``ಅಭಿವೃದ್ಧಿ ಮಾಡುವುದು ನಮ್ಮ ಜವಾಬ್ದಾರಿ’’ ಜೆಡಿಎಸ್, ಬಿಜೆಪಿ ಮುಖಂಡರಿಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು
``ಅಭಿವೃದ್ಧಿ ಮಾಡುವುದು ನಮ್ಮ ಜವಾಬ್ದಾರಿ’’ ಜೆಡಿಎಸ್, ಬಿಜೆಪಿ ಮುಖಂಡರಿಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು
``ಅಭಿವೃದ್ಧಿ ಮಾಡುವುದು ನಮ್ಮ ಜವಾಬ್ದಾರಿ’’
ಜೆಡಿಎಸ್, ಬಿಜೆಪಿ ಮುಖಂಡರಿಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು
ಕುಣಿಗಲ್: ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನ ಛಾಟಿ ಬೀಸಿ ಎಚ್ಚರಿಸುವಂತಿರಬೇಕು, ತಟಸ್ಥವಾಗಿದ್ದ ವಿರೋಧ ಪಕ್ಷಗಳು ಇಂದು ನಿದ್ರೆಯಿಂದ ಎಚ್ಚೆತ್ತು ಟೀಕೆ ಮಾಡುತ್ತಿವೆ ಎಂದರೆ ಅದು ಅವರ ಜವಾಬ್ದಾರಿ, ರಸ್ತೆ ತಡೆ ಮಾಡಿರುವುದು ಅವರ ಜವಾಬ್ದಾರಿಯೇ ಆದರೆ ಅದಕ್ಕೆ ಹೆದರಿ ರಸ್ತೆ ಕಾಮಗಾರಿಗೆ ನಾವು ಗುದ್ದಲಿ ಪೂಜೆ ಮಾಡುತಿಲ್ಲ್ಲ ಅಭಿವೃದ್ಧಿ ಮಾಡುವುದು ನಮ್ಮ ಜವಾಬ್ದಾರಿ ಎಂದು ಸಂಸದ ಡಿ.ಕೆ.ಸುರೇಶ್ ಹೆಸರೇಳದೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರಿಗೆ ತಿರುಗೇಟು ನೀಡಿದರು.
ಭಾನುವಾರ ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ನೆನೆಗುದಿಗೆಬಿದ್ದಿದ್ದ ಹುಚ್ಚಮಾಸ್ತೀಗೌಡರ ಸರ್ಕಲ್ ನಲ್ಲಿ ೨.೮೦ ಲಕ್ಷದ ೨೩೦ಮೀ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಅಭಿವೃದ್ಧಿ ಸಹಿಸಲಾಗದೆ ವಿರೋಧ ಪಕ್ಷಗಳು ಟೀಕಿಸುತ್ತಿದ್ದಾರೆ, ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ, ಕೋವಿಡ್ ಸಂದರ್ಭದಲ್ಲಿ ಜನರು ಸಾಯುತ್ತಿದ್ದಾಗ ನಮ್ಮ ಶಾಸಕರು ಖುದ್ದು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ನೀಡಿ ಪ್ರಾಣ ಉಳಿಸುವಾಗ ಈ ಮುಖಂಡರುಗಳು ಎಲ್ಲಿ ಹೋಗಿದ್ದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಲಗಿದ್ದವರು, ಅವಿತು ಕುಳಿತಿದ್ದವರು ಇಂದು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಉತ್ತರ ನೀಡೋಣ. ಮೇಕೆ ದಾಟು ಯೋಜನೆ ಬೆಂಗಳೂರಿನ ಎರಡುವರೆ ಕೋಟಿ ಜನರಿಗೆ ನೀರು ಕೊಡುತ್ತದೆ, ನೀರಿದ್ದರೆ ತಮಿಳುನಾಡಿಗೂ ಬಿಡಬಹುದು ಇಲ್ಲದಿದ್ದರೆ ಕೆ.ಆರ್.ಎಸ್. ಅಥವಾ ಹೇಮಾವತಿಯಿಂದ ನೀರು ಬಿಡಬೇಕಾಗುತ್ತದೆ, ಈ ಯೋಜನೆಯಿಂದ ಯಾವ ರೈತರಿಗೂ ತೊಂದರೆ ಇಲ್ಲಾ, ಕೇಂದ್ರ ಸರ್ಕಾರ ತಮಿಳುನಾಡು ಮತ್ತು ಕರ್ನಾಟಕದ ಮಧ್ಯೆ ಇರುವ ಗೊಂದಲ ಬಗೆ ಹರಿಸಿ ಪರಿಸರ ಇಲಾಖೆಯಿಂದ ಅನುಮತಿ ನೀಡಬೇಕು ಎಂದರು.
