ನಗರದಲ್ಲಿ 1450 ಮನೆ ನಿರ್ಮಾಣ ಗುರಿ: ಜ್ಯೋತಿ ಗಣೇಶ್ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸರ್ವರಿಗೂ ಸೂರು ಖಾತರಿ

ನಗರದಲ್ಲಿ 1450 ಮನೆ ನಿರ್ಮಾಣ ಗುರಿ: ಜ್ಯೋತಿ ಗಣೇಶ್ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸರ್ವರಿಗೂ ಸೂರು ಖಾತರಿ

ನಗರದಲ್ಲಿ 1450 ಮನೆ ನಿರ್ಮಾಣ ಗುರಿ: ಜ್ಯೋತಿ ಗಣೇಶ್
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸರ್ವರಿಗೂ ಸೂರು ಖಾತರಿ


ತುಮಕೂರು: ಸರ್ವರಿಗೂ ಸೂರು ಒದಗಿಸುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಾಯ ಧನ ಬಳಸಿಕೊಂಡು ಬ್ಯಾಂಕ್ ಸಾಲದೊಂದಿಗೆ ಎಲ್ಲ ವರ್ಗದವರೂ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮನವಿ ಮಾಡಿದ್ದಾರೆ.


ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ   ಶಾಸಕರು ಪ್ರಧಾನಮಂತ್ರಿ ಆವಾಸ್ ಯೋಜನೆ ಪ್ರಧಾನಮಂತ್ರಿಯವರ ಕನಸಿನ ಯೋಜನೆಯಾಗಿದ್ದು, 2022 ನೇ ಇಸವಿಗೆ ಭಾರತವು ಗುಡಿಸಲು ಮುಕ್ತ ದೇಶವಾಗಬೇಕೆಂಬುದು ಅವರ ಆಶಯವಾಗಿರುತ್ತದೆ. ಅದರಂತೆ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 28 ಘೋಷಿತ ಕೊಳಗೇರಿ ಪ್ರದೇಶಗಳಲ್ಲಿ ಅರ್ಹ ಕೊಳಗೇರಿ ಫಲಾನುಭವಿಗಳಿಗೆ ಆರ್.ಸಿ.ಸಿ ಪಕ್ಕಾ ಮನೆಯನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ 2023 ರೊಳಗಾಗಿ ಹಂಚಿಕೆ ಮಾಡಲು ಕ್ರಮವಹಿಸಲಾಗುವುದು. 1450 ಮನೆಗಳಲ್ಲಿ ಈಗಾಗಲೇ ವಿವಿಧ ಕೊಳಗೇರಿ ಪ್ರದೇಶಗಳಲ್ಲಿ ಸುಮಾರು 150 ಮನೆಗಳನ್ನು ಪ್ರಾರಂಭಿಸಲಾಗಿರುತ್ತದೆ. ಈ ಯೋಜನೆಯುಸಾರ್ವಜನಿಕರು ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದ ಪಿಪಿಪಿ ಯೋಜನೆಯಾಗಿದ್ದು, ಸರ್ಕಾರ, ಫಲಾನುಭವಿ ಮತ್ತು ಬ್ಯಾಂಕ್ ಸಹಕಾರದೊಂದಿಗೆ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು ಎಂದರು. 


ಈಮನೆಗಳಲ್ಲಿ ಪರಿಶಿಷ್ಟ ಜಾತಿಯವರಿಗೆ 624, ಪರಿಶಿಷ್ಟ ಪಂಗಡದವರಿಗೆ 34, ಅಲ್ಪಸಂಖ್ಯಾತರಿಗೆ ( ಮುಸ್ಲಿಂ,ಜೈನ್,ಬೌದ್ಧ, ಪಾರಸಿ,ಸಿಖ್) ಹಿಂದುಳಿದ ವರ್ಗದವರಿಗೆ 185 ಹಾಗೂ ಇತರ ಸಾಮಾನ್ಯ ವರ್ಗದವರಿಗೆ 123 ಮನೆಗಳನ್ನು ಮೀಸಲಿರಿಸಿದೆ. ನಗರದಲ್ಲಿ  ಸ್ವಂತ ನಿವೇಶನ ಹೊಂದಿರುವ ಕನಿಷ್ಟ ದಾಖಲೆಗಳಿರುವವರಿಗೆ ಬ್ಯಾಂಕ್ ಮುಖಾಂತರ ಸಬ್ಸಿಡಿ ಬಿಡುಗಡೆ ಮಾಡಲಾಗುವುದು ಎಂದರು.


