ಬೆಂಗಳೂರು ಟ್ಯಾಕ್ಸ್ ಎಲ್ಲಿ ಅಂತ ಕೇಳುವವರಿಗೆ ಇಲ್ಲಿದೆ ಉತ್ತರ
ಕರ್ನಾಟಕ ಯಾವತ್ತೂ ಕೊಟ್ಟ ಕೈ ಹೊರತು ಭಿಕ್ಷೆ ಬೇಡಿದ ಕೈ ಅಲ್ಲ ಎನ್ನುವುದು ಬಿಕಾರಿಗಳು ನೆನಪಿಟ್ಟುಕೊಂಡಿರಲಿ, ಜೊತೆಗೆ ಇನ್ನಾದರೂ ಬೆಂಗಳೂರಿನಿಂದ ಕರ್ನಾಟಕ ನಡೆಯುತ್ತಿದೆ, ನಮ್ಮಿಂದ ನೀವು, ಬೆಂಗಳೂರಿನ ಟ್ಯಾಕ್ಸ್ ಎಲ್ಲಿ ಎನ್ನುವ ಅವಿವೇಕಿಗಳಿಗೆ ಈ ಲೇಖನ
ಶಿವಾನಂದ ಗುಂಡಣ್ಣವರ್
ಕರ್ನಾಟಕದಿಂದ ಒಕ್ಕೂಟ ಸರ್ಕಾರ ಈ ವರ್ಷ ಬರೋಬ್ಬರಿ 4, 30, 216 ಕೋಟಿ ರೂಪಾಯಿಗಳನ್ನ collect ಮಾಡಿದೆ, ಇದು ಯಾವ ಮೂಲಗಳಿಂದ ಎಂದರೆ customs duty, central excise duty, income tax, and service tax .
ಕರ್ನಾಟಕ ಯಾವ ಯಾವ ಮೂಲದಿಂದ ತೆರಿಗೆ ವಸೂಲಾತಿ ಮಾಡಿ ತನ್ನ ರಾಜ್ಯವನ್ನು ಸಾಕುತ್ತಿದೆ ಎಂದರೆ ಅಸ್ತಿ ನೋಂದಣಿ, ಗಣಿಗಾರಿಕೆ, ಅಬಕಾರಿ ಮತ್ತು ಇತ್ಯಾದಿ ಸಣ್ಣ ವ್ಯಾಪಾರೀ ಸುಂಕಗಳ ಮೂಲಕ ಸುಮಾರು 2 ,63 ,178 .
ಒಟ್ಟು - ರಾಜ್ಯದಿಂದ ಒಟ್ಟು ಕೇಂದ್ರ‍್ರ ಮತ್ತು ರಾಜ್ಯದಿಂದ ವಸೂಲಾಗುವ ತೆರಿಗೆ ಹಣ - 6,93, 394 ಇದರಲ್ಲಿ ಕೇಂದ್ರ ಸುಮಾರು 4, 30, 216 ಕೋಟಿ ಕರ್ನಾಟಕದ ತೆರಿಗೆ ಹಣವನ್ನ ತೆಗೆದುಕೊಳ್ಳುತ್ತೆ 6,93,394 miನus 4,30,216 ಉಳಿಯೋದು 2 ,63 ,178.
ಇದರಲ್ಲಿ ಬೆಂಗಳೂರು ಪಾಲು - ಕರ್ನಾಟಕದ ಒಟ್ಟು ಆದಾಯದಲ್ಲಿ 33%+ ಬೆಂಗಳೂರಿನಿಂದ ಕರ್ನಾಟಕದ ಬೊಕ್ಕಸಕ್ಕೆ ಹೋಗುತ್ತದೆ ಅಂದರೆ 6,93,394 ಕೋಟಿಯಲ್ಲಿ 33% ಅಂದರೆ 228820.02 ಗಮನಿಸಿ ಒಟ್ಟು ಬೆಂಗಳೂರು ಆದಾಯ 228820 ರೂ ಮಾತ್ರ .
ಇಂದಿನ ಬಜೆಟ್ ಗೆ ರಾಜ್ಯದ ಇತರೆ ಜಿಲ್ಲೆಗಳ 228820 ಕೋಟಿ ರೂಪಾಯಿಗಳ ಜೊತೆಗೆ ಕೇಂದ್ರದ 6855 ಕೋಟಿ ಸಾಲ ಮತ್ತು ಇತರೆ ಬ್ಯಾಂಕುಗಳ ಮೂಲಕ 96840 ಕೋಟಿ ರೂಪಾಯಿ ಸಾಲ ಪಡೆದು ಬಜೆಟ್ ಮಂಡಿಸುತ್ತಿದ್ದಾರೆ.