ಕುಣಿಗಲ್ ತಾಲ್ಲೂಕಿಗೆ ೨೦ವರ್ಷಗಳಿಂದ ಹೇಮಾವತಿ ನೀರು ಹರಿದಿರಲಿಲ್ಲ, ಇಂದು ತಾಲ್ಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿಯಾಗಿ ಹರಿದಿವೆ. ಇದರಿಂದ ರೈತರಿಗೆ ಅನುಕೂಲವಾಗಿದೆ, ಯಾರಾದರೂ ಬಾಗಿನ ಅರ್ಪಿಸಿಕೊಳ್ಳಲಿ ತಲೆ ಕೆಡಿಸಿಕೊಳ್ಳಬೇಡಿ, ಪಟ್ಟಣದ ೧೪ ಕೋಟಿ ರಸ್ತೆ ಅಭಿವೃದ್ಧಿಗೆ ಹಾಗೂ ಎಂಟು ಕೋಟಿ ಸಿವಿಲ್ ಬಸ್ ನಿಲ್ದಾಣಕ್ಕೆ ಕೆಲವೇ ದಿನಗಳಲ್ಲಿ ಚಾಲನೆ ಸಿಗಲಿದೆ. ಇದು ಚುನಾವಣೆ ದೃಷ್ಟಿಯಿಂದಲ್ಲ, ಅಭಿವೃದ್ಧಿ ಒಂದೇ ನಮ್ಮ ಗುರಿ, ರ‍್ಯಾರು ಶಾಸಕರಾಗಿದ್ದಾಗ ಏನೇನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದರು.
ಶಾಸಕ ಡಾ|| ರಂಗನಾಥ್ ಮಾತನಾಡಿ ಈ ರಸ್ತೆ ಅಭಿವೃದ್ಧಿಗೆ ಹಣ ತರಲು ತುಂಬಾ ಕಷ್ಟಪಟ್ಟಿದ್ದೇನೆ, ಯಾರೂ ಏನೇ ಟೀಕೆ ಮಾಡಲಿ ಇಂದು ನನಗೆ ಸಂತೋಷವಾಗಿದೆ, ಕಾಮಗಾರಿಗೆ ಚಾಲನೆ ನೀಡಿದ್ದೇನೆ, ಪಟ್ಟಣದಲ್ಲಿ ಒಳ್ಳೆಯ ರಸ್ತೆಯಾಗಲಿದೆ, ಸಾರ್ವಜನಿಕರಿಗೆ ಅನುಕೂಲವಾಗಲಿದೆ, ತಾಲ್ಲೂಕಿನಲ್ಲಿ ಈರೀತಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಮೇಕೆದಾಟು ಯೋಜನೆಗೆ ಪಾದ ಯಾತ್ರೆ ನಡೆಸಿದಂತೆ ಲಿಂಕ್‌ಕೆನಾಲ್‌ಗೂ ಪಾದಯಾತ್ರೆÀ್ರ ನಡೆದೇ ನಡೆಯುತ್ತದೆ ಎಂದರು.
ಪುರಸಭಾ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಶಬಾನ ತಬ್ಸುಮ್, ಮಾಜಿ ಅಧ್ಯಕ್ಷ ನಾಗೇಂದ್ರ, ಮಾಜಿ ಉಪಾಧ್ಯಕ್ಷೆ ಮಂಜುಳಾ, ರೆಹಮಾನ್ ಷರೀಫ್, ಕೆಂಫೀರೆಗೌಡ, ಬೇಗೂರು ನಾರಾಯಣ್, ಪುರಸಭಾ ಸದಸ್ಯರಾದ ಮಲ್ಲಿಪಾಳ್ಯ ಶ್ರೀನಿವಾಸ್, ದೇವರಾಜ್, ಎ.ಇ.ಇ. ಗುರುಸಿದ್ದಪ್ಪ, ಜೆ.ಇ. ಗಿರಿಗೌಡ ಇದ್ದರು.