ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಅಭಿನವಶ್ರೀಗಳ ತೀವ್ರ ಸಂತಾಪ

ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಅಭಿನವಶ್ರೀಗಳ ತೀವ್ರ ಸಂತಾಪ

ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಅಭಿನವಶ್ರೀಗಳ ತೀವ್ರ ಸಂತಾಪ

ಹುಳಿಯಾರು: ಕನ್ನಡಿಗರ ಹೆಮ್ಮೆಯ ದೊಡ್ಡಮನೆ ಹುಡುಗ ಎಂದೇ ಖ್ಯಾತಿ ಪಡೆದ ಡಾ. ರಾಜಕುಮಾರರವರ ಪುತ್ರ ನಟ ಪುನೀತ್ ರಾಜ್‌ಕುಮಾರ್ ಚಿಕ್ಕ ವಯಸ್ಸಿನಲ್ಲಿ ನಿಧನವಾಗಿದ್ದು ನಮಗೆ ತೀವ್ರ ನೋವು ತಂದಿದೆ ಎಂದು ಚಿಕ್ಕನಾಯಕನಹಳ್ಳಿ ತಾಲೂಕು ತಮ್ಮಡಿಹಳ್ಳಿ ವಿರಕ್ತ ಮಹಾಸಂಸ್ಥಾನ ಮಠದ ಡಾ. ಅಭಿನವ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಅವರ ಸಾಮಾಜಿಕ ಕಾರ್ಯಗಳು ಹಾಗೂ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಅಭಿನಯದ ಮೂಲಕ ಛಾಪು ಮೂಡಿಸಿದ ಅತ್ಯಂತ ಪ್ರತಿಭಾವಂತ ನಟನ ಆಗಲಿಕೆಯ ನೋವನ್ನು ಅಭಿಮಾನಿಗಳು ಮತ್ತು ಕುಟುಂಬಕ್ಕೆ ಭರಿಸುವ ಶಕ್ತಿ ನೀಡಲಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.