಡಬಾರದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ ಗೋವಿಂದಗೌಡ, ನಿರ್ದೇಶಕ ಎಂ.ಎಲ್ ಅನಿಲ್ ಕುಮಾರ್, ಜಿಪಂ ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಅರಣ್ಯ ಇಲಾಖೆಯ ಸುರೇಶ್ ಬಾಬು ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು 
ಕಾರ್ಯಕ್ರಮದಲ್ಲಿ ಜಾನಪದ ಡೊಳ್ಳು ಕುಣಿತ ನೃತ್ಯದೊಂದಿಗೆ ಬೀಜದಂಡೆ ನಾಟಿ ಮಾಡಲಾಯಿತು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತಿಯಿAದ ಭಾಗವಹಿಸಿದ್ದ ಕಾರ್ಯಕರ್ತರು ಮಾಂಸದ ಊಟದ ಜೊತೆಗೆ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿದ್ದರು.