ಡಾ.ಜಿ.ಪರಮೇಶ್ವರ್ ಯುವಸೈನ್ಯಕ್ಕೆ ನೂತನ ಪದಾಧಿಕಾರಿಗಳ ನೇಮಕ

dr-parameshwar-yuva-sainya-padadhikarigala-nemaka, ಡಾ.ಜಿ.ಪರಮೇಶ್ವರ್ ಯುವಸೈನ್ಯಕ್ಕೆ ನೂತನ ಪದಾಧಿಕಾರಿಗಳ ನೇಮಕ

ಡಾ.ಜಿ.ಪರಮೇಶ್ವರ್ ಯುವಸೈನ್ಯಕ್ಕೆ ನೂತನ ಪದಾಧಿಕಾರಿಗಳ ನೇಮಕ

ಡಾ.ಜಿ.ಪರಮೇಶ್ವರ್ ಯುವಸೈನ್ಯಕ್ಕೆ ನೂತನ ಪದಾಧಿಕಾರಿಗಳ ನೇಮಕ


ತುಮಕೂರು: ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೈನ್ಯ (ರಿ.)ದ ರಾಜ್ಯ ಕಾರ್ಯದರ್ಶಿಗಳನ್ನಾಗಿ ಎನ್.ಕೆ.ನಿಧಿಕುಮಾರ್ ಮತ್ತು ಕೆ.ಗೋವಿಂದರಾಜು ಹಾಗೂ ಜಿಲ್ಲಾ ಗೌರವಾಧ್ಯಕ್ಷರನ್ನಾಗಿ ಎನ್.ರಮೇಶ್ ಅವರನ್ನು ರಾಜ್ಯಾಧ್ಯಕ್ಷ ಆರ್.ನಗುತ ರಂಗನಾಥ್ ನೇಮಕ ಮಾಡಿದ್ದಾರೆ.


ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕರಾದ ಡಾ.ಜಿ.ಪರಮೇಶ್ವರ್ ಮಾತನಾಡಿ, ಯುವಸೈನ್ಯದ ಪದಾಧಿಕಾರಿಗಳು ರಾಜ್ಯಾದ್ಯಂತ ಉತ್ತಮ ಸಮಾಜಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸೇವಾ ಮನೋಭಾವ ಹೊಂದಬೇಕು ಎಂದು ಸಲಹೆ ನೀಡಿದರು.


ಸಮಾಜದಲ್ಲಿ ಅಶಕ್ತರು, ಬಡವರು, ಹಿಂದುಳಿದವರು, ವಿಕಲಚೇತನರು ಸೇರಿದಂತೆ ಇನ್ನೂ ಅನೇಕರಿಗೆ ಈ ಯುವಸೈನ್ಯದ ಕಾರ್ಯಕರ್ತರು ಸಹಾಯ ಹಸ್ತ ಚಾಚಬೇಕು, ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಕರೆ ನೀಡಿದರು.


ಸಂಘಗಳು ನಮ್ಮ ಈ ನಾಗರೀಕ ಪ್ರಪಂಚದಲ್ಲಿ ಅನಿವಾರ್ಯವಾಗಿ ಹೋಗಿವೆ. ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿ ಬಿಟ್ಟಿವೆ. ನಾವು ಪ್ರತಿಯೊಂದು ಉದ್ದೇಶಕ್ಕೂ ಸಂಘಗಳನ್ನು ಕಟ್ಟಿಕೊಳ್ಳುತ್ತೇವೆ. ಈ ಪ್ರಜಾ ಪ್ರಭುತ್ವ ದೇಶದಲ್ಲಿ ಒಂದು ವ್ಯವಸ್ಥೆಯ ವಿರುದ್ಧ ಹೋರಾಡಲು ಸಂಘಗಳು ಬೇಕು. ಸಮಾಜಸೇವೆ ಮಾಡಲು ಸಂಘಗಳು ಬೇಕು. ಚಳುವಳಿ ಮಾಡಲು ಸಂಘಗಳು ಬೇಕು. ಒಂದು ಕ್ರಾಂತಿ ಆಗಬೇಕೆಂದರೆ ಕ್ರಾಂತಿಕಾರಕ ಸಂಘಗಳು ಬೇಕು. ಒಗ್ಗಟ್ಟನ್ನು ಪ್ರದರ್ಶಿಸಲು ಸಂಘಗಳು ಬೇಕು. ಧರ್ಮ ಪ್ರಚಾರಕ್ಕೆ ಸಂಘಗಳು ಬೇಕು. ಅಂದರೆ ಈ ಮನುಷ್ಯನ ಪ್ರತಿಯೊಂದು ಚಟುವಟಿಕೆಯಲ್ಲೂ ಸಂಘಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.