ಆದರೆ ಒಕ್ಕೂಟ ಸರ್ಕಾರ ಕರ್ನಾಟಕದಿಂದ ಕಿತ್ತುಕೊಳ್ಳುವ ಹಣ 4 ಲಕ್ಷದ 30 ಸಾವಿರ ಕೋಟಿಗಿಂತ ಹೆಚ್ಚು, ಅಂದರೆ ಬೆಂಗಳೂರಿನಿಂದ ಬರುವ ಅಷ್ಟು(228820) ಆದಾಯದ ಜೊತೆಗೆ ಕರ್ನಾಟಕದ ಇತರೆ ಜಿಲ್ಲೆಗಳ 2,01,396 ಕೋಟಿಯಷ್ಟು ಹಣವನ್ನ ಕೇಂದ್ರವೇ ತೆಗೆದುಕೊಳ್ಳುತ್ತೆ, ಗೆಳೆಯರೇ ಗಮನ ಕೊಟ್ಟು ಕೇಳಿ ಬೆಂಗಳೂರಿನ ಅಷ್ಟು ಆದಾಯವನ್ನ ಒಕ್ಕೂಟ ಸರ್ಕಾರವೇ ಬಡಿದು ಬಾಯಿಗೆ ಹಾಕಿಕೊಳ್ಳುತ್ತೆ(3.6% ಮಾತ್ರ ವಾಪಾಸ್ ಬರುತ್ತದೆ), ಇನ್ನೂಳಿದ ಇತರೆ ಜಿಲ್ಲೆಗಳ ಆದಾಯ ಮತ್ತು ಸಾಲದಿಂದ ಇವತ್ತಿನ ಬಜೆಟ್ ನಡೆಯುತ್ತಿರುವುದು, ಬೆಂಗಳೂರೆಂಬ ಬಿಳಿಯಾನೆಯ ಲಾಭವೆಲ್ಲ ಉತ್ತರ ಭಾರತದ ರಾಜ್ಯಗಳಿಗೆ ಕಟ್ಟಲು ಹೋಗುತ್ತಿದೆ, ಹೀಗಾಗಿ ಬೆಂಗಳೂರಿನ ದುಡ್ಡು ದುಡ್ಡು ಎಂದು ಬಾಯಿ ಬಡಿದುಕೊಳ್ಳುವ ಬಿಕರಿಗಳಿಗೆ ನೀವು ತಿಳಿಸಬೇಕಾದದ್ದು ಇವತ್ತು ಬೆಂಗಳೂರು ಕರ್ನಾಟಕದ ಇತರೆ ಜಿಲ್ಲೆಗಳ ಋಣದಲ್ಲಿ ಬದುಕುತ್ತಿದೆ ಹೊರತು ಬೆಂಗಳೂರಿನಿAದ ಕರ್ನಾಟಕವಲ್ಲ ಎನ್ನುವುದು ನೆನಪಿರಲಿ.
ಜೊತೆಗೆ ಬೆಂಗಳೂರಿನ ರೋಡ್ ಗಳಿಗೆ ರಾಜ್ಯದ ಪರ್ವತಗಳು ನಾಶವಾಗುತ್ತಿವೆ, ಬೆಂಗಳೂರಿನ ಮನೆಗಳಿಗೆ ರಾಜ್ಯದ ಭೂಗರ್ಭದಲ್ಲಿರುವ ಗ್ರಾನೈಟ್ ಖಾಲಿಯಾಗುತ್ತಿದೆ, ನೀರು, ವಿದ್ಯುತ್ ಜೊತೆಗೆ ಬೆಂಗಳೂರಿಗರು ತಿನ್ನುವ ಅಗುಳು ಅನ್ನವು ಕನ್ನಡಿಗರ ಬೆವರಿನ ತುತ್ತು ಎನ್ನುವುದು ಕನ್ನಡ ವೀರೋಧಿಗಳಿಗೆ ಮತ್ತು ಪರಭಾಷಿಕರಿಗೆ ಗೊತ್ತಿರಲಿ. ಬೆಂಗಳೂರಿಗಾಗಿ ಕರ್ನಾಟಕದ ಸಂಸ್ಕೃತಿ ಭಾಷೆ ಜೊತೆಗೆ ನಮ್ಮ ಪರಿಸರವು ಬರಿದಾಗುತ್ತಿದೆ ಹೊರತು ಬೆಂಗಳೂರಿನಿಂದ ಕನ್ನಡಿಗರಿಗೇನು?
ಕರ್ನಾಟಕ ಯಾವತ್ತೂ ಕೊಟ್ಟ ಕೈ ಹೊರತು ಭಿಕ್ಷೆ ಬೇಡಿದ ಕೈ ಅಲ್ಲ ಎನ್ನುವುದು ಬಿಕಾರಿಗಳು ನೆನಪಿಟ್ಟುಕೊಂಡಿರಲಿ, ಜೊತೆಗೆ ಇನ್ನಾದರೂ ಬೆಂಗಳೂರಿನಿಂದ ಕರ್ನಾಟಕ ನಡೆಯುತ್ತಿದೆ, ನಮ್ಮಿಂದ ನೀವು, ಬೆಂಗಳೂರಿನ ಟ್ಯಾಕ್ಸ್ ಎಲ್ಲಿ ಎನ್ನುವ ಅವಿವೇಕಿಗಳಿಗೆ ಈ ಲೇಖನ .