ಕಾಮಧೇನಹಳ್ಳಿಯಲ್ಲಿ ಅಭಿನಂದನೆ ಸಮಾರಂಭ ಕಾಂಗ್ರೆಸ್‌ನಿಂದ  ಮಾತ್ರ ಜನಪರ ಆಡಳಿತ-ಅನಿಲ್‌ಕುಮಾರ್

amil-kumar-kamadenahalli-mlc-kolar

ಕಾಮಧೇನಹಳ್ಳಿಯಲ್ಲಿ ಅಭಿನಂದನೆ ಸಮಾರಂಭ ಕಾಂಗ್ರೆಸ್‌ನಿಂದ  ಮಾತ್ರ ಜನಪರ ಆಡಳಿತ-ಅನಿಲ್‌ಕುಮಾರ್

ಕಾಮಧೇನಹಳ್ಳಿಯಲ್ಲಿ ಅಭಿನಂದನೆ ಸಮಾರಂಭ
ಕಾಂಗ್ರೆಸ್‌ನಿಂದ  ಮಾತ್ರ ಜನಪರ ಆಡಳಿತ-ಅನಿಲ್‌ಕುಮಾರ್

ಕೋಲಾರ: ಜನಪರ ಆಡಳಿತ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಹೇಳಿದರು.


ತಾಲೂಕಿನ ಕಾಮಧೇನಹಳ್ಳಿಯಲ್ಲಿ ಗ್ರಾಮಸ್ಥರು ನೀಡಿದ ಅಭಿನಂದನೆ ಸ್ಪೀಕರಿಸಿ, ಮತ ಹಾಕಿದ ಗ್ರಾಪಂ ಸದಸ್ಯರಿಗೆ ಧನ್ಯವಾದ ಅರ್ಪಿಸಿ ಅವರು ಮಾತನಾಡುತ್ತಿದ್ದರು.


ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹಣ ಹಂಚುವಿಕೆಯಲ್ಲಿ ಪೈಪೋಟಿಯನ್ನೇ ನಡೆಸಿದ್ದವು, ಹಿಂದುಗಳನ್ನು ಗುತ್ತಿಗೆ ಪಡೆದುಕೊಂಡಿದ್ದ ಬಿಜೆಪಿ ದೇವರುಗಳ ಮೇಲೆ ಆಣೆ ಮಾಡಿಸಿ ಓಟು ಕೇಳಿತ್ತು. ಆದರೆ, ಬುದ್ಧಿವಂತ ಮತದಾರರು ಎಲ್ಲವನ್ನು ದೇವರಿಗೆ ಒಪ್ಪಿಸಿ ಕಾಂಗ್ರೆಸ್‌ಗೆ ಮತ ಹಾಕಿ ಗೆಲ್ಲಿಸಿದ್ದಾರೆಂದರು.


ಮುAದಿನ ಜನವರಿ 15 ರ ನಂತರ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರನ್ನು ಒಗ್ಗೂಡಿಸಿ ದಿನಕ್ಕೊಂದು ಪಂಚಾಯತ್‌ಗೆ ಭೇಟಿ ನೀಡಿ ಅಲ್ಲಿ ಸಮಸ್ಯೆಗಳನ್ನು ಪಟ್ಟಿ ಮಾಡಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಘೋಷಿಸಿದ  ಅವರು, ಮುಂದಿನ ವಿಧಾನಸಭಾ ಕ್ಷೇತ್ರದಿಂದ ಹಿರಿಯ ಪ್ರಭಾವಿ ಮುಖಂಡರೊಬ್ಬರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ಖಚಿತ, ಹಾಗೇನಾದರೂ ಆದಲ್ಲಿ ಕೋಲಾರ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುವುದು ದಿಟ ಎಂದರು.


ಹಿರಿಯ ಮುಖಂಡ ಶಂಕರೇಗೌಡ ಮಾತನಾಡಿ, ಗ್ರಾಮಗಳಲ್ಲಿ ಚುನಾವಣೆ ಎದುರಿಸುವಾಗ ಮಾತ್ರವೇ ಪಕ್ಷ ರಾಜಕಾರಣ ಮಾಡಬೇಕು, ಉಳಿದ ಸಂದರ್ಭದಲ್ಲಿ ಇಡೀ ಗ್ರಾಮ ಪಂಚಾಯತ್ ಒಗ್ಗೂಡಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು, ಈ ವಿಚಾರದಲ್ಲಿ ಮಾರ್ಜೇನಹಳ್ಳಿ ಪಂಚಾಯತ್ ಸದಸ್ಯರು ಪಕ್ಷಬೇಧ ಮರೆತು ಕಾಂಗ್ರೆಸ್ ಅನಿಲ್‌ಕುಮಾರ್‌ರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.


ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ರಾಜಕಾರಣಕ್ಕೆ ಇಳಿದು ಸುಮಾರು 30 ವರ್ಷಗಳ ಅನುಭವ ಹೊಂದಿ, ಕೋಲಾರ ಚಿಕ್ಕಬಳ್ಳಾಪುರ ರಾಜಕಾರಣ ಇತಿಹಾಸ  ಕುರಿತಂತೆ ಸ್ಪಷ್ಟವಾದ e್ಞÁನ ಹೊಂದಿರುವ ಅನಿಲ್‌ಕುಮಾರ್ ರಾಜಕಾರಣದಲ್ಲಿ ಮತ್ತಷ್ಟು ಉನ್ನತ ಹುದ್ದೆಗೇರಲಿ ಎಂದು ಆಶಿಸಿದರು.


ಗ್ರಾಮದ ಮುಖಂಡ ಹಿರಿಯ ಕಾಂಗ್ರೆಸ್ಸಿನ ಚಿಕ್ಕಮುನಿವೆಂಕಟಪ್ಪ ಮಾತನಾಡಿ, ಅನಿಲ್‌ಕುಮಾರ್ ವಿಧಾನಪರಿಷತ್ ಸದಸ್ಯರಾಗಿ ಯಶಸ್ವಿಯಾಗಿ ಗ್ರಾಪಂ ಸದಸ್ಯರ ಸಮಸ್ಯೆಗಳಿಗೆ ಪರಿಹಾರವನ್ನು ರೂಪಿಸುವಂತಾಗಲಿ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಚೆಂಜಿಮಲೆ ರಮೇಶ್, ಕಾಮಧೇನಹಳ್ಳಿ ಗ್ರಾಮದ ಯುವ ಮುಖಂಡ ಅರುಣ್ ಇತರರು ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಮಣಿಘಟ್ಟ ಸೊಣ್ಣೇಗೌಡ, ಗ್ರಾಮದ ಮುಖಂಡರಾದ ನಾರಾಯಣಗೌಡ, ವರದೇನಹಳ್ಳಿ ವೆಂಕಟೇಶ್, ಮಾರ್ಜೇನಹಳ್ಳಿ ಬಾಬು, ನವೀನ್‌ಕುಮಾರ್, ಮಂಜುನಾಥ್, ಗೋಪಾಲಗೌಡ, ವೈ.ಶಿವಕುಮಾರ್, ಗ್ರಾಪಂ ಉಪಾಧ್ಯಕ್ಷೆ ಗಾಯಿತ್ರಿ, ಸದಸ್ಯರಾದ ವಿದ್ಯಾಶ್ರೀ, ಹೇಮಾವತಿ ಇದ್ದರು.


ಹೈಕೋರ್ಟ್ ವಕೀಲ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.