ಈ ಸಮಾಜದಲ್ಲಿ ಸಾಮಾನ್ಯವಾಗಿ ಎರಡು ವರ್ಗಗಳಿವೆ. ಒಂದು ಬಡವರ ವರ್ಗವಾದರೆ ಇನ್ನೊಂದು ಶ್ರೀಮಂತರ ವರ್ಗ. ಉಳ್ಳವರು ಎಲ್ಲಾ ಬಗೆಯ ಸವಲತ್ತುಗಳನ್ನು ಅನುಭವಿಸುತ್ತಿದ್ದರೆ, ಬಡವರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗದೆ ಈ ಉಳ್ಳವರ ಜೊತೆ ಸ್ಪರ್ಧಿಸಲೂ ಆಗದೆ ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದರು.


ನಾವು ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತೇವೆ. ಈ ಸಾಮಾಜಿಕ ಅಸಮಾನತೆಯ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುತ್ತೇವೆ. ಆದರೆ ಈ ಬಡತನಕ್ಕೆ ಕಾರಣಗಳು ಇದರಿಂದ ಈ ಸಮಾಜದ ಮೇಲಾಗುವ ದುಷ್ಪರಿಣಾಮಗಳೇನು ? ಈ ದೇಶದ ಮೇಲೆ ಬೀರುವ ಪ್ರಭಾವಗಳೇನು ಎಂಬುದರ ಬಗ್ಗೆ ನಾವು ಚಿಂತಿಸುತ್ತಿದ್ದೇವೆಯೇ? ಬಡವರು ಬಡವರಾಗಿಯೇ ಇರಬೇಕಾ? ಈ ದೇಶ ಹೀಗೆಯೇ ಇರಬೇಕಾ? ಈ ದೇಶದ ಅಭಿವೃದ್ಧಿ ಎಂದರೇನು? ಬಡವರು ಒಂದು ದೇಶದಲ್ಲಿ ಹೆಚ್ಚಿದ್ದರೆ ಆ ದೇಶ ಹೇಗೆ ಶ್ರೀಮಂತವಾಗುತ್ತದೆ? ಒಂದು ದೇಶದಲ್ಲಿ ಸಾಮಾಜಿಕ ಅಸಮಾನತೆಯಿದ್ದರೆ ಆ ದೇಶದ ಉದ್ಧಾರ ಹೇಗೆ ಆಗುತ್ತದೆ? ಇದನ್ನೆಲ್ಲಾ ಚಿಂತಿಸುವರು ಯಾರು? ಯಾರನ್ನು ದೂಷಿಸಬೇಕು ಈ ಅವ್ಯವಸ್ಥೆಗೆ? ಇಂತಹವುಗಳಿAದ ದೇಶ ಇನ್ನಷ್ಟು ಅದಃ ಪತನಕ್ಕಿಳಿಯುತ್ತದೆ ಹೊರತು ಏಳಿಗೆ ಕಾಣುವುದು ದೂರದ ಮಾತು ಎಂದು ಹೇಳಿದರು.


ಸಂಘಗಳನ್ನು ಕೇವಲ ಹೋರಾಟಕ್ಕೆ ಮಾತ್ರ ಸೀಮಿತಗೊಳಿಸದೆ ಸಮಾಜದ ಸುಧಾರಣೆಯಂತ ಕೆಲಸಗಳಿಗೂ ಹೆಚ್ಚು ಹೆಚ್ಚು ಬಳಸಿಕೊಳ್ಳಿ, ನೂತನವಾಗಿ ಆಯ್ಕೆಯಾದ ಡಾ.ಜಿ.ಪರಮೇಶ್ವರ್ ಯುವಸೈನ್ಯ ಪದಾಧಿಕಾರಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.


ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೈನ್ಯ ರಾಜ್ಯಾಧ್ಯಕ್ಷ ಆರ್.ನಗುತ ರಂಗನಾಥ್ ಮಾತನಾಡಿ, ಪ್ರಾರಂಭದಿAದಲೂ ನಾವು ಡಾ.ಜಿ. ಪರಮೇಶ್ವರ್ ಯುವಸೈನ್ಯದ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದ್ದು, ಇನ್ನೂ ಹೆಚ್ಚಿನ ಸೇವೆ ಮಾಡುವ ಉದ್ದೇಶದಿಂದ ಸಂಘಟನೆಯ ತತ್ವ-ಸಿದ್ಧಾಂತಗಳನ್ನು ಒಪ್ಪಿ, ಧೈಯೋದ್ದೇಶಗಳನ್ನು ತಿಳಿದುಕೊಂಡು ಸೇವಾ ಮನೋಭಾವದಿಂದ ಸಂಘಟನೆಗಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೈನ್ಯ ನೂತನ ರಾಜ್ಯ ಕಾರ್ಯದರ್ಶಿಗಳಾದ ಎನ್.ಕೆ.ನಿಧಿಕುಮಾರ್, ಕೆ.ಗೋವಿಂದರಾಜು, ಜಿಲ್ಲಾ ಗೌರವಾಧ್ಯಕ್ಷ ಎನ್.ರಮೇಶ್, ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಮುಂತಾದವರು ಭಾಗವಹಿಸಿದ್ದರು.