ಇತರೆ ವರ್ಗದ ಫಲಾನುಭವಿಗಳು ವಂತಿಕೆ ಮೊತ್ತ ತುಂಬುವ ಮಾಹಿತಿ
• ಪ್ರತಿ ಮನೆಗೆ ತಗಲುವ ವೆಚ್ಚ ರೂ,                                  6,50,000
• ಕೇಂದ್ರ ಸರ್ಕಾರದ ಅನುದಾನ ಎಲ್ಲಾ ವರ್ಗದವರಿಗೆ       1,50,000
• ರಾಜ್ಯ ಸರ್ಕಾರದ ಅನುದಾನ ಇತರೆ ವರ್ಗದವರಿಗೆ          1,20,000
• ಒಟ್ಟು ಸರ್ಕಾರದ ಅನುದಾನ                                        2,70,000 

ಪ್ರತಿ ಮನೆಗೆ ಫಲಾನುಭವಿಗಳ  ವಂತಿಕೆ ಮೊತ್ತ ರೂ,          97,500 
(ಘಟಕ ವೆಚ್ಚದ ಶೇ, 15ರಷ್ಟು)

• ಬ್ಯಾಂಕಿನಿAದ ಸಾಲ:                       ರೂ,                       2,82,500
 ಒಟ್ಟು:-                                                                         6,50,000
• ಬ್ಯಾಂಕ್ ಮುಖಾಂತರ ಸಾಲ ಪಡೆದಲ್ಲಿ ಬಡ್ಡಿ ವಾರ್ಷಿಕ 6 ರಿಂದ7% ರಷ್ಟು, 20 ವರ್ಷಗಳ ಕಾಲಾವಧಿಗೆ ಮರುಪಾವತಿಸಬೇಕಾಗುವುದು.  
ಪರಿಶಿಷ್ಟ ಜಾತಿ / ಪಂಗಡದವರಿಗೆ ಫಲಾನುಭವಿ ವಂತಿಕೆ ಮೊತ್ತ ತುಂಬುವ ಮಾಹಿತಿ
• ಪ್ರತಿ ಮನೆಗೆ ತಗಲುವ ವೆಚ್ಚ ರೂ,                                 6,50,000
• ಕೇಂದ್ರ ಸರ್ಕಾರದ ಅನುದಾನ ಎಲ್ಲಾ ವರ್ಗದವರಿಗೆ       1,50,000
• ರಾಜ್ಯ ಸರ್ಕಾರದ ಅನುದಾನ ಪ.ಜಾ /ಪಂ ದವರಿಗೆ          2,00,000 
• ಸಮಾಜ ಕಲ್ಯಾಣ ಇಲಾಖೆ ವತಿಯಿಂದ (SಅP/ಖಿSP)      75,000   
• ಒಟ್ಟು ಸರ್ಕಾರದ ಅನುದಾನ                      4,25,000
ಪ್ರತಿ ಮನೆಗೆ ಫಲಾನುಭವಿಗಳ  ವಂತಿಕೆ ಮೊತ್ತ ರೂ,           65,000
(ಘಟಕ ವೆಚ್ಚದ ಶೇ, 10ರಷ್ಟು)
• ಬ್ಯಾಂಕ್ / ಕಾರ್ಮಿಕ ಇಲಾಖೆಯಿಂದ ಸಾಲ ರೂ,            1,60,000
 ಒಟ್ಟು:-                                                                         6,50,000
• ಬ್ಯಾಂಕ್ ಮುಖಾಂತರ ಸಾಲ ಪಡೆದಲ್ಲಿ ವಾರ್ಷಿಕ ಬಡ್ಡಿ 6 ರಿಂದ 7% ರಷ್ಟು, 20 ವರ್ಷಗಳ ಕಾಲಾವಧಿಗೆ ಮರುಪಾವತಿಸಬೇಕಾಗುವುದು.